ಬ್ಯೂಟಿ ವಿತ್ ಬ್ರೈನ್, 16ನೇ ವಯಸ್ಸಿನಲ್ಲಿ ಬಿಸಿನೆಸ್ ಆರಂಭಿಸಿ 1000 ಕೋಟಿಯ ಉದ್ಯಮ ಕಟ್ಟಿದ ಚೆಲುವೆ
ಯಶಸ್ಸು ಅನ್ನೋದು ಅಷ್ಟು ಸುಲಭವಾಗಿ ಲಭಿಸುವುದಿಲ್ಲ. ಅದನ್ನು ಅನುಭವಿಸಲು ಸಾಕಷ್ಟು ಪರಿಶ್ರಮದ ಅಗತ್ಯವಿದೆ. ಉದ್ಯಮದ ಪಾಲಿಗೂ ಇದು ಅನ್ವಯಿಸುತ್ತದೆ. ಏಕಾಏಕಿ ಒಂದೇ ದಿನದಲ್ಲಿ ಕೋಟಿಗಟ್ಟಲೆ ಲಾಭಗಳಿಸಿ ಬಿಡುತ್ತಾನೆ ಅನ್ನೋದು ಸಾಧ್ಯವಿಲ್ಲ. ಬಿಸಿನೆಸ್ ಕುಟುಂಬದಿಂದ ಬಂದರೂ ಸಮಯ, ಯಶಸ್ಸಿಗಾಗಿ ಕಾದ ಹಲವಾರು ಮಂದಿಯಿದ್ದಾರೆ. ಅದರಲ್ಲಿ ಒಬ್ಬರು ದೇವಿತಾ ಸರಾಫ್.
Devitha saraf
ಯಶಸ್ಸು ಅನ್ನೋದು ಅಷ್ಟು ಸುಲಭವಾಗಿ ಲಭಿಸುವುದಿಲ್ಲ. ಅದನ್ನು ಅನುಭವಿಸಲು ಸಾಕಷ್ಟು ಪರಿಶ್ರಮದ ಅಗತ್ಯವಿದೆ. ಉದ್ಯಮದ ಪಾಲಿಗೂ ಇದು ಅನ್ವಯಿಸುತ್ತದೆ. ಏಕಾಏಕಿ ಒಂದೇ ದಿನದಲ್ಲಿ ಕೋಟಿಗಟ್ಟಲೆ ಲಾಭಗಳಿಸಿ ಬಿಡುತ್ತಾನೆ ಅನ್ನೋದು ಸಾಧ್ಯವಿಲ್ಲ. ಬಿಸಿನೆಸ್ ಕುಟುಂಬದಿಂದ ಬಂದರೂ ಸಮಯ, ಯಶಸ್ಸಿಗಾಗಿ ಕಾದ ಹಲವಾರು ಮಂದಿಯಿದ್ದಾರೆ. ಅದರಲ್ಲಿ ಒಬ್ಬರು ದೇವಿತಾ ಸರಾಫ್.
ದೇವಿತಾ ಸರಾಫ್,ತಮ್ಮ ವ್ಯವಹಾರವನ್ನು ದೊಡ್ಡದಾಗಿಸಲು ಮತ್ತು ಲಾಭದಾಯಕಗೊಳಿಸಲು ಹಲವು ವರ್ಷಗಳ ಕಾಲ ಕಾಯಬೇಕಾಯಿತು. ಅವರ ಕಂಪನಿ ಮೊದಲ 8 ವರ್ಷಗಳಲ್ಲಿ ಕೇವಲ 30 ಕೋಟಿ ರೂಪಾಯಿ ವ್ಯವಹಾರ ಮಾಡಿದರೆ, ನಂತರದ 4 ವರ್ಷಗಳಲ್ಲಿ 1000 ಕೋಟಿ ರೂಪಾಯಿ ವ್ಯವಹಾರ ನಡೆಸಿದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.
ದೇವಿತಾ ಅವರ ಕುಟುಂಬ ಈಗಾಗಲೇ ಕಂಪ್ಯೂಟರ್ ತಯಾರಿಕಾ ಕ್ಷೇತ್ರದೊಂದಿಗೆ ಸಂಬಂಧ ಹೊಂದಿತ್ತು. ಆದ್ದರಿಂದ, ಭವಿಷ್ಯದಲ್ಲಿ ವ್ಯಾಪಾರ ಮಾಡುವ ಯೋಜನೆಯನ್ನು ಅವರು ಮನಸ್ಸಿನಲ್ಲಿಟ್ಟುಕೊಂಡಿದ್ದರು. ಇದನ್ನು ಕಾರ್ಯರೂಪಕ್ಕೆ ತರಲು, ಅವರು ತಮ್ಮ 16 ನೇ ವಯಸ್ಸಿನಲ್ಲಿ ವ್ಯಾಪಾರದ ತಂತ್ರಗಳನ್ನು ಕಲಿಯಲು ಪ್ರಾರಂಭಿಸಿದರು.
ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳಲು, ಅವರು ಕ್ಯಾಲಿಫೋರ್ನಿಯಾದಲ್ಲಿ ವ್ಯವಹಾರವನ್ನು ಅಧ್ಯಯನ ಮಾಡಿದರು. ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅವರು ತಮ್ಮ ಪೀಳಿಗೆಗಿಂತ ಒಂದು ಹೆಜ್ಜೆ ಮುಂದೆ ಹೋಗಲು ನಿರ್ಧರಿಸಿದರು ಮತ್ತು ದೂರದರ್ಶನದ ದೃಷ್ಟಿಯನ್ನು ಬದಲಾಯಿಸುವದನ್ನು ಪ್ರಾರಂಭಿಸಿದರು.
ದೇವಿತಾ ಸರಾಫ್ ಯುಪಿಯ ಮಾರ್ವಾಡಿ ಕುಟುಂಬದಲ್ಲಿ ಜನಿಸಿದವರು. ಅವರ ತಂದೆ ರಾಜ್‌ಕುಮಾರ್ ಸರಾಫ್. ಅವರು ಜೆನಿತ್ ಕಂಪ್ಯೂಟರ್ಸ್ ವ್ಯಾಪಾರ ನಡೆಸುತ್ತಿದ್ದರು ತಮ್ಮ ೧೬ನೇ ವಯಸ್ಸಿನಲ್ಲಿಯೇ ದೇವಿತಾ ಸರಾಫ್ ವ್ಯಾಪಾರದ ಬಗ್ಗೆ ತಿಳಿಯುವ ಮನಸ್ಸು ಮಾಡಿದ್ದರು. ಹಾಗಾಗಿ ಅವರು ತಂದೆ ಜೊತೆ ಅವರ ಕಚೇರಿಗೆ ಹೋಗಿ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು. ಟೆಕ್ನಾಲಜಿ ಕ್ಷೇತ್ರದಲ್ಲಿ ಹೊಸದನ್ನು ಮಾಡುವ ಬಯಕೆ ಅವರದ್ದಾಗಿತ್ತು.
ನಂತರ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳಲು ಕ್ಯಾಲಿಫೋರ್ನಿಯಾಕ್ಕೆ ಹೋದ ಅವರು ಅಲ್ಲಿ ಓದು ಮುಗಿಸಿ ಭಾರತಕ್ಕೆ ಬಂದಾಗ ಜನರ ದೂರದರ್ಶನದ ದೃಷ್ಟಿಯನ್ನು ಬದಲಾಯಿಸುವ ತೀರ್ಮಾನಕ್ಕೆ ಬಂದ್ರು.
ವಿದೇಶಿ ಕಂಪನಿಗಳು ಪ್ರೀಮಿಯಂ ಉತ್ಪನ್ನಗಳನ್ನು ತಯಾರಿಸುತ್ತವೆ, ಆದರೆ ಭಾರತೀಯ ಕಂಪನಿಗಳು ಅಗ್ಗದ ಉತ್ಪನ್ನಗಳ ಮೇಲೆ ಅವಲಂಬಿತವಾಗಿವೆ ಎಂಬುದನ್ನು ದೇವಿತಾ ಮೊದಲು ಗಮನಿಸಿದ್ದರು.
ಸಣ್ಣ ವಯಸ್ಸಿನಲ್ಲೇ ಉದ್ಯಮಕ್ಕೆ ಧುಮುಕಿದ ದೇವಿತಾ ಸರಾಫ್ : ದೇವಿತಾ ಅವರು ಕೇವಲ 25 ನೇ ವಯಸ್ಸಿನಲ್ಲಿ ತಮ್ಮದೇ ಕಂಪನಿ ಶುರು ಮಾಡಿದ್ರು. ವಿಯು ಗ್ರೂಪ್‌ನ ಸಿಇಒ ಮತ್ತು ಅಧ್ಯಕ್ಷೆಯಾಗಿರುವ ದೇವಿತಾ ಸರಾಫ್, 2006 ರಲ್ಲಿ, ಅವರು Vu ಟೆಲಿವಿಷನ್ಸ್ ಎಂಬ ಕಂಪನಿಯನ್ನು ಸ್ಥಾಪಿಸಿದರು.
ಇದು ಸ್ಮಾರ್ಟ್ ಟಿವಿ ತಯಾರಕ ಕಂಪನಿಯಾಗಿದೆ. ಟಿವಿ ಹಾಗೂ ಕಂಪ್ಯೂಟರ್ ಸಂಯೋಜಿಸುವ ಮೂಲಕ ಸಿದ್ಧವಾಗಿದೆ. ಇದರಲ್ಲಿ ಯೂಟ್ಯೂಬ್, ಒಟಿಟಿ ಪ್ಲಾಟ್‌ಫಾರ್ಮ್ ಸೇರಿದಂತೆ ಡಿ೨ಹೆಚ್ ಚಾನೆಲ್‌ಗಳನ್ನು ಗ್ರಾಹಕರು ಆನಂದಿಸಬಹುದು.
2006ರಲ್ಲಿ ಸ್ಮಾರ್ಟ್ ಟಿವಿಯನ್ನುಜನರ ಬಳಿ ಕೊಂಡೊಯ್ಯುವುದು ಸುಲಭವಾಗಿರಲಿಲ್ಲ. ಯಶಸ್ಸಿಗೆ ಅವರು ಅನೇಕ ವರ್ಷ ಕಾಯಬೇಕಾಯ್ತು. ಇಲ್ಲಿ ಅವರ ತಾಳ್ಮೆ ಕೆಲಸ ಮಾಡಿತು. ಮೊದಲ 8 ವರ್ಷಗಳಲ್ಲಿ ಕಂಪನಿಯು 0 ರಿಂದ 30 ಕೋಟಿಗಳವರೆಗೆ ಗಳಿಸಲು ಸಫಲವಾಯ್ತು. ಆದ್ರೆ ಮುಂದಿನ 4 ವರ್ಷಗಳಲ್ಲಿ ಕಂಪನಿ 1000 ಕೋಟಿ ರೂಪಾಯಿಗೆ ಬಂದು ನಿಂತಿತು.