MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Women
  • ಗರ್ಭಿಣಿಯರಲ್ಲಿ ರಕ್ತದ ಸಕ್ಕರೆ ನಿಯಂತ್ರಿಸಿ, ಅನಾರೋಗ್ಯದ ಅಪಾಯ ತಪ್ಪಿಸಿ

ಗರ್ಭಿಣಿಯರಲ್ಲಿ ರಕ್ತದ ಸಕ್ಕರೆ ನಿಯಂತ್ರಿಸಿ, ಅನಾರೋಗ್ಯದ ಅಪಾಯ ತಪ್ಪಿಸಿ

ಅನೇಕ ಮಹಿಳೆಯರು ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದ ಸಕ್ಕರೆ ಮಟ್ಟ (High Sugar in Blood) ಅಥವಾ ಮಧುಮೇಹದಿಂದ ಬಳಲುತ್ತಿದ್ದಾರೆ. ಇದರಿಂದ ಮಗುವಿಗೆ ಅಪಾಯವಿದೆ ಅಥವಾ ಇದರ ನಂತರ ಆರೋಗ್ಯ (Health) ಸಮಸ್ಯೆಗಳಿವೆ ಎಂದು ಸಂಶೋಧನೆಯಲ್ಲಿ ಇಲ್ಲಿ ಕಂಡುಬಂದಿದೆ. ಗರ್ಭಾವಸ್ಥೆಯ ಮಧುಮೇಹ ಹೊಂದಿರುವ ತಾಯಂದಿರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುವುದು ಶಿಶುಗಳಿಗೆ ಉತ್ತಮ ಫಲಿತಾಂಶ ನೀಡುತ್ತದೆ ಎಂದು ಅಧ್ಯಯನ ಹೇಳಿದೆ. ನ್ಯೂಜಿಲೆಂಡ್‌ನ ಆಕ್ಲೆಂಡ್ ವಿಶ್ವವಿದ್ಯಾನಿಲಯದಲ್ಲಿ ಕ್ಯಾರೊಲಿನ್ ಕ್ರೌಥರ್ ಮತ್ತು ಅವರ ತಂಡವು ಅದರ ಬಗ್ಗೆ ಅಧ್ಯಯನ ಮಾಡಿದೆ. ಇದರ ಸಂಶೋಧನೆಗಳನ್ನು ಜರ್ನಲ್ PLOS ಮೆಡಿಸಿನ್‌ನಲ್ಲಿ ಪ್ರಕಟಿಸಿದೆ. 

1 Min read
Author : Suvarna News
Published : Sep 09 2022, 06:49 PM IST
Share this Photo Gallery
  • FB
  • TW
  • Linkdin
  • Whatsapp
17

ಮಧುಮೇಹ ಇರುವ ಗರ್ಭಿಣಿಯರ ರಕ್ತದ ಸಕ್ಕರೆಯ ಲೆವಲ್ ಅನ್ನು ಕಡಿಮೆ ಮಾಡುವುದರಿಂದ ದಢೂತಿ ಮಗವನ್ನು ಹೊಂದುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಅಲ್ಲದೇ ಜನನದ ಸಮಯದಲ್ಲಿ ಮಗುವಿಗೆ ಸಾವು ಮತ್ತು ಗಾಯದ ಅಪಾಯವೂ ಕಡಿಮೆಯಾಗಲಿದೆ ಎಂದು ಅಧ್ಯಯನ ಹೇಳುತ್ತದೆ. 

27
infants general

infants general

ಮಧುಮೇಹ ಹೊಂದಿರುವ ತಾಯಿ ಸರಾಸರಿ ಗಾತ್ರಕ್ಕಿಂತ ದೊಡ್ಡ  ಮಗುವಿಗೆ ಜನ್ಮ ನೀಡುತ್ತಾಳೆ. ಇದರಿಂದಾಗಿ ಅವರು  ಹುಟ್ಟುವಾಗಲೇ ಗಾಯ ಅಥವಾ ಸಾವಿನ ಅಪಾಯ ಹೊಂದಿರುತ್ತಾರೆ.

37

ಗರ್ಭಾವಸ್ಥೆಯಲ್ಲಿ ಮಧುಮೇಹ ಹೆಚ್ಚಾಗುವ ಸಮಸ್ಯೆ ಪ್ರಪಂಚದಾದ್ಯಂತ ಸಾಮಾನ್ಯ. ಇದು ಹೆಚ್ಚಾಗಿ ದಪ್ಪ ಮಕ್ಕಳ ಜನನಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಬೊಜ್ಜು ಮತ್ತು ಟೈಪ್ 2 ಮಧುಮೇಹದ ಅಪಾಯವು ಮಗುವಿನ ಜೀವನದುದ್ದಕ್ಕೂ ಇರುತ್ತದೆ.

47

ರಕ್ತದ ಸಕ್ಕರೆಯ ನಿಯಂತ್ರಣವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ಅಗತ್ಯವಿದೆ.ಇದಕ್ಕಾಗಿ ಅವಳು ತನ್ನ ಆಹಾರ ಕ್ರಮವನ್ನು ಬದಲಾಯಿಸಬಹುದು, ಔಷಧವನ್ನು ತೆಗೆದುಕೊಳ್ಳಬಹುದು.ತಾಯಿ ಮತ್ತು ಮಗುವಿಗೆ ಅಪಾಯವನ್ನು ಕಡಿಮೆ ಮಾಡಲು ರಕ್ತದ ಸಕ್ಕರೆಯನ್ನು ಎಷ್ಟು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಎಂಬುದು ಇನ್ನೂ ತಿಳಿದಿಲ್ಲ. ಆದರೆ ಅದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದರಿಂದ  ಮಗುವಿನ ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ. 

57

ನ್ಯೂಜಿಲೆಂಡ್‌ನ 10 ಆಸ್ಪತ್ರೆಗಳಲ್ಲಿ ಮಧುಮೇಹ ಹೊಂದಿರುವ 1,100  ಗರ್ಭಿಣಿ ಮಹಿಳೆಯರ ಅಧ್ಯಯನ ಮಾಡಲಾಯಿತು. ಈ  ಸಮಯದಲ್ಲಿ, ಪ್ರತಿ ಆಸ್ಪತ್ರೆಯ ಡಯಾಬಿಟಿಕ್‌ ಗರ್ಭಿಣಿಯರ ಸಕ್ಕರೆ ಲೆವಲ್‌ ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದರು. ಪ್ರತಿ ಗುಂಪಿನಲ್ಲಿನ  ಮಹಿಳೆಯರು ಮತ್ತು ಶಿಶುಗಳ ಫಲಿತಾಂಶಗಳನ್ನು
ನಂತರ ಹೋಲಿಸಲಾಯಿತು. 

67

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿದವರ ಮಕ್ಕಳು ನಿರೀಕ್ಷಿಸಿದಂತೆ ಬೆಳೆಯಲಿಲ್ಲ. ಇದು ಜನನದ ಸಮಯದಲ್ಲಿ ಶಿಶು ಮರಣ, ಆಘಾತ ಮತ್ತು ಶೋಲ್ಡರ್‌ ಡಿಸ್ಟೋಸಿಯಾ ಅಪಾಯವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ. ಆದರೆ, ಇದು ತಾಯಿಯ ಆರೋಗ್ಯದ ಗಂಭೀರ ಪರಿಣಾಮ ಬೀರಿತ್ತು.  ಉದಾಹರಣೆಗೆ ಹೆರಿಗೆ ಸಮಯದಲ್ಲಿ ಅಥವಾ ನಂತರ ಭಾರೀ ರಕ್ತಸ್ರಾವ ಆಗುವ ಸಾಧ್ತತೆಯೂ ಇರುತ್ತದೆ.

77

ಹೊಸ ಅಧ್ಯಯನದ ಫಲಿತಾಂಶಗಳು ವೈದ್ಯರು ತಮ್ಮ ಗರ್ಭಿಣಿ ಮಧುಮೇಹ ರೋಗಿಗಳ ರಕ್ತದ ಸಕ್ಕರೆಯನ್ನು ಹೇಗೆ ನಿಯಂತ್ರಿಸಬಹುದು ಅಥವಾ ನಿಯಂತ್ರಿಸಬೇಕು ಎಂಬುದನ್ನು ನಿರ್ಧರಿಸಲು ಸಹಾಯ ಮಾಡಬಹುದು ಮತ್ತು ಕಟ್ಟುನಿಟ್ಟಾದ ಚಿಕಿತ್ಸೆಯು ಹಾನಿಯಾಗದಂತೆ ನಿಜವಾದ ಪ್ರಯೋಜನಗಳನ್ನು ತರಬಹುದು ಎಂದು ಈ ಅಧ್ಯಯನವು ತೋರಿಸಿದೆ.
 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಆರೋಗ್ಯ
ತಾಯಿ
ಮಹಿಳೆಯರು

Latest Videos
Recommended Stories
Recommended image1
ಜೀವನ ಸ್ಪೂರ್ತಿ ಅಂದ್ರೆ ಇದೆ… ನಟಿ Neha Gowda ಗೆಳತಿ ಜೀವನದ ಕಥೆ ಕೇಳಿದ್ರೆ ನೀವೂ ಹೀಗೆ ಹೇಳ್ತೀರಾ…
Recommended image2
ಮುಂಬೈನಲ್ಲಿ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಮೊದಲ ಬೀಚ್ ಕ್ಲಬ್ ಶುರು; ದೇವಲೋಕವೋ ಪ್ರೇಮಲೋಕವೋ ಎಂಬಂತಿದೆ!
Recommended image3
ಸೊಬಗರಂತೆ ಬಂದು 10,000 ಮೌಲ್ಯದ ಒಳ ಉಡುಪು ಕದ್ದೊಯ್ದ ಮೂವರು ಮಹಿಳೆಯರು: ಸಿಸಿಟಿವಿ ದೃಶ್ಯ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved