- Home
- Entertainment
- TV Talk
- ಕರ್ಣನ ಮನೆಯಲ್ಲಿ ಹೊಸ ಸಂಚಲನ! ಅನಾವರಣ ಆಗುತ್ತಾ ಬಚ್ಚಿಟ್ಟ ಗುಟ್ಟು? ಇಬ್ಬರಿಂದಲೂ ನಿರ್ಧಾರ
ಕರ್ಣನ ಮನೆಯಲ್ಲಿ ಹೊಸ ಸಂಚಲನ! ಅನಾವರಣ ಆಗುತ್ತಾ ಬಚ್ಚಿಟ್ಟ ಗುಟ್ಟು? ಇಬ್ಬರಿಂದಲೂ ನಿರ್ಧಾರ
ತೇಜಸ್-ನಿತ್ಯಾ ಮದುವೆ ನಿಂತಿದ್ದರಿಂದ ಕರ್ಣನ ಎಲ್ಲಾ ಯೋಜನೆಗಳು ವಿಫಲವಾಗಿವೆ. ಮನೆಯಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ನಿತ್ಯಾ ತಾನು ಗರ್ಭಿಣಿ ಎಂಬ ಸತ್ಯವನ್ನು ಹೇಳಿದ್ದು, ಇದು ಅಜ್ಜಿಯರಿಗೆ ಸಂತೋಷ ತಂದಿದೆ. ಆದರೆ, ಮದುವೆಯ ಸುಳ್ಳು ಮತ್ತು ಮಗುವಿನ ತಂದೆಯ ಬಗ್ಗೆ ಸತ್ಯ ಇನ್ನೂ ಬಹಿರಂಗವಾಗಿಲ್ಲ.

ಎಲ್ಲಾ ಪ್ಲಾನ್ ಫೇಲ್
ನಿತ್ಯಾ-ತೇಜಸ್ ಮದುವೆ ಆಗುತ್ತೆ ಎಂಬ ದೃಢವಾದ ನಂಬಿಕೆ ಮೇಲೆ ಕರ್ಣ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದನು. ಅವರಿಬ್ಬರ ಮದುವೆ ವಿಷಯದ ಜೊತೆ ನಿಧಿ ಜೊತೆಗಿನ ಪ್ರೀತಿಯ ಗುಟ್ಟನ್ನು ಹಂಚಿಕೊಳ್ಳಲು ಕರ್ಣ ಮಾಡಿಕೊಂಡಿದ್ದ ಎಲ್ಲಾ ಪ್ಲಾನ್ ತಲೆಕೆಳಗಾಗಿದೆ. ಮದುವೆ ನಿಂತ ಹಿನ್ನೆಲೆ ಮುಂದೇನು ಮಾಡೋಣ ಎಂದು ನಿಧಿ-ಕರ್ಣ-ನಿತ್ಯಾ ದಿಕ್ಕು ತೋಚದಂತಾಗಿದ್ದಾರೆ.
ಮದುವೆಯೇ ಸುಳ್ಳು
ಕರ್ಣ-ನಿತ್ಯಾ ಮದುವೆಯೇ ಸುಳ್ಳು ಎಂಬ ವಿಷಯವನ್ನು ಹೇಳಲು ಇಬ್ಬರು ಸಿದ್ಧವಾಗಿದ್ದಾರೆ. ಈ ನಡುವೆ ತೇಜಸ್‌ನಿಂದ ನಿತ್ಯಾ ಗರ್ಭಿಣಿಯಾಗಿರುವ ವಿಷಯವನ್ನು ಸಹ ಅಜ್ಜಿಯಂದಿರಿಂದ ಕರ್ಣ ಮುಚ್ಚಿಟ್ಟಿದ್ದಾನೆ. ಇತ್ತ ಸಕಲೇಶಪುರದಲ್ಲಿ ಏನಾಗಿದೆ ಎಂದು ತಿಳಿದು ತಂಗಿ ಮತ್ತು ಮಗನೊಂದಿಗೆ ರಮೇಶ್ ಖುಷಿಯಾಗಿ ಎಣ್ಣೆ ಹೊಡೆಯುತ್ತಿದ್ದಾನೆ.
ಸತ್ಯ ಹೇಳುವ ನಿರ್ಧಾರ
ಶುಕ್ರವಾರದ ಸಂಚಿಕೆಯಲ್ಲಿ ಸುಳ್ಳು ಮದುವೆ ವಿಷಯವನ್ನು ಮನೆಯಲ್ಲಿ ಹೇಳುವ ನಿರ್ಧಾರವನ್ನು ನಿತ್ಯಾ ಮಾಡಿದ್ದಾಳೆ. ಈ ನಿರ್ಧಾರಕ್ಕೆ ಕರ್ಣ ಸಹ ಒಪ್ಪಿಗೆ ಸೂಚಿಸಿದ್ದಾನೆ. ಆನಂತರ ರಮೇಶ್ ಕರೆಗೆ ಉತ್ತರಿಸಿರುವ ಕರ್ಣ ಊರಿಗೆ ಬರುತ್ತಿರುವ ವಿಷಯ ಹೇಳಿದ್ದಾನೆ.
ಅಜ್ಜಿಯರು ಖುಷಿ
ಕರ್ಣ, ನಿಧಿ ಮತ್ತು ನಿತ್ಯಾ ಹೋಗುವಷ್ಟರಲ್ಲಿ ದೊಡ್ಡ ಪಾರ್ಟಿ ಆಯೋಜಿಸಲಾಗಿದೆ. ಈ ಪಾರ್ಟಿಯಲ್ಲಿ ತಾನು ಗರ್ಭಿಣಿ ಎಂಬ ಸತ್ಯವನ್ನು ನಿತ್ಯಾ ಹೇಳಿಕೊಂಡಿದ್ದು, ಇಬ್ಬರು ಅಜ್ಜಿಯರು ಖುಷಿಯಾಗಿದ್ದಾರೆ. ಈ ಮೊದಲೇ ಅಜ್ಜಿಯರು ಇದೇ ಗುಡ್‌ನ್ಯೂಸ್ ಆಗಿರಬಹುದು ಎಂದು ಅಂದಾಜಿಸಿದ್ದರು.
ಇದನ್ನೂ ಓದಿ: Karna Serial Update: ಕರ್ಣ, ನಿತ್ಯಾಗೆ ಮಹಾ ಕುತಂತ್ರಿಗಳ ಸತ್ಯ ಗೊತ್ತಾಯ್ತು; ಇನ್ನಿದೆ ಅಸಲಿ ಹಬ್ಬ
ಮುಂದೆ ಏನಾಗುತ್ತೆ?
ಗರ್ಭಿಣಿ ಎಂಬ ಅರ್ಧ ಸತ್ಯವನ್ನು ಮಾತ್ರ ನಿತ್ಯಾ ಹೇಳ್ತಾಳಾ ಅಥವಾ ಮದುವೆ ಸೇರಿದಂತೆ ಎಲ್ಲಾ ಸತ್ಯವನ್ನು ಹೇಳಿ ಕರ್ಣನ ಜೀವನದಿಂದ ದೂರವಾಗ್ತಾಳಾ ಅಥವಾ ಅಕ್ಕ ನಿತ್ಯಾಗಾಗಿ ಕರ್ಣನನ್ನು ಬಿಟ್ಟುಕೊಟ್ಟು ನಿಧಿ ತ್ಯಾಗಮಯಿ ಆಗ್ತಾಳಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಇದನ್ನೂ ಓದಿ: Karna Serial: ಆ ಒಂದು ಸತ್ಯ ತೇಜಸ್ಗೆ ಹೇಳಲು ಬಾಯಿ ಬಿದ್ದೋಗಿತ್ತಾ? ಕರ್ಣನ ಮೇಲೆ ಕಿಡಿಕಾರ್ತಿರೋ ವೀಕ್ಷಕರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

