- Home
- Entertainment
- TV Talk
- ಬರ್ತಿದ್ದಂತೆ ಇಬ್ಬರ ಸ್ಥಾನ ಕಿತ್ಕೊಂಡ ಗಾನವಿ; ಕಿವಿಯೊಟ್ಟು ಕೇಳಿ ಶಿಳ್ಳೆ ಹೊಡೆದ ಮಂಜ!
ಬರ್ತಿದ್ದಂತೆ ಇಬ್ಬರ ಸ್ಥಾನ ಕಿತ್ಕೊಂಡ ಗಾನವಿ; ಕಿವಿಯೊಟ್ಟು ಕೇಳಿ ಶಿಳ್ಳೆ ಹೊಡೆದ ಮಂಜ!
ಬಿಗ್‌ಬಾಸ್ ಮನೆಗೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದು, ಗಾನವಿ ಗೌಡ ಇಬ್ಬರು ಸ್ಪರ್ಧಿಗಳ ಸ್ಥಾನವನ್ನು ಹೈಜಾಕ್ ಮಾಡಿದ್ದಾರೆ. ಗಾನವಿ ತಮ್ಮ ಅಧಿಕಾರ ಬಳಸಿ ಇಬ್ಬರು ಸ್ಪರ್ಧಿಗಳನ್ನು ಮತ್ತೆ ವಿಮಾನಕ್ಕೆ ಕಳುಹಿಸಿದ್ದಾರೆ.

ಇಬ್ಬರ ಸ್ಥಾನ ಹೈಜಾಕ್ ಮಾಡಿದ ಗಾನವಿ
ಬಿಗ್‌ಬಾಸ್ ಮನೆಗೆ ಮೂವರ ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದು, ಈ ಹೊಸ ಸ್ಪರ್ಧಿಗಳಿಂದ ಮನೆಯಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಎಂಬುದರ ಕುತೂಹಲಕ್ಕೆ ತೆರೆಬಿದ್ದಿದೆ. ಗಾನವಿ ಗೌಡ ಬಿಗ್‌ಬಾಸ್ ಮನೆಯೊಳಗೆ ಬರುತ್ತಿದ್ದಂತೆ ಇಬ್ಬರ ಸ್ಥಾನವನ್ನು ಕಿತ್ತುಕೊಂಡಿದ್ದಾರೆ. ಹಾಗಾಗಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಮತ್ತೆ ವಿಮಾನಕ್ಕೆ ಸೇರಿದ್ದಾರೆ.
ಮನೆ ಸದಸ್ಯರಿಗೆ ಶಾಕ್ ನೀಡಿದ ಗಾನವಿ
ಬಿಗ್‌ಬಾಸ್ ವೇದಿಕೆಯಿಂದಲೇ ಎಲ್ಲಾ ಸ್ಪರ್ಧಿಗಳನ್ನು ಗಾನವಿ ಪ್ರಶ್ನೆ ಮಾಡಿದ್ದಾರೆ. ಹಳ್ಳಿ ಪವರ್ ಶೋನಲ್ಲಿ ತನ್ನೆಲ್ಲಾ ಎದುರಾಳಿಗಳಿಗೆ ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದ ಗಾನವಿ, ಬಿಗ್‌ಬಾಸ್ ಮನೆಯಲ್ಲಿಯೂ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ. ಬಿಗ್‌ಬಾಸ್ ಮನೆಯ ಇಬ್ಬರ ಸದಸ್ಯರ ಸ್ಥಾನವನ್ನು ಗಾನವಿ ಹೈಜಾಕ್ ಮಾಡಿದ್ದಾರೆ.
ಯಶಸ್ ಕೃಷ್ಣ ಮತ್ತು ಕಿರಣ್ ಶಾಸ್ತ್ರಿ
ದೊಡ್ಮನೆಯೊಳಗೆ ಬಂದಿರುವ ಗಾನವಿ ಗೌಡ, ಬಿಗ್‌ಬಾಸ್ ತಮಗೆ ನೀಡಿರುವ ಅಧಿಕಾರ ಬಳಸಿಕೊಂಡು ಯಶಸ್ ಕೃಷ್ಣ ಮತ್ತು ಕಿರಣ್ ಶಾಸ್ತ್ರಿ ಅವರನ್ನು ಮತ್ತೆ ವಿಮಾನಕ್ಕೆ ಕಳುಹಿಸಿದ್ದಾರೆ. ಗಾನವಿ ಅವರನ್ನು ನೋಡುತ್ತಿದ್ದಂತೆ, ನೋಡಲು ಚೆನ್ನಾಗಿದ್ದಾರೆ ಎಂದು ಯಶಸ್ ತಮ್ಮ ಫ್ಲರ್ಟ್ ಶುರು ಮಾಡಿದ್ದರು. ಆದ್ರೆ ಆ ಕಡೆಯಿಂದ ನಗುವಿನ ಬದಲಾಗಿ ಬೆಂಕಿನ ಬಾಣ ಯಶಸ್ ಹೃದಯಕ್ಕೆ ತಾಗಿದೆ.
ಕಿರಣ್ ಶಾಸ್ತ್ರಿ ಮುಖವಾಡ
ಗಾನವಿ ಪ್ರಕಾರ, ಕಿರಣ್ ಶಾಸ್ತ್ರಿ ಅವರು ಮುಖವಾಡ ಹಾಕಿಕೊಂಡು ಆಟವಾಡುತ್ತಿದ್ದಾರೆ. ಮಹಿಳಾ ಸದಸ್ಯರನ್ನು ಅಕ್ಕಾ ಎಂದು ಕರೆಯುತ್ತಾ ಸೇಫ್ ಆಗುತ್ತಿದ್ದಾರೆ. ಹಾಗೆ ಮನೆಯಲ್ಲಿರುವ ಭುವನೇಶ್ವರಿ ದೇವಿ ಜೊತೆಗಿನ ಮಾತುಕತೆಯನ್ನು ಸಹ ಟೀಕಿಸಿದ್ದಾರೆ. ಇಷ್ಟು ಮಾತ್ರವಲ್ಲ ಕಿರಣ್ ಅವರಂತೆ ಮಲಗಿಕೊಂಡು ವ್ಯಂಗ್ಯ ಮಾಡಿದ್ದಾರೆ.
ಪ್ರಶಾಂತ್ ಮತ್ತು ಸೋನಿಕಾ
ಎರಡು ವಾರಗಳಿಂದ ಬಿಗ್‌ಬಾಸ್ ಮನೆಯಲ್ಲಿದ್ದ ಕಿರಣ್ ಮತ್ತು ಯಶಸ್ ಮತ್ತೆ ವಿಮಾನ ಸೇರಿಕೊಂಡಿದ್ದಾರೆ. ಇನ್ನುಳಿದ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿರುವ ಸೋನಿಕಾ ಮತ್ತು ಪ್ರಶಾಂತ್ ಅವರ ಎಂಟ್ರಿ ಹೇಗಿರುತ್ತೆ ಎಂಬುದರ ಬಗ್ಗೆ ಕೂತುಹಲ ಮೂಡಿದೆ. ಮತ್ತೊಂದೆಡೆ ಎರಡನೇ ಅವಕಾಶ ಪಡೆದುಕೊಂಡಿರುವ ತಾಂಡವ್ ರಾಮ್, ತಮ್ಮ ಮುಂದಿನ ಆಟ ಹೇಗೆ ಮುಂದುವರಿಸುತ್ತಾರೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

