ಅಮೃತಧಾರೆ ರೋಚಕ ಘಟ್ಟದ ನಡುವೆಯೇ ಸೀರಿಯಲ್ ವೀಕ್ಷಕರಿಗೆ ಗುಡ್‌ನ್ಯೂಸ್ ನೀಡಿದ ವಾಹಿನಿ
ಅಮೃತಧಾರೆ ಧಾರಾವಾಹಿಯು ರೋಚಕ ಘಟ್ಟ ತಲುಪಿದ್ದು, ವೀಕ್ಷಕರಿಗೆ ಝೀ ಕನ್ನಡ ವಾಹಿನಿ ಸಿಹಿಸುದ್ದಿ ನೀಡಿದೆ. ಮಿಂಚು ಹುಡುಕಾಟ, ಗೌತಮ್ ಬಂಧನ ಮತ್ತು ಜೈದೇವ್‌ನ ಕುತಂತ್ರಗಳ ನಡುವೆ ಕಥೆಯು ಕುತೂಹಲಕಾರಿ ತಿರುವು ಪಡೆದುಕೊಂಡಿದೆ.

ಜೀ ಕನ್ನಡದ ಅಮೃತಧಾರೆ
ಅಂತಿಮ ಹಂತದಲ್ಲಿರುವ ಅಮೃತಧಾರೆ ಸೀರಿಯಲ್ ಸಾಲು ಸಾಲು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ಬೆನ್ನಲ್ಲೇ ಅಮೃತಧಾರೆ ಸೀರಿಯಲ್ ವೀಕ್ಷಕರಿಗೆ ಝೀ ಕನ್ನಡ ವಾಹಿನಿ ಸಂತಸದ ಸುದ್ದಿಯೊಂದನ್ನು ನೀಡಿದೆ. ಇದರಿಂದ ಅಮೃತಧಾರೆಯ ಕಟ್ಟಾ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೋಚಕ ತಿರುವು ಪಡೆದುಕೊಳ್ಳುತ್ತಿರುವ ಧಾರಾವಾಹಿ
ಮನೆಯಿಂದ ದೂರ ಹೋಗಿರುವ 'ಮಿಂಚು' ಹುಡುಕಾಟಕ್ಕಾಗಿ ಭೂಮಿಕಾ ಗಲ್ಲಿಗಲ್ಲಿ ತಿರುಗಾಡುತ್ತಿದ್ದಾಳೆ. ಇತ್ತ ಪೊಲೀಸರ ಕಸ್ಟಡಿಯಲ್ಲಿರುವ ಗೌತಮ್ ಏನು ಮಾಡಲಾಗದೇ ಅಸಹಾಯಕನಾಗಿದ್ದಾನೆ. ಗೆಳೆಯನ್ನು ಜೈಲಿನಿಂದ ಹೊರಗೆ ಕರೆದುಕೊಂಡು ಬರಲು ಆನಂದ್ ಎಲ್ಲಾ ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಿದ್ದಾನೆ. ಹೀಗಾಗಿ ಮುಂದೆ ಏನು ಆಗುತ್ತೆ ಎಂದು ತಿಳಿದುಕೊಳ್ಳಲು ವೀಕ್ಷಕರು ಕಾತುರರಾಗಿದ್ದಾರೆ.
ಏನದು ಗುಡ್‌ನ್ಯೂಸ್
ರೋಚಕ ತಿರುವುಗಳನ್ನು ನೋಡಲು ಕಾಯುತ್ತಿರುವ ವೀಕ್ಷಕರಿಗೆ ಇದು ಸಿಹಿ ಸುದ್ದಿಯಾಗಿದೆ. ಸೋಮವಾರ ಮತ್ತು ಮಂಗಳವಾರ ಎರಡು ದಿನ ಅಮೃತಧಾರೆ ಸೀರಿಯಲ್ ಯಾವುದೇ ಜಾಹೀರಾತು ಇಲ್ಲದೇ ಪ್ರಸಾರವಾಗಲಿದೆ. ಸೀರಿಯಲ್‌ನ 30 ನಿಮಿಷದಲ್ಲಿ ಯಾವುದೇ ಜಾಹೀರಾತುಗಳಿರಲ್ಲ ಎಂದು ವಾಹಿನಿಯಿಂದ ಅಧಿಕೃತ ಮಾಹಿತಿ ಪ್ರಕಟವಾಗಿದೆ.
ಜೈದೇವ್ ಅಟ್ಟಹಾಸಕ್ಕೆ ಕೊನೆ ಯಾವಾಗ?
ದಿಯಾ ಬೇಬಿಯನ್ನು ಕೊಂದಿರುವ ಜೈದೇವ್ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದಾನೆ. ಇದೀಗ ಮನೆಯಿಂದ ಹೊರಗೆ ಹೋಗಿರುವ ಮಿಂಚು ಸಹ ಕೆಡಿ ಜೈದೇವ್ ವಶದಲ್ಲಿದ್ದಾನೆ. ಇತ್ತ ಮಿಂಚು ತಮ್ಮ ಮಗಳೆಂದು ಇಬ್ಬರು ದಿವಾನ್ ಮನೆಗೆ ಬಂದಿದ್ದಾರೆ. ಮಿಂಚು ತಮ್ಮ ಸ್ವಂತ ಮಗಳು ಎಂಬ ವಿಷಯ ತಿಳಿಯದ ಗೌತಮ್ ಜೈಲು ಸೇರಿದ್ದಾನೆ.
ಮಿಂಚು ಜನ್ಮರಹಸ್ಯ ಮತ್ತು ಜೈದೇವ್
ಮತ್ತೊಂದೆಡೆ ಶಕುನಿ ಮಾಮಾ ಲಕ್ಷ್ಮೀಕಾಂತ್‌ನನ್ನು ಜೈದೇವ್ ಬಂಧಿಸಿಟ್ಟಿದ್ದಾನೆ. ಅರಸನಕೋಟೆ ಅಖಿಲಾಂಡೇಶ್ವರಿ ಸಹ ಮತ್ತೆ ಗೌತಮ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಒಂದು ವೇಳೆ ಮಿಂಚು ಜನ್ಮರಹಸ್ಯ ಬಯಲಾಗಿ, ಜೈದೇವ್ ಪಾತ್ರ ಕೊನೆಯಾದ್ರೆ ಅಮೃತಧಾರೆ ಸೀರಿಯಲ್ ಕೊನೆಯಾಗೋದು ಬಹುತೇಕ ಖಚಿತವಾಗಲಿದೆ. ಮಹಿಮಾ-ಜೀವಾಗೆ ಮಿಂಚುಳನ್ನು ದತ್ತು ನೀಡ್ತಾರಾ ಎಂಬ ಪ್ರಶ್ನೆಗೂ ಉತ್ತರ ಸಿಗಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

