MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಭಾಗ್ಯವಂತರು ಧಾರಾವಾಹಿಯಲ್ಲಿ ಮಹಾ ತಿರುವು! ಗುಣನ ದುಷ್ಟತನಕ್ಕೆ ಸ್ವಾಭಿಮಾನಿ ಜನನಿ ಸವಾಲು

ಭಾಗ್ಯವಂತರು ಧಾರಾವಾಹಿಯಲ್ಲಿ ಮಹಾ ತಿರುವು! ಗುಣನ ದುಷ್ಟತನಕ್ಕೆ ಸ್ವಾಭಿಮಾನಿ ಜನನಿ ಸವಾಲು

ಉದಯ ಟಿವಿಯ 'ಭಾಗ್ಯವಂತರು' ಧಾರಾವಾಹಿಯಲ್ಲಿ ನಾಯಕ ಗುಣಶೇಖರನ ದುಷ್ಟತನ ಕಿರಿ ಸೊಸೆ ಜನನಿಗೆ ತಿಳಿದಿದೆ. ಮಹಿಳೆಯರನ್ನು ಕೇವಲ ಅಡುಗೆಮನೆಗೆ ಸೀಮಿತಗೊಳಿಸುವ ಆತನ ಅಹಂಕಾರಕ್ಕೆ ಜನನಿ ದಿಟ್ಟ ಸವಾಲು ಹಾಕಿದ್ದಾಳೆ. ಇದರಿಂದ ಮನೆಯವರೆಲ್ಲರೂ ಆಘಾತಕ್ಕೊಳಗಾಗಿದ್ದು, ಮುಂದೇನಾಗಲಿದೆ ಎಂಬ ಕುತೂಹಲ ಮೂಡಿದೆ.

1 Min read
Author : Mahmad Rafik
Published : Sep 28 2026, 02:52 PM IST
Share this Photo Gallery
  • FB
  • TW
  • Linkdin
  • Whatsapp
15
ಗುಣಶೇಖರನ ದುಷ್ಟತನ
Image Credit : Sun Udaya TV

ಗುಣಶೇಖರನ ದುಷ್ಟತನ

ಸನ್ ಉದಯ ಟಿವಿಯಲ್ಲಿ ಪ್ರಸಾರವಾಗುವ ಭಾಗ್ಯವಂತರು ಸೀರಿಯಲ್ ಮಹತ್ವದ ಅಪ್‌ಡೇಟ್ ಪಡೆದುಕೊಂಡಿದೆ. ನಾಯಕ್ ಮನೆತನದ ಯಜಮಾನನಾಗಿರುವ ಗುಣಶೇಖರನ ಅಸಲಿ ಮುಖ ಕಿರಿ ಸೊಸೆ ಜನನಿಗೆ ಗೊತ್ತಾಗಿದೆ. ಆದ್ರೆ ತಂದೆಗೆ ನೀಡಿದ ಮಾತಿನಂತೆ ಗುಣಶೇಖರ ಸೂಚನೆಗಳನ್ನು ಪಾಲಿಸಿಕೊಂಡು ಹೋಗಲು ಜನನಿ ಒಪ್ಪಿಕೊಂಡಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಗುಣನ ಅಸಲಿ ಮುಖ
Image Credit : Sun Udaya TV

ಗುಣನ ಅಸಲಿ ಮುಖ

ಗುಣಶೇಖರ ಅಂದ್ರೆ ಮನೆ ಮಂದಿಗೆಲ್ಲಾ ಹೆದರಿಕೆ. ಆತನ ಮುಂದೆ ಮಾತನಾಡಲು ಸಹ ಎಲ್ಲರೂ ಭಯಪಡುತ್ತಾರೆ. ಹೆಣ್ಣು ಅಂದ್ರೆ ಕೇವಲ ಮನೆಗೆಲಸಕ್ಕೆ ಸೀಮಿತ ಎಂದು ತಪ್ಪು ತಿಳುವಳಿಕೆಯಲ್ಲಿರುವ ಗುಣನ ಅಸಲಿ ಮುಖ ಹೊರಗಿನ ಜಗತ್ತಿಗೆ ಗೊತ್ತಿಲ್ಲ. ಚೆನ್ನಾಗಿ ಓದಿಕೊಂಡಿರುವ ಮನೆಯ ಎಲ್ಲಾ ಮಹಿಳೆಯರನ್ನು ಅಡುಗೆಮನೆಗೆ ಸೀಮಿತ ಮಾಡಿರೋ ಗುಣನಿಗೆ ಜನನಿ ಸವಾಲು ಹಾಕಿದ್ದಾಳೆ.

Related Articles

Related image1
ಅಮೃತಧಾರೆ ಸೀರಿಯಲ್ ಪ್ರೇಮಿಗಳಿಗೆ ಸಂತಸದ ಸುದ್ದಿ: ಭೂಮಿಕಾಳ ಹೊಸ ಪಯಣ ಆರಂಭದ ಸುಳಿವು
Related image2
ಅಮೃತಧಾರೆ: IPS ಆದ್ರೂ ಅಕ್ಕಾರ ಬಳಿಗೆ ಓಡೋಡಿ ಬಂದ ಮಲ್ಲಿ; ಜೈದೇವ್‌ಗಿಲ್ಲ ಉಳಿಗಾಲ
35
ಗುಣನ ಕಣ್ಣಲ್ಲಿ ಕಣ್ಣಿಟ್ಟ ಗುಡುಗಿದ ಜನನಿ
Image Credit : Sun Udaya TV

ಗುಣನ ಕಣ್ಣಲ್ಲಿ ಕಣ್ಣಿಟ್ಟ ಗುಡುಗಿದ ಜನನಿ

ನನ್ನ ಕೈಮೀರಿ ಈ ಮನೆಯಲ್ಲಿ ಏನೂ ನಡೆಯಲ್ಲ. ಮುಂದೆಯೂ ನಡೆಯೋದು ಇಲ್ಲ. ಈ ಮನೆಯಲ್ಲಿ ನಾನು ಹೇಳಿದ್ದೇ ಮಾತು ನಡೆಯೋದು. ನನ್ನ ಮಾತನ್ನು ಮೀರುವ ಧೈರ್ಯ ಯಾರೂ ಮಾಡಲ್ಲ ಎಂದು ಜನನಿ ಮುಂದೆ ಗುಣಶೇಖರ ಬಡಾಯಿ ಕೊಚ್ಚಿಕೊಂಡಿದ್ದಾನೆ. ಇದಕ್ಕೇ ಅಲ್ಲೇ ತಿರುಗೇಟು ನೀಡಿದ ಜನನಿ, ನಾನು ಫೇಸ್ ಮಾಡುತ್ತೇನೆ ಎಂದು ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ದಾಳೆ.

45
ಮನೆ ಸದಸ್ಯರೆಲ್ಲರೂ ಶಾಕ್
Image Credit : Sun Udaya TV

ಮನೆ ಸದಸ್ಯರೆಲ್ಲರೂ ಶಾಕ್

ನಾನು ನನ್ನ ತಂದೆಗೆ ನೀಡಿದ ಮಾತನ್ನು ಮೀರಲ್ಲ. ಹಾಗಂತ ನನ್ನ ಸ್ವಾಭಿಮಾನವನ್ನು ಸಹ ಬಿಟ್ಟುಕೊಡಲ್ಲ, ಮುಂದೆ ನೋಡ್ತಾ ಇರಿ ಎಂದು ಬಾವ ಗುಣಶೇಖರನಿಗೆ ಜನನಿ ಎಚ್ಚರಿಕೆಯನ್ನು ನೀಡಿದ್ದಾಳೆ. ಜನನಿಯ ಮಾತುಗಳನ್ನು ಕೇಳಿದ ಮನೆಯ ಇನ್ನುಳಿದ ಸದಸ್ಯರು ಶಾಕ್ ಆಗಿದ್ದಾರೆ. ಅಷ್ಟೆಲ್ಲಾ ಅತ್ತೆ ಕೂಡ ಜನನಿ ವಿರುದ್ಧ ಹರಿಹಾಯ್ದಿದ್ದಾಳೆ.

55
ಸೀರಿಯಲ್ ವೀಕ್ಷಕರು ಹೇಳಿದ್ದೇನು?
Image Credit : Sun Udaya TV

ಸೀರಿಯಲ್ ವೀಕ್ಷಕರು ಹೇಳಿದ್ದೇನು?

ಇಂದಿನ ಪ್ರೋಮೋ ನೋಡಿದ ನೆಟ್ಟಿಗರು, ಗುಡ್ ಜನನಿ ಚಾಲೆಂಜ್ ಹಾಕಿದ್ಮೇಲೆ ಆ ರೀತಿಯಲ್ಲಿ ನೀನು ಕೆಲಸ ಮಾಡಬೇಕು. ಗುಣ ಬರಗುಣ ಆಗಬೇಕು ಜನನೆಯಿಂದ ಸೂಪರ್ ಆಕ್ಟಿಂಗ್. ಎದ್ದು ನಿಲ್ಲಿ ವೀರ ಮಹಿಳೆಯರೇ! ಎಂದು ಕಮೆಂಟ್ ಮಾಡಿದ್ದಾರೆ. ಭಾಗ್ಯವಂತರು ಸೀರಿಯಲ್ ಸೋಮವಾರದಿಂದ ಶನಿವಾರದವರಗೆ ರಾತ್ರಿ 7 ಗಂಟೆ 30 ನಿಮಿಷಕ್ಕೆ ಪ್ರಸಾರವಾಗುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕನ್ನಡ ಧಾರಾವಾಹಿ
 

Latest Videos
Recommended Stories
Recommended image1
“ಆ ದಿನ ಮನೆ ಬಿಟ್ಟು ಓಡಿ ಹೋಗಿದ್ವಿ…”; ಕನ್ನಡ ಯೂಟ್ಯೂಬರ್ ತಾರೇಶ್‌-ಸ್ವಾತಿ ಲವ್‌ಸ್ಟೋರಿಗೆ 13 ವರ್ಷ, ಇದೀಗ ಕುಟುಂಬಕ್ಕೆ ಹೊಸ ಅತಿಥಿ!
Recommended image2
ದೀಪಿಕಾಗೆ ಸಿಕ್ತು ಅಮ್ಮನ ಅಪ್ಪುಗೆ, ಇತ್ತ AIನಿಂದ ಮಾಡಿದ ಅವಳಿ-ಜವಳಿ ಫೋಟೋ ರಿವೀಲ್
Recommended image3
ಬರ್ತಿದ್ದಂತೆ ಇಬ್ಬರ ಸ್ಥಾನ ಕಿತ್ಕೊಂಡ ಗಾನವಿ; ಕಿವಿಯೊಟ್ಟು ಕೇಳಿ ಶಿಳ್ಳೆ ಹೊಡೆದ ಮಂಜ!
Related Stories
Recommended image1
ಅಮೃತಧಾರೆ ಸೀರಿಯಲ್ ಪ್ರೇಮಿಗಳಿಗೆ ಸಂತಸದ ಸುದ್ದಿ: ಭೂಮಿಕಾಳ ಹೊಸ ಪಯಣ ಆರಂಭದ ಸುಳಿವು
Recommended image2
ಅಮೃತಧಾರೆ: IPS ಆದ್ರೂ ಅಕ್ಕಾರ ಬಳಿಗೆ ಓಡೋಡಿ ಬಂದ ಮಲ್ಲಿ; ಜೈದೇವ್‌ಗಿಲ್ಲ ಉಳಿಗಾಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved