ಅಣ್ಣ ಸಂತೋಷ್‌ನ ದುರಾಸೆಗೆ ಕ್ಯಾಕರಿಸಿ ಉಗಿದ ಭಾವನಾ: ಇದಪ್ಪಾ ಸ್ವಾಭಿಮಾನದ ತಿರುಗೇಟು?
ದುರಾಸೆಯ ಅಣ್ಣ ಸಂತೋಷ್‌ನಿಂದಾಗಿ ಭಾವನಾ ಸಂಸಾರದಲ್ಲಿ ಬಿರುಕು ಮೂಡಿದೆ. ಅಣ್ಣನ ಮನೆಯಲ್ಲಿ ಆಶ್ರಯ ಪಡೆದಿದ್ದ ಭಾವನಾಗೆ, ಸಂತೋಷ್ ಬಾಡಿಗೆ ಕೇಳುವ ಮೂಲಕ ಮತ್ತಷ್ಟು ಆಘಾತ ನೀಡಿದ್ದಾನೆ. ಇದರಿಂದ ನೊಂದ ಭಾವನಾ ಅಣ್ಣನ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದಾಳೆ.

ಅಣ್ಣ ಸಂತೋಷ್‌ನ ದುರಾಸೆ
ಅಣ್ಣ ಸಂತೋಷ್‌ನ ದುರಾಸೆ ಮತ್ತು ಅತ್ತೆ-ಮಾವ, ಓರಗಿತ್ತಿಯ ಕುತಂತ್ರದಿಂದಾಗಿ ಭಾವನಾ ಸಂಸಾರದಲ್ಲಿ ಬಿರುಕು ಮೂಡಿದೆ. ಭಾವನಾ ಸದ್ಯ ಅಣ್ಣನ ಮನೆಯಲ್ಲಿದ್ದು, ಯಾವ ಮೋಸವೂ ತಿಳಿಯದೇ ಒಂಟಿಯಾಗಿ ಕಣ್ಣೀರು ಹಾಕುತ್ತಿದ್ದಾರೆ. ತಂಗಿಯ ಸಂಸಾರ ಹಾಳು ಮಾಡಿರುವ ಸಂತೋಷ್, ಇದೀಗ ಆಕೆಯ ಮಾವನಿಂದ ಹಣ ಕೀಳುತ್ತಿದ್ದಾನೆ. ಇತ್ತ ಕೆಲಸಕ್ಕೆ ಸೇರಿರುವ ಭಾವನಾಳ ಸಂಬಳದ ಮೇಲೆಯೂ ಸಂತೋಷ್ ಕಣ್ಣು ಹಾಕಿದ್ದಾನೆ.
ಜವರೇಗೌಡನಿಂದಲೂ ಹಣ ಪಡೆದ ಸಂತೋಷ್
ಜವರೇಗೌಡನಿಂದ ಸಂತೋಷ್ 90 ಸಾವಿರ ರೂಪಾಯಿ ಹಣ ಪಡೆದುಕೊಳ್ಳುತ್ತಿರೋದನ್ನು ಮರಿಗೌಡರು ನೋಡಿದ್ದಾರೆ. ಇವರಿಬ್ಬರ ಸಂಚಿನಿಂದ ಸಿದ್ದೇಗೌಡ-ಭಾವನಾ ಸಂಸಾರ ಹಾಳಾಗ್ತಿದೆ ಎಂಬ ರಹಸ್ಯ ಬಯಲಾಗಿದೆ. ಜವರೇಗೌಡರಿಂದ ಹಣ ಪಡೆದ ಸಂತೋಷ್, ತಂಗಿ ಭಾವನಾಳ ಬಳಿ ತಿಂಗಳಿಗೆ ಇಂತಿಷ್ಟು ದುಡ್ಡು ನೀಡುವಂತೆ ಕೇಳಿದ್ದಾನೆ.
ತಂಗಿಗೆ ಬಾಡಿಗೆ ಕೇಳಿದ ಸಂತೋಷ್
ನಿನಗೆ ಪ್ರೈವೇಸಿ ಬೇಕಾಗಬಹುದು, ಹಾಗಾಗಿ ಮೇಲಿರುವ ರೂಮ್‌ಗೆ ಶಿಫ್ಟ್ ಆಗು. ನಿನಗೆ ಬೇಕಾಗಿರುವ ಎಲ್ಲಾ ಸೌಲಭ್ಯ ಕಲ್ಪಿಸಿ ಕೊಡುತ್ತೇನೆ. ಈ ಏರಿಯಾದಲ್ಲಿ ಬಾಡಿಗೆ 10 ಸಾವಿರ ರೂಪಾಯಿ ಇದೆ. ನೀನು ನನ್ನ ತಂಗಿ ಅಲ್ಲವಾ ಐದರಿಂದ ಆರು ಸಾವಿರ ರೂಪಾಯಿ ಕೊಟ್ಟರೆ ಸಾಕು. ವಿದ್ಯುತ್, ವಾಟರ್ ಬಿಲ್ ಸೇರಿದ್ರೆ ತಿಂಗಳಿಗೆ 7 ಸಾವಿರ ರೂಪಾಯಿ ಕೊಡುವಂತೆ ಸಂತೋಷ್ ಕೇಳುತ್ತಾನೆ.
ಸಂತೋಷ್‌ಗೆ ಉಗಿದ ಭಾವನಾ
ಬಾಡಿಗೆ ಮನೆಯಲ್ಲಿರಬೇಕಾದ್ರೆ ಎಲ್ಲಾದ್ರು ಇರಬಹುದು. ಸ್ವಂತ ಅಣ್ಣನ ಮನೆಯಲ್ಲಿ ಬಾಡಿಗೆ ಇರೋದು ಬೇಕಿಲ್ಲ. ನನ್ನನ್ನು ಕರೆದುಕೊಂಡು ಬಂದಾಗ ನೀನು ಬದಲಾಗಿದ್ದೀಯಾ? ಪ್ರೀತಿ ಮತ್ತು ಸಂಬಂಧಗಳಿಗೆ ಬೆಲೆ ಕೊಡ್ತಿದ್ದೀಯಾ ಅಂತ ಅಂದುಕೊಂಡಿದ್ದೆ. ಆದ್ರೆ ಈ ಪ್ರೀತಿ ಹಿಂದೆ ಹಣವಿರೋದು ಗೊತ್ತಿರಲಿಲ್ಲ. ನಿನ್ನ ಖಾಲಿ ಇರೋ ಮನೆಗೆ ಬಾಡಿಗೆದಾರರನ್ನು ಕರೆದುಕೊಂಡು ಬಂದಿದ್ದೀಯಾ ಎಂದು ಸಂತೋಷ್‌ಗೆ ಭಾವನಾ ಉಗಿದಿದ್ದಾಳೆ.
ಇದನ್ನೂ ಓದಿ: ಡೀವೋರ್ಸ್ ಕೊಡಿಸಲು ನೀಲು ಹೊಸ ಪ್ಲಾನ್; ಹಿರಿಯ ನಟಿ ಸೀರಿಯಲ್ ಬಿಟ್ಟಿದ್ದಕ್ಕೆ ಲಿಂಕ್ ಮಾಡಿದ ವೀಕ್ಷಕರು
ಮನೆಯಿಂದ ಹೊರಟ ಭಾವನಾ
ಸಂಬಳ ಆಗುತ್ತಿದ್ದಂತೆ ಮನೆ ಖರ್ಚಿಗೆ ಒಂದಿಷ್ಟು ಹಣ ಕೊಡುತ್ತಿದ್ದೆ. ನೊಂದಿರುವ ತಂಗಿ ಬಳಿ ಹೀಗೆಲ್ಲಾ ಕೇಳಿದ್ರೆ ನನಗೆ ಎಷ್ಟು ನೋವು ಆಗುತ್ತೆ ಅಂತ ಯೋಚಿಸಬೇಕಲ್ಲವಾ? ಇದು ನಿನ್ನ ಸ್ವಾರ್ಥ ಅಲ್ಲವಾ ಎಂದು ಭಾವನಾ ಪ್ರಶ್ನೆ ಮಾಡಿದ್ದಾಳೆ. ಅಣ್ಣನ ಮನೆಯಲ್ಲಿಯೇ ಬಾಡಿಕೆ ಕೊಟ್ಟು ಇರುವಷ್ಟು ಗತಿ ನನಗೆ ಬಂದಿಲ್ಲ. ಬಾಡಿಗೆ ಮನೆಯಲ್ಲಿರಬೇಕಾದ್ರೆ ಎಲ್ಲಾದ್ರು ಇರಬಹುದು, ನಾನು ಇವತ್ತೇ ಮನೆಬಿಟ್ಟು ಹೋಗ್ತೀನಿ ಎಂದು ಭಾವನಾ ಹೇಳಿದ್ದಾಳೆ.
ಇದನ್ನೂ ಓದಿ: ಚಿನ್ನುಮರಿ ಹುಡುಕಲು ವೇಷ ಬದಲಿಸಿದ ಸೈಕೋ ಜಯಂತ್; ವಿಶ್ವನ ಮನೆಯಲ್ಲಿ ಸಿಕ್ಕಿಬಿದ್ದ ಜಾಹ್ನವಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

