MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
BJP Padayatra Ballari
ISRO Bengaluru
NHAI Toll Scam
Karnataka Agriculture
Bigg Boss Kannada 13
Reliance Ice Cream Business
September 2nd Daily Horoscope
Chikkamagaluru Gruhajyothi Yojana
PM Dhan Dhaanya Krishi Yojana
Vijayapura Road Development Project
Nepal Flood Compensation
Commercial LPG Cylinder Price
  • Home
  • Life
  • Women
  • ಗರ್ಭಿಣಿಯರು ಕ್ರಾಪ್ ಟಾಪ್ ಹಾಕಂಗಿಲ್ವಾ? ಭಾರತದಲ್ಲಿ ರಷ್ಯಾ ಯುವತಿ ಎದುರಿಸಿದ ಸವಾಲುಗಳು

ಗರ್ಭಿಣಿಯರು ಕ್ರಾಪ್ ಟಾಪ್ ಹಾಕಂಗಿಲ್ವಾ? ಭಾರತದಲ್ಲಿ ರಷ್ಯಾ ಯುವತಿ ಎದುರಿಸಿದ ಸವಾಲುಗಳು

ಭಾರತದಲ್ಲಿ ವಾಸವಿರುವ ರಷ್ಯಾ ಮೂಲದ ಸೋಫಿಯಾ, ತಮ್ಮ ಗರ್ಭಾವಸ್ಥೆಯ ಅನುಭವಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಂಪೂರ್ಣ ವಿಶ್ರಾಂತಿ, ಬಟ್ಟೆಯ ಆಯ್ಕೆ, ಭಾಷೆಯ ಸಮಸ್ಯೆ ಮತ್ತು ಇಲ್ಲಿನ ಹವಾಮಾನದಂತಹ ವಿಷಯಗಳಲ್ಲಿ ತಮಗಾದ ವಿಚಿತ್ರ ಅನುಭವ ಹಾಗೂ ಸವಾಲುಗಳ ಬಗ್ಗೆ ಅವರು ವಿವರಿಸಿದ್ದಾರೆ.

2 Min read
Author : Mahmad Rafik
Published : Jul 20 2026, 01:21 PM IST
Share this Photo Gallery
  • FB
  • TW
  • Linkdin
  • Whatsapp
17
ರಷ್ಯಾ ಮೂಲದ ಸೋಫಿಯಾ
Image Credit : sofia_desilife Instagram

ರಷ್ಯಾ ಮೂಲದ ಸೋಫಿಯಾ

ಗರ್ಭಿಣಿಯಾಗಿದ್ದಾಗ ಮಹಿಳೆಯರು ಖುಷಿಯ ಜೊತೆಗೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ. ಅದರಲ್ಲೂ ಬೇರೆ ದೇಶದಲ್ಲಿ ವಾಸವಾಗಿದ್ದರೆ, ಅಲ್ಲಿನ ಸಂಸ್ಕೃತಿ, ಪದ್ಧತಿಗಳಿಂದಾಗಿ ವಿಚಿತ್ರ ಅನುಭವಗಳೂ ಆಗಬಹುದು. ಸದ್ಯ ಭಾರತದಲ್ಲಿ ವಾಸವಿರುವ ರಷ್ಯಾ ಮೂಲದ ಸೋಫಿಯಾ ಎಂಬ ಯುವತಿ, ತಮಗೆ ಗರ್ಭಾವಸ್ಥೆಯಲ್ಲಿ ಎದುರಾದ ಅನುಭವಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್ ಸಖತ್ ವೈರಲ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
4 ಮುಖ್ಯ ವಿಷಯ
Image Credit : sofia_desilife Instagram

4 ಮುಖ್ಯ ವಿಷಯ

'ನನ್ನ ಮೊದಲ ಗರ್ಭಾವಸ್ಥೆ ಭಾರತದಲ್ಲಿರುವುದು ನನ್ನ ಅದೃಷ್ಟ. ಯಾಕಂದ್ರೆ, ಹೋಲಿಕೆ ಮಾಡಲು ನನಗೆ ಬೇರೆ ಅನುಭವಗಳಿಲ್ಲ. ಹಾಗಾಗಿ, ಬೇರೆ ದೇಶದಲ್ಲಿದ್ರೆ ಹೇಗಿರುತ್ತಿತ್ತೋ ಅಂತ ನಾನು ಯೋಚಿಸಲ್ಲ' ಎಂದು ಸೋಫಿಯಾ ಬರೆದುಕೊಂಡಿದ್ದಾರೆ. ಇದರ ಜೊತೆಗೆ, ಕಳೆದ ಕೆಲವು ತಿಂಗಳುಗಳಲ್ಲಿ ತಮಗೆ ವಿಚಿತ್ರ ಎನಿಸಿದ ಮತ್ತು ಕಿರಿಕಿರಿ ಉಂಟುಮಾಡಿದ 4 ಮುಖ್ಯ ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ.

Related Articles

Related image1
ಗರ್ಭಿಣಿ ಕಾಫಿ ಕುಡಿದ್ರೆ ಮಗು ಕಪ್ಪಾಗತ್ತಾ, ಕೇಸರಿ ತಿಂದರೆ ಬಿಳಿಯಾಗತ್ತಾ? ಪ್ರಸೂತಿ ತಜ್ಞೆ ಉತ್ತರ ಇಲ್ಲಿದೆ
Related image2
"ನಾನು ಗರ್ಭಿಣಿ" ಎಂದಿದ್ದೇ ತಪ್ಪಾಯ್ತಾ? ಮ್ಯಾನೇಜರ್‌ಗೆ ವಿಷಯ ತಿಳಿಸಿದ 3 ಗಂಟೆಯಲ್ಲೇ ಮಹಿಳೆ ಕೆಲಸದಿಂದ ವಜಾ!
37
1.ಕೇವಲ ವಿಶ್ರಾಂತಿ
Image Credit : sofia_desilife Instagram

1.ಕೇವಲ ವಿಶ್ರಾಂತಿ

ಭಾರತದಲ್ಲಿ ಗರ್ಭಿಣಿಯರು ಸಂಪೂರ್ಣವಾಗಿ ರೆಸ್ಟ್ ಮಾಡಬೇಕು, ಯಾವುದೇ ವ್ಯಾಯಾಮ ಮಾಡಬಾರದು ಅನ್ನೋದು ಸಾಮಾನ್ಯ ನಂಬಿಕೆ. ಆದರೆ, ಗರ್ಭಾವಸ್ಥೆಯನ್ನು ಒಂದು ಕಾಯಿಲೆಯಾಗಿ ನೋಡಲು ನನಗೆ ಇಷ್ಟವಿಲ್ಲ. ಯೋಗ, ವಾಕಿಂಗ್‌ನಂತಹ ಚಟುವಟಿಕೆಗಳು ನನಗೆ ಸಹಾಯ ಮಾಡುತ್ತಿವೆ ಅಂತ ಸೋಫಿಯಾ ಹೇಳುತ್ತಾರೆ.

47
2. ಹೊಟ್ಟೆ ಮುಚ್ಚಿಕೊಳ್ಳುವ ವಿಚಾರ
Image Credit : sofia_desilife Instagram

2. ಹೊಟ್ಟೆ ಮುಚ್ಚಿಕೊಳ್ಳುವ ವಿಚಾರ

ಗರ್ಭಿಣಿಯಾಗಿದ್ದಾಗ ಹಾಕುವ ಬಟ್ಟೆ ಬಗ್ಗೆನೂ ಜನ ಪ್ರಶ್ನೆ ಮಾಡ್ತಾರೆ. ಹೊಟ್ಟೆ ಕಾಣುವ ಹಾಗೆ ಕ್ರಾಪ್ ಟಾಪ್ ಹಾಕಿದಾಗ, 'ಯಾಕೆ ಹೀಗೆಲ್ಲಾ ಬಟ್ಟೆ ಹಾಕ್ತೀಯಾ?' ಅಂತ ಜನ ಕೇಳ್ತಾರಂತೆ. 'ಆದರೆ ನನ್ನ ದೇಹದಲ್ಲಿ ಆಗ್ತಿರೋ ಬದಲಾವಣೆಗಳನ್ನು ಮುಚ್ಚಿಡಲು ನನಗೆ ಇಷ್ಟವಿಲ್ಲ. ಈ ಸಮಯದಲ್ಲಿ ನನಗೆ ಇಷ್ಟವಾದ ಬಟ್ಟೆ ಹಾಕಿ ಖುಷಿಯಾಗಿರಲು ಬಯಸುತ್ತೇನೆ' ಎನ್ನುವುದು ಸೋಫಿಯಾ ಮಾತು.

57
3. ಭಾಷೆಯ ಸಮಸ್ಯೆ
Image Credit : sofia_desilife Instagram

3. ಭಾಷೆಯ ಸಮಸ್ಯೆ

ಇಲ್ಲಿನ ಭಾಷೆ ಗೊತ್ತಿಲ್ಲದೇ ಇರುವುದು ದೊಡ್ಡ ಸವಾಲಾಗಿದೆ. ಮೆಡಿಕಲ್ ರಿಪೋರ್ಟ್‌ಗಳನ್ನು ಓದಿ ಅರ್ಥಮಾಡಿಕೊಳ್ಳುವುದು, ವೈದ್ಯರ ಬಳಿ ಅನುಮಾನಗಳನ್ನು ಕೇಳುವುದು ತುಂಬಾ ಕಷ್ಟ. ರಿಪೋರ್ಟ್‌ಗಳನ್ನು ಮತ್ತೆ ಮತ್ತೆ ಓದುವುದು ಮಾನಸಿಕವಾಗಿ ಕುಗ್ಗಿಸುತ್ತದೆ ಅಂತಾನೂ ಅವರು ಹೇಳಿದ್ದಾರೆ.

67
4. ಭಾರತದ ಹವಾಮಾನ
Image Credit : sofia_desilife Instagram

4. ಭಾರತದ ಹವಾಮಾನ

ಭಾರತದ ಬಿಸಿಲು ಮತ್ತು ತೇವಾಂಶ ತುಂಬಿದ ವಾತಾವರಣ ಗರ್ಭಾವಸ್ಥೆಯಲ್ಲಿ ಇನ್ನಷ್ಟು ಕಷ್ಟ ಕೊಡುತ್ತಿದೆಯಂತೆ. 'ಬೆಳಗ್ಗಿನ ತಿಂಡಿ ಮಾಡುವಷ್ಟರಲ್ಲೇ ಪೂರ್ತಿ ಬೆವತು ಹೋಗ್ತೀನಿ. ದಿನಕ್ಕೆ ಹಲವು ಬಾರಿ ಸ್ನಾನ ಮಾಡಬೇಕಾಗುತ್ತೆ' ಅಂತ ಅವರು ವಿವರಿಸಿದ್ದಾರೆ.

77
ವಿಶ್ರಾಂತಿಗೆ ಸಲಹೆ
Image Credit : sofia_desilife Instagram

ವಿಶ್ರಾಂತಿಗೆ ಸಲಹೆ

ಈ ಪೋಸ್ಟ್‌ಗೆ ಹಲವರು ಕಾಮೆಂಟ್ ಮಾಡಿದ್ದಾರೆ. 'ಭಾರತದಲ್ಲಿ ಅವಧಿಪೂರ್ವ ಜನನಗಳು ಹೆಚ್ಚಾಗಿರುವುದರಿಂದಲೇ ವಿಶ್ರಾಂತಿಗೆ ಸಲಹೆ ನೀಡುತ್ತಾರೆ' ಎಂದು ಒಬ್ಬರು ಹೇಳಿದ್ದಾರೆ. ಇನ್ನು ಕೆಲವರು, 'ಜನರು ಒಳ್ಳೆಯ ಉದ್ದೇಶದಿಂದಲೇ ಗರ್ಭಿಣಿಯರಿಗೆ ಇಂತಹ ಸಲಹೆಗಳನ್ನು ನೀಡುತ್ತಾರೆ' ಎಂದು ಬರೆದಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಗರ್ಭಧಾರಣೆ
ಗರ್ಭಿಣಿ ಮಹಿಳೆ
ವೈರಲ್ ಸುದ್ದಿ
ವೈರಲ್ ವಿಡಿಯೋ
ಇನ್‌ಸ್ಟಾಗ್ರಾಂ

Latest Videos
Recommended Stories
Recommended image1
Kolhapuri Jewellery: ನಿಮ್ಮ ಲುಕ್ ಬದಲಿಸುವ ಕೊಲ್ಲಾಪುರಿ ಟಾಪ್ಸ್‌ನ 5 ಡಿಸೈನ್‌ಗಳು ಇಲ್ಲಿವೆ!
Recommended image2
ಬಾಳೆಹಣ್ಣು ಬೇಗ ಕೊಳೆಯಬಾರದೆಂದರೆ ಈ ಟಿಶ್ಯೂ ಪೇಪರ್ ಟ್ರಿಕ್ ಬಳಸಿ
Recommended image3
Gold Earrings: 2 ಗ್ರಾಂ ಚಿನ್ನ ಸಾಕು, ಅಂದದ ಕಿವಿಯೋಲೆ ರೆಡಿ! ಇಲ್ಲಿವೆ ಟ್ರೆಂಡಿಂಗ್ ಡಿಸೈನ್‌ಗಳು
Related Stories
Recommended image1
ಗರ್ಭಿಣಿ ಕಾಫಿ ಕುಡಿದ್ರೆ ಮಗು ಕಪ್ಪಾಗತ್ತಾ, ಕೇಸರಿ ತಿಂದರೆ ಬಿಳಿಯಾಗತ್ತಾ? ಪ್ರಸೂತಿ ತಜ್ಞೆ ಉತ್ತರ ಇಲ್ಲಿದೆ
Recommended image2
"ನಾನು ಗರ್ಭಿಣಿ" ಎಂದಿದ್ದೇ ತಪ್ಪಾಯ್ತಾ? ಮ್ಯಾನೇಜರ್‌ಗೆ ವಿಷಯ ತಿಳಿಸಿದ 3 ಗಂಟೆಯಲ್ಲೇ ಮಹಿಳೆ ಕೆಲಸದಿಂದ ವಜಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved