ಚಳಿಯಿಂದ ಒರಟಾದ ತ್ವಚೆ ಮತ್ತೆ ಸಾಫ್ಟ್ ಆಗಲು ಮ್ಯಾಜಿಕ್ ಫೇಸ್ ಪ್ಯಾಕ್
ಚಳಿಗಾಲದಲ್ಲಿ ಶುಷ್ಕ ತ್ವಚೆಯಿಂದ ತೊಂದರೆಗೀಡಾಗಿದ್ದೀರಾ? ಹಾಗಿದ್ರೆ ನೀವು ಈ ಫೇಸ್ ಪ್ಯಾಕ್ ಟ್ರೈ ಮಾಡಿ ನೋಡಿ. ಇದರಿಂದ ಮುಖವು ಆಳದಿಂದ ರಿಪೇರ್ ಆಗುತ್ತೆ, ಜೊತೆಗೆ ಚಳಿಗಾಲದಲ್ಲಿ ಸಾಫ್ಟ್ ಆದ ತ್ವಚೆ ನಿಮ್ಮದಾಗುತ್ತೆ.

ಚಳಿಗಾಲದಲ್ಲಿ, ನಮ್ಮ ಮುಖವನ್ನು ಶುಷ್ಕತೆಯಿಂದ (dry skin)ರಕ್ಷಿಸಲು ನಾವು ಮಾಯಿಶ್ಚರೈಸರ್ ಬಳಸುತ್ತೇವೆ, ಆದರೂ ನಮ್ಮ ಸ್ಕಿನ್ ಡ್ರೈ ಆಗೋದು ಕಡಿಮೆ ಆಗೋದಿಲ್ಲ. ದಿನಕ್ಕೆ ಹಲವಾರು ಬಾರಿ ಕ್ರೀಮ್ ಹಚ್ಚುವ ಬದಲು, ಚರ್ಮವನ್ನು ಆಳವಾಗಿ ಪೋಷಿಸುವ ಮತ್ತು ಮುಖಕ್ಕೆ ಹೊಳಪನ್ನು ತರುವ ಕೆಲಸ ಮಾಡಿದ್ರೆ ಉತ್ತಮ. ನಮ್ಮ ಚರ್ಮವನ್ನು ಒಣಗದಂತೆ ಉಳಿಸಲು ಏನು ಮಾಡಬಹುದು ನೋಡೋಣ.
ದಿನವಿಡೀ ನಮ್ಮ ಚರ್ಮದ ಆರೈಕೆ ಮಾಡೋದು ತುಂಬಾನೇ ಕಷ್ಟದ ಕೆಲಸ. ಯಾಕಂದ್ರೆ ನಾವು ಮನೆಯಲ್ಲಿ ಮತ್ತು ಹೊರಗೆ ಅನೇಕ ಕೆಲಸಗಳನ್ನು ಮಾಡಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಾವು ಬೆಳಿಗ್ಗೆ ಚರ್ಮದ ಆರೈಕೆಯನ್ನು ಮಾಡಿದರೆ, ಮುಖದ ಆರೈಕೆ ಸುಲಭವಾಗುತ್ತೆ ಮತ್ತು ಚರ್ಮವು ಹೊಳೆಯುತ್ತದೆ. ಇದಕ್ಕಾಗಿ ನೀವು ಕಷ್ಟಪಟ್ಟು ಕೆಲಸ ಮಾಡುವ ಅಥವಾ ದುಬಾರಿ ಉತ್ಪನ್ನಗಳನ್ನು ಖರೀದಿಸುವ ಅಗತ್ಯವಿಲ್ಲ. ಏಕೆಂದರೆ ಇಂದು ನಾವು ಈ ಲೇಖನದಲ್ಲಿ ಮುಖಕ್ಕೆ ಜೇನುತುಪ್ಪವನ್ನು ಹೇಗೆ ಬಳಸುವುದು ಅನ್ನೋದನ್ನು ಹೇಳಲಿದ್ದೇವೆ, ಇದನ್ನು ನೀವು ಬೆಳಗ್ಗೆ ಮಾಡಿದ್ದೇ ಆದ್ರೆ, ನಿಮ್ಮ ಸ್ಕಿನ್ ಸಾಫ್ಟ್ ಆಗೋದು ಖಚಿತಾ.
ಮುಖಕ್ಕೆ ಜೇನುತುಪ್ಪ ಹಚ್ಚೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ?
ಜೇನುತುಪ್ಪವು ಉತ್ಕರ್ಷಣ ನಿರೋಧಕ, ಆಂಟಿ ಏಜಿಂಗ್ (anti aging) ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ, ಇದು ಚರ್ಮವನ್ನು ಸುಧಾರಿಸಲು, ಸತ್ತ ಚರ್ಮವನ್ನು ತೆಗೆದುಹಾಕಲು, ಮುಖದ ಮೇಲಿನ ಸುಕ್ಕುಗಳು-ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡಲು ಮತ್ತು ಕಪ್ಪು ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ. ಅದಕ್ಕಾಗಿ ನೀವು ಜೇನಿನ ಜೊತೆ ಇವುಗಳನ್ನು ಬೆರೆಸಿ ಫೇಸ್ ಪ್ಯಾಕ್ ಮಾಡಬೇಕು.
ಜೇನುತುಪ್ಪದ ಫೇಸ್ ಪ್ಯಾಕ್ ತಯಾರಿಸಲು ಏನು ಬೇಕು ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.
ಅಲೋವೆರಾ ಜೆಲ್ - 2 ಟೀಸ್ಪೂನ್
ಗ್ಲಿಸರಿನ್ - 1 ಟೀ ಚಮಚ
ಜೇನುತುಪ್ಪ - 1 ಟೀ ಚಮಚ
ಸೂಚನೆ- ಬೇಕಾದ್ರೆ ನೀವು ಈ ಪ್ಯಾಕ್ ಗೆ 2-3 ಹನಿ ಆಲಿವ್ ಎಣ್ಣೆಯನ್ನು ಸೇರಿಸಬಹುದು.
ಫೇಸ್ ಪ್ಯಾಕ್ ತಯಾರಿಸುವುದು ಹೇಗೆ?
ಮೊದಲನೆಯದಾಗಿ, ಎರಡು ಟೀಸ್ಪೂನ್ ಅಲೋವೆರಾ ಜೆಲ್, ಒಂದು ಟೀಸ್ಪೂನ್ ಜೇನುತುಪ್ಪ ಮತ್ತು ಒಂದು ಟೀಸ್ಪೂನ್ ಗ್ಲಿಸರಿನ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈಗ ಈ ಪೇಸ್ಟ್ ನ ಪದರವನ್ನು ನಿಮ್ಮ ಮುಖಕ್ಕೆ ಹಚ್ಚಿ ಮತ್ತು 10 ನಿಮಿಷಗಳ ಕಾಲ ಒಣಗಲು ಬಿಡಿ.
ಹತ್ತು ನಿಮಿಷ ಮುಗಿದ ನಂತರ ಮುಖ ತೊಳೆಯಿರಿ.
ಈಗ ಮೊದಲ ಬಳಕೆಯಲ್ಲಿ ನಿಮ್ಮ ಚರ್ಮವು ಎಷ್ಟು ಹೈಡ್ರೇಟ್ ಮತ್ತು ತಾಜಾವಾಗಿ ಕಾಣುತ್ತದೆ ಎಂಬುದನ್ನು ನೋಡಿ.
ಈ ಉಪಾಯದಿಂದ ಮುಖ ತುಂಬಾನೆ ಸಾಫ್ಟ್ ಆಗುತ್ತೆ. ನೀವು ಈ ಫೇಸ್ ಪ್ಯಾಕನ್ನು ಪ್ರತಿದಿನ ಅಥವಾ ವಾರದಲ್ಲಿ ಎರಡು ಮೂರು ಬಾರಿಯೂ ಮಾಡಬಹುದು. ಇದರಿಂದ ಚಳಿಗಾಲದಲ್ಲೂ ಸುಂದರವಾದ ತ್ವಚೆ ನಿಮ್ಮದಾಗುತ್ತದೆ. ಬೇಕಾದಲ್ಲಿ ಮಾಡಿ ನೋಡಿ.