ಹೆಣ್ಣಿನ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟರೆಸ್ಟಿಂಗ್ ವಿಷ್ಯಗಳಿವು
ಮತ್ತೊಂದು ಜೀವಕ್ಕೆ ಜೀವ ಕೊಟ್ಟು ಜನ್ಮ ನೀಡುವುದರಿಂದ ಹಿಡಿದು ಮಹಿಳೆ ಹಾಗೂ ಮಹಿಳೆಯರ ದೇಹ ಹಲವು ಆಸಕ್ತಿಕರ ವಿಶೇಷ ಎನಿಸುವ ಲಕ್ಷಣಗಳನ್ನು ಹೊಂದಿದೆ. ಹೀಗಿರುವಾಗ ಮಹಿಳೆಯರ ಬಗ್ಗೆ ನಿಮಗೆ ತಿಳಿದಿರದ ಕೆಲ ಅದ್ಭುತ ಎನಿಸುವ ಕೆಲ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮಹಿಳೆಯರು ಜನ್ಮ ನೀಡುವ ವಿಶೇಷ ಶಕ್ತಿಯೊಂದಿಗೆ ಭೂಮಿ ಬಂದಿರುತ್ತಾರೆ. ಹೀಗಾಗಿ ಮಹಿಳೆಯರ ದೇಹವೂ ಕಾಲ ಕ್ರಮೇಣ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಅಭಿವೃದ್ಧಿಪಡಿಸುತ್ತದೆ. ಮಗುವಿಗೆ ಜನ್ಮ ನೀಡುವ ಹಾಗೂ ಸಂತಾನೋತ್ಪತಿಯ ಅಭಿವೃದ್ಧಿಯ ಕಾರಣದಿಂದಾಗಿ ಮಹಿಳೆಗೆ ಈ ಶಕ್ತಿ ಹೆಚ್ಚಿರುತ್ತದೆ.
ಮಹಿಳೆಯರ ದೇಹವೂ ಬಲವಾದ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ.
ಮಹಿಳೆಯರು ಜನ್ಮ ನೀಡುವ ವಿಶೇಷ ಶಕ್ತಿಯೊಂದಿಗೆ ಭೂಮಿ ಬಂದಿರುತ್ತಾರೆ. ಹೀಗಾಗಿ ಮಹಿಳೆಯರ ದೇಹವೂ ಕಾಲ ಕ್ರಮೇಣ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಅಭಿವೃದ್ಧಿಪಡಿಸುತ್ತದೆ. ಮಗುವಿಗೆ ಜನ್ಮ ನೀಡುವ ಹಾಗೂ ಸಂತಾನೋತ್ಪತಿಯ ಅಭಿವೃದ್ಧಿಯ ಕಾರಣದಿಂದಾಗಿ ಮಹಿಳೆಗೆ ಈ ಶಕ್ತಿ ಹೆಚ್ಚಿರುತ್ತದೆ.
ಮಹಿಳೆಯರ ನೆನಪಿನ ಶಕ್ತಿ ಪುರುಷರಿಗಿಂತ ಹೆಚ್ಚು:
ಮಹಿಳೆಯರ ನೆನಪಿನ ಶಕ್ತಿ ಪುರುಷರ ನೆನಪಿನ ಶಕ್ತಿಗಿಂತ ಹೆಚ್ಚು. ಅವರು ಒಮ್ಮೆ ನೋಡಿದ ಮುಖಗಳನ್ನು ಮತ್ತೆ ನೆನಪಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಹಲವು ಪರೀಕ್ಷೆಗಳಲ್ಲಿ ಪುರುಷರಿಗಿಂತ ಮಹಿಳೆಯರ ನೆನಪಿನ ಶಖ್ತಿ ಹೆಚ್ಚಿರುವುದು ಸಾಬೀತಾಗಿದೆ.
ಅವರು ಅಪಾಯಕಾರಿ ಗಾಯಗಳಿಂದ ಬೇಗ ಚೇತರಿಸಿಕೊಳ್ಳುತ್ತಾರೆ:
ಪುರುಷರಿಗೆ ಹೋಲಿಸಿದರೆ ಮಹಿಳೆಯರು ಆಘಾತಕಾರಿ ಘಟನೆಗಳು ಆಪಾಯಕಾರಿ ಗಾಯಗಳಿಂದ ಬೇಗ ಚೇತರಿಸಿಕೊಳ್ಳುತ್ತಾರೆ. ಏಕೆಂದರೆ ಮಹಿಳೆಯರ ಹಾರ್ಮೋನುಗಳು ಪುರುಷರ ಹಾರ್ಮೋನ್‌ಗಳಿಗಿಂತ ವೇಗವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಗರ್ಭಾದರಣೆಯ ಸಮಯದಲ್ಲಿ ಅವರ ಗರ್ಭಕೋಶವೂ ಒಂದು ಸಣ್ಣ ಕಿತ್ತಳೆ ಹಣ್ಣಿನ ಗಾತ್ರದಿಂದ ಕಲ್ಲಂಗಡಿ ಹಣ್ಣಿನ ಗಾತ್ರದಷ್ಟು ದೊಡ್ಡದಾಗುತ್ತದೆ. ಪುರುಷರ ಸ್ನಾಯುಗಳಿಗೆ ಹೋಲಿಸಿದರೆ ಮಹಿಳೆಯರ ದೇಹದ ಸ್ನಾಯುಗಳು ಹೆಚ್ಚು ಫ್ಲೆಕ್ಸಿಬಿಲಿಟಿಯನ್ನು ಹೊಂದಿವೆ. ಏಕೆಂದರೆ ಮಹಿಳೆಯರ ಸ್ನಾಯುಗಳು ಹೆಚ್ಚು ಇಲಾಸ್ಟಿನ್ ಅನ್ನು ಹೊಂದಿವೆ. ಹಾಗೂ ಅವರ ಕೆಳಭಾಗದ ನರಹುರಿಯ ಮಗುವಿಗೆ ಜನ್ಮ ನೀಡುವುದಕ್ಕೆ ದೇಹವನ್ನು ಸಿದ್ಧಪಡಿಸುತ್ತದೆ. ಹೀಗಾಗಿ ಮಹಿಳೆಯ ದೇಹಕ್ಕೆ ಹೆಚ್ಚು ಫ್ಲೆಕ್ಸಿಬಿಲಿಟಿಯನ್ನು ಹೊಂದಿದೆ.
ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚು ಸ್ನಾಯು ಸಹಿಷ್ಣುತೆಯನ್ನು (Muscle endurance) ಹೊಂದಿದೆ. ಶಕ್ತಿಯ ವಿಷಯದಲ್ಲಿ ಪುರುಷರು ಸಾಮಾನ್ಯವಾಗಿ ಮೇಲುಗೈ ಸಾಧಿಸುತ್ತಾರೆ, ಆದರೆ ಮಹಿಳೆಯರು ಪುರುಷರಿಗಿಂತ ಉತ್ತಮ ಸ್ನಾಯು ಸಹಿಷ್ಣುತೆಯನ್ನು ಹೊಂದಿರಬಹುದು ಎಂಬುದು ಹಲವರಿಗೆ ಆಶ್ಚರ್ಯವಾಗಬಹುದು. ತ್ರಾಣ ಸಂಬಂಧಿತ ವ್ಯಾಯಾಮಗಳಲ್ಲಿ, ಮಹಿಳೆಯರು ಪುರುಷರಿಗಿಂತ ಸುಮಾರು 75% ಹೆಚ್ಚು ಕಾಲ ವ್ಯಾಯಾಮ ಮಾಡಲು ಸಾಧ್ಯವಾಗಿದೆ ಎಂದು ಸಂಶೋಧನೆ ತೋರಿಸಿದೆ. ಮಹಿಳೆಯರಲ್ಲಿ ಈಸ್ಟ್ರೊಜೆನ್ ಇರುವಿಕೆಯು ಅವರ ಸ್ನಾಯುಗಳನ್ನು ಆಯಾಸಕ್ಕೆ ಹೆಚ್ಚು ನಿರೋಧಕವಾಗಿಸುತ್ತದೆ ಮತ್ತು ಪುರುಷರಿಗೆ ಹೋಲಿಸಿದರೆ ಮಹಿಳೆಯರು ತಮ್ಮ ಸ್ನಾಯುಗಳಲ್ಲಿ ಹೆಚ್ಚು ಪರಿಣಾಮಕಾರಿ ಚಯಾಪಚಯ ಕ್ರಿಯೆಯನ್ನು ಹೊಂದಿದ್ದಾರೆ ಎಂದು ಸೂಚಿಸಲಾಗಿದೆ.