- Home
- Entertainment
- TV Talk
- ಮಲ್ಲಮ್ಮ ಎಂಟ್ರಿ ಆಗ್ತಿದ್ದಂತೆ ಬಿಗ್‌ಬಾಸ್‌ಗೆ ಸಂದೇಶ ಕೊಟ್ರು ಸುದೀಪ್; ಸ್ಟೇಜ್ ಮೇಲಾಗಿದ್ದು ಏನು?
ಮಲ್ಲಮ್ಮ ಎಂಟ್ರಿ ಆಗ್ತಿದ್ದಂತೆ ಬಿಗ್‌ಬಾಸ್‌ಗೆ ಸಂದೇಶ ಕೊಟ್ರು ಸುದೀಪ್; ಸ್ಟೇಜ್ ಮೇಲಾಗಿದ್ದು ಏನು?
Mallamma Bigg Boss contestant details: ಬಿಗ್‌ಬಾಸ್ ಸೀಸನ್ 12ಕ್ಕೆ ಉತ್ತರ ಕರ್ನಾಟಕದ ಗ್ರಾಮೀಣ ಪ್ರತಿಭೆ ಮಲ್ಲಮ್ಮ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಆಟದ ಬಗ್ಗೆ ಯಾವುದೇ ಅರಿವಿಲ್ಲದ ಇವರು, ತಮ್ಮ ಮುಗ್ಧ ಮಾತುಗಳಿಂದ ಮತ್ತು ದೈಹಿಕ ಸಾಮರ್ಥ್ಯದಿಂದ ಗಮನ ಸೆಳೆದಿದ್ದಾರೆ.

ಬಿಗ್‌ಬಾಸ್ ಸೀಸನ್ 12
ಬಿಗ್‌ಬಾಸ್ ಸೀಸನ್ 12ರ ಮನೆಗೆ ಉತ್ತರ ಕರ್ನಾಟಕದ ಗ್ರಾಮೀಣ ಪ್ರತಿಭೆಯಾಗಿರುವ ಮಲ್ಲಮ್ಮ ಎಂಟ್ರಿ ಕೊಟ್ಟಿದ್ದರು. ಮಲ್ಲಮ್ಮ ಯಾವುದೇ ಸಿನಿಮಾ, ಧಾರಾವಾಹಿಯಲ್ಲಿಯೂ ನಟಿಸಿಲ್ಲ. ತಾನಾಯ್ತು ತನ್ನ ಕೆಲಸ ಆಯ್ತು ಅಂತಿದ್ದ ಮಲ್ಲಮ್ಮ ಅವರಿಗೆ ಬಹುದೊಡ್ಡ ಅವಕಾಶ ಸಿಕ್ಕಿದೆ.
ಮಲ್ಲಮ್ಮ ಮಾತು
ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಮಲ್ಲಮ್ಮ ಅವರು ಸ್ಪರ್ಧಿಯಾಗಿರೋದು ದೃಢವಾಗಿದೆ. ಮಲ್ಲಮ್ಮ ಅವರ ಮಾತುಗಳನ್ನು ಕೇಳಿ ನಿರೂಪಕ, ನಟ ಸುದೀಪ್, ಬಿಗ್‌ಬಾಸ್‌ಗೆ ಸಂದೇಶವೊಂದನ್ನು ರವಾನಿಸಿದ್ದಾರೆ. ಬಿಗ್‌ಬಾಸ್ ಮಲ್ಲಮ್ಮ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಲ್ಲಮ್ಮಗೆ ಇದ್ಯಾವುದು ಗೊತ್ತಿಲ್ಲ
ಈ ಹಿಂದಿನ ಸೀಸನ್‌ಗಳನ್ನು ಮಲ್ಲಮ್ಮ ನೋಡಿರಬಹುದು. ಆದ್ರೆ ನೂರಾರು ಕ್ಯಾಮೆರಾಗಳ ಮುಂದೆ ಬರುತ್ತಿದ್ದಂತೆ ಸ್ಪರ್ಧಿಗಳು ಮನೆಯಲ್ಲಿ ಹೇಗೆ ಉಳಿದುಕೊಳ್ಳಬೇಕು ಎಂಬುದರ ಬಗ್ಗೆ ತಂತ್ರಗಾರಿಕೆ ಮಾಡಲು ಆರಂಭಿಸುತ್ತಾರೆ. ಆದ್ರೆ ಮಲ್ಲಮ್ಮ ಅವರಿಗೆ ಇದ್ಯಾವುದು ಗೊತ್ತಿಲ್ಲ.
ಜಗಳ ಮಾಡೋದು ಅಂತೆ
ಬಿಗ್‌ಬಾಸ್‌ನಲ್ಲಿ ಎಲಿಮೇಷನ್, ಗೇಮ್ ಅಂದ್ರೆ ಏನು ಅಂತ ನನಗೆ ಗೊತ್ತಿಲ್ಲ. ನೀವು ಹೇಳಿಕೊಡಬೇಕು ಎಂದು ಸುದೀಪ್ ಅವರನ್ನೇ ಮಲ್ಲಮ್ಮ ಕೇಳಿದ್ದಾರೆ. ಅಷ್ಟು ಮಾತ್ರವಲ್ಲ ಮನೆಯೊಳಗೆ ಹೋಗಿ ಜಗಳ ಮಾಡೋದು ಅಂತ ಮುಗ್ಧವಾಗಿ ಮಾತನಾಡಿದ್ದಾರೆ ಮಲ್ಲಮ್ಮ. ಇದರ ಜೊತೆ ವೇದಿಕೆ ಮೇಲೆ ಪುಶ್‌ಅಪ್ ಮಾಡುವ ಮೂಲಕ ದೈಹಿಕವಾಗಿ ಫಿಟ್ ಆಗಿರೋದನ್ನು ಮಲ್ಲಮ್ಮ ತೋರಿಸಿದ್ದಾರೆ.
ಇದನ್ನೂ ಓದಿ: ಇನ್‌ಸ್ಟಾಗ್ರಾಂಗೆ ಗುಡ್‌ಬೈ ಹೇಳಿದ ಮಲ್ಲಮ್ಮ; ಕಾರಣ ಕೇಳಿದ್ರೆ ನಿಮಗೂ ಅಯ್ಯೋ ಅನ್ನಿಸುತ್ತೆ!
ಬಿಗ್‌ಬಾಸ್
ಫ್ಯಾಶನ್ ಡಿಸೈನಿಂಗ್ ಕೆಲಸ ಮಾಡಿಕೊಂಡಿರುವ ಮಲ್ಲಮ್ಮ ಅವರನ್ನು ಅಲ್ಲಿಯ ಸಿಬ್ಬಂದಿ ಆತ್ಮೀಯವಾಗಿ ಬಿಗ್‌ಬಾಸ್‌ಗೆ ಕಳುಹಿಸಿದ್ದಾರೆ. ಅಲ್ಲಿಯ ಸಿಬ್ಬಂದಿ ಜೊತೆ ಕೇಕ್ ಕತ್ತರಿಸಿರುವ ವಿಡಿಯೋ ಸಹ ವೈರಲ್ ಆಗಿದೆ. ಇದೇ ವೇಳೆ ಅಗಲಿದ ಪತಿ ಮಾನಪ್ಪ ಅವರನ್ನು ಮಲ್ಲಮ್ಮ ಸ್ಮರಿಸಿದ್ದಾರೆ.
ಇದನ್ನೂ ಓದಿ: ಕೇಕ್ ಕತ್ತರಿಸಿ ಬಿಗ್‌ಬಾಸ್‌ಗೆ ಹೊರಟ ಮಲ್ಲಮ್ಮ; ನನ್ನ ಗಂಡ ಇದ್ದಿದ್ರೆ ಕಪಾಳಕ್ಕೆ ಹೊಡಿತಿದ್ರು!