Vastu Tips: ಪೊರಕೆ ಹೀಗಿಟ್ರೆ ದಾರಿದ್ರ್ಯ ಒಕ್ಕರಿಸುತ್ತೆ, ಎಚ್ಚರ!

ಮನೆಯನ್ನು ಗುಡಿಸಲು ಬಳಸೋ ಪೊರಕೆ ವಿಷಯದಲ್ಲಿ ನೀವು ತೋರುವ ಕಡೆಗಣನೆಯು ವಾಸ್ತು ದೋಷಕ್ಕೆ ಕಾರಣವಾಗಿ ಮನೆಯ ಬಡತನಕ್ಕೆ ಕಾರಣವಾಗುತ್ತದೆ. ನೀವು ಪೊರಕೆ ವಿಷಯದಲ್ಲಿ ಈ ತಪ್ಪು ಮಾಡುತ್ತಿದ್ದೀರಾ ನೋಡಿಕೊಳ್ಳಿ. 

Mistakes to avoid while using broom skr

ಪೊರಕೆ(broom) ಪ್ರತಿಯೊಬ್ಬರ ಮನೆಯ ಅತ್ಯಗತ್ಯ ವಸ್ತು. ಹಾಗಿದ್ದೂ, ಅದೆಂದರೆ ಎಲ್ಲರಿಗೂ ಅಸಡ್ಡೆ, ಅಸಹನೆ. ಪೊರಕೆ ಇಲ್ಲದಿದ್ದರೆ ಮನೆಯ ಪರಿಸ್ಥಿತಿ ಹೇಗಿರುತ್ತದೆ ಎಂಬ ಯೋಚನೆಯಿಲ್ಲದೆ ಪೊರಕೆಯನ್ನು ಕಡೆಗಣಿಸುವವರು ಹಲವರು. ಪೊರಕೆಯು ಮನೆಯನ್ನು ಒಪ್ಪ ಓರಣವಾಗಿಸುತ್ತದೆ. ಮನೆಯ ಕಸಗಳನ್ನಷ್ಟೇ ಅಲ್ಲದೆ, ಧೂಳನ್ನೂ ಹೊಡೆದು ಮನೆಯ ಚೆಂದ ಹೆಚ್ಚಿಸುವ ಜೊತೆಗೆ, ಮನೆ ಮಂದಿಯ ಆರೋಗ್ಯ(health) ಕಾಪಾಡುತ್ತಿರುತ್ತದೆ. 

ಸ್ವಚ್ಛವಾದ ಮನೆಯಲ್ಲಿ ಲಕ್ಷ್ಮೀ(Lakshmi) ಸಂತೋಷದಿಂದ ನೆಲೆಸಿರುತ್ತಾಳೆ. ಅಸ್ವಚ್ಛತೆ ಇದ್ದಲ್ಲಿ ಮನುಷ್ಯರಿಗೇ ಇರುವುದು ಕಷ್ಟ. ಇನ್ನು ತಾಯಿ ಲಕ್ಷ್ಮಿಯಾದರೂ ಹೇಗೆ ಇದ್ದಾಳು? ಮನೆ ಶುಚಿತ್ವದಿಂದ ಕೂಡಿದ್ದಾಗ ಅಲ್ಲಿ ಧನಾತ್ಮಕ ಶಕ್ತಿಯ ಸಂವಹನವಿರುತ್ತದೆ ಮತ್ತು ಲಕ್ಷ್ಮಿಯ ವಿಶೇಷ ಕೃಪೆ ಇರುತ್ತದೆ. ಆದರೆ ಕೆಲವೊಮ್ಮೆ ಮನೆಯ ಮೂಲೆಮೂಲೆಯನ್ನೂ ಸ್ವಚ್ಛಗೊಳಿಸದ ಬಳಿಕವೂ ಅಲ್ಲಿನ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಇದಕ್ಕೆ ಪೊರಕೆ ವಿಷಯದಲ್ಲಿ ನೀವು ನಿಮಗೆ ಗೊತ್ತಿಲ್ಲದೆಯೇ ನಡೆದುಕೊಳ್ಳುತ್ತಿರುವ ರೀತಿ ಕಾರಣವಿರಬಹುದು. ಈ ತಪ್ಪುಗಳಿಂದಾಗಿ ಮನೆಯಲ್ಲಿ ನಕಾರಾತ್ಮಕ ಶಕ್ತಿ(negative energy) ಹೆಚ್ಚುತ್ತಿರುತ್ತದೆ. ಇದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಹದಗೆಡುತ್ತದೆ. ಪೊರಕೆ ವಿಷಯದಲ್ಲಿ ನೀವು ಪಾಲಿಸಬೇಕಾದ ಈ ವಾಸ್ತು(Vastu) ಸಲಹೆಗಳೇನು ಎಂಬುದನ್ನು ಇಲ್ಲಿ ಕೊಡಲಾಗಿದೆ. ಅದನ್ನು ಅಳವಡಿಸಿಕೊಂಡು ಮನೆಯಲ್ಲಾಗುವ ಬದಲಾವಣೆಗಳನ್ನು ಸ್ವತಃ ನೋಡಿ. 

ಗುಡಿಸಲು ಸರಿಯಾದ ಸಮಯ(right timings)
ವಾಸ್ತು ಶಾಸ್ತ್ರದಲ್ಲಿ ಯಾವುದೇ ಕೆಲಸ ಮಾಡಲು ಸಮಯ ಬಹಳ ಮುಖ್ಯ. ಪ್ರತಿ ಕೆಲಸಕ್ಕೂ ನಿಗದಿತ ಸಮಯ ಹೇಳಲಾಗಿದೆ. ಅದರಂತೆ ಗುಡಿಸಲು ಅತ್ಯಂತ ಸೂಕ್ತವಾದ ಸಮಯವೆಂದರೆ ಬೆಳಿಗ್ಗೆ 5ರಿಂದ 9 ರವರೆಗೆ. ಅಂದ ಹಾಗೆ, ನೀವು ಸೂರ್ಯಾಸ್ತದ ಮೊದಲು ಅಂದರೆ ಸಂಜೆ 6 ಗಂಟೆಯ ಮೊದಲು ಗುಡಿಸಬಹುದು.

Weekly Horoscope: ಕುಂಭಕ್ಕೆ ವಾರಾಂತ್ಯದಲ್ಲಿ ಕಾದಿದೆ ಸಿಹಿ ಸುದ್ದಿ, ನಿಮ್ಮ ಈ ವಾರಫಲ ಏನಿದೆ?

ಸೂರ್ಯಾಸ್ತ(Sunset)ದ ಬಳಿಕೆ ಬೇಡ
ವಾಸ್ತು ಶಾಸ್ತ್ರದ ಪ್ರಕಾರ, ಸೂರ್ಯಾಸ್ತದ ನಂತರ ಅಂದರೆ ಸಂಜೆ 6 ಗಂಟೆಯ ನಂತರ ಗುಡಿಸುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಸಂಜೆ ದೀಪ ಹಚ್ಚುವ ವೇಳೆ ಲಕ್ಷ್ಮೀ ಮನೆಗೆ ಬರುವ ಹೊತ್ತು. ಹೊರಗೆ ಕೆಲಸ ಮಾಡಿದವರು ಕೆಲಸ ಮುಗಿಸಿ, ಮಾಡಿದ ಕೆಲಸಕ್ಕೆ ಹಣ ಮನೆಗೆ ತರುವ ಹೊತ್ತು. ಆ ಸಂದರ್ಭ ಮನೆ ಸ್ವಚ್ಛವಾಗಿರಬೇಕು. ಹಾಗಂಥ ಲಕ್ಷ್ಮೀ ಮನೆಗೆ ಬರುವ ವೇಳೆಗೆ ಗುಡಿಸುತ್ತಾ ಇದ್ದರೆ ಆಕೆ ಒಳ ಪ್ರವೇಶಿಸುವುದೇ ಇಲ್ಲ. ರಾತ್ರಿ ವೇಳೆ ಮನೆ ಗುಡಿಸುವುದರಿಂದ ಮನೆಯ ಆರ್ಥಿಕ ಸ್ಥಿತಿ ಕುಂಠಿತಗೊಂಡು ಮನೆಯಲ್ಲಿ ಉದ್ವಿಗ್ನ ಸ್ಥಿತಿ ಉಳಿಯುತ್ತದೆ.

ಪೊರಕೆಯನ್ನು ಹೀಗೆ ಇಡಬೇಡಿ
ವಾಸ್ತು ಶಾಸ್ತ್ರದ ಪ್ರಕಾರ, ಪೊರಕೆಯನ್ನು ಯಾವಾಗಲೂ ಹಣದಂತೆ ಮರೆ ಮಾಡಬೇಕು. ಪೊರಕೆಯನ್ನು ಯಾವಾಗಲೂ ನೆಲದ ಮೇಲೆ ಮಲಗಿಸಿ ಇಡಬೇಕು. ಪೊರಕೆಯನ್ನು ಎಂದಿಗೂ ಎಲ್ಲರ ಕಣ್ಣಿಗೆ ಕಾಣುವ ಜಾಗದಲ್ಲಿ ಇಡಬಾರದು. ಅಲ್ಲದೆ, ಪೊರಕೆಯನ್ನು ಎಂದಿಗೂ ನಿಂತಿರುವಂತೆ ಇಡಬಾರದು. ಅಡುಗೆಮನೆ(Kitchen)ಯಲ್ಲಿ ಮತ್ತು ದೇವರಮನೆಯಲ್ಲಿ ಕೂಡಾ ಇಡಬಾರದು. ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇಲ್ಲದಿದ್ದಲ್ಲಿ, ಇದು ಬಡತನಕ್ಕೆ ಕಾರಣವಾಗುತ್ತದೆ.

ದಾಂಪತ್ಯ ಸುಖ, ಆರ್ಥಿಕ ವೃದ್ಧಿಗಾಗಿ ಇರುವೆ ಮೇಲೆ ತೋರಿ ಪ್ರೀತಿ

ಈ ವಿಷಯಗಳನ್ನು ನೆನಪಿನಲ್ಲಿಡಿ
ಪೊರಕೆಯು ಹಾನಿಯಾಗಿರಬಾರದು ಅಥವಾ ಮುರಿದಿರಬಾರದು. ಪೊರಕೆಯಿಂದ ಗುಡಿಸುವಾಗ ಕಾಲಿನಿಂದ ಗುಡಿಸುವುದು, ಪೊರಕೆ ಒದೆಯುವುದು ಮಾಡಬಾರದು. ಪೊರಕೆ ಬಳಸುವಾಗ ಯಾವಾಗಲೂ ಕೊಂಚ ಬಗ್ಗಿರಬೇಕು. ಪೊರಕೆ ಕೂಡಾ ಬಗ್ಗಿರಬೇಕು. ನೇರ ಹಿಡಿಯಬಾರದು. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios