- Home
- Entertainment
- TV Talk
- ಪದೇ ಪದೇ ಗರ್ಭಪಾತ; ಪತ್ನಿ ಹಾಸಿಗೆ ಹಿಡಿದರೂ ಪರವಾಗಿಲ್ಲ, ಉಳಿಯಲಿ; ಪ್ರಾರ್ಥಿಸಿದ್ದ ಮಿಮಿಕ್ರಿ ಗೋಪಿ!
ಪದೇ ಪದೇ ಗರ್ಭಪಾತ; ಪತ್ನಿ ಹಾಸಿಗೆ ಹಿಡಿದರೂ ಪರವಾಗಿಲ್ಲ, ಉಳಿಯಲಿ; ಪ್ರಾರ್ಥಿಸಿದ್ದ ಮಿಮಿಕ್ರಿ ಗೋಪಿ!
Mimicry Gopi: ಮಿಮಿಕ್ರಿ ಗೋಪಿ ಅವರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದವರು. ಬಡತನದಲ್ಲಿ ಬೆಳೆದ ಮಿಮಿಕ್ರಿ ಗೋಪಿ ಅವರು ರಾಜಕಾರಣಿಗಳು, ಸೆಲೆಬ್ರಿಟಿಗಳ ಮಿಮಿಕ್ರಿ ಮಾಡಿ ಫೇಮಸ್ ಆಗಿದ್ದಾರೆ. ಆದರೆ ವೈಯಕ್ತಿಕ ಜೀವನದಲ್ಲಿ ಅನುಭವಿಸಿದ ಕಷ್ಟದ ಬಗ್ಗೆ ಅವರು ಜೋಡಿ ನಂ 1 ಶೋನಲ್ಲಿ ಮಾತನಾಡಿದ್ದಾರೆ.

ಮಗ ಹುಟ್ಟಿ ಒಂದು ವರ್ಷ
ಮೊದಲ ಬಾರಿಗೆ ಪ್ರಗ್ನೆಂಟ್ ಆದಾಗ ಮೂರು ತಿಂಗಳಿಗೆ ಗರ್ಭಪಾತ ಆಯ್ತು. ಎರಡನೇ ಬಾರಿಗೆ ಪ್ರಗ್ನೆಂಟ್ ಆದಾಗ ಪತ್ನಿಗೆ ತಲೆನೋವು. ಡಾಕ್ಟರ್ ಕೂಡ ಪತ್ನಿ ಉಳಿಯಬೇಕಾ? ಅಥವಾ ಮಗು ಉಳಿಯಬೇಕಾ ಎಂದರು. ನನ್ನ ಅತ್ತೆ ಕೂಡ ಮಗಳು ಉಳಿಯಬೇಕು ಎಂದರು. ಆಮೇಲೆ ಮಗ ಹುಟ್ಟಿ ಒಂದು ವರ್ಷ ಆದಬಳಿಕ ನನ್ನ ತಾಯಿ ತೀರಿಕೊಂಡರು ಎಂದು ಮಿಮಿಕ್ರಿ ಗೋಪಿ ಹೇಳಿದ್ದಾರೆ.
ಮಗು ಟ್ಯೂಬ್‌ನಲ್ಲಿ ಬೆಳೀತು
ಆಮೇಲೆ ಮೂರು ಬಾರಿ ಗರ್ಭಪಾತ ಆಯ್ತು. ನಮಗೆ ಮತ್ತೊಂದು ಮಗು ಬೇಕು ಎನ್ನುವ ನಿರೀಕ್ಷೆ ಇತ್ತು. ಐವಿಎಫ್ ಮೂಲಕ ಮತ್ತೆ ಗರ್ಭ ಧರಿಸಿದರೂ ಕೂಡ, ಮಗು ಟ್ಯೂಬ್‌ನಲ್ಲಿ ಬೆಳೆಯಿತು. ಪತ್ನಿಗೆ ಬಿಪಿ ಹೆಚ್ಚಿತ್ತು, ಆಗ ಆಪರೇಶನ್ ಮಾಡಿಸಬೇಕಿತ್ತು. ನನ್ನ ಪತ್ನಿ ಉಳಿದುಕೊಂಡರೆ ಸಾಕು, ಮಗು ಆಸೆಯೇ ಬೇಡ ಎಂದು ಫಿಕ್ಸ್ ಆದೆವು ಎಂದು ಮಿಮಿಕ್ರಿ ಗೋಪಿ ಹೇಳಿದ್ದಾರೆ.
ಪ್ರಾರ್ಥಿಸಿದೆ, ಪತ್ನಿ ಉಳಿದಳು
ಎಲ್ಲ ದೇವರಿಗೆ ಬೇಡಿಕೊಂಡೆ, ಪತ್ನಿ ಹಾಸಿಗೆ ಹಿಡಿದಿದ್ದರೂ ಕೂಡ ಪರವಾಗಿಲ್ಲ, ಅವಳು ಜೀವಂತವಾಗಿರಬೇಕು ಎಂದು ಪ್ರಾರ್ಥನೆ ಮಾಡಿಕೊಂಡೆ. ಅದರಂತೆ ನನ್ನ ಪತ್ನಿ ಉಳಿದುಕೊಂಡಳು ಎಂದು ಮಿಮಿಕ್ರಿ ಗೋಪಿ ಅವರು ಹೇಳಿದ್ದಾರೆ.
ನನ್ನ ಗಂಡ ಮುಂದಿನ ಜನ್ಮಕ್ಕೂ ಸಿಗಲಿ
ನನಗೆ ಮುಂದಿನ ಜನ್ಮದಲ್ಲಿ ಇದೇ ಗಂಡ ಸಿಗಲಿ, ಬೇಗ ಸಿಗಲಿ, ಬೇಗ ಮದುವೆ ಆಗಲಿ ಎಂದು ಮಿಮಿಕ್ರಿ ಗೋಪಿ ಅವರ ಪತ್ನಿ ಉಷಾ ಅವರು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

