ಬಹುದಿನಗಳಿಂದ ಕಾಯ್ತಿದ್ದ ಕ್ಷಣವನ್ನು ಕಣ್ತುಂಬಿಕೊಂಡ ಲಕ್ಷ್ಮೀ ನಿವಾಸ ವೀಕ್ಷಕರು!
Kannada Serial Lakshmi Nivasa: ಲಕ್ಷ್ಮೀ ನಿವಾಸ ಧಾರಾವಾಹಿ ವೀಕ್ಷಕರು ತುದಿಗಾಲಿನಲ್ಲಿ ಕಾಯುತ್ತಾ ನಿಂತಿದ್ದರು. ಈ ಕ್ಷಣವನ್ನು ತುಂಬಿಕೊಂಡ ವೀಕ್ಷಕರು ನಿರ್ದೇಶಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಲಕ್ಷ್ಮೀ ನಿವಾಸ ವೀಕ್ಷಕರು ಬಹುದಿನಗಳಿಂದ ಕಾಯುತ್ತಿದ್ದ ಕ್ಷಣವನ್ನು ತುಂಬಿಕೊಂಡಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಈ ಕ್ಷಣ ಯಾವಾಗ ಬರುತ್ತೆ ಎಂದು ತುದಿಗಾಲಿನಲ್ಲಿ ಕಾಯುತ್ತಾ ನಿಂತಿದ್ದರು. ಈ ಕ್ಷಣವನ್ನು ತುಂಬಿಕೊಂಡ ವೀಕ್ಷಕರು ನಿರ್ದೇಶಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಸೈಕೋ ಪತಿ ಜಯಂತ್‌ನಿಂದ ನೊಂದ ಜಾನು ಸಮುದ್ರಕ್ಕೆ ಜಿಗಿದಿದ್ದಳು. ನಿರ್ದೇಶಕರ ಕೃಪೆಯಿಂದ ಬದುಕಿದ ಜಾನು, ಬೆಸ್ಟ್ ಫ್ರೆಂಡ್ ಗೂಬೆ ವಿಶ್ವನ ಮನೆ ಸೇರಿಕೊಂಡಿದ್ದಳು. ಇತ್ತೀಚಿನ ಎಪಿಸೋಡ್‌ವರೆಗೂ ಇದು ವಿಶ್ವನ ಮನೆ ಎಂದು ಜಾನುಗೆ ಗೊತ್ತಿರಲಿಲ್ಲ. ಇಷ್ಟು ಮಾತ್ರವಲ್ಲ ಇದು ತನ್ನ ಸೋದರಮಾವನ ಮನೆ ಎಂಬ ವಿಷಯ ಜಾನುಗೆ ಗೊತ್ತಿಲ್ಲ. ಚಂದನಾ ಎಂದು ಹೆಸರು ಬದಲಿಸಿಕೊಂಡಿದ್ದರಿಂದ ವಿಶ್ವನಿಗೆ ಅದು ಜಾನು ಅಂತ ಗೊತ್ತಿರಲಿಲ್ಲ.
ಇದೀಗ ವಿಶ್ವ ಮತ್ತು ತನು ನಿಶ್ಚಿತಾರ್ಥದಲ್ಲಿ ಎಲ್ಲರ ಒತ್ತಾಯದ ಮೇರೆಗೆ ಜಾನು ತನ್ನ ಮುಖವನ್ನು ಮರೆಮಾಡಿ ಹಾಡು ಹೇಳಿದ್ದಳು. ಜಾನು ಧ್ವನಿ ಕೇಳುತ್ತಿದ್ದಂತೆ ವಿಶ್ವನ ಮನಸ್ಸಿನಲ್ಲಿ ಕೋಲಾಹಲವೇ ಸೃಷ್ಟಿಯಾಗಿತ್ತು. ನಿಶ್ವಿತಾರ್ಥದ ಮಧ್ಯೆಯೇ ಅಮ್ಮನ ಬಳಿ ಬಂದ ವಿಶ್ವ, ಹಾಡು ಹೇಳಿದ ಚಂದನಾ ಯಾರು ಎಂದು ಮೊದಲ ಬಾರಿಗೆ ವಿಚಾರಿಸಿದ್ದಾನೆ. ಚಂದನಾ ತನ್ನ ಮಾಂಗಲ್ಯ ಉಳಿಸಿದ ಹುಡುಗಿ. ಆಕೆ ಅನಾಥೆ ಎಂಬ ವಿಷಯವನ್ನು ತಿಳಿಸಿದ್ದಾಳೆ.
ಈ ಹಿಂದೆ ದೇವಸ್ಥಾನದಲ್ಲಿ ಎರಡ್ಮೂರು ಬಾರಿ ವಿಶ್ವನನ್ನು ಜಾನು ನೋಡಿದ್ದಳು. ಆದರೂ ಆತನಿಂದ ಅಂತರ ಕಾಯ್ದುಕೊಂಡಿದ್ದಳು. ವಿಶ್ವನ ಮನೆಯಲ್ಲಿರೋ ವಿಷಯ ಗೊತ್ತಾದ್ಮೇಲೆಯೂ ಆತನ ಮುಂದೆಯೇ ಬರದಂತೆ ದೂರವಾಗಿದ್ದಳು. ಇದೀಗ ನಿಜವಾಗಿಯೂ ವಿಶ್ವ ಮತ್ತು ಜಾನು ಮುಖಾಮುಖಿಯಾಗಿದ್ದಾರೆ. ಮತ್ತೊಂದೆಡೆ ಕಾಲೇಜಿನಲ್ಲಿ ವಿಶ್ವ ಪ್ರೀತಿಸುತ್ತಿದ್ದ ಹುಡುಗಿ ತಾನೇ ಎಂಬ ಸತ್ಯ ಜಾನುಗೆ ಗೊತ್ತಾಗಿದೆ. ಹಾಗಾಗಿ ಏನಾದ್ರೂ ಆಗಲಿ ಇನ್ಮುಂದೆ ನಾನು ಇಲ್ಲಿರೋದು ಉಚಿತವಲ್ಲ ಎಂದು ವಿಶ್ವನ ಮನೆಯಿಂದ ಜಾನು ಹೊರಟಿದ್ದಾಳೆ.
ಇತ್ತ ಜಯಂತ್ ಮಾತ್ರ ತನು ಅಪ್ಲೋಡ್ ಮಾಡಿದ ಜಾನು ಹಾಡಿರುವ ಹಾಡನ್ನು ಪದೇ ಪದೇ ಕೇಳುತ್ತಿದ್ದಾನೆ. ಆದ್ರೆ ವಿಡಿಯೋ ಡಿಲೀಟ್ ಆಗಿದ್ದರಿಂದ ಅಪ್ಲೋಡ್ ಮಾಡಿದ್ದು ಯಾರು ಎಂಬುವುದು ಜಯಂತ್‌ಗೆ ಗೊತ್ತಾಗಿಲ್ಲ. ಆ ಹಾಡು ಹಾಡಿರೋದು ಜಾನು ಅನ್ನೋದು ಜಯಂತ್‌ಗೆ ಖಾತ್ರಿಯಾಗಿದೆ. ವಿಡಿಯೋ ಅಪ್ಲೋಡ್ ಮಾಡಿದ್ಯಾರು ಎಂದು ಜಯಂತ್ ಹುಡುಕುತ್ತಿದ್ದಾನೆ. ವಿಶ್ವ ಮತ್ತು ತನು ನಿಶ್ವಿತಾರ್ಥದ ಆಹ್ವಾನ ಬಂದ್ರೂ ಜಯಂತ್ ಗೈರಾಗಿದ್ದಾನೆ. ಮತ್ತೊಂದೆಡೆ ನಿಶ್ವಿತಾರ್ಥಕ್ಕೆ ವೆಂಕಿ ಮತ್ತು ಚೆಲುವಿಯೇ ಹೂವಿನ ಅಲಂಕಾರ ಮಾಡಿದ್ರೂ ಜಾನು ಅವರ ಮುಂದೆಯೇ ಬಂದಿಲ್ಲ. ಒಟ್ಟಿನಲ್ಲಿ ಜಯಂತ್‌ಗೂ ಮೊದಲು ಜಾನು-ವಿಶ್ವ ಮುಖಾಮುಖಿ ಭೇಟಿಯಾಗಿದ್ದಕ್ಕೆ ವೀಕ್ಷಕರು ಖುಷಿಗೊಂಡಿದ್ದಾರೆ.