ಮತ್ತೆ ಮೈಲೇಜ್ ಪಡೆದುಕೊಂಡ ಲಕ್ಷ್ಮೀ ನಿವಾಸ ಸೀರಿಯಲ್; ಅಂತ್ಯವಾಗಲಿದೆ ವೀಕ್ಷಕರ ಕಾಯುವಿಕೆ
ಜೀ ಕನ್ನಡದ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ, ತನ್ನ ಕುಟುಂಬದವರೇ ಹೆಣೆದ ಷಡ್ಯಂತ್ರದ ಸತ್ಯ ಸಿದ್ದೇಗೌಡರಿಗೆ ತಿಳಿದಿದೆ. ಅಣ್ಣನ ದುರಾಸೆಯಿಂದ ನೊಂದ ಭಾವನಾ ಮನೆ ಬಿಟ್ಟು ಹೋಗಿದ್ದರೆ, ಮತ್ತೊಂದೆಡೆ ಜಾನು ಕೊನೆಗೂ ಸೈಕೋ ಜಯಂತ್ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಸಿದ್ದೇಗೌಡರು ಶಾಕ್
ಜೀ ಕನ್ನಡದಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಧಾರಾವಾಹಿ ಮತ್ತೆ ಮೈಲೇಜ್ ಪಡೆದುಕೊಳ್ಳುತ್ತಿದೆ. ತನ್ನ ಬೆನ್ನ ಹಿಂದೆ ಕುಟುಂಬಸ್ಥರು ಮಾಡುತ್ತಿರುವ ಮೋಸ ಸಿದ್ದೇಗೌಡರಿಗೆ ಗೊತ್ತಾಗಿದೆ. ಅಣ್ಣ ಮರೀಗೌಡ ಹೇಳಿದ ವಿಷಯವನ್ನು ಕೇಳಿ ಸಿದ್ದೇಗೌಡರು ಶಾಕ್ ಆಗಿದ್ದಾರೆ.
ಮರೀಗೌಡ ಸಲಹೆ
ಸಂತೋಷ್ ಜೊತೆ ಸೇರಿಕೊಂಡು ನಿನ್ನ ಸಂಸಾರವನ್ನು ಹಾಳು ಮಾಡಲಾಗ್ತಿದೆ. ಎಲ್ಲದಕ್ಕೂ ಹಣ ಕೊಟ್ಟು ಸೆಟ್ ಮಾಡಿದ್ದಾರೆ. ಆ ಸಂತೋಷ್ ಸಹ ಹಣಕ್ಕಾಗಿ ಭಾವನಾ ಅವರನ್ನು ಕರೆದುಕೊಂಡು ಹೋಗಿದ್ದಾನೆ. ಹೋಗಿ ಭಾವನಾ ಅವರನ್ನು ಕರೆದುಕೊಂಡು ಬರುವಂತೆ ಸೋದರನಿಗೆ ಮರೀಗೌಡ ಸಲಹೆ ನೀಡಿದ್ದಾರೆ.
ಭಾವನಾ ವಿರುದ್ದ ಷಡ್ಯಂತ್ರ
ಭಾವನಾಳ ತಿಂಗಳ ಖರ್ಚಿಗಾಗಿ ಹಣ ನೀಡುವಂತೆ ಸಂತೋಷ್ ಕೇಳಿದ್ದ. ಜವರೇಗೌಡ ಬಳಿ ಹಣ ಪಡೆಯುತ್ತಿರುವಾಗ ಇಬ್ಬರು ಮಾತುಗಳನ್ನು ಮರೀಗೌಡ ಕೇಳಿಸಿಕೊಂಡದ್ದನು. ಮೊದಲಿನಿಂದಲೂ ಮರೀಗೌಡರಿಗೆ ಈ ಬಗ್ಗೆ ಅನುಮಾನವಿತ್ತು. ಇಬ್ಬರ ಮಾತು ಕೇಳಿದ ನಂತರ ಮನೆಯವರ ಷಡ್ಯಂತ್ರ ಖಚಿತವಾಗಿದೆ. ಕೂಡಲೇ ತಮ್ಮನಿಗೆ ವಿಷಯ ತಿಳಿಸಿದ್ದಾರೆ.
ಸಂತೋಷ್‌ನ ದುರಾಸೆ
ಇತ್ತ ಅಣ್ಣನ ಹಣದ ದುರಾಸೆಯಿಂದ ನೊಂದ ಭಾವನಾ ಮನೆಯಿಂದ ಹೊರಗೆ ನಡೆದಿದ್ದಾಳೆ. ಭಾವನಾ-ಸಿದ್ದೇಗೌಡರನ್ನು ಮುಖಾಮುಖಿಯಾಗಿ ಕೂರಿಸಿಕೊಂಡು ಮಾತನಾಡಲು ಶ್ರೀನಿವಾಸ್ ಮುಂದಾಗಿದ್ದಾರೆ. ಮಗಳು ಭಾವನಾ ಎದುರಿಸುತ್ತಿರುವ ಕಷ್ಟ ನೋಡಿ ಲಕ್ಷ್ಮೀ ಕಣ್ಣೀರು ಹಾಕಿದ್ದಾರೆ. ಸಂತೋಷ್ ಮನೆಯಿಂದ ಹೊರ ಬಂದಿರುವ ಭಾವನಾ ಎಲ್ಲಿದ್ದಾಳೆ ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ.
ಜಯಂತ್ ತೆಕ್ಕೆಯಲ್ಲಿ ಚಿನ್ನುಮರಿ
ಮತ್ತೊಂದೆಡೆ ವಿಶ್ವನ ಮನೆಯಿಂದ ಹೊರಬಂದಿರುವ ಜಾನು ಕೊನೆಗೂ ಗಂಡ ಸೈಕೋ ಜಯಂತ್ ತೆಕ್ಕೆಯಲ್ಲಿ ಸಿಲುಕಿರೋದನ್ನು ಇಂದಿನ ಪ್ರೋಮೋದಲ್ಲಿ ತೋರಿಸಲಾಗಿದೆ. ಇದು ಮತ್ತೆ ಕನಸಾ? ನನಸಾ ಎಂದು ವೀಕ್ಷಕರು ಕೇಳುತ್ತಿದ್ದಾರೆ. ಈ ಹಿಂದೆಯೂ ಹಲವು ಬಾರಿ ಇದೇ ರೀತಿಯಾಗಿ ತೋರಿಸಲಾಗಿತ್ತು. ಕೊನೆ ಕ್ಷಣದಲ್ಲಿ ಜಯಂತ್‌ನಿಂದ ಜಾನು ತಪ್ಪಿಸಿಕೊಳ್ಳುತ್ತಿದ್ದಳು.
ಇದನ್ನೂ ಓದಿ: ವಿಧಿಯಾಟದಲ್ಲಿ ಬೀದಿಗೆ ಬಂದ್ರು ಇಬ್ಬರು ಹೆಣ್ಣುಮಕ್ಕಳು; ಲಕ್ಷ್ಮೀ ನಿವಾಸದ ಕಥೆಯಲ್ಲಿ ಮಹತ್ತರ ತಿರುವು!
ಲಕ್ಷ್ಮೀ ನಿವಾಸ ವೀಕ್ಷಕರು
ಕಳೆದ ಏಳೆಂಟು ತಿಂಗಳಿನಿಂದ ಜಾನು-ಜಯಂತ್ ಭೇಟಿಯಾಗೋದನ್ನು ಲಕ್ಷ್ಮೀ ನಿವಾಸ ವೀಕ್ಷಕರು ಕಾಯುತ್ತಿದ್ದಾರೆ. ಹಾಗಾಗಿ ಇಂದಿನ ಪ್ರೋಮೋ ನಿಜವಾದ್ರೆ ಸಾಕು ಅಂತಿದ್ದಾರೆ. ಮತ್ತೊಂದೆಡೆ ಹಣ ಮತ್ತು ಭೂಮಿಗಾಗಿ ತಂಗಿ ಜೀವನವನ್ನೇ ಹಾಳು ಮಾಡೋಕೆ ಮುಂದಾದ ಸಂತೋಷ್ ನೀಚತನವೂ ಎಲ್ಲರ ಮುಂದೆ ಬಯಲಾಗಲಿದೆ.
ಇದನ್ನೂ ಓದಿ: ಅಣ್ಣ ಸಂತೋಷ್‌ನ ದುರಾಸೆಗೆ ಕ್ಯಾಕರಿಸಿ ಉಗಿದ ಭಾವನಾ: ಇದಪ್ಪಾ ಸ್ವಾಭಿಮಾನದ ತಿರುಗೇಟು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

