- Home
- Entertainment
- TV Talk
- Amruthadhaare Serial: ಇನ್ಫೋಸಿಸ್ ನಾರಾಯಣ್ ಮೂರ್ತಿ ರೀತಿ ಪತ್ನಿ ಬರಹಕ್ಕೆ ಬೆಂಬಲ ಕೊಟ್ಟ ಗೌತಮ್ ದಿವಾನ್
Amruthadhaare Serial: ಇನ್ಫೋಸಿಸ್ ನಾರಾಯಣ್ ಮೂರ್ತಿ ರೀತಿ ಪತ್ನಿ ಬರಹಕ್ಕೆ ಬೆಂಬಲ ಕೊಟ್ಟ ಗೌತಮ್ ದಿವಾನ್
Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್, ಭೂಮಿಕಾ ಕುರಿತಂತೆ ಕಥೆ ಸಾಗುತ್ತಿದೆ. ಈಗ ಇಬ್ಬರು ಮಕ್ಕಳ ಜೊತೆಗೆ ಈ ದಂಪತಿ ಖುಷಿಯಿಂದ ಜೀವನ ಮಾಡುತ್ತಿದೆ. ಆದರೆ ಮಕ್ಕಳು ಮಾಡಿದ ತರಲೆ ನಿಜಕ್ಕೂ ಭೂಮಿಕಾಗೆ ದೊಡ್ಡ ಸರ್ಪ್ರೈಸ್ ನೀಡಲಿದೆ.

ಜೋಗಿ ಅಭಿಮಾನಿ ಭೂಮಿಕಾ!
ಹೌದು, ಭೂಮಿಕಾಗೆ ಪುಸ್ತಕ ಅಂದರೆ ತುಂಬ ಇಷ್ಟ. ಅವಳು ಸದಾ ಲೇಖಕ ಜೋಗಿ ಪುಸ್ತಕಗಳನ್ನು ಓದುತ್ತಿದ್ದಳು. ಈ ಹಿಂದೆ ಗೌತಮ್ ದಿವಾನ್, ಭೂಮಿಕಾಗೆ ಜೋಗಿಯನ್ನು ಮೀಟ್ ಮಾಡಿಸಿದ್ದನು. ಇದಂತೂ ಅವಳಿಗೆ ದೊಡ್ಡ ಖುಷಿ ಕೊಟ್ಟಿತ್ತು.
ಡೈರಿ ಬರೆಯುವ ಹವ್ಯಾಸ
ಭೂಮಿಕಾಗೆ ಡೈರಿ ಬರೆಯುವ ಹವ್ಯಾಸ ಇತ್ತು. ಮೊದಲಿನಿಂದಲೂ ಅವಳು ಡೈರಿ ಬರೆಯುತ್ತಿದ್ದಳು. ಗೌತಮ್ ಮೇಲೆ ಲವ್ ಆದಾಗಲೂ ಕೂಡ, ಬೇಸರ ಆದಾಗಲೂ ಕೂಡ ಅವಳು ಡೈರಿಯಲ್ಲಿ ಬರೆಯುತ್ತಿದ್ದಳು. ಒಟ್ಟಿನಲ್ಲಿ ಅವಳ ಮನಸ್ಸಿನಲ್ಲಿ ಇರೋದನ್ನು ಶೇರ್ ಮಾಡಿಕೊಳ್ಳಲು ಡೈರಿ ಉತ್ತಮ ಸ್ನೇಹಿತ.
ಈಗ ಡೈರಿ ಸಿಕ್ಕಿದೆ
ಈಗ ಮಕ್ಕಳು ಮಾಡಿದ ತರಲೆಯಿಂದ ಭೂಮಿಕಾ ಡೈರಿ, ಗೌತಮ್ ಕೈಗೆ ಸಿಕ್ಕಿದೆ. ಬೇರೆಯವರ ಡೈರಿ ಓದೋದು ತಪ್ಪು ಎಂದು ಗೊತ್ತಿದ್ದರೂ ಕೂಡ, ಅವನು ಈಗ ಪತ್ನಿ ಡೈರಿಯನ್ನು ಓದಿದ್ದಾನೆ. ಆಗ ಡೈರಿಯಲ್ಲಿರುವ ಕವನಗಳು, ವಿಷಯಗಳು ಅವನನ್ನು ಇಂಪ್ರೆಸ್ ಮಾಡಿವೆ. ಹೀಗಾಗಿ ಇದನ್ನು ಬುಕ್ ಮಾಡಿಸಿ, ಎಲ್ಲರಿಗೂ ತಲುಪಲಿ ಎಂದು ಅವನು ಆಸೆ ಪಡುತ್ತಿದ್ದಾರೆ. ಭೂಮಿಕಾಗೆ ಇದು ದೊಡ್ಡ ಸರ್ಪ್ರೈಸ್ ಆಗಿರಲಿದೆ ಎಂದು ಗೌತಮ್ ಅಂದುಕೊಂಡಿದ್ದಾನೆ.
ನಾರಾಯಣ್ ಮೂರ್ತಿ ರೀತಿ ಬೆಂಬ
ಇನ್‌ಫೋಸಿಸ್ ಸಂಸ್ಥಾಪಕ ನಾರಾಯಣ್ ಮೂರ್ತಿ ಅವರು ಪತ್ನಿ ಸುಧಾ ಮೂರ್ತಿಗೆ ಸದಾ ಬೆಂಬಲ ಕೊಡುತ್ತಿದ್ದಾರೆ. ಸುಧಾ ಮೂರ್ತಿ ಅವರಂತೂ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಈಗ ಈ ಸೀರಿಯಲ್‌ನಲ್ಲಿ ಗೌತಮ್ ದಿವಾನ್, ಪತ್ನಿ ಅಕ್ಷರಕ್ಕೆ, ಬರಹಕ್ಕೆ ಬೆಂಬಲ ಕೊಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಈ ಸರ್ಪ್ರೈಸ್ ನೋಡಿ ಭೂಮಿಕಾ ಏನು ಹೇಳ್ತಾಳೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

