ದೀಪಿಕಾಗೆ ಸಿಕ್ತು ಅಮ್ಮನ ಅಪ್ಪುಗೆ, ಇತ್ತ AIನಿಂದ ಮಾಡಿದ ಅವಳಿ-ಜವಳಿ ಫೋಟೋ ರಿವೀಲ್
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಳ ತದ್ರೂಪಿ ದೀಪಿಕಾ ಈಗ ಅವಳ ತವರು ಮನೆಗೆ ಬಂದಿದ್ದಾಳೆ. ತಾಯಿ ಮಂದಾಕಿನಿಯ ಅಪ್ಪುಗೆಯಿಂದ ದೀಪಿಕಾಗೆ ರೋಮಾಂಚನವಾಗಿದ್ದು, ಅವರಿಬ್ಬರು ಅವಳಿ-ಜವಳಿ ಎಂಬ ಸುಳಿವು ಸಿಕ್ಕಿದೆ. ಗೌತಮ್ ದಿವಾನ್ ವಿದೇಶದಿಂದ ಮರಳಿದರೆ ದೀಪಿಕಾಳ ಗುಟ್ಟು ರಟ್ಟಾಗಲಿದೆಯೇ ಎಂಬ ಕುತೂಹಲ ಮೂಡಿದೆ.

ಭೂಮಿಕಾ ತವರಿನಲ್ಲಿ ದೀಪಿಕಾ
ಅಮೃತಧಾರೆ ಸೀರಿಯಲ್ ಮತ್ತೊಮ್ಮೆ ಹೊಸ ತಿರುವುಗಳೊಂದಿಗೆ ಕಥೆ ಮುಂದುವರಿಕೊಂಡು ಹೋಗುತ್ತಿದೆ. ಭೂಮಿಕಾಳ ತದ್ರೂಪಿಯಾಗಿರುವ ದೀಪಿಕಾಳನ್ನು ದಿವಾನ್ ಮನೆಗೆ ಕರೆದುಕೊಂಡು ಬರಲಾಗಿದೆ. ಮತ್ತೊಂದೆಡೆ ಭೂಮಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಇದೀಗ ದೀಪಿಕಾಳನ್ನು ಬಲವಂತವಾಗಿ ಭೂಮಿಕಾಳ ಮನೆಗೆ ಕರೆದುಕೊಂಡು ಬರಲಾಗಿದೆ.
ದೀಪಿಕಾಗೆ ತಾಯಿ ಅಪ್ಪು
ಭೂಮಿಕಾಳಂತೆ ನಟಿಸುತ್ತಿರೋ ದೀಪಿಕಾ ಪ್ರತಿದಿನವೂ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಿದ್ದಾಳೆ. ಭಾನುವಾರದ ಸಂಚಿಕೆಯಲ್ಲಿ ಅಜ್ಜಿಯ ಬಲವಂತದಿಂದ ಭೂಮಿಕಾಳ ಕ್ಯಾನ್ಸರ್ ಮಾತ್ರೆಯನ್ನು ದೀಪಿಕಾ ನುಂಗಿದ್ದಾಳೆ. ಇದೀಗ ಮಲ್ಲಿ ಜೊತೆಯಲ್ಲಿ ಭೂಮಿಕಾಳ ತವರು ಮನೆಗೆ ದೀಪಿಕಾ ಹೋಗಿದ್ದಾಳೆ. ಭೂಮಿಕಾ ತಾಯಿ ಮಂದಾಕಿನಿ ಅಪ್ಪಿಕೊಳ್ಳುತ್ತಿದ್ದಂತೆ ದೀಪಿಕಾಳಲ್ಲಿ ರೋಮಾಂಚನ ಉಂಟಾಗಿದೆ.
ಮಂದಾಕಿನಿ ಬಗ್ಗೆ ಒಳ್ಳೆ ಅಭಿಪ್ರಾಯ
ಈಗಾಗಲೇ ದೀಪಿಕಾ ಮತ್ತು ಭೂಮಿಕಾ ಅವಳಿ-ಜವಳಿ ಎಂಬುದರ ಸುಳಿವನ್ನು ನೀಡಲಾಗಿದೆ. ಇದೀಗ ತಾಯಿಯ ಅಪ್ಪುಗೆಯಲ್ಲಿ ದೀಪಿಕಾಗೆ ಆನಂದ ಸಿಕ್ಕಿದೆ. ಭೂಮಿಕಾಳ ತಾಯಿ ಒಳ್ಳೆಯವಳು ಎಂಬ ಅಭಿಪ್ರಾಯಕ್ಕೆ ದೀಪಿಕಾ ಬಂದಿದ್ದಾಳೆ. ಇನ್ನು ತಂದೆ ಸದಾಶಿವ ಬಂದ್ಮೇಲೆ ದೀಪಿಕಾಳಿಗೆ ಮತ್ತಷ್ಟು ಸಂತೋಷ ಉಂಟಾಗಬಹುದು.
ಕಾಲ್ ರಿಸೀವ್ ಮಾಡದ ಶಕುಂತಲಾ
ಭೂಮಿಕಾಳ ತವರಿಗೆ ಹೋಗಬೇಕೆಂದಾಗ ದೀಪಿಕಾ ಆತಂಕದಿಂದ ಶಕುಂತಲಾಗೆ ಫೋನ್ ಮಾಡಿದ್ದಳು. ದೀಪಿಕಾಳ ಪ್ರಶ್ನೆಗಳಿಂದ ಬೇಸತ್ತ ಶಕುಂತಲಾ ಕಾಲ್ ರಿಸೀವ್ ಮಾಡಿರಲಿಲ್ಲ. ಜೈದೇವ್ ಮನೆಯಲ್ಲಿರುವ ಶಕುಂತಲಾ ಮುಂದಿನ ನಡೆ ಬಗ್ಗೆ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಇಂದಿನ ಪ್ರೋಮೋದಲ್ಲಿ ದೀಪಿಕಾ ಮತ್ತು ಭೂಮಿಕಾಳ ಬಾಲ್ಯದ ಫೋಟೋವನ್ನು ಸಹ ತೋರಿಸಲಾಗಿದೆ.
ಎಲ್ಲಿ ಹೋದ್ರು ಗೌತಮ್ ದಿವಾನ್?
ಕಳೆದ ಒಂದೂವರೆ ತಿಂಗಳಿನಿಂದ ಗೌತಮ್ ದಿವಾನ್ ಪಾತ್ರ ಬಹುತೇಕವಾಗಿ ತೆರೆ ಹಿಂದೆ ಸರಿಸಲಾಗಿದೆ. ಸದ್ಯ ಗೌತಮ್ ದಿವಾನ್‌ನನ್ನು ವಿದೇಶ ಪ್ರವಾಸದಲ್ಲಿರುವಂತೆ ತೋರಿಸಲಾಗಿದೆ. ಒಂದು ವೇಳೆ ಗೌತಮ್ ರೀ ಎಂಟ್ರಿಯಾದ್ರೆ ದೀಪಿಕಾ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದಂತಾಗುತ್ತದೆ. ಭೂಮಿಕಾ ಅಂದ್ಕೊಂಡು ಗೌತಮ್ ತುಂಟಾಟ ಆರಂಭಿಸಿದ್ರೆ ದೀಪಿಕಾ ಏನ್ ಮಾಡ್ತಾಳೆ ಎಂದು ನೋಡಲು ವೀಕ್ಷಕರು ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

