ಗರ್ಭಾವಸ್ಥೆಯಲ್ಲಿ ಮಹಿಳೆಯರ ದೇಹದ ಹೀಟ್ ಹೆಚ್ಚುವುದೇಕೆ?
ಗರ್ಭಾವಸ್ಥೆಯಲ್ಲಿ, ಮಹಿಳೆಯರು ಸಾಮಾನ್ಯ ಮಹಿಳೆಯರಿಗಿಂತ ಹೆಚ್ಚು ಶಾಖವನ್ನು ಅನುಭವಿಸುತ್ತಾರೆ. ಹಾಗಾಗಿ, ಈ ಬೇಸಿಗೆಯಲ್ಲಿ ಹಾಟ್ ಫ್ಲ್ಯಾಶ್‌ಗಳ ಕೆಟ್ಟ ಪರಿಣಾಮಗಳಿಂದ ಅವರು ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿಯಲು ಈ ಸ್ಟೋರಿ ಓದಿ.

ಗರ್ಭಾವಸ್ಥೆಯಲ್ಲಿ(Pregnancy) ಸಾಮಾನ್ಯಕ್ಕಿಂತ ಹೆಚ್ಚಿನ ಶಾಖಕ್ಕೆ ಇವು ಕಾರಣಗಳಾಗಿವೆ
ಗರ್ಭಾವಸ್ಥೆಯಲ್ಲಿ, ಮಹಿಳೆಯರ ದೇಹದಲ್ಲಿ ರಕ್ತದ ಪ್ರಮಾಣವು ಹೆಚ್ಚಾಗುತ್ತೆ. ಇದರಿಂದಾಗಿ ರಕ್ತನಾಳಗಳು ಹರಡಿ ಮೇಲ್ಮೈಗೆ ಬರುತ್ತವೆ. ಈ ಕಾರಣದಿಂದಾಗಿ ಶಾಖವು ಹೆಚ್ಚಾಗಿರುತ್ತೆ.
ಹಾಗೆಯೇ, ಈಸ್ಟ್ರೊಜೆನ್ ಎಂಬ ಹಾರ್ಮೋನುಗಳಲ್ಲಿನ ಏರಿಳಿತಗಳಿಂದಾಗಿ, ಗರ್ಭಿಣಿ ಮಹಿಳೆಯರು ಸಾಮಾನ್ಯ ಮಹಿಳೆಯರಿಗಿಂತ ಹೆಚ್ಚು ಬಿಸಿಯನ್ನು ಅನುಭವಿಸುತ್ತಾರೆ.
ಗರ್ಭಿಣಿಯರು ಮೂರನೇ ತ್ರೈಮಾಸಿಕದಲ್ಲಿ ಶಾಖದಿಂದ(Heat) ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಾರೆ. ಇದಕ್ಕೆ ಕಾರಣವೆಂದರೆ ಚಯಾಪಚಯ ದರವು ಹೆಚ್ಚಾಗುತ್ತೆ. ಈ ಕಾರಣದಿಂದಾಗಿ ದೇಹದ ತಾಪಮಾನವು ಹೆಚ್ಚಾಗಲು ಪ್ರಾರಂಭಿಸುತ್ತೆ ಮತ್ತು ಶಾಖವು ಹೆಚ್ಚಾಗಲು ಪ್ರಾರಂಭಿಸುತ್ತೆ.
ಕಡಿಮೆ ನೀರು ಕುಡಿಯೋದರಿಂದ ಅನೇಕ ಮಹಿಳೆಯರು ಹಾಟ್ ಫ್ಲಾಶ್ ಗಳ ಸಮಸ್ಯೆಯನ್ನು ಸಹ ಹೊಂದುತ್ತಾರೆ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು(Drink water) ಸೇವಿಸಿ.
ಮೂರನೇ ತ್ರೈಮಾಸಿಕದಲ್ಲಿ, ಅನೇಕ ಕಾರಣದಿಂದಾಗಿ ಮಗುವಿನ ತೂಕವು ವೇಗವಾಗಿ ಹೆಚ್ಚಾಗುತ್ತೆ, ಆದ್ದರಿಂದ ಶಾಖವೂ ಹೆಚ್ಚಾಗಿರುತ್ತೆ.
ಗರ್ಭಾವಸ್ಥೆಯಲ್ಲಿ ಶಾಖದ ಪರಿಣಾಮವನ್ನು ಕಡಿಮೆ ಮಾಡೋದು ಹೇಗೆ?
ದೇಹದಲ್ಲಿ ನೀರಿನ ಕೊರತೆ ಉಂಟಾಗಲು ಬಿಡಬೇಡಿ. ಸಾಕಷ್ಟು ನೀರು ಕುಡಿಯಿರಿ.
ಆದ್ದರಿಂದ, ಎಳನೀರು, ಲಸ್ಸಿ, ಮಜ್ಜಿಗೆ, ತಾಜಾ ಹಣ್ಣಿನ ರಸದಂತಹ(Fruit juice) ಪಾನೀಯಗಳನ್ನು ಕುಡಿಯಿರಿ. ಇದು ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತೆ, ಇದು ದೇಹದ ತಾಪಮಾನವನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತೆ.
ಗರ್ಭಾವಸ್ಥೆಯಲ್ಲಿ, ಸಾಮಾನ್ಯವಾಗಿ ಚಹಾ ಮತ್ತು ಕಾಫಿಯಿಂದ (Coffee)ದೂರವಿರಲು ಸೂಚಿಸಲಾಗುತ್ತೆ. ವಿಶೇಷವಾಗಿ ಬೇಸಿಗೆಯಲ್ಲಿ ಇದನ್ನು ನೆನಪಿನಲ್ಲಿಡಿ.
ಒತ್ತಡ ಉಂಟಾಗಲು ಬಿಡಬೇಡಿ. ಮನಸ್ಸನ್ನು ಶಾಂತವಾಗಿಡಲು ಧ್ಯಾನ (Meditation) ಮಾಡಿ. ಇದು ದೇಹದ ತಾಪಮಾನವನ್ನು (Body Temperature) ಸಾಮಾನ್ಯಗೊಳಿಸಲು ಸಹಾಯ ಮಾಡುತ್ತೆ.
ಬೇಸಿಗೆಯ ದಿನಗಳಲ್ಲಿ ಗರ್ಭಿಣಿಯರ ರಕ್ತದೊತ್ತಡವೂ (Blood Pressure) ಹೆಚ್ಚಾಗಬಹುದು. ಆದ್ದರಿಂದ, ಕಾಲಕಾಲಕ್ಕೆ ಬಿಪಿಯನ್ನು(BP) ಪರಿಶೀಲಿಸುತ್ತಲೇ ಇರಿ. ಇದರಿಂದ ಅತಿಯಾದ ಶಾಖದ ಕಾರಣವನ್ನು ತಿಳಿದುಕೊಳ್ಳಬಹುದು ಮತ್ತು ಅದನ್ನು ತೆಗೆದುಹಾಕಬಹುದು.
ಯಾವಾಗಲೂ ಸಡಿಲ ಮತ್ತು ಕಾಟನ್ ಬಟ್ಟೆಗಳನ್ನು(Cotton cloths) ಧರಿಸಲು ಪ್ರಯತ್ನಿಸಿ. ಇದರಿಂದ ದೇಹದ ಉಷ್ಣತೆಯು ಹೆಚ್ಚಾಗೋದಿಲ್ಲ.
ತೆರೆದ ಮತ್ತು ತಂಪಾದ ಸ್ಥಳದಲ್ಲಿ ಕುಳಿತುಕೊಳ್ಳಿ. ನೇರ ಸೂರ್ಯನ ಬೆಳಕಿನಲ್ಲಿ ಬಿಸಿ ಸ್ಥಳಗಳಿಗೆ ಹೋಗೋದನ್ನು ತಪ್ಪಿಸಿ.
ಬಟ್ಟೆಯನ್ನು ತಣ್ಣೀರಿನಲ್ಲಿ ನೆನೆಸಿ ಹಾಗೂ ಕೈ, ಕಾಲುಗಳು ಮತ್ತು ದೇಹದ ಉಳಿದ ಭಾಗಗಳನ್ನು ಒರೆಸಿ. ಇದು ಶಾಖದಿಂದ ಪಾರಾಗಲು ಒಳ್ಳೆಯ ಪರಿಹಾರವನ್ನು ನೀಡುತ್ತೆ.