ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ಹುಬ್ಬುಗಳ ಬುಡಕ್ಕೆ ಪೋಷಣೆ ನೀಡಿ ಹೊಸ ಕೂದಲು ಬೆಳೆಯಲು ಮತ್ತು ಅವು ವೇಗವಾಗಿ ಉದ್ದವಾಗಲು ಸಹಾಯ ಮಾಡುತ್ತದೆ.
fashion Jul 22 2026
Author: Ashwini HR Image Credits:pinterest
Kannada
ಕೂದಲು ಉದುರುವುದು ನಿಲ್ಲುತ್ತೆ
ಇದರಲ್ಲಿರುವ ಫ್ಯಾಟಿ ಆಸಿಡ್ ಮತ್ತು ಮೆಗ್ನೀಶಿಯಂ ಅಂಶಗಳು ಹುಬ್ಬಿನ ದುರ್ಬಲ ಕೂದಲಿಗೆ ಶಕ್ತಿ ನೀಡುತ್ತವೆ. ಇದರಿಂದ ಕೂದಲು ಉದುರುವುದು ನಿಂತು, ಹುಬ್ಬುಗಳು ದಟ್ಟವಾಗಿ ಕಾಣುತ್ತವೆ.
Image credits: pinterest
Kannada
ಚರ್ಮದ ಆರೈಕೆ ಮತ್ತು ಹೊಟ್ಟು ನಿವಾರಣೆ
ಬಾದಾಮಿ ಎಣ್ಣೆ ಒಂದು ನೈಸರ್ಗಿಕ ಮೊಯಿಶ್ಚರೈಸರ್ ಆಗಿದೆ. ಇದು ಹುಬ್ಬಿನ ಕೆಳಗಿನ ಚರ್ಮವನ್ನು ಹೈಡ್ರೇಟ್ ಆಗಿರಿಸುತ್ತದೆ. ಇದರಿಂದ ಚರ್ಮ ಒಣಗುವುದು, ತುರಿಕೆ ಮತ್ತು ಹುಬ್ಬಿನಲ್ಲಿ ಕಾಡುವ ಹೊಟ್ಟು ನಿವಾರಣೆಯಾಗುತ್ತದೆ.
Image credits: pinterest
Kannada
ಆಕರ್ಷಕ ಹೊಳಪು
ನಿಯಮಿತವಾಗಿ ಬಾದಾಮಿ ಎಣ್ಣೆಯನ್ನು ಹಚ್ಚುವುದರಿಂದ ಹುಬ್ಬುಗಳಿಗೆ ನೈಸರ್ಗಿಕವಾದ ಹೊಳಪು ಬರುತ್ತದೆ. ಇದು ನಿಮ್ಮ ಮುಖದ ಅಂದವನ್ನು ಹೆಚ್ಚಿಸಿ, ಹುಬ್ಬುಗಳು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
Image credits: pinterest
Kannada
ಊತ ಕಡಿಮೆ ಮಾಡುತ್ತೆ
ನೀವು ನಿಯಮಿತವಾಗಿ ಥ್ರೆಡ್ಡಿಂಗ್ ಅಥವಾ ವ್ಯಾಕ್ಸಿಂಗ್ ಮಾಡಿಸುತ್ತಿದ್ದರೆ, ಆ ಜಾಗಕ್ಕೆ ಬಾದಾಮಿ ಎಣ್ಣೆ ಹಚ್ಚುವುದರಿಂದ ಚರ್ಮಕ್ಕೆ ತಂಪು ಸಿಗುತ್ತದೆ ಮತ್ತು ಉರಿ ಅಥವಾ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Image credits: pinterest
Kannada
ಅತ್ಯುತ್ತಮ ಫಲಿತಾಂಶಕ್ಕಾಗಿ ಹೀಗೆ ಮಾಡಿ
ಪ್ರತಿದಿನ ರಾತ್ರಿ ಮಲಗುವ ಮುನ್ನ 2-3 ಹನಿ ಬಾದಾಮಿ ಎಣ್ಣೆಯನ್ನು ಹುಬ್ಬುಗಳಿಗೆ ಹಚ್ಚಿ ಹಗುರವಾಗಿ ಮಸಾಜ್ ಮಾಡಿ. ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ.