- Home
- Entertainment
- TV Talk
- ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಯಾರೇ ನೀ ಮೋಹಿನಿ' ಸೀರಿಯಲ್ ನಟಿ ಭಾರತಿ: ಕ್ಯೂಟ್ ಫೋಟೋಸ್ ಇಲ್ಲಿವೆ
ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಯಾರೇ ನೀ ಮೋಹಿನಿ' ಸೀರಿಯಲ್ ನಟಿ ಭಾರತಿ: ಕ್ಯೂಟ್ ಫೋಟೋಸ್ ಇಲ್ಲಿವೆ
'ಯಾರೇ ನೀ ಮೋಹಿನಿ' ಮತ್ತು 'ಶಾಂತಂಪಾಪಂ' ಸೀರಿಯಲ್ ಖ್ಯಾತಿಯ ನಟಿ ಭಾರತಿ ಹೆಗಡೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಉತ್ತರ ಕನ್ನಡದ ಸಿದ್ದಾಪುರದವರಾದ ಇವರು, ಭರತನಾಟ್ಯ ಕಲಾವಿದೆ ಮತ್ತು ಶಾಸ್ತ್ರೀಯ ಸಂಗೀತಗಾರ್ತಿಯೂ ಆಗಿದ್ದು, ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ.

ಯಾರೇ ನೀ ಮೋಹಿನಿ ನಟಿ
ಶಾಂತಂಪಾಪಂ, ಯಾರೇ ನೀ ಮೋಹಿನಿ, ನಯನತಾರಾ ಸೇರಿದಂತೆ ವಿವಿಧ ಸೀರಿಯಲ್ಗಳಲ್ಲಿ ನಟಿಸಿ ಮನೆಮಾತಾಗಿರುವ ನಟಿ ಭಾರತಿ ಹೆಗಡೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ನಿನ್ನೆ ಇವರ ಮದುವೆ ಅದ್ಧೂರಿಯಾಗಿ ನಡೆದಿದೆ.

ಫೋಟೋಗಳು ವೈರಲ್
ನಟಿಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಭಾರಿ ವೈರಲ್ ಆಗುತ್ತಿವೆ. ಸದ್ಯ ನಟಿ, ಮದುವೆಯಾಗಿರುವ ಹುಡುಗ ಎಲ್ಲಿಯವರು, ಯಾರು, ಹಿನ್ನೆಲೆ ಏನು ಎನ್ನುವ ಬಗ್ಗೆ ರಿವೀಲ್ ಆಗಿಲ್ಲ.
ಸಿದ್ದಾಪುರದ ನಟಿ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭಾರತಿ ಅವರದ್ದು ಬಹುಮುಖ ಪ್ರತಿಭೆ. ಭರತನಾಟ್ಯ ಕಲಾವಿದೆಯೂ ಹೌದು. ಭರತನಾಟ್ಯದಲ್ಲಿ ವಿದ್ವತ್ ಮಾಡಿರುವ ನಟಿ, ಶಾಸ್ತ್ರೀಯ ಸಂಗೀತಗಾರ್ತಿಯೂ ಹೌದು. ಇವರಿಗೆ ಹೆಚ್ಚು ಹೆಸರು ತಂದುಕೊಟ್ಟದ್ದು ಯಾರೇ ನೀ ಮೋಹಿನಿ ಸೀರಿಯಲ್.
ಸಿನಿಮಾದಲ್ಲಿಯೂ ನಟನೆ
ಬೆಳ್ಳಿಪರದೆಯ ಮೇಲೆಯೂ ಮಿಂಚಿರೋ ಭಾರತ ಅವರು 'ತಮಟೆ' ಸೇರಿದಂತೆ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ''ಸಮಾಜ''ಎಂಬ ಕಿರು ಚಿತ್ರದಲ್ಲಿ ನಟಿಸಿರುವ ಭಾರತಿಗೆ ಬೆಸ್ಟ್ ಆಕ್ಟರ್ ಅವಾರ್ಡ್ ಕೂಡ ಬಂದಿದೆ.
ನಟಿಯ ಕುರಿತು
ಇನ್ನು ನಟಿಯ ಕುರಿತು ಹೇಳುವುದಾದರೆ, ಸಿದ್ದಾಪುರದಲ್ಲಿಯೇ ಪಿಯುಸಿವರೆಗೂ ಓದಿರುವ ನಟಿ, ನಂತರ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ಅಮಣ್ಣಿ ಮತ್ತು ಕ್ರೈಸ್ಟ್ ಕಾಲೇಜಿನಲ್ಲಿ ಎಂ ಎಸ್ ಡಬ್ಲ್ಯೂ ಮಾಡಿದರು. ಕಾರ್ಮಿಕ ಇಲಾಖೆಯಲ್ಲಿ ಕೂಡ ಕೆಲ ಕಾಲ ಕೆಲಸ ಮಾಡಿದರು.
ಶಾಂತಂಪಾಪಂನಿಂದ ಪಯಣ
ಮೊದಲಿಗೆ ''ಶಾಂತಂಪಾಪಂ'' ಸೀರಿಯಲ್ಗೆ ಆಯ್ಕೆಯಾದರು. ಅಲ್ಲಿ ನಟಿ ಹಾಗೂ ನಿರ್ದೇಶಕಿ ಶ್ರುತಿ ನಾಯ್ಡು ಅವರು ಭಾರತಿ ಅವರನ್ನು ಗುರುತಿಸಿ, ''ಯಾರೆ ನೀ ಮೋಹಿನಿ'' ಸೀರಿಯಲ್ನಲ್ಲಿ ಅವಕಾಶ ಕೊಟ್ಟರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

