ಸೂರ್ಯಾಸ್ತದ ಸಮಯದಲ್ಲಿ ಈ ಕೆಲಸ ಮಾಡಿದ್ರೆ ತಾಯಿ ಲಕ್ಷ್ಮಿ ಕೋಪಿಸ್ತಾಳೆ
ಈಗಿನ ಕಾಲದಲ್ಲಿ, ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಸಂತೋಷವಾಗಿರಲು ಇಷ್ಟ ಪಡ್ತಾರೆ, ಜೊತೆಗೆ ಯಾವುದೇ ಕಾರಣಕ್ಕೂ ಹಣದ ಕೊರತೆ ಬರಬಾರದು ಎಂದು ಯೋಚಿಸ್ತಾರೆ. ಆದರೆ ಅನೇಕ ಬಾರಿ ಕಷ್ಟಪಟ್ಟು ಕೆಲಸ ಮಾಡಿದರೂ, ಕೆಲವು ಜನರಿಗೆ ಶುಭ ಫಲ ಸಿಗೋದೇ ಇಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಅನೇಕ ಬಾರಿ ಒಬ್ಬ ವ್ಯಕ್ತಿ ಮಾಡಿದ ಸಣ್ಣ ತಪ್ಪು ಶುಭಫಲ ಸಿಗದೇ ಇರೋದಕ್ಕೆ ಕಾರಣವಾಗ್ತವೆ. ವಾಸ್ತು ಶಾಸ್ತ್ರವು ಅನೇಕ ನಿಯಮಗಳ ಬಗ್ಗೆ ಉಲ್ಲೇಖಿಸಿದೆ, ಇದರಿಂದಾಗಿ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ತಾಯಿ ಲಕ್ಷ್ಮಿಯ ಆಶೀರ್ವಾದ ಯಾವಾಗಲೂ ಕಾಪಾಡಿಕೊಳ್ಳಬಹುದು. ಆದರೆ ಅನೇಕ ಬಾರಿ ವ್ಯಕ್ತಿ ಮಾಡಿದ ಸಣ್ಣ ತಪ್ಪು ದೊಡ್ಡ ರೂಪ ಪಡೆಯುತ್ತವೆ.
ಸೂರ್ಯಾಸ್ತದ ಸಮಯದಲ್ಲಿ, ಕೆಲವು ಕೆಲಸ ಮಾಡೋದನ್ನು ನಿಷೇಧಿಸಲಾಗಿದೆ, ಆದರೂ ಜನರು ಅವುಗಳನ್ನು ಮಾಡುತ್ತಾರೆ. ಈ ಕಾರಣದಿಂದಾಗಿ, ವ್ಯಕ್ತಿಯ ಪ್ರಗತಿಗೆ ಅಡ್ಡಿಯಾಗುತ್ತೆ ಮತ್ತು ಹಣದ ಕೊರತೆ ಸಹ ಎದುರಿಸಬೇಕಾಗುತ್ತೆ. ವಾಸ್ತು ಶಾಸ್ತ್ರವು ಸೂರ್ಯಾಸ್ತದ ಸಮಯದಲ್ಲಿ ಮಾಡಬಾರದ ಅಂತಹ ಕೆಲವು ವಿಷಯಗಳ ಬಗ್ಗೆ ಹೇಳುತ್ತೆ. ಈ ಕೆಲಸಗಳನ್ನು ಮಾಡಿದ್ರೆ ತಾಯಿ ಲಕ್ಷ್ಮಿ(Goddess Lakshmi) ಸಹ ಮನೆಯಿಂದ ಹೊರ ನಡೆಯುತ್ತಾಳೆ ಎಂದು ಹೇಳಲಾಗುತ್ತೆ.
ಸೂರ್ಯಾಸ್ತದ ಸಮಯದಲ್ಲಿ ಇದನ್ನು ಮಾಡಬೇಡಿ.
ಸೂರ್ಯಾಸ್ತದ ಸಮಯದಲ್ಲಿ ತಿನ್ನಬೇಡಿ(Do not eat)
ವಾಸ್ತು ಶಾಸ್ತ್ರದ ಪ್ರಕಾರ, ಸೂರ್ಯಾಸ್ತದ ಸಮಯದಲ್ಲಿ ಯಾರೂ ತಿನ್ನಬಾರದು. ಯಾಕಂದ್ರೆ ಈ ಸಮಯದಲ್ಲಿ ದೇವರನ್ನು ಪೂಜಿಸಲಾಗುತ್ತೆ ಮತ್ತು ದೇವರು ವಿಶ್ರಾಂತ ಸ್ಥಿತಿಯಲ್ಲಿರುತ್ತಾರೆ. ಆಗ , ನೀವು ಆಹಾರ ತಿನ್ನಲು ಕುಳಿತರೆ, ತಾಯಿ ಲಕ್ಷ್ಮಿಯೊಂದಿಗೆ ಇತರ ದೇವರು ಮತ್ತು ದೇವತೆಗಳು ಕೋಪಗೊಳ್ಳುತ್ತಾರೆ. ಮತ್ತು ಮನೆಯಿಂದ ಹೊರ ನಡೆಯುತ್ತಾರೆ ಎನ್ನಲಾಗುತ್ತೆ.
ಸೂರ್ಯಾಸ್ತದ ಸಮಯದಲ್ಲಿ ಮೊಸರು(Curd) ದಾನ ಮಾಡಬೇಡಿ
ವಾಸ್ತು ಶಾಸ್ತ್ರದ ಪ್ರಕಾರ, ಸೂರ್ಯಾಸ್ತದ ಸಮಯದಲ್ಲಿ ಅಥವಾ ನಂತರ ಮೊಸರನ್ನು ದಾನ ಮಾಡಬಾರದು. ಏಕೆಂದರೆ ಇದು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಈ ಗ್ರಹ ಸಂಪತ್ತು ಮತ್ತು ವೈಭವದ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಸಂಜೆ ಅದನ್ನು ದಾನ ಮಾಡೋದನ್ನು ತಪ್ಪಿಸಬೇಕು.
ಸೂರ್ಯಾಸ್ತದ ಸಮಯದಲ್ಲಿ ಮಲಗೋದು(Sleep)
ಆ ಸಮಯದಲ್ಲಿ ಒಬ್ಬ ವ್ಯಕ್ತಿ ನಿದ್ರೆ ಮಾಡಬಾರದು ಎಂದು ಹೆಚ್ಚಿನ ಜನರು ತಮ್ಮ ಹಿರಿಯರು ಹೇಳಿರೋದನ್ನು ಕೇಳಿರಬಹುದು. ಸೂರ್ಯಾಸ್ತದ ಸಮಯದಲ್ಲಿ ಮಲಗೋದು, ಆರೋಗ್ಯ ಮತ್ತು ಸಂಪತ್ತಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ.
ಸೂರ್ಯಾಸ್ತದ ಸಮಯದಲ್ಲಿ ಗುಡಿಸೋದು
ವಾಸ್ತು ಶಾಸ್ತ್ರದ ಪ್ರಕಾರ, ಸೂರ್ಯಾಸ್ತದ ಸಮಯದಲ್ಲಿ ಅಥವಾ ಸೂರ್ಯಾಸ್ತದ ನಂತರ, ಪೊರಕೆಯನ್ನು(Broom) ಮನೆಯಲ್ಲಿ ಉಪಯೋಗಿಸಬಾರದು. ಯಾಕಂದ್ರೆ ಈ ಸಮಯದಲ್ಲಿ ಇದನ್ನು ಮಾಡೋದ್ರಿಂದ, ತಾಯಿ ಲಕ್ಷ್ಮಿ ಮನೆಯನ್ನು ತೊರೆಯುತ್ತಾಳೆ ಎಂದು ನಂಬಲಾಗಿದೆ.