Amruthadhaare: ಬಯಲಾಯ್ತು ತಾಯಿ-ಮಗನ ರಹಸ್ಯ ಆಟ! ನಿಟ್ಟುಸಿರು ಬಿಟ್ಟಿದ್ಯಾಕೆ ವೀಕ್ಷಕರು
ಅಮೃತಧಾರೆ ಸೀರಿಯಲ್‌ನಲ್ಲಿ, ಜೈಲುಪಾಲಾಗಿದ್ದ ಜೈದೇವ್‌ಗೆ ಆತನ ತಾಯಿ ಶಕುಂತಲಾ ರಹಸ್ಯವಾಗಿ ಜಾಮೀನು ಕೊಡಿಸಿದ್ದಾಳೆ. ಮನೆಯಲ್ಲಿ ಒಳ್ಳೆಯವಳಂತೆ ನಟಿಸುತ್ತಾ, ಮಗನ ಬಳಿ ತನ್ನ ನಾಟಕವನ್ನು ಬಯಲು ಮಾಡಿದ್ದಾಳೆ. ಇತ್ತ, ಜೈದೇವ್‌ಗೆ ಶಿಕ್ಷೆ ಕೊಡಿಸಲು ಭೂಮಿಕಾಳ ಸೋದರ ಜೀವ ಆತನ ಹಿಂದೆ ಬಿದ್ದಿದ್ದಾನೆ.

ಅಮೃತಧಾರೆ ಸೀರಿಯಲ್‌ನಲ್ಲಿ ರೋಚಕ ತಿರುವು
ಅಮೃತಧಾರೆ ಸೀರಿಯಲ್‌ನಲ್ಲಿ ಕೊನೆಗೂ ರೋಚಕ ತಿರುವು ಪಡೆದುಕೊಂಡಿದ್ದು, ಜೈಲುಪಾಲಾಗಿದ್ದ ಕೆಡಿ ಜೈದೇವ್‌ನನ್ನು ಶಕುಂತಲಾ ಜಾಮೀನು ನೀಡಿ ಹೊರಗೆ ಕರೆದುಕೊಂಡು ಬಂದಿದ್ದಾಳೆ. ತನಗೆ ತಾಯಿಯ ಸಾಥ್ ಕೊಟ್ಟಿರೋದನ್ನು ನೋಡಿ ಜೈದೇವ್ ಫುಲ್ ಖುಷಿಯಾಗಿ ಸ್ವ್ಯಾಗ್‌ನಿಂದ ಸಿಗರೇಟ್‌ಗೆ ಬೆಂಕಿ ಹಚ್ಚಿದ್ದಾನೆ.
ಶಕುಂತಲಾಳ ಮುಂದಿನ ಪ್ಲಾನ್
ಮನೆಯಲ್ಲಿ ಎಲ್ಲರ ಮುಂದೆ ಒಳ್ಳೆಯವಳಂತೆ ನಟಿಸುತ್ತಿರೋ ಶಕುಂತಲಾಳ ಮುಂದಿನ ಪ್ಲಾನ್ ಏನಾಗಿರಬಹುದು ಎಂಬುದರ ಬಗ್ಗೆ ಕುತೂಹಲ ಮೂಡಿದೆ. ಜೈದೇವ್‌ನನ್ನು ನೋಡಲು ಹೋಗೋಣ ಬಾ ಎಂದು ಸೊಸೆ ಭೂಮಿಕಾಳನ್ನು ಕರೆದಿದ್ದಳು. ಆದ್ರೆ ಭೂಮಿಕಾ ತನಿಖೆ ನಡೆಯುತ್ತಿರುವಾಗ ನಾವು ಮಧ್ಯೆ ಹೋಗಬಾರದು ಎಂದು ಅಲ್ಲಿಂದ ಎದ್ದು ಒಳಗೆ ಹೋಗುತ್ತಾಳೆ.
ಲಕ್ಷ್ಮೀಕಾಂತ್‌ಗೆ ಸಣ್ಣದಾದ ಅನುಮಾನ
ಇದೆಲ್ಲವನ್ನು ಪಕ್ಕದಲ್ಲಿಯೇ ಕುಳಿತು ನೋಡುತ್ತಿದ್ದ ಲಕ್ಷ್ಮೀಕಾಂತ್‌ಗೆ ಸಣ್ಣದಾದ ಅನುಮಾನ ಬಂದಂತೆ ಕಾಣಿಸುತ್ತಿದೆ. ಈ ಹಿಂದೆಯೂ ಜೈದೇವ್‌ನನ್ನು ಪೊಲೀಸರಿಗೆ ಹಿಡಿದುಕೊಟ್ಟ ಬಗ್ಗೆಯೂ ಲಕ್ಷ್ಮೀಕಾಂತ್ ಅಸಮಾಧಾನ ವ್ಯಕ್ತಪಡಿಸಿದ್ದನು. ಇದೀಗ ಜೈದೇವ್‌ನನ್ನು ನೋಡಲು ಹೋಗುವ ಬಗ್ಗೆ ಶಕುಂತಲಾ ಹೇಳಿದ ಮಾತು ಕೇಳಿಸಿಕೊಂಡ ಲಕ್ಷ್ಮೀಕಾಂತ್ ಮುಂದೇನು ಮಾಡ್ತಾನೆ ಎಂಬುದರ ಬಗ್ಗೆಯೂ ಕುತೂಹಲ ಮೂಡಿದೆ.
ಕೆಡಿ ಮಗನಿಗೆ ಬೇಲ್
ಇದೀಗ ಮೂರನೇ ವ್ಯಕ್ತಿಯ ಮೂಲಕ ಮಗನಿಗೆ ಬೇಲ್ ಕೊಡಿಸುವಲ್ಲಿ ಶಕುಂತಲಾ ಸಕ್ಸಸ್ ಆಗಿದ್ದಾಳೆ. ಹಾಗೆಯೇ ಮನೆಯಿಂದ ಹೊರಗೆ ಜೈದೇವ್‌ನನ್ನು ಭೇಟಿಯಾಗಿದ್ದಾಳೆ. ಹಾಗೆಯೇ ತಾನು ಮಾಡುತ್ತಿರೋದೆಲ್ಲವೂ ನಾಟಕ ಎಂಬುದನ್ನು ಮಗನ ಮುಂದೆ ಶಕುಂತಲಾ ಹೇಳಿಕೊಂಡಿದ್ದಾಳೆ. ಇದರಿಂದ ಇಷ್ಟುದಿನ ಟ್ವಿಸ್ಟ್ ಆಗಿ ಕಾಯುತ್ತಿದ್ದ ಸೀರಿಯಲ್ ವೀಕ್ಷಕರಿಗೆ ಖುಷಿ ಒಂದು ಕಡೆಯಾದ್ರೆ, ಸೀರಿಯಲ್ ಮುಗಿಯಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: Amruthadhaare Serial: ಇನ್ಫೋಸಿಸ್ ನಾರಾಯಣ್ ಮೂರ್ತಿ ರೀತಿ ಪತ್ನಿ ಬರಹಕ್ಕೆ ಬೆಂಬಲ ಕೊಟ್ಟ ಗೌತಮ್ ದಿವಾನ್
ಜೈದೇವ್ ಹಿಂದೆ ಬಿದ್ದಿರೋ ಜೀವ
ಇನ್ನು ಭೂಮಿಕಾ ಸೋದರ ಜೀವ, ಜೈದೇವ್ ಹಿಂದೆಯೇ ಬಿದ್ದಿದ್ದಾನೆ. ತಮಗೆಲ್ಲಾ ತೊಂದರೆ ನೀಡಿದ ಜೈದೇವ್‌ನಿಗೆ ಶಿಕ್ಷೆ ಕೊಡಬೇಕೆಂದು ಪೊಲೀಸ್ ಠಾಣೆಗೆ ತೆರಳಿ ಕೆಡಿಯ ಮಾಹಿತಿ ಪಡೆದುಕೊಂಡಿದ್ದಾನೆ. ಹಾಗೆಯೇ ಜೈದೇವ್‌ಗೆ ಜಾಮೀನು ಸಿಕ್ಕರೆ ಮಾಹಿತಿ ನೀಡುವಂತೆ ಅಲ್ಲಿಯ ಪೊಲೀಸ್ ಅಧಿಕಾರಿಗೆ ಕೈಬಿಸಿ ಮಾಡಿ ಬಂದಿದ್ದಾನೆ. ಜೈದೇವ್‌ಗೆ ಬೇಲ್ ಕೊಡಿಸಿರೋದು ಶಕುಂತಲಾ ಎಂಬುವುದು ಜೀವ ಕಂಡು ಹಿಡಿಯುತ್ತಾನಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಇದನ್ನೂ ಓದಿ: Veena Nagda: 7 ರೂಪಾಯಿಗೆ ಮೆಹೆಂದಿ ಹಾಕ್ತಿದ್ದ ಹುಡುಗಿ, ಇಂದು ಬಾಲಿವುಡ್ ಸ್ಟಾರ್‌ಗಳೇ ಕಾಯ್ತಾರೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

