- Home
- Entertainment
- TV Talk
- Sri Raghavendra Mahathme Serial: ಕಲಿಯುಗದ ಕಲ್ಪತರು ಶ್ರೀ ಗುರು ರಾಘವೇಂದ್ರ ತೀರ್ಥ, ರಾಯರ ಪಟ್ಟಾಭಿಷೇಕದ ಎಪಿಸೋಡ್
Sri Raghavendra Mahathme Serial: ಕಲಿಯುಗದ ಕಲ್ಪತರು ಶ್ರೀ ಗುರು ರಾಘವೇಂದ್ರ ತೀರ್ಥ, ರಾಯರ ಪಟ್ಟಾಭಿಷೇಕದ ಎಪಿಸೋಡ್
Sri raghavendra mahatme serial director: ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿಯಲ್ಲಿ ರಾಯರ ಜೀವನದ ಪವಿತ್ರ ಪಯಣವಿದೆ. ಗುರು ರಾಯರ ಮಹಿಮೆಯನ್ನು ತೆರೆ ಮೇಲೆ ಅಚ್ಚುಕಟ್ಟಾಗಿ ತರುವ ಪ್ರಯತ್ನ ಮಾಡಲಾಗುತ್ತಿದೆ. ಈ ವಾರ ಕಲಿಯುಗದ ಕಲ್ಪತರು ಶ್ರೀ ಗುರು ರಾಘವೇಂದ್ರ ತೀರ್ಥ ಆಗಮನವಾಗಿದೆ.

ರಾಯರ ಪವಾಡ ಆಯ್ತು
ರಾಯರ ಈ ಕಥೆಯು ಶಂಕುಕರ್ಣನ ಜನ್ಮ ರಹಸ್ಯದಿಂದ ಹಿಡಿದು, ಪ್ರಹ್ಲಾದ, ಬಾಹ್ಲೀಕ ಮತ್ತು ವ್ಯಾಸರಾಯರ ಅವತಾರಗಳ ನಂತರ 4ನೇ ಜನ್ಮದಲ್ಲಿ ವೆಂಕಟನಾಥರಾಗಿ ಜನಿಸುವವರೆಗೆ ಅತಿ ಕುತೂಹಲಕಾರಿಯಾಗಿದೆ. ರೈತರಿಗೆ ವಿತರಿಸಿದ್ದ ಹುಳು ಬಿದ್ದ ಭತ್ತದ ಮೂಟೆಯನ್ನು ರಾಯರು ತಮ್ಮ ಮಂತ್ರಾಕ್ಷತೆಯಿಂದ ಪರಿಶುದ್ಧಗೊಳಿಸಿದ ಪವಾಡವು ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದೆ.
ಸನ್ಯಾಸ ದೀಕ್ಷೆ ಪಡೆದರು
ಸಂಸಾರ ಜೀವನದಲ್ಲಿದ್ದ ರಾಯರು ಸನ್ಯಾಸತ್ವದತ್ತ ಹೊರಳುವಾಗ ಅವರ ಪತ್ನಿ ಸರಸ್ವತಿಯವರು ಪಡುವ ಪಾಡು ಮನ ಮುಟ್ಟುವಂತಿದ್ದು ಕಥೆಯನ್ನು ಭಾವುಕತೆಯ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ತಂಜಾವೂರಿನಲ್ಲಿ ರಾಜ ರಘುನಾಥ ಭೂಪಾಲನ ಸಮ್ಮುಖದಲ್ಲಿ, ಗುರು ಸುಧೀಂದ್ರರು ವೆಂಕಟನಾಥರಿಗೆ ಸನ್ಯಾಸ ದೀಕ್ಷೆಯನ್ನು ನೀಡಿ 'ಶ್ರೀ ರಾಘವೇಂದ್ರ ತೀರ್ಥರು' ಎಂದು ನಾಮಕರಣ ಮಾಡುವ ಐತಿಹಾಸಿಕ ಕ್ಷಣಗಳು, ಈ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ.
ಇಂದು ಪ್ರಸಾರ
ಭಕ್ತಿ ಮತ್ತು ವೈರಾಗ್ಯದ ಸಂಕೇತವಾಗಿರುವ ರಾಯರ ಪಾತ್ರದಲ್ಲಿ ನಟ 'ಪರೀಕ್ಷಿತ್' ಅವರು ಕಾಣಿಸಿಕೊಳ್ಳಲಿದ್ದಾರೆ. ರಾಯರ ಜೀವನದ ಆದರ್ಶಗಳನ್ನು ತಿಳಿಯಲು ಜೀ ಕನ್ನಡ ವಾಹಿನಿಯಲ್ಲಿ 'ಶ್ರೀ ರಾಘವೇಂದ್ರ ಮಹಾತ್ಮೆ ಶನಿವಾರ ಹಾಗು ಭಾನುವಾರ ಸಂಜೆ 6 ಗಂಟೆಗೆ ವೀಕ್ಷಿಸಿ.
ಪರೀಕ್ಷಿತ್ ನಟನೆ
ಈ ಹಿಂದೆಯೂ ರಾಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಪರೀಕ್ಷಿತ್ ಅವರು ಈ ಬಾರಿ ಕೂಡ ರಾಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮೆಚ್ಚುಗೆ
ಪರೀಕ್ಷಿತ್ ನಟನೆ ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

