ಒದ್ದೆ ಕೂದಲು ಬಾಚುವುದರಿಂದ ಕೂದಲು ಉದುರುತ್ತದೆಯೇ? ಗುಂಗುರು, ನೇರ ಕೂದಲು ಇದ್ದವರು ಗಮನಿಸಿ!
combing wet hair cause hair loss? ಬೆಳಗ್ಗೆ ಸ್ನಾನದ ನಂತರ ಒದ್ದೆಯಾದ ಕೂದಲು ಬಾಚುತ್ತೀರ? ಒದ್ದೆ ಕೂದಲು ಬಾಚಿದರೆ ಕೂದಲು ಉದುರುತ್ತದೆಯೇ? ನಿಮ್ಮ ಕೂದಲು ನೇರ ಅಥವಾ ಗುಂಗುರು ಕೂದಲಿದ್ದರೆ ಒದ್ದೆ ಕೂದಲು ಬಾಚುವ ಮುನ್ನ ಏನು ಮಾಡಬೇಕು? ಮುನ್ನೆಚ್ಚರಿಕೆಗಳೇನ? ತಿಳಿಯಿರಿ.

ಒದ್ದೆಯಾದ ಕೂದಲು ಬಾಚಿದರೆ ಹೆಚ್ಚು ಉದುರುತ್ತದೆಯೇ?
ಕೂದಲು ಉದುರುವಿಕೆ ಸಮಸ್ಯ ಭಾರತೀಯ ಮಹಿಳೆಯರು, ಪುರುಷರೆನ್ನದೆ ಎಲ್ಲರಿಗೂ ದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ಮಹಿಳೆಯರಿಗೆ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚುತ್ತಿದೆ. ಕೂದಲು ಉಳಿಸಿಕೊಳ್ಳಲು, ಹೆಚ್ಚಿಸಲು ಏನೆಲ್ಲ ಎಣ್ಣೆ, ಶಾಂಪೂ, ಕ್ರೀಂ, ಜೆಲ್ ಹಚ್ಚಿದರೂ, ವೈದ್ಯರ ಬಳಿ ಅಳಲುತೋಡಿಕೊಂಡರೂ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲವೆಂದು ಬಹಳಷ್ಟು ಮಹಿಳೆಯರು ಚಿಂತಿತರಾಗಿದ್ದಾರೆ. ಒಂದು ಕಡೆ ಚಿಕ್ಕವಯಸ್ಸಿಗೆ ಬಿಳಿಗೂದಲು, ಇನ್ನೊಂದು ಕಡೆ ಕೂದಲು ಉದುರುವಿಕೆ ಸಮಸ್ಯೆ ಇದರಿಂದ ಖಿನ್ನತೆಗೂ ಒಳಗಾದವ ಮಹಿಳೆಯರೂ ಇದ್ದಾರೆ.
ಕೂದಲು ಒಣಗಿದಾಗ ಅಥವಾ ಡ್ರೈ ಆಗಿದ್ದಕ್ಕಿಂತ ಒದ್ದೆಯಾದಾಗ ಹೆಚ್ಚು ಸೂಕ್ಷ್ಮವಾಗಿರುತ್ತೆ. ಅಂತ ಸಮಯದಲ್ಲಿ ತಲೆಗೂದಲು ಸಿಕ್ಕು ಇದ್ದಾಗ, ಒದ್ದೆಯಾಗಿದ್ದಾಗ ಕೂದಲನ್ನು ಬಾಚಿಕೊಂಡಾಗ ಬಾಚಣಿಕೆಗೆ ಸಿಕ್ಕು ಕೂದಲು ಕಿತ್ತುಬರುತ್ತದೆ. ಹಾಗಾದರೆ ಒದ್ದೆಯಾಗಿದ್ದಾಗ ಬಾಚಬೇಕೇ? ಬೇಡವೇ? ಒದ್ದೆಯಾದ ಕೂದಲು ಬಾಚಿಕೊಳ್ಳಬೇಕಾದ ಅನಿವಾರ್ಯತೆ ಇದ್ದಾಗ ಹೇಗೆ ಬಾಚಿಕೊಳ್ಳಬೇಕು? ಮುನ್ನೆಚ್ಚರಿಕೆ ಕ್ರಮಗಳೇನು ಇಲ್ಲಿ ತಿಳಿಯೋಣ.
ಕೂದಲು ಒದ್ದೆಯಾಗಿದ್ದಾಗ ಏಕೆ ಬಾಚಬಾರದು?
ಮೊದಲನೆಯದಾಗಿ ತಲೆಸ್ನಾನ ಮಾಡಿದಾಗ ಕೂದಲು ಒದ್ದೆಯಾಗಿ ಅದರ ರಚನೆಯು ತಾತ್ಕಾಲಿಕ ಬದಲಾವಣೆಯಾಗಿ ಕೂದಲು ಸೂಕ್ಷ್ಮವಾಗುತ್ತದೆ. ಒದ್ದೆಯಾಗಿದ್ದಾಗ ಕೂದಲನ್ನು ರಫ್ ಆಗಿ ಬಾಚಿದಾಗ ಉದುರುತ್ತವೆ. ಅಷ್ಟೇ ಏಕೆ ಸುಮ್ಮನೆ ತಲೆತೊಳೆಯುವಾಗಲೂ ಕೂದಲು ಉದುರುತ್ತದೆ. ಹೀಗಾಗಿ ಒದ್ದೆಯಾಗಿದ್ದಾಗ ನಾಜೂಕಾಗಿ ಬಾಚುವುದು ಮುಖ್ಯ. ಅಥಾವ ಕೂದಲು ಒಣಗುವವರೆಗೆ ಬಾಚದಿರುವುದು ಒಳ್ಳೆಯದು.
ಬಾಚಣಿಕೆ ಸಿಕ್ಕ ಕೂದಲುಗಳು ಹೇಗೆ ಉದುರಿದವು?
ನಿಮಗೆ ಗೊತ್ತೇ? ಬಾಚಣಿಕೆ ಸಿಲುಕಿಕೊಂಡ ನಿಮ್ಮ ಕೂದಲುಗಳು ವಾಸ್ತವವಾಗಿ ಬೇರುಗಳಿಂದ ಕಿತ್ತುಬಂದ ಕೂದಲುಗಳಲ್ಲ, ಬದಲಾಗಿ ಕೆಲವಷ್ಟು ಕೂದಲು ನೈಸರ್ಗಿಕ ಕೂದಲು ಬೆಳವಣಿಗೆಯ ಭಾಗವಾಗಿ ಉದುರಿದರೆ ಇನ್ನು ಕೆಲವು ನೀವು ಒದ್ದೆಯಾದ ತಲೆಗೂದಲು ತೀವ್ರವಾಗಿ ಉಜ್ಜುವುದುರಿಂದ, ಬಾಚುವುದುರಿಂದ ಮಧ್ಯೆದಲ್ಲಿ ತುಂಡಾದ ಕೂದಲುಗಳವು.
ನಿಮ್ಮ ಕೂದಲು ನೇರವಾಗಿದ್ದರೆ ಹೀಗೆ ಮಾಡಿ
ನಿಮ್ಮ ಕೂದಲು ಗುಂಗುರು ಕೂದಲುಗಳಂತಲ್ಲದೆ ನೇರವಾಗಿಯೇ? ಕೂದಲು ಸಾಫ್ಟ್ ಮತ್ತು ನೇರವಾಗಿರುವವರು ಸ್ನಾನ ಮಾಡಿದ ನಂತರ ಬಾಚಿಕೊಳ್ಳುವ ಅವಸರ ಬೇಡ, ಒಣಗುವವರೆಗೆ ಕಾಯಿರಿ, ಅಥವಾ ಹೇರ್ ಡ್ರೈಯರ್‌ನಿಂದ ಒಣಗಿಸಿ. ಕೂದಲು ಒಣಗಿದ ಬಳಿಕ ನಿಧಾನವಾಗಿ ಬಾಚಿಕೊಳ್ಳಿ.
ಸಿಕ್ಕು ಇದ್ದಾಗ ಬಲವಂತವಾಗಿ ಎಳೆಯಬೇಡಿ. ಹೀಗೆ ಎಳೆದು ಬಾಚುವುದರಿಂದ ಕೂದಲು ಉದುರುತ್ತವೆ. ಅದರ ಬದಲು ಕೂದಲು ಸಂಪೂರ್ಣ ಒಣಗಿದ ನಂತರ ಸುತ್ತಿಕೊಂಡ, ಸಿಕ್ಕು ಆಗಿರುವ ಕೂದಲುಗಳು ಅಥವಾ ದಪ್ಪನೆಯ ಕೂದಲು ಬಾಚುವುದು ಒಳ್ಳೆಯದು.
ತಲೆ ಸ್ನಾನ ಮಾಡಿದ ನಂತರ ಹೀಗೆ ಮಾಡಿ
ಒದ್ದೆಯಾಗಿದ್ದಾಗ ಕೂದಲು ಸಾಮಾನ್ಯವಾಗಿ ಅಂಟಿಕೊಂಡು ದಪ್ಪವಾಗಿ ಸಿಕ್ಕು ಆಗಿರುತ್ತವೆ. ಆಗ ಕಿರಿದಾದ ಹಲ್ಲುಗಳಿರುವ ಬಾಚಣಿಕೆ ಬಳಸುವ ಬದಲು, ಸ್ವಲ್ಪ ಅಗಲವಾದ ಹಲ್ಲುಗಳಿರುವ ಬಾಚಣಿಕೆ ಬಳಸುವುದು ಸೂಕ್ತ. ಮೊದಲಿಗೆ ಕೂದಲಿನ ತುದಿಯಲ್ಲಿರುವ ಸಿಕ್ಕುಗಳನ್ನ ಬಿಡಿಸಿ, ನಂತರ ಮೇಲಕ್ಕೆ ಬಾಚಿಕೊಳ್ಳಿ. ಒಂದೇ ಬಾರಿಗೆ ಮೇಲಿನಿಂದ ಕೆಳಕ್ಕೆ ಎಳೆಯಬೇಡಿ. ನಿಧಾನವಾಗಿ ಬಾಚಿಕೊಳ್ಳುವುದರಿಂದ ನಿಮ್ಮ ಕೂದಲಿನ ಮೇಲೆ ಒತ್ತಡ ಉಂಟಾಗುವುದಿಲ್ಲ. ಇದರಿಂದ ಕೂದಲು ಬೇರುಗಳಿಂದ ಕಿತ್ತು ಬರುವುದನ್ನ ತಡೆಯಬಹುದು.
ಸ್ನಾನ ಮಾಡಿದ ನಂತರ ಟವೆಲ್‌ನಿಂದ ಮೃದುವಾಗಿ ಕೂದಲು ಒರೆಸಿ, ಅತಿಯಾಗಿ ಉಜ್ಜುವುದು ಬೇಡ, ಕೂದಲು ಸೀಳುವ ಅಥವಾ ಒಡೆಯಬಹುದು. ಒಂದು ವೇಳೆ ಮನೆಯಲ್ಲಿ ಮೈಕ್ರೋ ಫೈಬರ್ ಬಟ್ಟೆಯಿದ್ದರೆ ನಿಧಾನವಾಗಿ ಒರೆಸಿ, ಹೇರ್ ಡ್ರೈಯರ್ ಇದ್ದರೆ ಒಣಗಿಸಿ, ಪೂರ್ಣವಾಗಿ ಒಣಗಿದ ನಂತರವೇ ಬಾಚಿಕೊಳ್ಳಿ. ಬಹಳಷ್ಟು ಜನರ ಕೂದಲು ಉದುರುವಿಕೆಗೆ ಇದೇ ಕಾರಣವಾಗಿರುತ್ತೆ. ಏಕೆಂದರೆ ಬೆಳಗ್ಗೆ ಆಫೀಸ್ ಹೋಗುವ ತರಾತುರಿಯಲ್ಲಿ ಒದ್ದೆ ಕೂದಲು ಬಾಚುವುದು, ಟವೆಲ್‌ನಲ್ಲಿ ಗಟ್ಟಿಯಾಗಿ ಒರೆಸುವುದು, ಕಳಪೆ ಶಾಂಪೂ, ಅತಿಯಾದ ಹೇರ್ ಜೆಲ್ ಬಳಸುವುದು ಕೂದಲು ಉದುರುವಿಕೆಗೆ ಇವುಗಳ ಕಾರಣ. ಹೀಗಾಗಿ ಯಾವುದೇ ಜೆಲ್ ಅಥವಾ ದುಬಾರಿ ಪ್ರಾಡಕ್ಟ್ ಬಳಸದೆ ನ್ಯಾಚುರಲ್ಲಾಗಿ ಇರುವಂತೆ ನೋಡಿಕೊಳ್ಳಿ. ಇದರಿಂದ ಕೂದಲು ಕೂದಲು ಉದುರುವಿಕೆ ಸಮಸ್ಯೆ ಸ್ವಲ್ಪ ಮಟ್ಟಿಗಾದರೂ ತಡೆಯಲು ಸಾಧ್ಯವಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.









