MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Women
  • ಹೆಣ್ಣೆಂದರೆ ಇಲ್ಲಿ ಮಕ್ಕಳು ಹೆರುವ ಯಂತ್ರ, ಮಕ್ಕಳನ್ನೂ ಬಲವಂತವಾಗಿ ಬಸುರು ಮಾಡಲಾಗುತ್ತೆ!

ಹೆಣ್ಣೆಂದರೆ ಇಲ್ಲಿ ಮಕ್ಕಳು ಹೆರುವ ಯಂತ್ರ, ಮಕ್ಕಳನ್ನೂ ಬಲವಂತವಾಗಿ ಬಸುರು ಮಾಡಲಾಗುತ್ತೆ!

ಮಗುವಿಗೆ ಜನ್ಮ ನೀಡುವುದು ಎಷ್ಟು ಗೌರವಾನ್ವಿತವಾದ ಮತ್ತು ಎಲ್ಲರಿಗೂ ಸಂತೋಷ ನೀಡುವಂತಹ ಒಂದು ವಿಷಯ ಅಲ್ವಾ?  ಆದರೆ ಆಫ್ರಿಕಾದ ಒಂದು ಪ್ರದೇಶದಲ್ಲಿ ಮಗುವಿಗೆ ಜನ್ಮ ನೀಡೋದನ್ನೇ ಒಂದು ಕೆಲಸವನ್ನಾಗಿ ಮಾಡುತ್ತಾರೆ. ಆಡುವ ವಯಸ್ಸಿನ ಹುಡುಗಿಯರೂ ಸಹ ತಾಯಿಯಾಗುತ್ತಾರೆ. ಈ ಅಸಹ್ಯಕರ ವ್ಯವಹಾರಕ್ಕೆ ಕಾನೂನು ಸಾತ್ ನೀಡುತ್ತೆ ಅಂದ್ರೆ ಏನು ಹೇಳಬೇಕು ಅಲ್ವಾ?  

2 Min read
Suvarna News
Published : Jan 11 2024, 04:50 PM IST| Updated : Jan 11 2024, 05:08 PM IST
Share this Photo Gallery
  • FB
  • TW
  • Linkdin
  • Whatsapp
17

ಸಾಮಾನ್ಯವಾಗಿ, ಕಾರ್ಖಾನೆ ಹೆಸರನ್ನು ಕೇಳಿದಾಗ, ಏನು ನೆನಪಾಗುತ್ತೆ? ದೊಡ್ಡ ಪ್ರಮಾಣದಲ್ಲಿ ಯಾವುದಾದರೂ ವಸ್ತುಗಳನ್ನು ಉತ್ಪಾದಿಸುವ ಸ್ಥಳವನ್ನು ಕಾರ್ಖಾನೆ ಎನ್ನಲಾಗುತ್ತೆ ಅಲ್ವಾ? ಇದು ಪ್ಲಾಸ್ಟಿಕ್ ವಸ್ತುಗಳು, ಬಟ್ಟೆಗಳು, ಇಟ್ಟಿಗೆ, ಕಬ್ಬಿಣ ಅಥವಾ ಆಟಿಕೆಗಳನ್ನು ತಯಾರಿಸುವ ಕಾರ್ಖಾನೆಯೂ ಆಗಿರಬಹುದು ಅಲ್ವಾ? ಆದರೆ ನೀವು ಮಕ್ಕಳನ್ನು ತಯಾರಿಸೋ (baby making factory) ಕಾರ್ಖಾನೆಯ ಬಗ್ಗೆ ಕೇಳಿದ್ದೀರಾ? ಈ ರೀತಿ ಇರೋದಕ್ಕೆ ಸಾಧ್ಯನೆ ಇಲ್ಲ ಎಂದು ನೀವು ಭಾವಿಸಿದ್ರೆ ಅದು ತಪ್ಪು. ಆಫ್ರಿಕಾದಲ್ಲಿ ಒಂದು ದೇಶವಿದೆ, ಅಲ್ಲಿ ಮಕ್ಕಳನ್ನು ಸರಕುಗಳಂತೆ ಉತ್ಪಾದಿಸಲಾಗುತ್ತದೆ.
 

27

ನಮ್ಮ ದೇಶದಲ್ಲಿ, ಜನ್ಮ ನೀಡುವುದನ್ನು ತುಂಬಾ ಗೌರವಾನ್ವಿತವೆಂದು ಪರಿಗಣಿಸಲಾಗುತ್ತದೆ, ಆದರೂ ಇದು ಆಫ್ರಿಕಾದಲ್ಲಿನ ಕೆಲವು ಕಡೆಗಳಲ್ಲಿ ಅಸಹನೀಯ ಸ್ಥಿತಿ ಅಂದ್ರೆ ನೀವು ನಂಬಲೇ ಬೇಕು. ಆಫ್ರಿಕಾದ ಒಂದು ದೇಶದಲ್ಲಿ, ಹುಡುಗಿಯರನ್ನು ಬಲವಂತವಾಗಿ ಗರ್ಭ ಧರಿಸುವಂತೆ (forced pregnancy) ಮಾಡಲಾಗುತ್ತೆ, ಇನ್ನೂ ಕೆಟ್ಟ ಸ್ಥಿತಿ ಅಂದ್ರೆ  ಆಟವಾಡುವ ವಯಸ್ಸಿನ ಮಕ್ಕಳೂ ಸಹ ತಾಯಿಯಾಗುತ್ತಾರೆ.
 

37

ಹೌದು, ಇದು ನಡೆಯುತ್ತಿರೋದು ನಿಜ, ಆಫ್ರಿಕಾದ ಒಂದು ದೇಶದಲ್ಲಿ ಇಂತಹ ಕೀಳು ಮಟ್ಟದ ಘಟನೆ ನಡೆಯುತ್ತೆ. ಈ ಅಸಹ್ಯಕರ ವ್ಯವಹಾರದಲ್ಲಿ, ಇಲ್ಲಿನ ಕಾನೂನನ್ನು ಸಹ ಬಳಸಿಕೊಳ್ಳಲಾಗುತ್ತದೆ. ನಾವು ಮಾತನಾಡುತ್ತಿರುವ ದೇಶ ನೈಜೀರಿಯಾ (Nigeria), ಅಲ್ಲಿ ಕಾನೂನಿನ ಸೋಗಿನಲ್ಲಿ ಅಪರಾಧಗಳು ನಡೆಯುತ್ತಿವೆ ಮತ್ತು 14-17 ವರ್ಷದ ಹುಡುಗಿಯರನ್ನು ಬಾಡಿಗೆ ತಾಯ್ತನ ವ್ಯವಹಾರಕ್ಕೆ ಕಾನೂನಿನ ಬೆಂಬಲ ಪಡೆಯುವ ಮೂಲಕ ಬಳಕೆ ಮಾಡಲಾಗುತ್ತದೆ. .

47

ಚಿಕ್ಕ ವಯಸ್ಸಿನಲ್ಲಿಯೇ ತಾಯಂದಿರಾಗುವ ಹೆಂಗಳೆಯರು
ಶಿಶು ಸಾಕಣೆಯ ಹೆಸರಿನಲ್ಲಿ ನಡೆಯುತ್ತಿರುವ ಈ ಅಸಹ್ಯಕರ ವ್ಯವಹಾರ ಯಾವುದೇ ಅಡೆತಡೆಯಿಲ್ಲದೇ ಭಾರಿ ಧೈರ್ಯದಿಂದ ನಡೆಯುತ್ತಿದೆ. ಯುವತಿಯರನ್ನು ಅಪಹರಿಸಿ ಈ ವ್ಯವಹಾರಕ್ಕೆ ಕರೆತರಲಾಗುತ್ತದೆ. ಅವರನ್ನು ಗರ್ಭಿಣಿಯಾಗಲು ಮತ್ತು ಮಕ್ಕಳನ್ನು ಹೊಂದಲು ಒತ್ತಾಯಿಸಲಾಗುತ್ತದೆ. 

57

ಮಕ್ಕಳಿಲ್ಲದ ದಂಪತಿಗಳು ಈ ವ್ಯವಹಾರವನ್ನು ಉತ್ತೇಜಿಸುತ್ತಾರೆ. ಹೀಗಿರುವಾಗ ಹುಡುಗಿಯರನ್ನು ಬಲವಂತವಾಗಿ ಬಾಡಿಗೆ ತಾಯಂದಿರನ್ನಾಗಿ ಮಾಡಲಾಗುತ್ತದೆ ಮತ್ತು ಅವರಿಂದ ಜನಿಸಿದ ಮಕ್ಕಳನ್ನು ಹೆಚ್ಚಿನ ಬೆಲೆಗೆ ಮಾರುವ ಮೂಲಕ ಹಣ ಸಂಪಾದನೆ ಮಾಡಲಾಗುತ್ತದೆ.  ಶಿಶು ಸಾಕಣೆಯ ವ್ಯವಹಾರವನ್ನು ರಹಸ್ಯವಾಗಿ ನಡೆಸಲಾಗುತ್ತಿದೆ. ಅನೇಕ ಬಾರಿ, ಬಡತನ ಮತ್ತು ದುಃಖದಿಂದಾಗಿ, ಹುಡುಗಿಯರು ಮತ್ತು ಮಹಿಳೆಯರು ಬಾಡಿಗೆ ತಾಯಂದಿರಾಗಲು ಸಿದ್ಧರಾಗುತ್ತಾರೆ.

67

ವ್ಯವಹಾರವು ಕಾನೂನಿನ ಸೋಗಿನಲ್ಲಿ ನಡೆಯುತ್ತದೆ
ಈ ಅಸಹ್ಯಕರ ವ್ಯವಹಾರದ ಬಗ್ಗೆ ಯಾರಿಗೂ ತಿಳಿದಿಲ್ಲ ಎಂದಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಶಿಶು ಸಾಕಣೆಯ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ ಮತ್ತು ಮಾನವ ಹಕ್ಕುಗಳ ಸಂಸ್ಥೆಗಳು (human rights organisation) ಅದನ್ನು ತೊಡೆದು ಹಾಕಲು ಪ್ರಯತ್ನಿಸುತ್ತಿವೆ, ಆದರೆ ಅದು ಸಂಪೂರ್ಣವಾಗಿ ನಿಷೇಧವಾಗಿಲ್ಲ.

77

2011ರಲ್ಲಿ ಗಾರ್ಡಿಯನ್ ಪತ್ರಿಕೆ ನಡೆಸಿದ ದಾಳಿಯಲ್ಲಿ 32 ಗರ್ಭಿಣಿಯರನ್ನು ಬಿಡುಗಡೆ ಮಾಡಿತ್ತು. ನೈಜೀರಿಯಾದ ಕಾನೂನು ಗರ್ಭಪಾತವನ್ನು ಅನುಮತಿಸುವುದಿಲ್ಲವಾದ್ದರಿಂದ ಈ ಹುಡುಗಿಯರು ಚಿಕ್ಕ ವಯಸ್ಸಿನಲ್ಲಿ ಗರ್ಭಿಣಿಯಾದ ನಂತರವೂ ಗರ್ಭಪಾತ (abortion) ಮಾಡಲು ಸಾಧ್ಯವಿಲ್ಲ. ಇಲ್ಲಿ ಗರ್ಭಪಾತವನ್ನು ಪ್ರಮುಖ ಅಪರಾಧವೆಂದು ಪರಿಗಣಿಸಲಾಗುತ್ತದೆ ಮತ್ತು 3-7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯೂ ಇದೆ. ಹಾಗಾಗಿ ಅಂತಹ ಮಕ್ಕಳನ್ನು ಮಾರಾಟ ಮಾಡಿ ಹಣ ಮಾಡಲಾಗುತ್ತದೆ. 
 

About the Author

SN
Suvarna News
ಗರ್ಭಧಾರಣೆ
ಅಪಹರಣ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved