Lakshmi Nivasa: ಮಂತ್ರಕ್ಕೆ ತಿರುಮಂತ್ರ ಹಾಕಿದ ವಿಶ್ವ: ಥಂಡಾ ಹೊಡೆದ ಸೈಕೋ ಜಯಂತ್!
ಜಾಹ್ನವಿಗಾಗಿ ಚೆಲುವಿ ಮತ್ತು ವೆಂಕಿಯನ್ನು ಅಪಹರಿಸಿದ ಸೈಕೋ ಜಯಂತ್‌ಗೆ ವಿಶ್ವ ತಿರುಮಂತ್ರ ಹಾಕಿದ್ದಾನೆ. ಜಯಂತ್‌ನ ಪ್ರೀತಿಯ ಜಾಹ್ನವಿಯನ್ನೇ ಅಸ್ತ್ರವಾಗಿಸಿಕೊಂಡು, ಚೆಲುವಿ-ವೆಂಕಿಯನ್ನು ಸುರಕ್ಷಿತವಾಗಿ ಬಿಡಿಸುವಂತೆ ವಿಶ್ವ ಬೆದರಿಕೆ ಹಾಕಿದ್ದು, ಜಯಂತ್‌ನ ಕನಸು ಭಗ್ನಗೊಂಡಿದೆ.

ಜಯಂತ್ ತಂತ್ರಕ್ಕೆ ವಿಶ್ವ ತಿರುಮಂತ್ರ
ಜೀ ಕನ್ನಡ ವಾಹಿನಿಯ ಕಥಾ ಸಂಗಮ ಲಕ್ಷ್ಮೀ ನಿವಾಸ ಸೀರಿಯಲ್ ನೋಡುಗರನ್ನು ಮತ್ತೆ ಸೆಳೆಯುತ್ತಿದೆ. ಪ್ರೀತಿಯ ಚಿನ್ನುಮರಿ ಜಾಹ್ನವಿಯನ್ನು ಪಡೆದುಕೊಳ್ಳಲು ಸೈಕೋ ಜಯಂತ್ ಮನೆಗೆ ಮುಗ್ಧರಾದ ಚೆಲುವಿ ಮತ್ತು ವೆಂಕಿಯನ್ನು ಕರೆದುಕೊಂಡು ಬಂದಿದ್ದಾನೆ. ಇದೀಗ ಸೈಕೋ ಜಯಂತ್ ತಂತ್ರಕ್ಕೆ ವಿಶ್ವ ತಿರುಮಂತ್ರ ಹಾಕಿದ್ದಾನೆ.
ಜಯಂತ್‌ನಿಂದ ಬ್ಲಾಕ್‌ಮೇಲ್
ಹೌದು, ಚೆಲುವಿ ಮತ್ತು ವೆಂಕಿಯ ಜೀವ ಉಳಿಯಬೇಕಾದ್ರೆ ಚಿನ್ನುಮರಿಯನ್ನು ಕರೆದುಕೊಂಡು ಬರುವಂತೆ ಜಯಂತ್ ಬ್ಲಾಕ್‌ಮೇಲ್ ಮಾಡಿದ್ದನು. ವಿಶ್ವ ಮತ್ತು ಜಯಂತ್ ನಡುವಿನ ಸಂಭಾಷಣೆಯನ್ನು ಕೇಳಿಸಿಕೊಂಡ ಜಾನು ಸಹ ಶಾಕ್ ಆಗಿದ್ದಳು. ಇಷ್ಟು ಮಾತ್ರವಲ್ಲ ನಾಳೆ ನಮ್ಮ ಮನೆಗೆ ಜಾನು ಅವರ ಅಪ್ಪ-ಅಮ್ಮ ಬರ್ತಿದ್ದಾರೆ ಎಂದು ಹೇಳಿ ಭಯ ಹುಟ್ಟಿಸಿದ್ದನು.
ಮಂತ್ರಕ್ಕೆ ತಿರುಮಂತ್ರ
ಶಾಂತಮ್ಮ ಸಹ ಕಾಲ್ ಮಾಡಿ ಜಯಂತ್ ವರ್ತನೆ ನೋಡಿದ್ರೆ ನನಗೆ ಭಯ ಆಗ್ತಿದೆ. ಹೇಗಾದ್ರು ಮಾಡಿ ವೆಂಕಿ-ಚೆಲುವಿಯನ್ನು ಕಾಪಾಡು ಎಂದು ಶಾಂತಮ್ಮ ಮನವಿ ಮಾಡಿದ್ದಳು. ಈಗ ಸೈಕೋ ಜಯಂತ್ ರೀತಿಯಲ್ಲಿ ವಿಶ್ವ ಪ್ಲಾನ್ ಮಾಡಿ ತಿರುಮಂತ್ರ ಹಾಕಿದ್ದಾನೆ.
ವಿಶ್ವನ ಪ್ಲಾನ್ ಏನು?
ಜಾಹ್ನವಿಯನ್ನು ಕಟ್ಟಿ ಹಾಕಿ ಜಯಂತ್‌ಗೆ ವಿಡಿಯೋ ಕಾಲ್ ಮಾಡಿರುವ ವಿಶ್ವ, ವೆಂಕಿ-ಚೆಲುವಿಯನ್ನು ಸುರಕ್ಷಿತವಾಗಿ ಕಳುಹಿಸು ಎಂದು ಹೇಳಿದ್ದಾನೆ. ಒಂದು ವೇಳೆ ಅವರಿಗೆ ಏನಾದ್ರು ಆದ್ರೆ ಎಂದು ಹೇಳಿ ಜಾಹ್ನವಿ ಕತ್ತಿಗೆ ಚಾಕು ಇರಿಸಿ ಬೆದರಿಕೆ ಹಾಕುತ್ತಿದ್ದಾನೆ. ತನ್ನ ಪ್ರೀತಿಯ ಮಡದಿಯನ್ನು ಆ ಸ್ಥಿತಿಯಲ್ಲಿ ನೋಡಿ ಜಯಂತ್ ಶಾಕ್ ಆಗಿದ್ದಾನೆ.
ಇದನ್ನೂ ಓದಿ: BBK 12: ಕ್ಷಣ ಮಾತ್ರದಲ್ಲಿಯೇ ಮಾತು ಬದಲಿಸಿದ ರಾಶಿಕಾ: ಬಿಗ್‌ಬಾಸ್ ಇದು ರಕ್ಷಿತಾಗೆ ಅನ್ಯಾಯ ಎಂದ ವೀಕ್ಷಕರು?
ಜಯಂತ್ ಕನಸು ಭಗ್ನ!
ಜಾಹ್ನವಿಯನ್ನು ಕಷ್ಟದ ಸ್ಥಿತಿಯಲ್ಲಿ ನೋಡಿದ ಜಯಂತ್, ದಯವಿಟ್ಟು ನನ್ನ ಪ್ರೀತಿಯ ಚಿನ್ನುಮರಿಗೆ ಏನು ಮಾಡಬೇಡ. ಚೆಲುವಿ ಮತ್ತು ವೆಂಕಿಯನ್ನು ಸುರಕ್ಷಿತವಾಗಿ ಕಳುಹಿಸಬೇಕು ಅಲ್ಲವಾ ಎಂದು ವಿಶ್ವನ ಮಾತಿಗೆ ಜಯಂತ್ ಒಪ್ಪಿಕೊಳ್ಳುತ್ತಾನೆ. ಇದೀಗ ಮತ್ತೊಮ್ಮೆ ಜಾಹ್ನವಿಯನ್ನು ನೋಡುವ ಜಯಂತ್ ಕನಸು ಭಗ್ನವಾಗಿದೆ.
ಇದನ್ನೂ ಓದಿ: BBK 12: ಫಿನಾಲೆ ಟಿಕೆಟ್‌ಗಾಗಿ ಮೊದಲ ಹಣಾಹಣಿ; ಗಿಲ್ಲಿಗೆ ಮಣ್ಣು ಮುಕ್ಕಿಸಿದ ಧ್ರುವಂತ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

