ಮಗುವಾದ ಬಳಿಕ ಎಷ್ಟು ದಿನಕ್ಕೆ ದಂಪತಿ ಪುನಃ ಸೇರಬಹುದು? ಸ್ತ್ರೀರೋಗ ತಜ್ಞರು ಹೇಳುವುದೇನು
ಹೆರಿಗೆಯ ನಂತರ ಮಹಿಳೆಯ ದೇಹವು ಸಹಜ ಸ್ಥಿತಿಗೆ ಮರಳಲು ಸಮಯ ತೆಗೆದುಕೊಳ್ಳುತ್ತದೆ. ಕನಿಷ್ಠ 40 ದಿನಗಳವರೆಗೆ ರಕ್ತಸ್ರಾವ ಮತ್ತು ಹೊಲಿಗೆಗಳಿರುವುದರಿಂದ ದೈಹಿಕ ಸಂಪರ್ಕ ಅಪಾಯಕಾರಿ. ಪತ್ನಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಪರಿಗಣಿಸಿ ಮುಂದುವರಿಯುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ದೇಹದಲ್ಲಿ ಬದಲಾವಣೆ
ಒಂದು ಮಗು ಹುಟ್ಟಿದ ಬಳಿಕ, ಮಹಿಳೆಯರ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಆಗುತ್ತವೆ. ಒಬ್ಬೊಬ್ಬ ಹೆಣ್ಣಿನದ್ದು ಒಂದೊಂದು ದೇಹ ಪ್ರಕೃತಿ ಇರುವ ಕಾರಣದಿಂದ, ಮಗುವಾದ ಮೇಲೆ ಸಹಜ ಸ್ಥಿತಿಗೆ ಬರಲು ಕೆಲವರಿಗೆ ಕೆಲವು ದಿನಗಳು ಸಾಕಾದರೆ, ಮತ್ತೆ ಕೆಲವರಿಗೆ ಒಂದಷ್ಟು ತಿಂಗಳು, ಮತ್ತೆ ಕೆಲವರಿಗೆ ವರ್ಷಗಟ್ಟಲೆ ಬೇಕಾಗಬಹುದು.

ಆತುರಕ್ಕೆ ಬೀಳುವ ಗಂಡಸರು
ಒಂದಿಷ್ಟು ತಿಂಗಳು ಅಥವಾ ಒಂದು ವರ್ಷ ಪತ್ನಿಯ ಜೊತೆ ಸೇರಲು ಆಗದೇ ಹಲವು ಗಂಡಂದಿರು ಕೂಡ ಸಂಕಟ ಪಡುವುದು ಇದ್ದೇ ಇದೆ. ಇದೇ ಕಾರಣಕ್ಕೆ ಮಗುವಾದ ಬಳಿಕ ಪತ್ನಿಯ ಜೊತೆ ಸೇರಲು ಅವರು ಬಯಸುವುದು ಸಹಜ. ಆದರೆ ಹೀಗೆ ದಿಢೀರನೆ ಕಾಮಾತುರಕ್ಕೆ ಬಿದ್ದರೆ ಅದು ಹೆಣ್ಣಿನ ಮೇಲೆ ದೀರ್ಘ ಕಾಲದ ಪರಿಣಾಮ ಬೀರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಹೆರಿಗೆ ಆದ ಮೇಲೆ ಒಂದಿಷ್ಟು ದಿನಗಳವರೆಗೆ ದೈಹಿಕ ಸಂಪರ್ಕ ನಡೆಸಬಾರದು. ಆದರೆ ಇದರ ಬಗ್ಗೆ
ಸ್ತ್ರೀರೋಗ ತಜ್ಞರ ಮಾತು
ಓಪನ್ ಆಗಿ ಮಾತನಾಡುವವರು ಕಡಿಮೆಯೇ. ದಂಪತಿ ನಡುವೆ ಈ ವಿಷಯದ ಬಗ್ಗೆ ಚರ್ಚೆಯಾದರೂ, ಇದು ಹಲವರಿಗೆ ಇನ್ನೂ ಪ್ರಶ್ನೆಯಾಗಿಯೇ ಉಳಿಯುತ್ತದೆ. ಅದಕ್ಕೆ ಈಗ ಉತ್ತರ ನೀಡಿದ್ದಾರೆ ಖ್ಯಾತ ಸ್ತ್ರೀರೋಗ ತಜ್ಞರು.
ಎಷ್ಟು ದಿನಗಳ ನಂತರ ಸೇರಬಹುದು?
Delivery ಆಗಿ ಎಷ್ಟು ದಿನಗಳ ನಂತರ ಗಂಡ ಹೆಂಡತಿ ಸೇರಬಹುದು ಎನ್ನುವ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಹೆರಿಗೆ ಆದ ಮೇಲೆ ಕನಿಷ್ಠ 40 ದಿನಗಳವರೆಗೆ ಹಲವು ಹೆಣ್ಣುಮಕ್ಕಳಿಗೆ ಬ್ಲೀಡಿಂಗ್ ಆಗುತ್ತಿರುತ್ತದೆ. ಕೆಲವೊಮ್ಮೆ ಅದು ಆ ಕ್ಷಣಕ್ಕೆ ಸ್ಟಾಪ್ ಆದಂತೆ ಕಂಡರೂ ಮತ್ತೆ ಕೆಲವು ದಿನಗಳ ಬಳಿಕ ಬ್ಲೀಡಿಂಗ್ ಆಗುವುದು ಇದೆ. ಇದು ಹೆಣ್ಣುಮಕ್ಕಳ ಗರ್ಭಕೋಶವನ್ನು ಶುಚಿ ಮಾಡುವ ನೈಸರ್ಗಿಕ ಕ್ರಿಯೆಯಾಗಿದೆ. ಈ ಸಂದರ್ಭದಲ್ಲಿ ರಕ್ತನಾಳಗಳೆಲ್ಲವೂ ತೆರೆದಿರುತ್ತವೆ. ಆದ್ದರಿಂದ ಈ ಸಂದರ್ಭದಲ್ಲಿ ದೈಹಿಕ ಸಂಪರ್ಕ ಮಾಡಲೇಬಾರದು ಎಂದಿದ್ದಾರೆ ವೈದ್ಯೆ.
ಸಮಸ್ಯೆ ನೋಡಿಕೊಂಡು
ಅದಾದ ಬಳಿಕ ಪ್ರತಿ ಹೆಣ್ಣಿನಲ್ಲಿಯೂ ಬೇರೆ ಬೇರೆ ರೀತಿಯಲ್ಲಿ ಸಮಸ್ಯೆ ಬರುವ ಸಾಧ್ಯತೆ ಇದೆ. ನಾರ್ಮಲ್ ಡಿಲೆವರಿಯಾದರೆ ಯೋನಿಯಲ್ಲಿ ಹಾಗೂ ಸಿಸರಿನ್ ಆದರೆ ಹೊಟ್ಟೆಯ ಭಾಗದಲ್ಲಿ ಹೊಲಿಗೆ ಇರುವ ಕಾರಣ, ಈ ಸಂದರ್ಭದಲ್ಲಿ ದೈಹಿಕ ಸಂಪರ್ಕ ಏರ್ಪಟ್ಟರೆ ಅದು ಹೆಣ್ಣಿನ ಪ್ರಾಣಕ್ಕೂ ಅಪಾಯ ತಂದೊಡ್ಡಬಹುದು. ಆದ್ದರಿಂದ 40 ದಿನಗಳ ಬಳಿಕ ಪತ್ನಿಯ ದೈಹಿಕ, ಮಾನಸಿಕ ಆರೋಗ್ಯವನ್ನು ನೋಡಿಕೊಂಡು ಸಂಪರ್ಕ ಮಾಡಬಹುದು ಎಂದಿದ್ದಾರೆ ವೈದ್ಯೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

