ಹೆರಿಗೆಯ ನಂತರ ಕೂದಲು ಉದುರೋದು ನಿಂತಿಲ್ವಾ? ಈ ಟಿಪ್ಸ್ ಟ್ರೈ ಮಾಡಿ
ಹೆರಿಗೆಯಾದ ಕೂಡಲೇ ಹೆಚ್ಚಿನ ಮಹಿಳೆಯರಲ್ಲಿ ಅತಿಯಾದ ಕೂದಲು ಉದುರುವಿಕೆ ಕಂಡುಬರುತ್ತೆ. ಇದೇನೋ ಹೆದರೋವಂತಹ ಸಮಸ್ಯೆ ಏನಲ್ಲ. ಯಾಕಂದ್ರೆ ಇದು ಸಂಪೂರ್ಣವಾಗಿ ಸಾಮಾನ್ಯವಾಗಿದೆ. ಆದರೆ ಸಮಯಕ್ಕೆ ಸರಿಯಾಗಿ ಕೂದಲು ಉದುರುವಿಕೆ ನಿಲ್ಲಿಸೋದು ಅವಶ್ಯಕ. ಇದಕ್ಕಾಗಿ ಕೆಲವು ಸಲಹೆಗಳನ್ನು ತಿಳಿಯಿರಿ.
ತಾಯಿಯಾಗೋದು(Mother) ಪ್ರತಿಯೊಬ್ಬ ಮಹಿಳೆಯ ಜೀವನದ ದೊಡ್ಡ ಸಂತೋಷಗಳಲ್ಲಿ ಒಂದಾಗಿದೆ. ಆದರೆ ಮಗುವನ್ನು ಜಗತ್ತಿಗೆ ತರುವುದು ಸುಲಭವಲ್ಲ. ಇದಕ್ಕಾಗಿ, ಮಹಿಳೆಯರು ಅನೇಕ ರೀತಿಯ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳೊಂದಿಗೆ ಹೋರಾಡಬೇಕಾಗುತ್ತೆ. ಇವುಗಳಲ್ಲಿ ಒಂದು ಕೂದಲು ಉದುರೋದು. ಮಗುವಿಗೆ ಜನ್ಮ ನೀಡಿದ ಕೂಡಲೇ, ಹೆಚ್ಚಿನ ಮಹಿಳೆಯರಲ್ಲಿ ಅತಿಯಾದ ಕೂದಲು ಉದುರುವಿಕೆ ಕಂಡುಬರುತ್ತೆ ಮತ್ತು ಇದು ಸಂಪೂರ್ಣವಾಗಿ ಸಾಮಾನ್ಯವಾಗಿದೆ. ಗರ್ಭಧಾರಣೆಯ ಮೊದಲು ಮತ್ತು ನಂತರ ಹಾರ್ಮೋನ್ ಮಟ್ಟಕ್ಕೆ ಸಂಬಂಧಿಸಿದ ಅನೇಕ ಬದಲಾವಣೆಗಳಾಗುತ್ತವೆ, ಅದು ನಿಮ್ಮ ಕೂದಲಿನ ಬೆಳವಣಿಗೆಗೆ ಅಡ್ಡಿಯಾಗಬಹುದು.
ಹೆರಿಗೆಯ ನಂತರ ಹಾರ್ಮೋನುಗಳ ಅಸಮತೋಲನ ಅನುಭವಿಸೋದು ಸಂಪೂರ್ಣವಾಗಿ ಸ್ವಾಭಾವಿಕವಾಗಿದೆ ಮತ್ತು ಅದರ ರೋಗಲಕ್ಷಣಗಳಲ್ಲಿ ಒಂದು ಹೆರಿಗೆಯ ನಂತರ ಕೂದಲು ಉದುರೋದು(Hairfall). ಇದು ತಾತ್ಕಾಲಿಕವಾಗಿದ್ದು, ಗರ್ಭಧಾರಣೆಯ ನಂತರದ ಮೊದಲ ಕೆಲವು ತಿಂಗಳುಗಳವರೆಗೆ ಮಾತ್ರ ಇರುತ್ತೆ ಮತ್ತು ಸ್ವಲ್ಪ ಕಾಳಜಿ ವಹಿಸಿದ್ರೆ, ನಿಮ್ಮ ಮಗುವಿಗೆ ಒಂದು ವರ್ಷವಾಗುವ ಹೊತ್ತಿಗೆ ನಿಮ್ಮ ಕೂದಲು ಸಾಮಾನ್ಯ ಸ್ಥಿತಿಗೆ ಮರಳಬಹುದು.
ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಏನೇನು ಮಾಡಬೇಕು ನೋಡೋಣ :
1. ಆರೋಗ್ಯಕರ ಆಹಾರ (Healthy food) ಸೇವಿಸಿ
ಗರ್ಭಧಾರಣೆಯ ನಂತರದ ದೌರ್ಬಲ್ಯ ನಿವಾರಿಸಲು ಮತ್ತು ದೇಹವನ್ನು ಮತ್ತೆ ಬಲಪಡಿಸಲು ಆರೋಗ್ಯಕರ ಆಹಾರ ಸೇವಿಸೋದು ಬಹಳ ಮುಖ್ಯ. ಪ್ರಸವಾನಂತರದ ಮಹಿಳೆಯರು, ವಿಶೇಷವಾಗಿ ವಿಟಮಿನ್ಸ್ ಮತ್ತು ಮಿನರಲ್ಸ್ ಗಳಿಂದ ಸಮೃದ್ಧವಾಗಿರುವ ಪೌಷ್ಠಿಕ ಆಹಾರ ತೆಗೆದುಕೊಳ್ಳೋದು ಅತ್ಯಗತ್ಯ, ಅದು ನಿಮಗೆ ಮತ್ತೆ ದೃಢವಾಗಿ ನಿಲ್ಲಲು ಸಹಾಯ ಮಾಡುತ್ತೆ. ಹೆರಿಗೆಯ ನಂತರ ಕೂದಲು ಉದುರುವಿಕೆಯ ವಿರುದ್ಧ ಹೋರಾಡಲು ಅವು ಸಾಕಷ್ಟು ಸಹಾಯ ಮಾಡುತ್ತವೆ. ಅಲ್ಲದೆ, ಹೈಡ್ರೇಟ್ ಆಗಿರಲು ದಿನವಿಡೀ ಸಾಕಷ್ಟು ಫ್ಲೂಯಿಡ್ ಆಹಾರ ಸೇವಿಸಿ.
2. ಒತ್ತಡವನ್ನು(Stress) ಕಡಿಮೆ ಮಾಡುತ್ತೆ
ನೀವು ಸಾಧ್ಯವಾದಷ್ಟು ಒತ್ತಡ ತೆಗೆದುಕೊಳ್ಳೋದನ್ನು ತಪ್ಪಿಸಬೇಕು. ಇದು ಹಾರ್ಮೋನುಗಳ ಅಸಮತೋಲನವನ್ನು ನಿಯಂತ್ರಿಸಲು ನಿಮಗೆ ಸಹಾಯ ಮಾಡುತ್ತೆ ಮತ್ತು ನಿಮ್ಮ ಕೂದಲು ಉದುರುವಿಕೆಯನ್ನು ಸಹ ಕಡಿಮೆ ಮಾಡುತ್ತೆ.
3. ಕೂದಲಿನ ಪೋಷಣೆ(Hair care) ಹೀಗಿರಲಿ
ಗರ್ಭಧಾರಣೆಯ ನಂತರ, ಹೆಚ್ಚುವರಿ ಕೂದಲು ಉದುರುವುದನ್ನು ತಡೆಯಲು ಅವುಗಳನ್ನು ನೀವು ಹೇಗೆ ಪೋಷಿಸುತ್ತೀರಿ ಅನ್ನೋದ ಸಹ ಮುಖ್ಯ. ಅಗತ್ಯವಿದ್ದಾಗ ಮಾತ್ರ ಶಾಂಪೂ ಮಾಡಿ ಮತ್ತು ಕೂದಲಿಗೆ ಕಂಡೀಷನರ್ ಹಚ್ಚಿ ಇದರಿಂದ ಅದು ಕಡಿಮೆ ಸಿಕ್ಕಾಗುತ್ತೆ. ಇದರ ನಂತರ, ಅಗಲವಾದ ಹಲ್ಲುಗಳನ್ನು ಹೊಂದಿರುವ ಬಾಚಣಿಗೆಯನ್ನು ಬಳಸಿ.
ಸ್ಪ್ಲಿಟ್ ಎಂಡ್ಸ್(Split ends)ನಿಂದ ಕೂದಲನ್ನು ದೂರವಿರಿಸಲು ಆಗಾಗ ಟ್ರಿಮ್ ಮಾಡಿಸಿ. ಸಾಧ್ಯವಾದಷ್ಟು, ಕರ್ಲಿಂಗ್ ಅಥವಾ ಫ್ಲಾಟ್ ಐರನಿಂಗ್ ನಂತಹ ಹೀಟ್ ಸ್ಟೈಲಿಂಗ್ ಉತ್ಪನ್ನಗಳನ್ನು ತಪ್ಪಿಸಲು ಪ್ರಯತ್ನಿಸಿ. ಕೆಮಿಕಲ್ ಆಧಾರಿತ ಕೂದಲಿನ ಉತ್ಪನ್ನಗಳ ಬದಲು ಪರಿಮಳಯುಕ್ತ, ಸಲ್ಫೇಟ್ ಮತ್ತು ಪ್ಯಾರಾಬೆನ್ ಮುಕ್ತ ಉತ್ಪನ್ನಗಳನ್ನು ಆಯ್ಕೆ ಮಾಡಿ.
ಗರ್ಭಧಾರಣೆಯ ನಂತರದ ಕೂದಲು ಉದುರುವಿಕೆಯನ್ನು ತಡೆಗಟ್ಟಲು ಇಲ್ಲಿದೆ ಕೆಲವು ಟಿಪ್ಸ್
1. ಮೊಟ್ಟೆಯ ಬಿಳಿ ಭಾಗ(Egg White)
ಮೊಟ್ಟೆಯ ಬಿಳಿಭಾಗವನ್ನು ಆಲಿವ್ ಎಣ್ಣೆಯಲ್ಲಿ ಬೆರೆಸಿ ಮನೆಯಲ್ಲಿ ಹೇರ್ ಪ್ಯಾಕ್ ತಯಾರಿಸಿ ನೇರವಾಗಿ ತಲೆಬುರುಡೆಗೆ ಹಚ್ಚಿ. ಹೆರಿಗೆಯ ನಂತರ ಕೂದಲು ಉದುರೋದನ್ನು ಕಡಿಮೆ ಮಾಡಲು ಇದು ಉತ್ತಮ ಪರಿಹಾರವಾಗಿದೆ. ಇದು ನಿಮ್ಮ ಕೂದಲನ್ನು ನಯವಾಗಿಸಲು ಮತ್ತು ನಿಮ್ಮ ನೆತ್ತಿಯನ್ನು ಸಂಪೂರ್ಣವಾಗಿ ಪೋಷಿಸುವ ಅತ್ಯುತ್ತಮ ಹೇರ್ ಕಂಡೀಷನಿಂಗ್ ಚಿಕಿತ್ಸೆಗಳಲ್ಲಿ ಒಂದಾಗಿದೆ.
2. ಮೆಂತ್ಯ ಬೀಜ
ಕೆಲವು ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೆನೆಸಿ ಮತ್ತು ಮರುದಿನ ಬೆಳಿಗ್ಗೆ ಫಿಲ್ಟರ್ ಮಾಡಿದ ನೀರನ್ನು ನೇರವಾಗಿ ತಲೆಬುರುಡೆಗೆ ಹಚ್ಚಿ. ಒಂದು ಅಥವಾ ಎರಡು ಗಂಟೆಗಳ ಕಾಲ ಹಾಗೆ ಬಿಡಿ ಮತ್ತು ನಂತರ ಸ್ನಾನ (Bath) ಮಾಡುವಾಗ ತೊಳೆಯಿರಿ. ರಕ್ತ ಪರಿಚಲನೆ ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ತೊಳೆಯುವ ಮೊದಲು ಉಗುರುಬೆಚ್ಚಗಿನ ಮೆಂತ್ಯ ಎಣ್ಣೆಯಿಂದ ನಿಮ್ಮ ಕೂದಲನ್ನು ನಿಧಾನವಾಗಿ ಮಸಾಜ್ ಮಾಡಬಹುದು.
3. ತೆಂಗಿನ ಹಾಲು(Coconut milk)
ಕೂದಲು ಉದುರುವಿಕೆಯನ್ನು ತಡೆಗಟ್ಟಲು ತೆಂಗಿನ ಎಣ್ಣೆಯ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ, ಕೂದಲು ಉದುರುವಿಕೆಯನ್ನು ತಡೆಗಟ್ಟುವಲ್ಲಿ ಮತ್ತು ಕೂದಲಿನ ಬೆಳವಣಿಗೆಯನ್ನು ಪ್ರಾರಂಭಿಸುವಲ್ಲಿ ತೆಂಗಿನ ಹಾಲು ಎಷ್ಟು ಸಹಾಯಕವಾಗಿದೆ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ.
ತೆಂಗಿನ ಹಾಲಿನ ನಿಯಮಿತ ಬಳಕೆಯು ಕೂದಲು ಉದುರೋದನ್ನು ತಡೆಯಲು ಸಹಾಯ ಮಾಡುತ್ತೆ, ಕೂದಲಿನ ದೃಢತೆ ಹೆಚ್ಚಿಸುತ್ತೆ ಮತ್ತು ಕೂದಲನ್ನು ಆಳವಾಗಿ ಕಂಡೀಷನಿಂಗ್(Conditioning) ಮಾಡಿ ಚೆನ್ನಾಗಿ ಪೋಷಿಸುತ್ತೆ. ಹತ್ತಿ ಉಂಡೆಯನ್ನು ಸ್ವಲ್ಪ ತೆಂಗಿನ ಹಾಲಿನಲ್ಲಿ ಮುಳುಗಿಸಿ ಮತ್ತು ಅದನ್ನು ನಿಮ್ಮ ಕೂದಲಿನ ಬೇರುಗಳಿಗೆ ಹಚ್ಚಿ. ಸುಮಾರು 20 ನಿಮಿಷಗಳ ಕಾಲ ಹಾಗೆ ಬಿಡಿ ಮತ್ತು ಸಾಮಾನ್ಯ ನೀರಿನಿಂದ ತೊಳೆಯಿರಿ.
4. ಭೃಂಗರಾಜ (Bringaraj)
ಫಾಲ್ಸ್ ಡೈಸಿ ಎಂದೂ ಕರೆಯಲ್ಪಡುವ ಭೃಂಗರಾಜ ಹೆರಿಗೆಯ ನಂತರ ಕೂದಲು ಉದುರುವಿಕೆಯ ಸಮಸ್ಯೆಯನ್ನು ತಡೆಗಟ್ಟಲು ಮಾಂತ್ರಿಕ ಗಿಡಮೂಲಿಕೆ ಎಂದು ಪರಿಗಣಿಸಲಾಗುತ್ತೆ. ಬೆರಳೆಣಿಕೆಯಷ್ಟು ಭೃಂಗರಾಜ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ನುಣ್ಣಗೆ ಪೇಸ್ಟ್ ಮಾಡಲು ರುಬ್ಬಿಕೊಳ್ಳಿ. ಇದನ್ನು ನಿಮ್ಮ ಕೂದಲಿಗೆ ನೇರವಾಗಿ ಹಚ್ಚಬಹುದು ಅಥವಾ ಹಾಲಿನೊಂದಿಗೆ ಮಿಶ್ರಣ ಮಾಡಬಹುದು.