Karna Serial ರಮೇಶ್ ಮುಂದೆ ಕರ್ಣನ ಜನ್ಮ ರಹಸ್ಯ ಬಯಲಾಗುವ ಮುನ್ನವೇ ನಡೆದ ದುರಂತ!
ತನ್ನ ಪ್ರೇಯಸಿ ಸೀತಾಳ ಮಗನೇ ಕರ್ಣ ಎಂಬ ಸತ್ಯ ತಿಳಿಯುವ ಮುನ್ನವೇ, ರಮೇಶ್ ಆತನ ಪ್ರಾಣಕ್ಕೆ ಕುತ್ತು ತಂದಿದ್ದಾನೆ. ಅಪಘಾತದ ಬಳಿಕ ಕರ್ಣನೇ ತನ್ನ ಮಗನೆಂಬ ಸತ್ಯ ರಮೇಶ್‌ಗೆ ತಿಳಿದಿದ್ದು, ತಂಗಿ ತಾರಾಳ ಸಂಚು ಬಯಲಾಗುವುದೇ ಎಂಬ ಕುತೂಹಲ ಮೂಡಿದೆ.

ಕರ್ಣನ ಜನ್ಮ ರಹಸ್ಯ
ರಮೇಶ್‌ನ ಮುಂದೆ ಕರ್ಣನ ಜನ್ಮ ರಹಸ್ಯ ಬಯಲಾಗಿದೆ. ತನ್ನ ಪ್ರೇಯಸಿ ಸೀತಾ ಮಗನೇ ಈ ಕರ್ಣ ಎಂಬ ಸತ್ಯ ಗೊತ್ತಾಗುವ ಮುನ್ನವೇ ದೊಡ್ಡ ಅತಾಚುರ್ಯ ನಡೆದು ಹೋಗಿದೆ. ನಿಧಿ ಮನೆಯಲ್ಲಿ ಸಿಕ್ಕ ಕ್ಯಾಮೆರಾದಲ್ಲಿ ಫೋಟೋ ಹಿಡಿದು ಕರ್ಣ ಮಾರಿಗುಡಿ ತಲುಪಿದ್ದಾನೆ. ಸೀತೆಯ ಹುಡುಕಾಟಕ್ಕಾಗಿ ಕರ್ಣನಿಗೆ ಮಾರಿಗುಡಿಯ ಶಿವಣ್ಣ ಸಾಥ್ ನೀಡಿದ್ದಾನೆ.
ಕರ್ಣನ ಪ್ರಾಣಕ್ಕೆ ಕುತ್ತು
ಹೌದು, ಸೋದರಿ ತಾರಾ ಮಾತು ಕೇಳಿ ಕರ್ಣನ ಪ್ರಾಣ ತೆಗೆಯಲು ರಮೇಶ್ ಮುಂದಾಗಿದ್ದಾನೆ. ಮಾರಿಗುಡಿಯಿಂದ ಹಿಂದಿರುಗವ ಸಮಯದಲ್ಲಿ ಕರ್ಣನಿಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಇದರಿಂದ ಕರ್ಣನ ಪ್ರಾಣ ಅಪಾಯದಲ್ಲಿ ಸಿಲುಕಿದೆ. ಈ ಅಪಘಾತದ ಬಳಿಕ ಸ್ಥಳಕ್ಕೆ ಬಂದ ರಮೇಶ್, ಕರ್ಣನ ಸ್ಥಿತಿ ಕಂಡು ನಗೆ ಬೀರಿದ್ದಾನೆ.
ಸೀತಾ ರಹಸ್ಯ
ಮಾರಿಗುಡಿಯಲ್ಲಿ ಸೀತಾ ಮನೆ ವಿಳಾಸ ಸಿಗುತ್ತೆ. ಆದ್ರೆ ಮನೆಗೆ ಬೀಗ ಹಾಕಿದ್ದರಿಂದ ಕಾರಣ ಕರ್ಣ ಹಿಂದಿರುಗುತ್ತಾನೆ. ಅಷ್ಟರಲ್ಲಿ ಮಗನಿಗೆ ಆಕ್ಸಿಡೆಂಟ್ ಮಾಡಿಸಿದ್ದಾನೆ. ಕರ್ಣನ ಫೋನ್ ತೆಗೆದುಕೊಂಡು ಹೋಗುತ್ತಿರುವಾಗಲೇ ಶಿವಣ್ಣ ಕಾಲ್ ಮಾಡ್ತಾನೆ. ಕಾಲ್ ರಿಸೀವ್ ಮಾಡಿದಾಗ ಸೀತಾ ಎಂಬಾಕೆಯನ್ನು ಹುಡುಕಿಕೊಂಡ ಹೋದ ವಿಷಯ ರಮೇಶ್‌ಗೆ ಗೊತ್ತಾಗುತ್ತೆ.
ಕರ್ಣನೇ ತನ್ನ ಮಗ
ಕೂಡಲೇ ಶಿವಣ್ಣನ ಬಳಿ ಹೋದ ರಮೇಶ್‌ಗೆ ಶಿವಣ್ಣನಿಂದ ಕರ್ಣನೇ ತನ್ನ ಮಗ ಎಂಬ ಸತ್ಯ ತಿಳಿದಿದೆ. ಸತ್ಯ ತಿಳಿಯುವಷ್ಟರಲ್ಲಿ ಅಪಘಾತ ನಡೆದು ಹೋಗಿತ್ತು. ಅಸಲಿ ವಿಷಯ ತಿಳಿದ ಬಳಿಕ ರಮೇಶ್ ಮುಂದೇನು ಮಾಡ್ತಾನೆ? ಈ ಜನ್ಮ ರಹಸ್ಯದ ಹಿಂದೆ ತಂಗಿ ತಾರಾಳ ಸಂಚು ಬಯಲಾಗುತ್ತಾ ಎಂಬುವುದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಭುವನೇಶ್ವರಿ
ಮತ್ತೊಂದೆಡೆ ಕರ್ಣನ ಹಿಂದೆಯೇ ಬಿದ್ದಿರೋ ಭುವನೇಶ್ವರಿಗೂ ಸತ್ಯ ಗೊತ್ತಿಲ್ಲ. ಎಲ್ಲಾ ವಿಷಯ ತಿಳಿದಿರೋ ತಾರಾ ಮಾಡ್ತಿರೋ ಸಂಚು ಭುವನೇಶ್ವರಿ ಮುಂದೆಯೇ ಬರುತ್ತಾ? ತಾರಾಳ ದ್ವೇಷ ಇಲ್ಲಿಗೆ ನಿಲ್ಲುತ್ತಾ? ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

