- Home
- Astrology
- Vaastu
- ಮನಿ ಪ್ಲಾಂಟ್‌ನಲ್ಲಿ ಹೊಳೆಯುವ ಈ ಒಂದು ವಸ್ತುವಿಟ್ಟರೆ ಸಾಕು.. ನಿಮ್ಮ ಹಣೆಬರಹ ಬದಲಾಗುವುದು ಖಂಡಿತ!
ಮನಿ ಪ್ಲಾಂಟ್‌ನಲ್ಲಿ ಹೊಳೆಯುವ ಈ ಒಂದು ವಸ್ತುವಿಟ್ಟರೆ ಸಾಕು.. ನಿಮ್ಮ ಹಣೆಬರಹ ಬದಲಾಗುವುದು ಖಂಡಿತ!
Money plant vastu tips: ವಾಸ್ತು ಮತ್ತು ಫೆಂಗ್ ಶೂಯಿ ಪ್ರಕಾರ, ಮನಿ ಪ್ಲಾಂಟ್ ಇರುವ ಕುಂಡದಲ್ಲಿ ಜಗಮಗಿಸುವ ಈ ಒಂದು ವಿಶೇಷ ವಸ್ತುವನ್ನಿಟ್ಟರೆ ಅದು ಕಾಂತದಂತೆ ಹಣವನ್ನ ನಿಮ್ಮತ್ತ ಆಕರ್ಷಿಸುತ್ತದೆ! ನಿಮ್ಮ ಹಣೆಬರಹವನ್ನೇ ಬದಲಾಯಿಸಬಲ್ಲ ಆ ಅದ್ಭುತ ವಸ್ತು ಯಾವುದು? ಅದನ್ನು ಬಳಸೋ ವಿಧಾನ ಇಲ್ಲಿದೆ.

ಇಲ್ಲಿದೆ ಅದ್ಭುತ ಮಾಹಿತಿ
ಇಲ್ಲಿದೆ ಅದ್ಭುತ ಮಾಹಿತಿ
ಜ್ಯೋತಿಷ್ಯ ಶಾಸ್ತ್ರದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಧನಾಗಮನವಾಗಲಿ ಹಾಗೂ ಅದೃಷ್ಟ ಒಲಿದು ಬರಲಿ ಎಂಬ ಕಾರಣಕ್ಕೆ ಹೆಚ್ಚಿನ ಜನರು ತಮ್ಮ ಮನೆಗಳಲ್ಲಿ ಮನಿ ಪ್ಲಾಂಟ್ ಗಿಡವನ್ನು ನೆಡುತ್ತಾರೆ. ಆದರೆ, ಕೆಲವು ಬಾರಿ ಮನೆಯಲ್ಲಿ ಮನಿ ಪ್ಲಾಂಟ್ ಇದ್ದಾಗಲೂ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಅಂತಹವರಿಗಾಗಿಯೇ ಇಲ್ಲಿದೆ ಒಂದು ಅದ್ಭುತ ಮಾಹಿತಿ.
ಆರ್ಥಿಕ ಪ್ರಗತಿಗೂ ಕಾರಣ
ಆರ್ಥಿಕ ಪ್ರಗತಿಗೂ ಕಾರಣ
ಮನೆಯಲ್ಲಿ ಮನಿ ಪ್ಲಾಂಟ್ ಇದ್ದರೂ ಅದೃಷ್ಟ ಕೈ ಹಿಡಿಯದಿದ್ದರೆ, ಆ ಗಿಡವಿರುವ ಕುಂಡದಲ್ಲಿ ಹೊಳೆಯುವ ಈ ಒಂದು ವಸ್ತುವನ್ನು ಇಟ್ಟರೆ ಸಾಕು. ಇದು ಮನೆಗೆ ಅದೃಶ್ಯ ಶಕ್ತಿಯಂತೆ ಅದೃಷ್ಟವನ್ನು ತರುವುದಲ್ಲದೆ, ಆರ್ಥಿಕ ಪ್ರಗತಿಗೂ ಕಾರಣವಾಗುತ್ತದೆ. ಜೊತೆಗೆ ಮನೆಯಲ್ಲಿ ಸಂಪತ್ತು ವೃದ್ಧಿಯಾಗುವಂತೆ ಮಾಡುತ್ತದೆ.
ಫೆಂಗ್ ಶೂಯಿ ಮತ್ತು ಕ್ರಿಸ್ಟಲ್ ಥೆರಪಿ ಪ್ರಕಾರ
ಫೆಂಗ್ ಶೂಯಿ ಮತ್ತು ಕ್ರಿಸ್ಟಲ್ ಥೆರಪಿ ಪ್ರಕಾರ
ಪ್ರತಿಯೊಬ್ಬರೂ ಆರ್ಥಿಕವಾಗಿ ಸದೃಢರಾಗಲು ಮನೆಯಲ್ಲಿ ಮನಿ ಪ್ಲಾಂಟ್ ಗಿಡವನ್ನು ನೆಡುತ್ತಾರೆ. ಆದರೆ ಅದು ನೆಟ್ಟ ತಕ್ಷಣವೇ ನಿಮಗೆ ಅದೃಷ್ಟವನ್ನು ತರುವುದಿಲ್ಲ. ಅದರಲ್ಲಿರುವ ಧನಾತ್ಮಕ ಶಕ್ತಿಯನ್ನು ಹೊರತಂದಾಗ ಮಾತ್ರ ಅದು ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಫೆಂಗ್ ಶೂಯಿ ಮತ್ತು ಕ್ರಿಸ್ಟಲ್ ಥೆರಪಿ ಪ್ರಕಾರ, ಮನಿ ಪ್ಲಾಂಟ್ ಗಿಡದಲ್ಲಿ ಹೊಳೆಯುವ ವಸ್ತುವೊಂದನ್ನು ಇಡುವುದು ತುಂಬಾ ಒಳ್ಳೆಯದು. ಇದು ಹಣವನ್ನು ನಿಮ್ಮತ್ತ ಆಕರ್ಷಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಯಾವುದು ಆ ವಸ್ತು?
ಯಾವುದು ಆ ವಸ್ತು?
ಇಷ್ಟಕ್ಕೂ ಆ ವಸ್ತು ಯಾವುದು ಎಂದು ಯೋಚಿಸುತ್ತಿದ್ದೀರಾ? ಅದೇ 'ಪೈರೈಟ್ ಕ್ರಿಸ್ಟಲ್' (Pyrite Crystal). ಇದನ್ನು 'ಫೂಲ್ಸ್ ಗೋಲ್ಡ್' (Fool's Gold) ಎಂದೂ ಕರೆಯುತ್ತಾರೆ. ಇದು ನೋಡಲು ಅಚ್ಚ ಅಸಲಿ ಚಿನ್ನದಂತೆಯೇ ಜಗಮಗಿಸುತ್ತಾ ಹೊಳೆಯುತ್ತದೆ. ಆನ್‌ಲೈನ್‌ನಲ್ಲಿ ಲಭ್ಯ. ಯಾರು ತಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಗಿಡವನ್ನು ನೆಟ್ಟಿರುತ್ತಾರೋ, ಅವರು ಈ ಪೈರೈಟ್ ಕ್ರಿಸ್ಟಲ್ ಅನ್ನು ಮನಿ ಪ್ಲಾಂಟ್ ಇರುವ ಕುಂಡದಲ್ಲಿ ಇಡಬೇಕು. ಇದು ಮನಿ ಪ್ಲಾಂಟ್ ಗಿಡದ ಧನಾತ್ಮಕತೆಯನ್ನು ಹೆಚ್ಚಿಸುವುದಲ್ಲದೆ, ಸಂಪತ್ತು ವೃದ್ಧಿಯಾಗುವಂತೆ ಮಾಡುತ್ತದೆ.
ಹೇಗೆ ಇಡಬೇಕು?
ಹೇಗೆ ಇಡಬೇಕು?
ಇದನ್ನು ಖರೀದಿಸಿದ ನಂತರ, ನೀವು ನಿಮ್ಮ ಮುಖ್ಯ ದ್ವಾರದ ಬಳಿ ಮಣ್ಣಿನ ಕುಂಡದಲ್ಲಿ ಮನಿ ಪ್ಲಾಂಟ್ ಗಿಡವನ್ನು ನೆಟ್ಟಿದ್ದರೆ, ಅದರ ಬೇರಿನ ಬಳಿ ಮಣ್ಣಿನ ಮೇಲ್ಭಾಗದಲ್ಲಿ ಈ ಕ್ರಿಸ್ಟಲ್ ಅನ್ನು ಇಡಬೇಕು. ಒಂದು ವೇಳೆ ನೀರಿನ ಬಾಟಲಿಯಲ್ಲಿ ಮನಿ ಪ್ಲಾಂಟ್ ಬೆಳೆಸುತ್ತಿದ್ದರೆ, ಈ ಕ್ರಿಸ್ಟಲ್ ಅನ್ನು ಆ ಬಾಟಲಿಯ ಹತ್ತಿರ ಇಡಬೇಕು. ಇದು ನಿಮ್ಮ ಜೀವನದಲ್ಲಿ ಆರ್ಥಿಕ ಸ್ಥಿರತೆಯನ್ನು ತರುತ್ತದೆ.
ಗಮನಿಸಿ
ಗಮನಿಸಿ
ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಓದುಗರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಹಲವು ಪಂಡಿತರ ಸೂಚನೆಗಳು ಮತ್ತು ಅವರು ನೀಡಿದ ಮಾಹಿತಿಯ ಆಧಾರದ ಮೇಲೆ ಇದನ್ನು ಪ್ರಕಟಿಸಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂಬುದನ್ನು ಓದುಗರು ಗಮನಿಸಬೇಕು.
