- Home
- Entertainment
- TV Talk
- Karna Serial Update: ಕರ್ಣ-ನಿಧಿ ಮತ್ತೆ ದೂರ… ಪ್ರೇಮಿಗಳನ್ನು ಒಂದು ಮಾಡದ ಸೀರಿಯಲ್ ತಂಡಕ್ಕೆ ವೀಕ್ಷಕರ ಹಿಡಿಶಾಪ
Karna Serial Update: ಕರ್ಣ-ನಿಧಿ ಮತ್ತೆ ದೂರ… ಪ್ರೇಮಿಗಳನ್ನು ಒಂದು ಮಾಡದ ಸೀರಿಯಲ್ ತಂಡಕ್ಕೆ ವೀಕ್ಷಕರ ಹಿಡಿಶಾಪ
Karna Serial: ಕರ್ಣ ಧಾರಾವಾಹಿಯಲ್ಲಿ ಕರ್ಣ ಮತ್ತು ನಿಧಿಯ ಜೋಡಿಯನ್ನು ಒಂದು ಮಾಡುವಂತೆ ತೋರಿಸಿ, ಇನ್ನೇನು ಎಲ್ಲಾ ಸರಿ ಆಗುತ್ತೆ, ಮುದ್ದಾದ ಜೋಡಿ ಒಂದಾಗುತ್ತಾರೆ ಎಂದು ತೋರಿಸುತ್ತಾ, ಮತ್ತೆ ದೂರ ಮಾಡುತ್ತಿರುವ ಧಾರಾವಾಹಿ ತಂಡದ ಹಾಗೂ ನಿರ್ದೇಶಕರ ವಿರುದ್ಧ ವೀಕ್ಷಕರು ಕಿಡಿ ಕಾರಿದ್ದಾರೆ.

ಕರ್ಣ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರ್ಣ ಧಾರಾವಾಹಿಯಲ್ಲಿ ಪ್ರತಿ ದಿನವೂ ಒಂದೊಂದು ರೋಚಕ ತಿರುವಿನೊಂದಿಗೆ ಪ್ರಸಾರವಾಗುತ್ತಿದೆ. ಆದರೆ ಧಾರಾವಾಹಿ ತಂಡ ಪದೇ ಪದೇ ಮಾಡುತ್ತಿರುವ ಮೋಸದಿಂದ ಸೀರಿಯಲ್ ಅಭಿಮಾನಿಗಳು ಗರಂ ಆಗಿದ್ದಾರೆ.
ಏನಾಗ್ತಿದೆ ಧಾರಾವಾಹಿಯಲ್ಲಿ?
ಕರ್ಣ ಧಾರಾವಾಹಿ ಇದೀಗ ರೋಚಕ ಹಂತಕ್ಕೆ ಬಂದು ನಿಂತಿದೆ. ಕರ್ಣ, ನಿಧಿ ಮತ್ತು ನಿತ್ಯಾ ಸಂಪೂರ್ಣವಾಗಿ ಪ್ಲಾನ್ ಮಾಡಿ, ಸಕಲೇಷ್ಪುರಕ್ಕೆ ಹೋಗಿ ಅಲ್ಲಿ ನಿತ್ಯಾ ಮತ್ತು ತೇಜಸ್ ಮದುವೆ ಮಾಡುವ ಯೋಜನೆ ಹಾಕಿಕೊಂಡಿದ್ದರು. ಜೊತೆಗೆ ಕರ್ಣ-ನಿಧಿ ತಮ್ಮ ಪ್ರೀತಿಯನ್ನು ಮನೆಮಂದಿ ಮುಂದೆ ಹೇಳಿಕೊಳ್ಳುವ ಪ್ಲ್ಯಾನ್ ಕೂಡ ರೆಡಿಯಾಗಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ.
ನಿತ್ಯಾಗೆ ತಾಳಿ ಕಟ್ಟದ ತೇಜಸ್
ಕರ್ಣನ ಮೇಲೆ ಒಂಥರಾ ಹೊಟ್ಟೆ ಕಿಚ್ಚು ಹೊಂದಿದ್ದ ತೇಜಸ್, ಇದೀಗ ಇನ್ನೇನು ನಿತ್ಯಾಗೆ ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಮದುವೆಯಿಂದ ಹಿಂದೆ ಸರಿದಿದ್ದಾನೆ. ನಿತ್ಯಾ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಯಾರದ್ದು ಎಂಬ ಸತ್ಯ ತಿಳಿಯುವ ಸಲುವಾಗಿ ತೇಜಸ್, ವೈದ್ಯರನ್ನು ಕಾಣುವುದಾಗಿ ಹೇಳಿದ್ದಾರೆ. ಇದರಿಂದ ನಿತ್ಯಾ-ತೇಜಸ್ ಮದುವೆ ನಿಂತಿದೆ.
ಪ್ರೇಮ ಪಕ್ಷಿಗಳಂತೆ ಹಾರಾಡಿತ ಕರ್ಣ ನಿಧಿ
ಇನ್ನು ತೇಜಸ್ ಮತ್ತು ನಿತ್ಯಾ ಮದುವೆ ನಡೆದ ಮೇಲೆ , ತಮ್ಮಿಬ್ಬರ ಮದುವೆಗೆ ಪ್ರೀತಿಗೆ ಯಾರ ತಡೆಯೂ ಇರೋದಿಲ್ಲ, ಇನ್ನು ಮನೆಯವರ ಮುಂದೆ ತಮ್ಮ ಪ್ರೀತಿ ಹೇಳಿಕೊಳ್ಳಬಹುದು ಎಂದು ಪ್ರೇಮ-ಪಕ್ಷಿಗಳಂತೆ ಕರ್ಣ ಮತ್ತು ನಿಧಿ ಹಾರಾಡಿದ್ದೇ ಬಂತು. ತೇಜಸ್ ಮಾಡಿದ ಎಡವಟ್ಟಿನಿಂದ ಮತ್ತೆ ಕರ್ಣ ಮತ್ತು ನಿಧಿ ಮದುವೆ ಕಥೆಗೆ ಅಲ್ಪ ವಿರಾಮ ಸಿಕ್ಕಿದೆ.
ವೀಕ್ಷಕರಿಗ್ಯಾಕೆ ಕೋಪ?
ಕರ್ಣ ಮತ್ತು ನಿಧಿಯನ್ನು ಮತ್ತೆ ದೂರ ಮಾಡುತ್ತಿರುವುದೇ ವೀಕ್ಷಕರ ಕೋಪಕ್ಕೆ ಕಾರಣವಾಗಿದೆ. ಈ ಹಿಂದೆಯೂ ನಿತ್ಯಾ ಮದುವೆ ಸಮಯದಲ್ಲಿ ಮುಂದೆ ಕರ್ಣ ಮತ್ತು ನಿಧಿ ಮದುವೆ ಆಗಿಯೇ ಆಗುತ್ತೆ ಎಂದು ವೀಕ್ಷಕರು ಕನಸು ಕಂಡಿದ್ದರು, ಇಬ್ಬರ ಲವ್ ಪ್ರಪೋಸಲ್ ಕೂಡ ಅದ್ಧೂರಿಯಾಗಿಯೇ ನಡೆದಿತ್ತು. ಆದರೆ ಕೊನೆಗೆ ತೇಜಸ್ ಜೊತೆ ನಿತ್ಯಾ ಮದುವೆ ನಡೆಯಲೇ ಇಲ್ಲ.
ಮತ್ತೆ ಮತ್ತೆ ಕರ್ಣ-ನಿಧಿ ದೂರ
ಇದೀಗ ಮತ್ತೆ ಕರ್ಣ-ನಿಧಿ ಒಂದಾಗುತ್ತಿದ್ದಾರೆ ಎಂದು ವೀಕ್ಷಕರು ಖುಷಿ ಪಡುತ್ತಿರುವ ಹೊತ್ತಿಗೆ, ರಮೇಶ್ ಮತ್ತೆ ಕಥೆಗೆ ಟ್ವಿಸ್ಟ್ ಕೊಟ್ಟು ಮತ್ತೆ ಅವರಿಬ್ಬರನ್ನು ದೂರ ಮಾಡಿದ್ದಾರೆ. ಹಾಗಾಗಿ ವೀಕ್ಷಕರು ಕೋಪಗೊಂಡಿದ್ದು, ಪದೇ ಪದೇ ಇದನ್ನೆ ಮಾಡಿ, ಕರ್ಣ-ನಿಧಿಗೆ ಅನ್ಯಾಯ ಮಾಡುತ್ತಿದ್ದೀರಿ ಎಂದು ತಮ್ಮ ನೋವನ್ನು ಹೊರಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

