ವಯಸ್ಸಾದ ನಂತರ ಮತ್ತೆ ರಕ್ತಸ್ರಾವ ಕಾಣಿಸಿಕೊಳ್ಳೋದು ಡೇಂಜರ್; ಇಗ್ನೋರ್ ಮಾಡಲೇಬೇಡಿ!
ಮಹಿಳೆಯರು ಹೆಚ್ಚಾಗಿ ತಮಗೆ ಸಂಬಂಧಿಸಿದ ರೋಗಗಳನ್ನು ಮರೆಮಾಚುತ್ತಾರೆ. ಈ ಸಮಸ್ಯೆಗಳಲ್ಲಿ ಒಂದು ಋತುಬಂಧದ ನಂತರ ರಕ್ತಸ್ರಾವ. ಈ ಸಮಸ್ಯೆ ತುಂಬಾನೆ ಗಂಭೀರವಾಗಿರಬಹುದು ಮತ್ತು ಕ್ಯಾನ್ಸರ್ ಗೆ ಕಾರಣವಾಗಬಹುದು. ಹಾಗಾಗಿ ಇದರ ಬಗ್ಗೆ ತಿಳಿದಿರೋದು ಮುಖ್ಯ.

ಋತುಚಕ್ರ ಮತ್ತು ಋತುಬಂಧದ ಆರಂಭ ಮಹಿಳೆಯರಲ್ಲಿ ಸಾಮಾನ್ಯ ಪ್ರಕ್ರಿಯೆಯಾಗಿದೆ. ಋತುಚಕ್ರವು (periods) ಪ್ರಾರಂಭವಾಗುವ ವಯಸ್ಸು 12, 13, ಅಥವಾ 14 ವರ್ಷಗಳಾಗಿರುವಂತೆ, ಋತುಬಂಧವು 40 ರಿಂದ 45 ಅಥವಾ 50 ವರ್ಷವಾದಾಗ ಆಗುತ್ತೆ. ಈ ವಯಸ್ಸಿನ ನಂತರ, ಮಹಿಳೆಯರಲ್ಲಿ ಸಂತಾನೋತ್ಪತ್ತಿ ಹಾರ್ಮೋನುಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ ಮತ್ತು ಈ ಕಾರಣದಿಂದಾಗಿ, ಋತುಚಕ್ರವು ಕ್ರಮೇಣ ನಿಲ್ಲುತ್ತದೆ, ಆದರೆ ಅನೇಕ ಬಾರಿ ಮಹಿಳೆಯರಲ್ಲಿ ಋತುಸ್ರಾವ ನಿಂತ ನಂತರ ಇದ್ದಕ್ಕಿದ್ದಂತೆ ರಕ್ತಸ್ರಾವ ಪ್ರಾರಂಭವಾಗುತ್ತೆ.
ಋತುಬಂಧದ ನಂತರ,ರಕ್ತಸ್ರಾವ (bleeding) ಆಗೋ ಬಗ್ಗೆ ಮಹಿಳೆಯರು ಹೆಚ್ಚಾಗಿ ಯಾರ ಬಳಿಯೂ ಹೇಳೋದಿಲ್ಲ, ಅದನ್ನು ಮರೆಮಾಡುತ್ತಲೇ ಇರುತ್ತಾರೆ. ಆದಾಗ್ಯೂ, ಈ ಸ್ಥಿತಿಯು ಗಂಭೀರವಾಗಬಹುದು ಮತ್ತು ದೊಡ್ಡ ಅನಾರೋಗ್ಯಕ್ಕೆ ಕಾರಣವಾಗಬಹುದು. ಈ ಸಮಸ್ಯೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡೋದು ತುಂಬಾನೆ ಮುಖ್ಯ. ಅಂತಹ ಪರಿಸ್ಥಿತಿಯಲ್ಲಿ, ಸಮಯಕ್ಕೆ ಸರಿಯಾಗಿ ಗಮನ ಹರಿಸುವುದು ಅವಶ್ಯಕ. ಈ ಬಗ್ಗೆ ತಜ್ಞರು ಏನು ಹೇಳ್ತಾರೆ ತಿಳಿಯಿರಿ.
ಕ್ಯಾನ್ಸರ್ ನ ಲಕ್ಷಣವೇನು?
ಮಹಿಳೆಯರಲ್ಲಿ ಋತುಬಂಧದ ನಂತರ ಮತ್ತೆ ರಕ್ತಸ್ರಾವದ ಸಮಸ್ಯೆಯ ಬಗ್ಗೆ, ಸ್ತ್ರೀರೋಗತಜ್ಞರು ಹೇಳೋವಂತೆ ಋತುಬಂಧದ ನಂತರ ರಕ್ತಸ್ರಾವವಾಗುವ (bleeding after menopause) ಸಮಸ್ಯೆ ಕೆಲವು ಮಹಿಳೆಯರಲ್ಲಿ ಕಂಡು ಬರುತ್ತೆ. ಆದರೆ ಈ ಸಮಸ್ಯೆ ಇದ್ದರೆ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ ಇದು ಗರ್ಭಕಂಠದ ಕ್ಯಾನ್ಸರ್ ನ ಲಕ್ಷಣವಾಗಿರಬಹುದು.
ಗರ್ಭಕಂಠದ ಕ್ಯಾನ್ಸರ್ ಎಂದರೇನು?
ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಕ್ಯಾನ್ಸರ್ ಗಳಲ್ಲಿ ಒಂದಾಗಿದೆ. ಗರ್ಭಕಂಠದ ಕ್ಯಾನ್ಸರ್ನಲ್ಲಿ, ಗರ್ಭಾಶಯದ ಅಡಿಯಲ್ಲಿ ಗರ್ಭಕಂಠದಲ್ಲಿ ಗೆಡ್ಡೆ ಉಂಟಾಗುತ್ತದೆ. ಅದರ ಜೀವಕೋಶಗಳು ಅಸಹಜವಾಗಿ ಬೆಳೆಯಲು ಪ್ರಾರಂಭಿಸುತ್ತವೆ. ಅನೇಕ ಬಾರಿ ಇದು ರೋಗಲಕ್ಷಣಗಳನ್ನು ತೋರಿಸದಿದ್ದರೆ ಅಥವಾ ರೋಗಲಕ್ಷಣಗಳಿಗೆ ಗಮನ ಹರಿಸದಿದ್ದರೆ ಮಾರಣಾಂತಿಕವಾಗುತ್ತದೆ.
ಗರ್ಭಕಂಠದ ಕ್ಯಾನ್ಸರ್ ಚಿಕಿತ್ಸೆ
ಗರ್ಭಕಂಠದ ಕ್ಯಾನ್ಸರ್ ಅನ್ನು ಗುಣಪಡಿಸಬಹುದಾದರೂ, ಅದರ ಬಗ್ಗೆ ಇನ್ನೂ ಅರಿವಿನ ಕೊರತೆಯಿದೆ. ಈ ಕಾರಣಕ್ಕಾಗಿ, ಅನೇಕ ಬಾರಿ ಪರಿಸ್ಥಿತಿ ಗಂಭೀರವಾಗುತ್ತದೆ. ಅಸಹಜ ರಕ್ತಸ್ರಾವ, ಯೀಸ್ಟ್ ಸೋಂಕು, ಯಾವುದೇ ಕಾರಣದಿಂದ ತೂಕ ನಷ್ಟದಂತಹ ಕೆಲವು ರೋಗಲಕ್ಷಣಗಳು ಕಂಡು ಬಂದ್ರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. ಬೆನ್ನಿನ ಕೆಳಭಾಗದಲ್ಲಿ ತೀಕ್ಷ್ಣವಾದ ನೋವು (heavy back pain) ಸಹ ಇರಬಹುದು.
ಇದರಿಂದ ರಕ್ಷಣೆ ಹೇಗೆ?
ಗರ್ಭಕಂಠದ ಕ್ಯಾನ್ಸರ್ (Cervicle cancer) ತಡೆಗಟ್ಟುವಿಕೆ ಎಂದರೆ ಅಸಹಜ ರಕ್ತಸ್ರಾವ ಸಮಸ್ಯೆ ಅಥವಾ ಇತರ ಅಸಾಮಾನ್ಯ ರೋಗಲಕ್ಷಣಗಳು ಇದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮತ್ತು ಪರೀಕ್ಷೆ ಮಾಡಿಸಿಕೊಳ್ಳಿ. ಇದು ಸಾಮಾನ್ಯ ಸೋಂಕಿನಿಂದ ಉಂಟಾಗಿದ್ದರೆ, ಅದನ್ನು ಔಷಧಿಗಳೊಂದಿಗೆ ಚಿಕಿತ್ಸೆ ಮಾಡಬಹುದು. ಇದಲ್ಲದೆ, ರೋಗವನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿದರೆ ಸಾವಿನ ಅಪಾಯವನ್ನು ತಪ್ಪಿಸಬಹುದು.