Vastu Tips : ಈ ದಿಕ್ಕಿನಲ್ಲಿ ಶಿವನ ಫೋಟೋ ಇಟ್ರೆ ಸಂತೋಷಕ್ಕಿಲ್ಲ ಕೊರತೆ
ವಾಸ್ತು ಶಾಸ್ತ್ರದಲ್ಲಿ, ಜ್ಯೋತಿಷ್ಯದಲ್ಲಿ ಶಿವನ ಆರಾಧನೆ ಬಗ್ಗೆ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಹಾಗೆಯೇ ಶಿವನ ಮೂರ್ತಿ ಅಥವಾ ಫೋಟೋ ಎಲ್ಲಿ ಸ್ಥಾಪನೆ ಮಾಡ್ಬೇಕು ಎನ್ನುವ ಬಗ್ಗೆಯೂ ಹೇಳಲಾಗಿದೆ. ಶಿವನ ಫೋಟೋವನ್ನು ಮನೆಯ ಕಂಡ ಕಂಡಲ್ಲಿ ಹಾಕಿದ್ರೆ ಶುಭವಲ್ಲ.
ಶ್ರಾವಣ ಮಾಸ ಇನ್ನೇನು ಶುರುವಾಗ್ತಿದೆ. ಇದೇ ಜುಲೈ 29ರಿಂದ ಶ್ರಾವಣ ಮಾಸ ಆರಂಭವಾಗ್ತಿದೆ. ಇದು ಶಿವನಿಗೆ ಅರ್ಪಿತವಾದ ತಿಂಗಳು. ಶ್ರಾವಣ ಮಾಸದಲ್ಲಿ ಭಕ್ತರು ಎಲ್ಲ ಭಗವಂತ ಶಿವನ ಆರಾಧನೆ ಮಾಡ್ತಾರೆ. ಈಶ್ವರನಿಗೆ ಪೂಜೆ, ಅಭಿಷೇಕ ಸೇರಿದಂತೆ ಅವನ ಆರಾಧನೆಯಲ್ಲಿ ಭಕ್ತರು ನಿರತರಾಗಿರ್ತಾರೆ. ಈ ತಿಂಗಳಿನಲ್ಲಿ ಶಿವನ ಕೃಪೆ ಪ್ರಾಪ್ತಿಯಾದ್ರೆ ಎಲ್ಲ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಶ್ರಾವಣ ಮಾಸದಲ್ಲಿ ಕೆಲವೊಂದು ವಸ್ತುಗಳನ್ನು ಮನೆಗೆ ತರಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಅದ್ರಲ್ಲಿ ಈಶ್ವರನ ಫೋಟೋ, ಮೂರ್ತಿ ಹಾಗೂ ಶಿವಲಿಂಗ ಕೂಡ ಸೇರಿದೆ. ಹಾಗೆಯೇ ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಶಿವನ ಚಿತ್ರ ಅಥವಾ ವಿಗ್ರಹವನ್ನು ಹೊಂದುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಮೂರ್ತಿ ಪ್ರತಿಷ್ಠಾಪನೆಗೆ ಕೆಲವು ನಿಯಮಗಳನ್ನು ನೀಡಲಾಗಿದೆ. ಮನೆಯಲ್ಲಿ ಶಿವನ ಮೂರ್ತಿ ಅಥವಾ ಫೋಟೋ ಇದ್ದರೆ ಹೆಚ್ಚು ಜಾಗೃತಿ ವಹಿಸಬೇಕು. ನಿಯಮದಂತೆ ದೇವರ ಫೋಟೋ ಇಡಬೇಕು. ಮಾಡ್ಬೇಕು. ಇಂದು ನಾವು ಶಿವನ ಮೂರ್ತಿ ಅಥವಾ ಫೋಟೋಗಳನ್ನು ಮನೆಯಲ್ಲಿ ಎಲ್ಲಿ ಇಡಬೇಕು ಎನ್ನುವ ಬಗ್ಗೆ ಮಾಹಿತಿ ನೀಡ್ತೇವೆ.
ಈ ದಿಕ್ಕಿ (Direction) ನಲ್ಲಿ ಶಿವ (Shiva) ನ ಚಿತ್ರವನ್ನು ಹಾಕಿ : ನಂಬಿಕೆಗಳ ಪ್ರಕಾರ, ಶಿವನ ವಾಸಸ್ಥಾನವು ಕೈಲಾಸ ಪರ್ವತದ ಈಶಾನ್ಯ ದಿಕ್ಕಿನಲ್ಲಿದೆ. ಆದ್ದರಿಂದ ನೀವು ಮನೆಯಲ್ಲಿ ಶಿವನ ಫೋಟೋ (Photo) ವನ್ನು ಅಥವಾ ಮೂರ್ತಿಯನ್ನು ಹಾಕಲು ಬಯಸಿದರೆ ಅದನ್ನು ಉತ್ತರ ದಿಕ್ಕಿನಲ್ಲಿ ಸ್ಥಾಪಿಸಬಕು.
ಶಿವನ ಈ ಫೋಟೋ ಮನೆಯಲ್ಲಿ ಇಡಬೇಡಿ : ವಾಸ್ತು ಶಾಸ್ತ್ರದ (Vastu Shastra ) ಪ್ರಕಾರ, ಶಿವನ ಕೋಪಗೊಂಡ ಭಂಗಿಯಲ್ಲಿರುವ ಫೋಟೋ ಅಥವಾ ಮೂರ್ತಿಯನ್ನು ಮನೆಗೆ ತರಬೇಡಿ. ಕೋಪಗೊಂಡ ಶಿವನ ಭಂಗಿ ವಿನಾಶದ ಸಂಕೇತವಾಗಿದೆ. ಇದ್ರಿಂದ ಮನೆ ಶಾಂತಿ ಕದಡುವ ಸಾಧ್ಯತೆಯಿದೆ.
ಇಂಥ ಫೋಟೋವನ್ನು ಮನೆಗೆ ತನ್ನಿ : ಮನೆಯಲ್ಲಿ ಶಿವನ ಕುಟುಂಬದ (Family) ಚಿತ್ರ ಹಾಕುವುದು ಶುಭಕರವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಮನೆಯಲ್ಲಿ ಶಿವನ ಪರಿವಾರದ ಫೋಟೋ ಇದ್ರೆ ಇದರಿಂದ ನಿಮ್ಮ ಮನೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಬರುವುದಿಲ್ಲ. ಈ ಚಿತ್ರವು ನಿಮ್ಮ ಮನೆಯಲ್ಲಿ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಮತ್ತು ಮಕ್ಕಳು ಸಹ ವಿಧೇಯರಾಗುತ್ತಾರೆ.
ಕೆಲಸದಲ್ಲಿ ಯಶಸ್ಸು ಬೇಕಂದ್ರೆ ಗುರುವಾರ ಈ ಕೆಲಸ ಮಾಡಿ ನೋಡಿ..
ಎಲ್ಲರ ಕಣ್ಣಿಗೆ ಬೀಳುವಂತಿರಲಿ ಫೋಟೋ : ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಎಲ್ಲ ಸದಸ್ಯರ ಕಣ್ಣಿಗೆ ಬೀಳುವಂತಹ ಜಾಗದಲ್ಲಿ ಶಿವನ ಫೋಟೋವನ್ನು ಇಡಬೇಕು. ಎಲ್ಲರೂ ಓಡಾಡುವ ಸ್ಥಳದಲ್ಲಿ ಶಿವನ ಮೂರ್ತಿಯಿದ್ರೆ ಅದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಸಂತೋಷಕ್ಕಾಗಿ ಇರಲಿ ಈ ಫೋಟೋ : ಶ್ರಾವಣ ಮಾಸದಲ್ಲಿ ಶಿವನ ಮೂರ್ತಿ ಅಥವಾ ಫೋಟೋವನ್ನು ಮನೆಗೆ ತರಲು ಬಯಸಿದ್ದರೆ ನೀವು ಶಿವನ ಮುಖವನ್ನು ಗಮನಿಸಿದ. ಫೋಟೋ ಅಥವಾ ಮೂರ್ತಿಯಲ್ಲಿ ಶಿವ ನಗ್ತಿದ್ದರೆ, ಸಂತೋಷವಾಗಿದ್ದರೆ ಅಂಥ ಮೂರ್ತಿಯನ್ನು ಮನೆಗೆ ತೆಗೆದುಕೊಂಡು ಬನ್ನಿ. ಇದ್ರಿಂದ ಮನೆಯಲ್ಲಿ,ಜೀವನದಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಅರ್ಪಿಸುವಾಗ ಈ ತಪ್ಪು ಮಾಡ್ಬೇಡಿ
ಸ್ವಚ್ಛತೆಯ ಬಗ್ಗೆಯೂ ವಿಶೇಷ ಕಾಳಜಿ ವಹಿಸಿ : ಮನೆಯ ಯಾವ ಜಾಗದಲ್ಲಿ ಶಿವನ ವಿಗ್ರಹ ಪ್ರತಿಷ್ಠಾಪನೆ ಮಾಡ್ತಿರೋ ಆ ಜಾಗದಲ್ಲಿ ಸ್ವಚ್ಛತೆ ಬಹಳ ಮುಖ್ಯ. ಆ ಸ್ಥಳವನ್ನು ಯಾವಾಗಲೂ ಸ್ವಚ್ಛವಾಗಿಡಿ. ಚಿತ್ರ ಅಥವಾ ಫೋಟೋ ಸುತ್ತ ಹೆಚ್ಚು ಕೊಳಕು ಇರದಂತೆ ನೋಡಿಕೊಳ್ಳಿ. ಕೊಳಕಿರುವ ಜಾಗದಲ್ಲಿ ಫೋಟೋ ಇದ್ದರೆ ಮನೆಯಲ್ಲಿ ವಾಸ್ತು ದೋಷವಾಗುತ್ತದೆ. ಮನೆಯಲ್ಲಿ ಹಣದ ಕೊರತೆಯೂ (Scarcity of Money) ಉಂಟಾಗಬಹುದು. ಹಾಗಾಗಿ ಶಿವನ ಫೋಟೋ ಅಥವಾ ಮೂರ್ತಿ ಇಡುವ ಜಾಗ ಸದಾ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.