ಅಮೃತಧಾರೆ: IPS ಆದ್ರೂ ಅಕ್ಕಾರ ಬಳಿಗೆ ಓಡೋಡಿ ಬಂದ ಮಲ್ಲಿ; ಜೈದೇವ್‌ಗಿಲ್ಲ ಉಳಿಗಾಲ
ಜೀ ಕನ್ನಡದ ಅಮೃತಧಾರೆ ಸೀರಿಯಲ್‌ನಲ್ಲಿ, ನಾಪತ್ತೆಯಾದ ದಿಯಾಳನ್ನು ಹುಡುಕಲು ಭೂಮಿಕಾ, ಶಕುನಿ ಮಾಮ ಲಕ್ಷ್ಮೀಕಾಂತ್ ಅವರ ಸಹಾಯದಿಂದ ಜೈದೇವ್ ವಿರುದ್ಧ ಗೂಢಚಾರಿಕೆ ಆರಂಭಿಸಿದ್ದಾಳೆ. ಭೂಮಿಕಾಳ ಮಾತಿನಂತೆ ಜೈದೇವ್ ಮನೆಗೆ ಹೋದ ಲಕ್ಷ್ಮೀಕಾಂತ್, ಅವರಿಂದ ಸತ್ಯ ಬಾಯಿಬಿಡಿಸಲು ಪ್ರಯತ್ನಿಸುತ್ತಾನೆ.

ಅಮೃತಧಾರೆ ಸೀರಿಯಲ್ ಸಂಚಿಕೆ
ಜೀ ಕನ್ನಡದ ಅಮೃತಧಾರೆ ಸೀರಿಯಲ್ ಸಂಚಿಕೆಯಿಂದ ಸಂಚಿಕೆಗೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸೀರಿಯಲ್ ವೀಕ್ಷಕರೆಲ್ಲಾ ಕಾಯುತ್ತಿದ್ದ ಸಮಯ ಬಂದಿದ್ದು, ಕೆಡಿ ಜೈದೇವ್ ಅಂತ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಹೌದು, ಜೈದೇವ್ ವಿರುದ್ಧ ಭೂಮಿಕಾ ಗೂಢಚಾರಿಕೆ ಆರಂಭಿಸಿದ್ದಾಳೆ. ಐಪಿಎಸ್ ಆದ್ರೂ ಮಲ್ಲಿಯಿಂದ ಆಗದ ಕೆಲಸವನ್ನು ಭೂಮಿಕಾ ಮಾಡಲು ಹೊರಟಿದ್ದಾಳೆ.
ಅಕ್ಕರಾ ಸಹಾಯ ಬೇಕಾಯ್ತಾ ?
ಜೈದೇವ್‌ನ ದಿಯಾ ಬೇಬಿ ಮತ್ತು ಹಾಲಿ ಗೆಳತಿ ದಿಢೀರ್ ನಾಪತ್ತೆಯಾಗಿದ್ದು, ಇಬ್ಬರ ಹುಡುಕಲು ಜೀವಾ ಮುಂದಾಗಿದ್ದಾನೆ. ಇದಕ್ಕಾಗಿ ಐಪಿಎಸ್ ಆಗಿರೋ ಮಲ್ಲಿ ಸಹಾಯ ಕೇಳಿದ್ದನು. ಇದೀಗ ಜೈದೇವ್ ವಿರುದ್ದ ಯಾವುದೇ ಕ್ರಮ ತೆಗೆದುಕೊಳ್ಳುವ ಮುನ್ನ ಭೂಮಿಕಾ ಅಭಿಪ್ರಾಯವನ್ನು ಮಲ್ಲಿ ಕೇಳಿದ್ದಾಳೆ. ಐಪಿಎಸ್ ಆದ್ರೂ ಮಲ್ಲಿ ಮೇಡಂಗೆ ಅಕ್ಕರಾ ಸಹಾಯ ಬೇಕಾಯ್ತಾ ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.
ಅಖಾಡಕ್ಕೆ ಇಳಿದಿರೋ ಭೂಮಿಕಾ
ಜೈದೇವ್ ವಿಷಯ ತಿಳಿಯುತ್ತಲೇ ಅಖಾಡಕ್ಕೆ ಇಳಿದಿರೋ ಭೂಮಿಕಾ, ಹಳೆ ಹುಲಿ ಶಕುನಿ ಮಾಮಾ (ಲಕ್ಷ್ಮೀಕಾಂತ್) ಸಹಾಯ ಕೇಳಿದ್ದಾಳೆ. ಜೈದೇವ್ ಬಳಿಗೆ ಹೋಗಿ ದಿಯಾ ವಿಷಯ ತಿಳಿದುಕೊಂಡು ಬರುವಂತೆ ಮನವಿ ಮಾಡಿಕೊಂಡಿದ್ದಾಳೆ. ಭೂಮಿಕಾ ಹೇಳಿದಂತೆ ಜೈದೇವ್ ಮನೆಗೆ ಲಕ್ಷ್ಮೀಕಾಂತ್ ಹೋಗಿದ್ದಾನೆ.
ಗೌತಮ್, ಭೂಮಿಕಾ ವಿರುದ್ಧ ವಾಗ್ದಾಳಿ
ತನ್ನ ಮನೆಗೆ ಬಂದ ಮಾವ ಲಕ್ಷ್ಮೀಕಾಂತ್‌ನನ್ನು ನೋಡಿ ಜೈದೇವ್ ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ನಿನ್ನೊಂದಿಗೆ ಮದ್ಯ ಕುಡಿಯೋಕೆ ಬಂದೆ ಎಂದು ಹೇಳುತ್ತಾ ಲಕ್ಷ್ಮೀಕಾಂತ್ ತನ್ನ ಮಾತುಗಳನ್ನು ಆರಂಭಿಸಿದ್ದಾನೆ. ಬೇಕಂತಲೇ ಜೈದೇವ್ ಮುಂದೆ ಗೌತಮ್, ಭೂಮಿಕಾ ವಿರುದ್ಧ ವಾಗ್ದಾಳಿ ನಡೆಸುತ್ತಾ ನಿನ್ನ ಕಷ್ಟಕ್ಕೆ ಯಾರು ಬರಲಿಲ್ಲ ಅಲ್ಲವಾ ಅಳಿಮಯ್ಯಾ ಎಂದಿದ್ದಾನೆ.
ಸತ್ಯ ಹೇಳ್ತಾನಾ?
ನಿನಗೆ ಯಾರೂ ಖುಷಿ ಅನ್ನೋದನ್ನ ಕೊಡಲಿಲ್ಲವಲ್ಲಾ? ಆ ಖುಷಿ ಸಿಕ್ಕಿದ್ದು ದಿಯಾಳಿಂದ ಮಾತ್ರ ಅಲ್ಲವಾ ಎಂದು ಲಕ್ಷ್ಮೀಕಾಂತ್ ಹೇಳುತ್ತಾನೆ. ದಿಯಾ ಹೆಸರು ಕೇಳುತ್ತಿದ್ದಂತೆ ಜೈದೇವ್ ಅಲರ್ಟ್ ಆದಂತೆ ಕಾಣಿಸುತ್ತಿದೆ. ಲಕ್ಷ್ಮೀಕಾಂತ್ ಮುಂದೆ ಜೈದೇವ್ ಸತ್ಯ ಹೇಳ್ತಾನಾ ಅನ್ನೋದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

