MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Boss ಮನೆಗೆ ನಿಮ್ಮನ್ನು ಸೆಲೆಕ್ಟ್​ ಮಾಡಲು ಬರ್ತಿದ್ದಾರೆ ಈ ಹ್ಯಾಂಡ್​ಸಮ್​: ಅಗ್ನಿ ಪರೀಕ್ಷೆಯ ತೀರ್ಪುಗಾರರು ಇವರೇ

Bigg Boss ಮನೆಗೆ ನಿಮ್ಮನ್ನು ಸೆಲೆಕ್ಟ್​ ಮಾಡಲು ಬರ್ತಿದ್ದಾರೆ ಈ ಹ್ಯಾಂಡ್​ಸಮ್​: ಅಗ್ನಿ ಪರೀಕ್ಷೆಯ ತೀರ್ಪುಗಾರರು ಇವರೇ

ಬಿಗ್​ಬಾಸ್​ ಸೀಸನ್ 13 ರಲ್ಲಿ ಜನಸಾಮಾನ್ಯರಿಗೆ ಅವಕಾಶ ನೀಡಲಾಗಿದ್ದು, 'ಬಿಗ್​ಬಾಸ್​ ಅಗ್ನಿಪರೀಕ್ಷೆ' ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಅಗ್ನಿಪರೀಕ್ಷೆಗೆ ತೀರ್ಪುಗಾರರಾಗಿ ವಿನಯ್ ಗೌಡ ಆಯ್ಕೆಯಾಗಿದ್ದು, ಪ್ರೇಕ್ಷಕರಿಗೆ ಲೈವ್ ವೀಕ್ಷಣೆಗೆ ಲಾಲ್‌ಬಾಗ್‌ನಲ್ಲಿ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದೆ.

2 Min read
Author : Suchethana D
Published : Aug 06 2026, 06:24 PM IST
Share this Photo Gallery
  • FB
  • TW
  • Linkdin
  • Whatsapp
17
ಜನಸಾಮಾನ್ಯರಿಗೆ ಅವಕಾಶ
Image Credit : Colors Kannada Instagram

ಜನಸಾಮಾನ್ಯರಿಗೆ ಅವಕಾಶ

ಬಿಗ್​ಬಾಸ್​​ 13 (Bigg Boss 13) ಹಲವು ವಿಶೇಷತೆಗಳಿಂದ ಕೂಡಿದ್ದು, ಅದರಲ್ಲಿ ಒಂದು ಸಾಮಾನ್ಯ ಜನರು ಅದರಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು. ಆದರೆ ಈ ಬಾರಿ ಕನ್ನಡ ಸೇರಿದಂತೆ ಕೆಲವು ಭಾಷೆಗಳ ಬಿಗ್​ಬಾಸ್​ನಲ್ಲಿ ಈ ಅವಕಾಶವನ್ನು ಕಲ್ಪಿಸಲಾಗಿದೆ. ಇದಾಗಲೇ ಸಾಮಾನ್ಯ ಜನರು ಹೇಗೆ ಇದರಲ್ಲಿ ಭಾಗವಹಿಸಬೇಕು ಎನ್ನುವ ಬಗ್ಗೆ ಸೂಚನೆ ನೀಡಲಾಗಿತ್ತು. ಮೂರು ನಿಮಿಷಗಳ ವಿಡಿಯೋಮಾಡಿ, ತಮ್ಮನ್ನು ಏಕೆ ಆಯ್ಕೆ ಮಾಡಬೇಕು ಎನ್ನುವುದೂ ಸೇರಿದಂತೆ ಆ ವಿಡಿಯೋದಲ್ಲಿ ಏನೇನು ಇರಬೇಕು ಎನ್ನೋದನ್ನು ಕೇಳಲಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಸೆಲೆಕ್ಟ್​ ಆದವರು ಯಾರು
Image Credit : Colors Kannada Instagram

ಸೆಲೆಕ್ಟ್​ ಆದವರು ಯಾರು

ಅದರಂತೆಯೇ ಸಹಸ್ರಾರು ಮಂದಿ ತಮ್ಮ ಕನಸನ್ನು ಸಾಕಾರಗೊಳಿಸುವ ಸಲುವಾಗಿ ವಿಡಿಯೋ ಮಾಡಿ ಆಸೆಯಿಂದ ಕಾಯುತ್ತಿದ್ದಾರೆ. ಇವರ ಪೈಕಿ ಯಾರು ಸೆಲೆಕ್ಟ್​ ಆಗಿದ್ದಾರೆ, ಇದರಲ್ಲಿ ಫೈನಲ್​ ಆಗಿ ಹೋಗುವವರು ಯಾರು ಎಂಬ ಬಗ್ಗೆ ಕುತೂಹಲ ಇದ್ದು, ಇದಕ್ಕೆ ಬಿಗ್​ಬಾಸ್​​ ಅಗ್ನಿಪರೀಕ್ಷೆ (Bigg Boss Agni Pareekshe) ಎಂದು ಹೆಸರು ಇಡಲಾಗಿದೆ.

Related Articles

Related image1
ಆ ಯುವಕನ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ಮತ್ತೊಂದು ಬಿಗ್​ ಸರ್​ಪ್ರೈಸ್​ ಕೊಟ್ಟ Bigg Boss ಸ್ಪಂದನಾ
Related image2
Bigg Boss 13ಗೆ ಸೆಲೆಕ್ಟ್​ ಆದ ಜನ ಸಾಮಾನ್ಯರು ಯಾರು? ಅಗ್ನಿಪರೀಕ್ಷೆಯಲ್ಲಿ ಗೆದ್ದವರು ಯಾರು
37
ಕೆಲವರನ್ನು ಜಡ್ಜ್​ ಆಗಿ ನೇಮಕ
Image Credit : Colors Kannada Instagram

ಕೆಲವರನ್ನು ಜಡ್ಜ್​ ಆಗಿ ನೇಮಕ

ಈ ಅಗ್ನಿಪರೀಕ್ಷೆಗೆ ಜಡ್ಜ್​ ಆಗಿ ಕೆಲವರನ್ನು ನೇಮಕ ಮಾಡಲಾಗಿದೆ. ಬಿಗ್​ಬಾಸ್​​ ಸ್ಪರ್ಧಿಗಳಂತೆಯೇ ಅಗ್ನಿಪರೀಕ್ಷೆ ನಡೆಸಿಕೊಡುವವರ ಬಗ್ಗೆಯೂ ಇದಾಗಲೇ ಸಾಕಷ್ಟು ಚರ್ಚೆಯಾಗುತ್ತಿದೆ. ಅವರು, ಇವರು ಎಂದೆಲ್ಲಾ ಚರ್ಚೆಯಾಗುತ್ತಿದ್ದು, ಅವರ ಪೈಕಿ ಮೊದಲ ಜಡ್ಜ್​ ಫೋಟೋ ಅನ್ನು ಕಲರ್ಸ್​ ವಾಹಿನಿ ಶೇರ್​ ಮಾಡಿದೆ.

47
ಈ ಹ್ಯಾಂಡ್​ಸಮ್​ ಯಾರು?
Image Credit : Colors Kannada Instagram

ಈ ಹ್ಯಾಂಡ್​ಸಮ್​ ಯಾರು?

ಅಗ್ನಿಪರೀಕ್ಷೆಗೆ ready ಆಗಿರೋ ಸ್ಪರ್ಧಿಗಳನ್ನು ಜಡ್ಜ್ ಮಾಡೋ ಈ handsome ಯಾರು ಎಂದು ವಾಹಿನಿ ಪ್ರಶ್ನಿಸಿದೆ. ಈ ಚಿತ್ರವನ್ನು ನೋಡಿದರೆ ಅವರು ಬಿಗ್​ಬಾಸ್​​ ಖ್ಯಾತಿಯ ವಿನಯ್​ ಗೌಡ (Vinay Gowda) ಎನ್ನೋದು ಗೊತ್ತಾಗುತ್ತಿದೆ. ಇದಕ್ಕೆ ಹಲವರು ಕಮೆಂಟ್​ ಮಾಡಿದ್ದು, ಇವರ ಹೆಸರನ್ನು ತಿಳಿಸಿದ್ದಾರೆ.

57
ಬಿಗ್ ಬಾಸ್‌ ಲೈವ್ ನೋಡಲು ಏನು ಮಾಡಬೇಕು?
Image Credit : Colors Kannada Instagram

ಬಿಗ್ ಬಾಸ್‌ ಲೈವ್ ನೋಡಲು ಏನು ಮಾಡಬೇಕು?

ಇನ್ನು ಬಿಗ್​ಬಾಸ್​ ಅಗ್ನಿಪರೀಕ್ಷೆಯ ಲೈವ್​ ನೋಡಲು ಹಲವರಿಗೆ ಅವಕಾಶ ಕಲ್ಪಿಸಲಾಗಿದ್ದು, ಅದಕ್ಕೂ ಒಂದು ಸ್ಪರ್ಧೆ ಏರ್ಪಡಿಸಲಾಗಿದೆ. ಈ ಅವಕಾಶಕ್ಕಾಗಿ ಬೆಂಗಳೂರಿನ ಲಾಲ್‌ಬಾಗ್ ಫ್ಲವರ್ ಶೋನಲ್ಲಿ ಭಾಗವಹಿಸಬೇಕು. ಆಗಸ್ಟ್ 6ರಿಂದ ಆರಂಭವಾಗಿರುವ ಫ್ಲವರ್ ಶೋನಲ್ಲಿ ಬಿಗ್ ಬಾಸ್‌ ತಂಡ ವಿಶೇಷವಾದ ‘ಬಿಗ್ ಬಾಸ್‌ ಅಗ್ನಿಪರೀಕ್ಷೆ ಎಕ್ಸ್‌ಪೀರಿಯನ್ಸ್ ಜೋನ್’ ಸಿದ್ಧಪಡಿಸಿದೆ. ಈ ಜೋನ್‌ನಲ್ಲಿ ಬಿಗ್ ಬಾಸ್‌ನ ಐಕಾನಿಕ್ ಚೇರ್ ಜೊತೆಗೆ ವಿಶೇಷ ಸೆಲ್ಫಿ ಜೋನ್ ಕೂಡ ಇರಲಿದೆ. ಇಲ್ಲಿಗೆ ಭೇಟಿ ನೀಡುವವರು ತಮ್ಮ ನೆಚ್ಚಿನ ಬಿಗ್ ಬಾಸ್‌ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಬಹುದು.

67
ಒಂದು ಸೆಲ್ಫಿ.. ಬಿಗ್ ಬಾಸ್‌ ವೀಕೆಂಡ್‌ಗೆ ಎಂಟ್ರಿ
Image Credit : Social Media

ಒಂದು ಸೆಲ್ಫಿ.. ಬಿಗ್ ಬಾಸ್‌ ವೀಕೆಂಡ್‌ಗೆ ಎಂಟ್ರಿ

ಹೌದು, ಈ ಅವಕಾಶ ಪಡೆಯಲು ನೀವು ಎಕ್ಸ್‌ಪೀರಿಯನ್ಸ್ ಜೋನ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳಬೇಕು. ನಂತರ ಅದನ್ನು ನಿಮ್ಮ Instagram ಖಾತೆಯಲ್ಲಿ ಪೋಸ್ಟ್ ಮಾಡಬೇಕು. ಪೋಸ್ಟ್ ಮಾಡುವಾಗ Colors Kannada ಅನ್ನು ಟ್ಯಾಗ್ ಮಾಡುವುದು ಕಡ್ಡಾಯ. ಇದರ ಜೊತೆಗೆ #BBKAGNIPARIKSHE ಹ್ಯಾಷ್‌ಟ್ಯಾಗ್ ಬಳಸಬೇಕು. ಮತ್ತೊಂದು ಪ್ರಮುಖ ನಿಯಮವೆಂದರೆ, ನಿಮ್ಮ Instagram ಪೋಸ್ಟ್ Public ಆಗಿರಬೇಕು.

77
ತಂಡದಿಂದ ಆಯ್ಕೆ
Image Credit : Social Media

ತಂಡದಿಂದ ಆಯ್ಕೆ

ಈ ರೀತಿ ನಿಯಮಗಳನ್ನು ಪಾಲಿಸುವವರ ಪೈಕಿ ಕೆಲ ಅದೃಷ್ಟಶಾಲಿಗಳನ್ನು ಬಿಗ್ ಬಾಸ್‌ ತಂಡ ಆಯ್ಕೆ ಮಾಡಲಿದೆ. ಆಯ್ಕೆಯಾದವರಿಗೆ ಸುದೀಪ್ ಅವರು ಸ್ಪರ್ಧಿಗಳನ್ನು ಬಿಗ್ ಬಾಸ್‌ ಮನೆಗೆ ಕಳುಹಿಸುವ ವೀಕೆಂಡ್ ಎಪಿಸೋಡ್ ಅನ್ನು ನೇರವಾಗಿ ನೋಡುವ ಅವಕಾಶ ಸಿಗಲಿದೆ. ಅಷ್ಟೇ ಅಲ್ಲ, ಬಿಗ್ ಬಾಸ್‌ಗೆ ಸಂಬಂಧಿಸಿದ ವಿಶೇಷ ಬಹುಮಾನಗಳನ್ನು ಗೆಲ್ಲುವ ಅವಕಾಶವೂ ಇರಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಕಿಚ್ಚ ಸುದೀಪ್
ರಿಯಾಲಿಟಿ ಶೋ
Latest Videos
Recommended Stories
Recommended image1
ಆ ಯುವಕನ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ಮತ್ತೊಂದು ಬಿಗ್​ ಸರ್​ಪ್ರೈಸ್​ ಕೊಟ್ಟ Bigg Boss ಸ್ಪಂದನಾ
Recommended image2
BBK 13: ನೀವು ಬಿಗ್ ಬಾಸ್‌ಗೆ ಹೋಗ್ಬೇಕಾ? ಲಾಲ್‌ಬಾಗ್ ಫ್ಲವರ್ ಶೋನಲ್ಲಿ ಸಿಕ್ಕಿದೆ ಭರ್ಜರಿ ಅವಕಾಶ!
Recommended image3
ಬಿಗ್ ಬಾಸ್ ಪ್ರೋಮೋ ಶೂಟಿಂಗ್‌ನಲ್ಲಿ ಧೂಳೆಬ್ಬಿಸಿದ ಕಿಚ್ಚ ಸುದೀಪ್ ಸ್ಟೈಲಿಶ್ ಲುಕ್,ಶೋ ಸೀಕ್ರೆಟ್ ಬಯಲು
Related Stories
Recommended image1
ಆ ಯುವಕನ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ಮತ್ತೊಂದು ಬಿಗ್​ ಸರ್​ಪ್ರೈಸ್​ ಕೊಟ್ಟ Bigg Boss ಸ್ಪಂದನಾ
Recommended image2
Bigg Boss 13ಗೆ ಸೆಲೆಕ್ಟ್​ ಆದ ಜನ ಸಾಮಾನ್ಯರು ಯಾರು? ಅಗ್ನಿಪರೀಕ್ಷೆಯಲ್ಲಿ ಗೆದ್ದವರು ಯಾರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved