ದಾಸವಾಳ ಹೂವಿನ ಫೇಸ್‌ಪ್ಯಾಕ್ ಜೆಲ್: ಕೇವಲ ಒಂದು ವಾರ ಬಳಸಿ, ಮುಖದ ಹೊಳಪು ನೀವೇ ನೋಡಿ
ಕೇವಲ ಒಂದು ವಾರ ಈ ಜೆಲ್ ಹಚ್ಚಿದರೆ ನಿಮ್ಮ ಸೌಂದರ್ಯ ಡಬಲ್ ಆಗುತ್ತೆ. ಹಾಗಾದರೆ ಅದು ಏನು ಅಂತ ನೋಡೋಣ ಬನ್ನಿ

ತಮ್ಮ ಮುಖವನ್ನು ಸುಂದರವಾಗಿ ಮಾಡಿಕೊಳ್ಳಬೇಕೆಂದು ತುಂಬಾ ಜನರಿಗೆ ಆಸೆ ಇರುತ್ತದೆ. ಅದಕ್ಕೋಸ್ಕರ ರೆಗ್ಯುಲರ್ ಆಗಿ ಬ್ಯೂಟಿ ಪಾರ್ಲರ್ ಸುತ್ತ ತಿರುಗುವ ಹುಡುಗಿಯರು ತುಂಬಾ ಜನ ಇದ್ದಾರೆ. ದುಬಾರಿ ಕ್ರೀಮ್ ಗಳು, ಆಯಿಲ್ಸ್ ಕೊಂಡುಕೊಂಡು ಮುಖಕ್ಕೆ ಹಚ್ಚುತ್ತಿರುತ್ತಾರೆ. ಆದರೆ ಅವುಗಳಿಂದ ದುಡ್ಡು ವೇಸ್ಟ್ ಆಗುವುದು ಮಾತ್ರವಲ್ಲದೆ ಪ್ರಯೋಜನ ಕೂಡ ಹೆಚ್ಚಾಗಿ ಇರುವುದಿಲ್ಲ. ಆದರೆ ಕೇವಲ ಒಂದು ವಾರ ಒಂದು ಜೆಲ್ ಹಚ್ಚಿದರೆ ನಿಮ್ಮ ಸೌಂದರ್ಯ ಡಬಲ್ ಆಗುತ್ತೆ. ಹಾಗಾದರೆ ಅದು ಏನು ಅಂತ ನೋಡೋಣ ಬನ್ನಿ...
ಸೌಂದರ್ಯ ಆರೈಕೆ
ತುಂಬಾ ಜನರು ಕೂದಲು ಆರೋಗ್ಯವಾಗಿ ಮಾಡಿಕೊಳ್ಳುವುದಕ್ಕೆ, ಸ್ಮೂತ್ ಆಗಿ ಮಾಡಿಕೊಳ್ಳುವುದಕ್ಕೆ ದಾಸವಾಳ ಹೂಗಳನ್ನು, ಎಲೆಗಳನ್ನು ಬಳಸುತ್ತಿರುತ್ತಾರೆ. ನಾವು ಈಗ ಇದೇ ದಾಸವಾಳ ಹೂಗಳನ್ನು ಬಳಸಿ ಮುಖವನ್ನು ಸುಂದರವಾಗಿ ಮಾಡಿಕೊಳ್ಳಬಹುದು. ಹಾಗಾದರೆ ಅದು ಹೇಗೆ ತಯಾರಿಸಿಕೊಳ್ಳುವುದು ಅಂತ ತಿಳಿದುಕೊಳ್ಳೋಣ..
ಹೊಸದಾಗಿ ಕತ್ತರಿಸಿದ ಹತ್ತು ದಾಸವಾಳ ಹೂಗಳನ್ನು ತೆಗೆದುಕೊಳ್ಳಿ. ಒಂದು ಪಾತ್ರೆಯಲ್ಲಿ ಅರ್ಧ ಲೀಟರ್ ನೀರು ಹಾಕಿ ಕುದಿಸಿ. ನೀರು ಸ್ವಲ್ಪ ಬಿಸಿಯಾದ ನಂತರ, ದಾಸವಾಳ ಹೂಗಳನ್ನು ನೀರಿಗೆ ಹಾಕಿ. ಉರಿಯನ್ನು ಕಡಿಮೆ ಮಾಡಿ, ದಾಸವಾಳ ಹೂಗಳನ್ನು 15 ನಿಮಿಷ ಬೇಯಿಸಿ. ಇದನ್ನು ತೆಗೆದು ಬೇರೆ ಪಾತ್ರೆಯಲ್ಲಿ ಹಾಕಿ. ಇದು ಈಗ ನಿಮಗೆ ಜೆಲ್ ರೂಪದಲ್ಲಿ ಬದಲಾಗುತ್ತದೆ. ಇದನ್ನು ಮುಖಕ್ಕೆ ಹಚ್ಚಿ, ನಿಧಾನವಾಗಿ ಮಸಾಜ್ ಮಾಡಿ. ಈ ದಾಸವಾಳ ಹೂವಿನ ಜೆಲ್ ಅನ್ನು ಮುಖದ ಮೇಲೆ ಮಾತ್ರವಲ್ಲದೆ, ಕೈಗಳು ಮತ್ತು ಕಾಲುಗಳ ಮೇಲೆ ಕೂಡ ಕಪ್ಪು ಪ್ರದೇಶಗಳಿಗೆ ಹಚ್ಚಿ. 20 ನಿಮಿಷ ಒಣಗಲು ಬಿಡಿ. ನಂತರ ಅದು ನಿಮ್ಮ ಮುಖಕ್ಕೆ ಪೇಸ್ಟ್ ತರಹ ಅಂಟಿಕೊಳ್ಳುತ್ತದೆ.
ಅರ್ಧ ಗಂಟೆಯ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಮುಖದ ಮೇಲಿರುವ ಕೊಳೆ ಹೋಗುತ್ತದೆ. ಮುಖ ಪ್ರಕಾಶಮಾನವಾಗಿ ಹೊಳೆಯುತ್ತದೆ. ನೀವು ಸ್ನಾನ ಮಾಡುವ ಮೊದಲು ಸತತವಾಗಿ ಏಳು ದಿನ ಈ ರೆಸಿಪಿಯನ್ನು ಮಾಡಿದರೆ, ನಿಮ್ಮ ಮುಖ 7 ದಿನಗಳಲ್ಲಿ ಹೀರೋಯಿನ್ ತರಹ ಹೊಳೆಯುತ್ತದೆ.
ಇದೇ ದಾಸವಾಳ ಹೂವಿನ ಜೆಲ್ ಗೆ ಮುಲ್ತಾನಿ ಮಿಟ್ಟಿ ಸೇರಿಸಿ ಕೂಡ ಹಚ್ಚಬಹುದು. ಹೀಗೆ ಮಾಡಿದರೂ ಮುಖ ಹೊಳೆಯುತ್ತದೆ. ಮುಖದ ಮೇಲಿನ ಡೆಡ್ ಸೆಲ್ಸ್ ಎಲ್ಲಾ ಹೋಗುತ್ತವೆ. ಇನ್ನು ದಾಸವಾಳ, ಗುಲಾಬಿ ದಳಗಳ ಮಿಶ್ರಣ ನಿಮ್ಮ ಚರ್ಮವನ್ನು ಬಿಸಿಲಿನಿಂದ ರಕ್ಷಿಸುತ್ತದೆ. ಚರ್ಮದ ಹಾನಿಯನ್ನು ತಡೆಯುತ್ತದೆ. ಈ ಫೇಸ್ ಪ್ಯಾಕ್ ಅನ್ನು ಪ್ರತಿದಿನ ಉಪಯೋಗಿಸುವುದರಿಂದ ನಿಮ್ಮ ಚರ್ಮ ಮೃದುವಾಗಿ, ಆರೋಗ್ಯಕರವಾಗಿರುತ್ತದೆ.
ದಾಸವಾಳ, ಮೊಸರು
ದಾಸವಾಳವು ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ, ಇದು ಮೊಡವೆಗಳಿಗೆ ಕಾರಣವಾಗುವ ಸೂಕ್ಷ್ಮಜೀವಿಗಳನ್ನು ತೆಗೆದುಹಾಕುತ್ತದೆ. ಇದರಲ್ಲಿ ಪ್ರೋಬಯಾಟಿಕ್ಸ್ ಕೂಡ ಇವೆ, ಇದು ಆರೋಗ್ಯಕರ, ಸ್ಪಷ್ಟವಾದ ಚರ್ಮವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. ಮೊಸರಿನಲ್ಲಿ ಸತುವು ಕೂಡ ಇದೆ, ಇದು ಮುಚ್ಚಿಹೋಗಿರುವ ರಂಧ್ರಗಳನ್ನು ಕುಗ್ಗಿಸುವ ಮೂಲಕ ಮೊಡವೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ತೂಕ ಇಳಿಕೆಗೆ ಬೆಸ್ಟ್: ಪ್ರತಿದಿನ ಬೂದು ಕುಂಬಳಕಾಯಿ ಜ್ಯೂಸ್ ಕುಡಿಯಿರಿ ಆರೋಗ್ಯದಲ್ಲಿ ಮ್ಯಾಜಿಕ್ ನೋಡಿ