2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
Lakshmi Nivasa Update: 'ಲಕ್ಷ್ಮೀನಿವಾಸ' ಧಾರಾವಾಹಿಯ ಮುಖ್ಯಪಾತ್ರಧಾರಿಯಾದ ಶ್ರೀನಿವಾಸನ ಇಬ್ಬರು ಮಕ್ಕಳಿಗೂ ಬರೀ ಕಷ್ಟ, ನೋವು.. ಸಾಲದೆಂಬಂತೆ ವಿಲನ್‌ಗಳದ್ದೇ ಪಾರುಪತ್ಯ. ಹಾಗಾಗಿಯೇ ಸೋಶಿಯಲ್ ಮೀಡಿಯಾದಲ್ಲಿಯೇ ಧಾರಾವಾಹಿ ಪ್ರೊಮೊ ನೋಡಿ ವೀಕ್ಷಕರು ಮುಂದೇನಾಗುತ್ತದೆ ಎಂದು ತಿಳಿದುಕೊಳ್ಳುತ್ತಿದ್ದರು.

ಯಾವಾಗ ಮುಗಿಸ್ತೀರಾ?
ಆರಂಭದಿಂದಲೂ ಉತ್ತಮ ಟಿಆರ್‌ಪಿಯ ಜೊತೆಗೆ ವೀಕ್ಷಕರ ಮನ ಗೆಲ್ಲುತ್ತಾ ಬಂದಿದ್ದ 'ಲಕ್ಷ್ಮೀನಿವಾಸ' ಧಾರಾವಾಹಿಯನ್ನ ನೋಡಲು ಇತ್ತೀಚೆಗೆ ಪ್ರೇಕ್ಷಕರು ಬಹಳ ಬೇಸರ ವ್ಯಕ್ತಪಡಿಸುತ್ತಿದ್ದರು. "ಯಾವಾಗ ಮುಗಿಸ್ತೀರಾ?, ನೋಡುವುದಕ್ಕೆ ಆಗ್ತಿಲ್ಲ" ಎಂದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದರು.
ವಿಲನ್‌ಗಳದ್ದೇ ಪಾರುಪತ್ಯ
ಕಾರಣವಿಷ್ಟೇ.. 'ಲಕ್ಷ್ಮೀನಿವಾಸ' ಧಾರಾವಾಹಿಯ ಮುಖ್ಯಪಾತ್ರಧಾರಿಯಾದ ಶ್ರೀನಿವಾಸನ ಇಬ್ಬರು ಮಕ್ಕಳಿಗೂ ಬರೀ ಕಷ್ಟ, ನೋವು.. ಸಾಲದೆಂಬಂತೆ ವಿಲನ್‌ಗಳದ್ದೇ ಪಾರುಪತ್ಯ. ಹಾಗಾಗಿಯೇ ಸೋಶಿಯಲ್ ಮೀಡಿಯಾದಲ್ಲಿಯೇ ಧಾರಾವಾಹಿ ಪ್ರೊಮೊ ನೋಡಿ ವೀಕ್ಷಕರು ಮುಂದೇನಾಗುತ್ತದೆ ಎಂದು ತಿಳಿದುಕೊಳ್ಳುತ್ತಿದ್ದರು. ಆದರೆ ಇದೀಗ ನಿರ್ದೇಶಕರು ವೀಕ್ಷಕರ ಮನವಿಯನ್ನ ಗಣನೆಗೆ ತೆಗೆದುಕೊಂಡ ಹಾಗಿದೆ.
ಇದು ಮೊದಲನೇ ಸತ್ಯ
ಹೌದು. ಇನ್ನೇನು ಸಿದ್ದು-ಭಾವನಾ ಡೀವೋರ್ಸ್ ಕೊಟ್ಟು ದೂರವಾಗಬೇಕು ಅನ್ನುವಷ್ಟರಲ್ಲಿ ಅಂತೂ ಮನೆಯವರು ಮಾಡಿದ ಕುತಂತ್ರ ಸಿದ್ದು ಅಣ್ಣನಿಗೆ ತಿಳಿದಿದೆ. ಬಹುಶಃ ಇಂದಿನ ಸಂಚಿಕೆಯಲ್ಲಿ ಈ ಸತ್ಯವನ್ನ ಇಂದು ಸಿದ್ದು ಬಳಿ ಹೇಳಲಿದ್ದಾನೆ ಅವರ ಅಣ್ಣ. ಹಾಗಾಗಿ ಮುಂದಿನ ದಿನಗಳಲ್ಲಿ ವೀಕ್ಷಕರು ಅಂತೂ ಸಿದ್ದು-ಭಾವನಾ ಹತ್ತಿರವಾಗುತ್ತಾರೆ ಎಂದು ಖುಷಿಯಲ್ಲಿದ್ದಾರೆ. ಇದು ಮೊದಲನೇ ಸತ್ಯ.
ತಪ್ಪಿದ ಗೋಳು
ಹಾಗೆಯೇ ಇಷ್ಟು ದಿನ ಜಾಹ್ನವಿ ಯಾರೆಂಬ ಸತ್ಯ ವಿಶ್ವನ ಅಪ್ಪ-ಅಮ್ಮನಿಗೆ ತಿಳಿದಿರಲಿಲ್ಲ. ಯಾಕೆಂದರೆ ಆಕೆ ಅವರ ಮನೆಗೆ ಹೋಗುವಾಗ ಚಂದನಾ ಎಂದು ಹೆಸರಿಟ್ಟುಕೊಂಡು ತಾನೊಬ್ಬ ಅನಾಥೆ ಎಂದು ಹೇಳಿಕೊಂಡಿದ್ದಳು. ಇದೀಗ ಆಕೆ ಯಾರೆಂಬ ವಿಚಾರ ವಿಶ್ವನ ಅಮ್ಮನಿಗೆ ತಿಳಿದಿದೆ. ಅಲ್ಲಿಗೆ ಎರಡು ಸತ್ಯವನ್ನ ಬಯಲು ಮಾಡಿ, ವೀಕ್ಷಕರು ಅದೇ ಗೋಳನ್ನ ನೋಡುವುದನ್ನ ತಪ್ಪಿಸಿದ್ದಾರೆ ನಿರ್ದೇಶಕರು.
ಚೆಲುವಿ-ವೆಂಕಿ ಕೈಗೆ ಸಿಕ್ಕ ಭಾವನಾ
ಸದ್ಯ 'ಲಕ್ಷ್ಮೀನಿವಾಸ' ಮಹಾಸಂಚಿಕೆ ಪ್ರಸಾರವಾಗುತ್ತಿದ್ದು, ಭಾವನಾ ಚೆಲುವಿ-ವೆಂಕಿ ಕೈಗೆ ಸಿಕ್ಕಿದ್ದಾಳೆ. ಭಾವನಾಳಿಗೆ ಈಗ ಅವರು ಬಾಡಿಗೆ ಮನೆ ಮಾಡಿಕೊಟ್ಟಿದ್ದಾರೆ. ಹಾಗೆಯೇ ಸ್ವಲ್ಪ ದಿನಗಳ ಕಾಲ ತಾನು ಒಂಟಿಯಾಗಿ ಇರಬೇಕೆಂದು ಬಯಸಿದ್ದಾಳೆ ಭಾವನಾ.
ಸತ್ಯ ಹೇಳಲು ಕಾದು ಕುಳಿತ ಸಿದ್ದು ಅಣ್ಣ
ಇನ್ನು ಸ್ನೇಹಿತರ ಬಳಿ ಬಂದಿರುವ ಸಿದ್ದೇಗೌಡ, ಭಾವನಾಳ ನೆನಪು ಮಾಡಿಕೊಂಡು ಚೆನ್ನಾಗಿ ಕುಡಿದು ಫುಲ್ ಟೈಟ್ ಆಗಿದ್ದಾನೆ. ಈಗ ಸಿದ್ದೇಗೌಡ ಇರುವ ಜಾಗಕ್ಕೆ ಅವರ ಅಣ್ಣ ಬಂದಿದ್ದು, ಸಿದ್ದು ಎಚ್ಚರಗೊಂಡ ಮೇಲೆ ಸತ್ಯ ಹೇಳೋಣ ಎಂದು ಕಾದುಕುಳಿತಿದ್ದಾನೆ. ಹಾಗೆಯೇ ಜಯಂತ್ ತಾತನ ವೇಷ ಧರಿಸಿ ತಮ್ಮ ಮನೆಗೆ ಬಂದಿದ್ದು ಇತ್ತ ವಿಶ್ವನಿಗೆ ತಿಳಿದಿದೆ. ಹಾಗಾಗಿ ಅವನು ಜಯಂತ್‌ಗೆ ನೇರವಾಗಿ ಫೋನ್ ಮಾಡಿ "ನಾನೇ ಜಾನುವನ್ನ ನಿನಗೆ ತೋರಿಸುತ್ತೇನೆ ಬಾ" ಎಂದು ಸವಾಲು ಹಾಕಿದ್ದಾನೆ. ಆದ್ದರಿಂದ ಮುಂದಿನ ಸಂಚಿಕೆಯಲ್ಲಿ 'ಲಕ್ಷ್ಮೀನಿವಾಸ'ದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಎದುರಾಗುವುದು ಖಚಿತ ಎಂದು ವೀಕ್ಷಕರು ಕಾಮೆಂಟ್ ಮಾಡಿರುವುದನ್ನ ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.