ಬುಧ ಗೋಚಾರ 2022: ಈ ನಾಲ್ಕು ರಾಶಿಗಳಿಗೆ 15 ದಿನ ಲಕ್ಷ್ಮೀ ಕಟಾಕ್ಷ

ಬುಧ ಗ್ರಹವು ಇನ್ನು 15 ದಿನಗಳ ಕಾಲ ಕರ್ಕಾಟಕ ರಾಶಿಯಲ್ಲಿರಲಿದ್ದಾನೆ. ಇದರಿಂದ ಐದು ರಾಶಿಗಳಿಗೆ ತಾಯಿ ಲಕ್ಷ್ಮಿಯ ಸಂಪೂರ್ಣ ಕೃಪಾಕಟಾಕ್ಷ ಸಿಗಲಿದೆ..

Mercury transit in Cancer Mother Lakshmi will have special blessings on 4 zodiac signs skr

ವೇಗವಾಗಿ ಚಲನೆ ಮಾಡುವ ಬುಧನು ಈ ತಿಂಗಳು ಮೂರು ಬಾರಿ ರಾಶಿ ಪರಿವರ್ತನೆ ಮಾಡುತ್ತಿದ್ದಾನೆ. ಅಂತೆಯೇ ಜುಲೈ 17ರಂದು ಬುಧನು ಎರಡನೇ ಬಾರಿಗೆ ರಾಶಿ ಪರಿವರ್ತನೆ ಮಾಡಲಿದ್ದಾನೆ. ಬುಧನು ಇಂದು ಕರ್ಕಾಟಕ ರಾಶಿಗೆ ಪ್ರವೇಶಿಸಿದ್ದು, ಜುಲೈ 31ರವರೆಗೂ ಇಲ್ಲಿಯೇ ಇರಲಿದ್ದಾನೆ. ವಿಶೇಷವೆಂದರೆ ಈ ರಾಶಿಯಲ್ಲಿ ಸೂರ್ಯದೇವನೂ ಕುಳಿತಿದ್ದಾನೆ. ಈ ಎರಡು ಗ್ರಹಗಳು ಯಾವುದೇ ರಾಶಿಚಕ್ರದಲ್ಲಿ ಒಟ್ಟಿಗೆ ಇದ್ದಾಗ, ಶುಭ ಬುಧಾದಿತ್ಯ ಯೋಗವು ರೂಪುಗೊಳ್ಳುತ್ತದೆ. ಜ್ಯೋತಿಷ್ಯದ ಪ್ರಕಾರ, ಬುಧ ಗ್ರಹವನ್ನು ಸಂವಹನ, ಅಭಿವ್ಯಕ್ತಿಗೆ ಕಾರಣವಾಗುವ ಗ್ರಹವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಮಾ ಲಕ್ಷ್ಮಿಯಿಂದ ಯಾವ ರಾಶಿಯವರಿಗೆ ಆಶೀರ್ವಾದವಿದೆ ಎಂದು ತಿಳಿಯಿರಿ.

ಮೇಷ ರಾಶಿ(Aries): ಈ ರಾಶಿಯ ಉದ್ಯೋಗಿಗಳಿಗೆ ಸಮಯವು ಅನುಕೂಲಕರವಾಗಿದೆ. ನಿಮ್ಮ ಮನ್ನಣೆ, ಗೌರವ ಹೆಚ್ಚಿಸುವ ಅವಕಾಶಗಳು ಸೃಷ್ಟಿಯಾಗುತ್ತವೆ. ಹೊಸ ಉದ್ಯೋಗ ಅರಸುವವರು ಈ ಸಂದರ್ಭದಲ್ಲಿ ಹೆಚ್ಚು ಪ್ರಯತ್ನ ಹಾಕಿ. ಉದ್ಯೋಗಗಳನ್ನು ಬದಲಾಯಿಸುವಾಗ ಆದಾಯದಲ್ಲಿ ಗಮನಾರ್ಹ ಹೆಚ್ಚಳವಾಗಬಹುದು. ಸ್ವಂತ ಕೆಲಸ ಮಾಡುತ್ತಿರುವವರಿಗೆ ಸಮಯವು ಶುಭಕರವಾಗಿರುತ್ತದೆ. ಮಕ್ಕಳು ಸಹ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಸ್ಪರ್ಧೆಗಳು ಮತ್ತು ಪರೀಕ್ಷೆಗಳಲ್ಲಿ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಈ ಸಮಯ ವ್ಯರ್ಥ ಮಾಡಬೇಡಿ.

Palmistry: ಅಂಗೈಯ ಶನಿ ಪರ್ವತದಲ್ಲಿ ಈ ರೀತಿ ಮಾರ್ಕ್ ಇದ್ರೆ ಸಮಸ್ಯೆ ತಪ್ಪಿದ್ದಲ್ಲ!

ವೃಷಭ ರಾಶಿ(Taurus): ಈ ರಾಶಿಯವರಿಗೆ ಬುಧ ಸಂಕ್ರಮಣವು ಉತ್ತಮವಾಗಿರುತ್ತದೆ. ನೀವು ವೃತ್ತಿಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಸ್ವಂತ ಗುರುತನ್ನು ಮೂಡಿಸಲು ನಿಮಗೆ ಸಾಧ್ಯವಾಗುತ್ತದೆ. ಪ್ರಯಾಣದಿಂದ ಹಣ ಗಳಿಸುವ ಬಲವಾದ ಅವಕಾಶಗಳಿವೆ. ಹೀಗಾಗಿ, ಉದ್ಯೋಗ, ಉದ್ಯಮ ಸಂಬಂಧಿ ಪ್ರಯಾಣ ನಿಲ್ಲಿಸದಿರಿ. ಪ್ರಯತ್ನ ಮಾಡಿದರೆ ಯಾವುದೇ ಆಸೆಯನ್ನು ಪೂರೈಸಿಕೊಳ್ಳಬಹುದು.

ಮಿಥುನ ರಾಶಿ(Gemini): ಬುಧನ ಈ ಸಂಚಾರವು ಮಿಥುನ ರಾಶಿಯ ಉದ್ಯಮಿಗಳಿಗೆ ಉತ್ತಮವಾಗಿದೆ ಎಂದು ಸಾಬೀತು ಪಡಿಸುತ್ತದೆ. ನೀವು ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಉದ್ಯೋಗಸ್ಥರು ಈ ಅವಧಿಯಲ್ಲಿ ಪ್ರೋತ್ಸಾಹವನ್ನು ಪಡೆಯಬಹುದು. ಹಣ ಗಳಿಸಲು ಹಲವು ಅವಕಾಶಗಳು ದೊರೆಯಲಿವೆ. ಒಟ್ಟಾರೆಯಾಗಿ, ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ಆಸ್ತಿ ವ್ಯವಹಾರದಲ್ಲಿ ಉತ್ತಮ ಲಾಭ ಫಲ ದೊರಕಲಿದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆತು ಮನೆಯಲ್ಲಿನ ಸಮಸ್ಯೆಗಳು ಕಡಿಮೆಯಾಗಬಹುದು.

ಕನ್ಯಾ ರಾಶಿ(Virgo): ವೃತ್ತಿಪರವಾಗಿ ನೋಡುವುದಾದರೆ, ಈ ಸಮಯವು ಉದ್ಯಮಿಗಳಿಗೆ ತುಂಬಾ ಒಳ್ಳೆಯದು. ಮಾರುಕಟ್ಟೆಯಲ್ಲಿ ನಿಮ್ಮ ಛಾಪು ಮೂಡಿಸಲು ಸಾಧ್ಯವಾಗುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಂಪೂರ್ಣ ಸಹಕಾರವಿರುತ್ತದೆ. ನಿಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಈ ಸಮಯದಲ್ಲಿ ನೀವು ಉತ್ತಮ ಹಣವನ್ನು ಗಳಿಸುವ ಜೊತೆಗೆ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚಳವಾಗುತ್ತದೆ. 

ಭಾರತದಲ್ಲಿ ಗೋಚರವಾಗಲಿರುವ ವರ್ಷದ ಮೂರನೇ ಗ್ರಹಣ, ಯಾವಾಗ ಗೊತ್ತಾ?

ವೃಶ್ಚಿಕ ರಾಶಿ(Scorpio): ವೃಶ್ಚಿಕ ರಾಶಿಯವರಿಗೆ ಬುಧನು ಸಂಪತ್ತನ್ನು ತರುತ್ತಾನೆ, ಇದು ವ್ಯವಹಾರದಲ್ಲಿ ತೊಡಗಿರುವ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ವೃತ್ತಿಯಲ್ಲಿ ಪ್ರಗತಿ ಕಾಣಲಿದೆ. ತಡೆಹಿಡಿಯಲಾದ ಹಣವನ್ನು ಮರುಪಾವತಿಸಲಾಗುತ್ತದೆ, ಆದರೂ ಅನಗತ್ಯ ವೆಚ್ಚಗಳನ್ನು ತಪ್ಪಿಸಲು ಇದು ಯೋಗ್ಯವಾಗಿರುತ್ತದೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಕುಟುಂಬದಲ್ಲಿ ಯಾವುದೋ ಒತ್ತಡ ಇರಬಹುದು.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios