MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಟ್ರೆಂಡಿಂಗ್‌ನಲ್ಲಿದೆ ಕಾರ್ಗಿಲ್‌ ಯುದ್ಧ ಆಧಾರಿತ ವೆಬ್ ಸೀರೀಸ್!: 6 ಎಪಿಸೋಡ್‌ಗಳ ಥ್ರಿಲ್ಲರ್‌ಗೆ ಆನಂದ್‌ ಮಹೀಂದ್ರಾ ಫಿದಾ

ಟ್ರೆಂಡಿಂಗ್‌ನಲ್ಲಿದೆ ಕಾರ್ಗಿಲ್‌ ಯುದ್ಧ ಆಧಾರಿತ ವೆಬ್ ಸೀರೀಸ್!: 6 ಎಪಿಸೋಡ್‌ಗಳ ಥ್ರಿಲ್ಲರ್‌ಗೆ ಆನಂದ್‌ ಮಹೀಂದ್ರಾ ಫಿದಾ

ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿ ಟ್ರೆಂಡಿಂಗ್‌ನಲ್ಲಿರುವ 'ಆಪರೇಷನ್ ಸಫೇದ್ ಸಾಗರ್' ವೆಬ್ ಸೀರೀಸ್, 1999ರ ಕಾರ್ಗಿಲ್ ಯುದ್ಧದ ವೇಳೆ ಭಾರತೀಯ ವಾಯುಪಡೆಯ ಅಜ್ಞಾತ ಸಾಹಸಗಾಥೆಯನ್ನು ಕಟ್ಟಿಕೊಡುತ್ತದೆ.

2 Min read
Author : Santosh Naik
Published : Aug 10 2026, 07:39 PM IST
Share this Photo Gallery
  • FB
  • TW
  • Linkdin
  • Whatsapp
16
ಭರ್ಜರಿ ವೀಕ್ಷಣೆ ಪಡೆದಿರುವ ವೆಬ್‌ಸಿರೀಸ್‌
Image Credit : X

ಭರ್ಜರಿ ವೀಕ್ಷಣೆ ಪಡೆದಿರುವ ವೆಬ್‌ಸಿರೀಸ್‌

ಇತ್ತೀಚೆಗೆ 'ನೆಟ್‌ಫ್ಲಿಕ್ಸ್' (Netflix) ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿರುವ ಬಹುನಿರೀಕ್ಷಿತ ವೆಬ್ ಸೀರೀಸ್ ಪ್ರಸಾರವಾದ ಬೆನ್ನಲ್ಲೇ ಟಾಪ್ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ 1999ರ ಕಾರ್ಗಿಲ್‌ ಯುದ್ಧದ ಸಮಯದಲ್ಲಿ ಭಾರತೀಯ ವಾಯುಪಡೆಯ 'ಗೋಲ್ಡನ್ ಆರೋಸ್‌' (Golden Arrows) ಸ್ಕ್ವಾಡ್ರನ್‌ನ ಯೋಧರು ತೋರಿದ ಸಾಹಸಗಾಥೆಯನ್ನು ಈ ಸೀರೀಸ್ ಹೊಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕಾರ್ಗಿಲ್‌ ಯುದ್ಧದ ಅಜ್ಞಾತ ಕಥೆ ಹಾಗೂ 'ಆಪರೇಷನ್ ಸಫೇದ್ ಸಾಗರ್'
Image Credit : X

ಕಾರ್ಗಿಲ್‌ ಯುದ್ಧದ ಅಜ್ಞಾತ ಕಥೆ ಹಾಗೂ 'ಆಪರೇಷನ್ ಸಫೇದ್ ಸಾಗರ್'

ಈ ವೆಬ್ ಸೀರೀಸ್‌ಗೆ ‘ಆಪರೇಷನ್ ಸಫೇದ್ ಸಾಗರ್’ (Operation Safed Sagar) ಎಂದು ಹೆಸರಿಡಲಾಗಿದೆ. 1999 ರ ಕಾರ್ಗಿಲ್‌ ಯುದ್ಧದ ವೇಳೆ ಭಾರತೀಯ ವಾಯುಪಡೆಯು ನಡೆಸಿದ ಕಾರ್ಯಾಚರಣೆಯ ಇದುವರೆಗೆ ಜಗತ್ತಿಗೆ ತಿಳಿಯದ ಕಥೆಯನ್ನು ಈ ಸೀರೀಸ್‌ನಲ್ಲಿ ಚಿತ್ರಿಸಲಾಗಿದೆ. ಇದು ಭಾರತೀಯ ವಾಯುಪಡೆಯ ಶೌರ್ಯ, ಪರಾಕ್ರಮ ಹಾಗೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಶೂರ ಯೋಧರ ತ್ಯಾಗವನ್ನು ಅತ್ಯಂತ ಗೌರವಪೂರ್ವಕವಾಗಿ ಚಿತ್ರಿಸಲಾಗಿದೆ. ಜೊತೆಗೆ, ಯುದ್ಧದ ಸಂದರ್ಭದಲ್ಲಿ ಯುವ ಫೈಟರ್ ಪೈಲಟ್‌ಗಳು ಅನುಭವಿಸುವ ಆಂತರಿಕ ಮಾನಸಿಕ ಸಂಘರ್ಷಗಳ ಮೇಲೆಯೂ ಬೆಳಕು ಚೆಲ್ಲುತ್ತದೆ.

Related Articles

Related image1
ಕಾರ್ಗಿಲ್ ವೀರ, ‘ಲಯನ್‌ ಆಫ್‌ ಲಡಾಖ್ ’ ಕರ್ನಲ್ ಸೋನಮ್ ವಾಂಗ್ಚುಕ್ ನಿಧನ: ಭಾರತದ ಹೆಮ್ಮೆಯ ಪುತ್ರನಿಗೆ ಕಂಬನಿ
Related image2
ತಂದೆಯ ಕಾರ್ಗಿಲ್ ಯುದ್ಧ ಹೋರಾಟದ ಘಟನೆ ಬಿಚ್ಚಿಟ್ಟಿ ನಟಿ ರಾಗಿಣಿ ದ್ವಿವೇದಿ, ಅಂದು ಏನಾಗಿತ್ತು?
36
ಬಿಡುಗಡೆಯಾದ ತಕ್ಷಣವೇ ಭಾರಿ ಸ್ಪಂದನೆ
Image Credit : X

ಬಿಡುಗಡೆಯಾದ ತಕ್ಷಣವೇ ಭಾರಿ ಸ್ಪಂದನೆ

ಆಗಸ್ಟ್ 7 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಈ 6 ಎಪಿಸೋಡ್‌ಗಳ ಸೀರೀಸ್‌ಗೆ ವೀಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಲ್ಲಿ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟರಾದ ಜಿಮ್ಮಿ ಶೆರ್ಗಿಲ್, ಸಿದ್ಧಾರ್ಥ್, ಅಭಯ್ ವರ್ಮಾ, ದಿಯಾ ಮಿರ್ಜಾ ಮತ್ತು ಮಹೇಶ್ ಮಾಂಜ್ರೇಕರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಸಾರವಾದ ಕೆಲವೇ ದಿನಗಳಲ್ಲಿ ಭಾರತದಲ್ಲಿ ನಂಬರ್-1 ಸ್ಥಾನಕ್ಕೇರಿ ಸಾರ್ವತ್ರಿಕ ಮೆಚ್ಚುಗೆ ಗಳಿಸಿದೆ.

46
11 ನಗರಗಳು, 115 ದಿನಗಳ ಬೃಹತ್ ಶೂಟಿಂಗ್ ಹಂತ
Image Credit : X

11 ನಗರಗಳು, 115 ದಿನಗಳ ಬೃಹತ್ ಶೂಟಿಂಗ್ ಹಂತ

ಈ ವೆಬ್ ಸೀರೀಸ್‌ನ ನಿರ್ಮಾಣ ವೆಚ್ಚ ಹಾಗೂ ವ್ಯಾಪ್ತಿ ಅತ್ಯಂತ ಬೃಹತ್ ಮಟ್ಟದ್ದಾಗಿದೆ. ಪಟಿಯಾಲ, ಪಟೌಡಿ, ನೋಯ್ಡಾ, ನವದೆಹಲಿ, ಮುಂಬೈ, ಮನಾಲಿ, ಕೇಲಾಂಗ್, ಗ್ವಾಲಿಯರ್, ಗುರುಗ್ರಾಮ, ಚಂಡೀಗಢ ಮತ್ತು ಬಿಕಾನೇರ್ ಸೇರಿದಂತೆ ಒಟ್ಟು 11 ಪ್ರಮುಖ ನಗರಗಳಲ್ಲಿ ಸುಮಾರು 115 ದಿನಗಳ ಕಾಲ ಇದರ ಶೂಟಿಂಗ್ ನಡೆಸಲಾಗಿದೆ. ನೈಜತೆಗೆ ಹತ್ತಿರವಿರುವಂತೆ ದೃಶ್ಯಗಳನ್ನು ಸೆರೆಹಿಡಿಯಲು ಇಷ್ಟೊಂದು ಬೃಹತ್ ಮಟ್ಟದ ಯೋಜನೆ ರೂಪಿಸಲಾಗಿತ್ತು.

56
200ಕ್ಕೂ ಹೆಚ್ಚು ಸಿಬ್ಬಂದಿ, 15 ವಿಎಫ್‌ಎಕ್ಸ್ ಸ್ಟುಡಿಯೋಗಳ ತಾಂತ್ರಿಕ ಬಲ
Image Credit : X

200ಕ್ಕೂ ಹೆಚ್ಚು ಸಿಬ್ಬಂದಿ, 15 ವಿಎಫ್‌ಎಕ್ಸ್ ಸ್ಟುಡಿಯೋಗಳ ತಾಂತ್ರಿಕ ಬಲ

ಈ ಸಿರೀಸ್‌ ರ್ಮಾಣದಲ್ಲಿ 200 ಕ್ಕೂ ಹೆಚ್ಚು ತಾಂತ್ರಿಕ ಕಲಾವಿದರು ಹಾಗೂ ಸಿಬ್ಬಂದಿ ವರ್ಗದವರು ಶ್ರಮಿಸಿದ್ದಾರೆ. ಅಷ್ಟೇ ಅಲ್ಲದೆ 4000 ಕ್ಕೂ ಹೆಚ್ಚು ದಿನಗೂಲಿ ಕಾರ್ಮಿಕರು ಈ ಬೃಹತ್ ಯೋಜನೆಗೆ ಕೆಲಸ ಮಾಡಿದ್ದಾರೆ. ಯುದ್ಧದ ನೈಜ ಹಾಗೂ ರೋಮಾಂಚನಕಾರಿ ದೃಶ್ಯಗಳನ್ನು ಪರದೆಯ ಮೇಲೆ ತರಲು ನೆಟ್‌ಫ್ಲಿಕ್ಸ್ ಭಾರತದ ಪ್ರಮುಖ 15 ವಿಎಫ್‌ಎಕ್ಸ್ (VFX) ಸ್ಟುಡಿಯೋಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡು ಅದ್ಭುತ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಬಳಸಿಕೊಂಡಿದೆ.

66
ಉದ್ಯಮಿ ಆನಂದ್ ಮಹೀಂದ್ರಾ ಮೆಚ್ಚುಗೆ ಹಾಗೂ ದೃಶ್ಯಾವಳಿಗಳ ವಿವರಣೆ
Image Credit : X

ಉದ್ಯಮಿ ಆನಂದ್ ಮಹೀಂದ್ರಾ ಮೆಚ್ಚುಗೆ ಹಾಗೂ ದೃಶ್ಯಾವಳಿಗಳ ವಿವರಣೆ

ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಕೂಡ ಈ ವೆಬ್ ಸೀರೀಸ್ ವೀಕ್ಷಿಸಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕಾರ್ಗಿಲ್‌ ಯುದ್ಧದಲ್ಲಿ ಭಾರತೀಯ ವಾಯುಪಡೆಯ ಪಾತ್ರ ಮತ್ತು ನಿರ್ಣಾಯಕ ಕೊಡುಗೆ ಎಷ್ಟು ಪ್ರಾಮುಖ್ಯವಾಗಿತ್ತು ಎಂಬುದನ್ನು ಈ ಸೀರೀಸ್ ವೀಕ್ಷಕರಿಗೆ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ. ಕೇವಲ ಭಾವನೆಗಳಿಗೆ ಸೀಮಿತವಾಗದೆ ಯುದ್ಧದ ತಾಂತ್ರಿಕತೆ, ನಿರ್ಧಾರಗಳು ಹಾಗೂ ನೈಜ ಘಟನೆಗಳನ್ನು ಅತ್ಯಂತ ಸೂಕ್ಷ್ಮ ವಿವರಗಳೊಂದಿಗೆ ಪರದೆಯ ಮೇಲೆ ತರಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಟಿವಿ ಶೋ
ವೆಬ್ ಸರಣಿ
ಸುದ್ದಿ
ಮನರಂಜನಾ ಸುದ್ದಿ
Latest Videos
Recommended Stories
Recommended image1
ಮುದ್ದಿನ ನಾಯಿ ಸಾವಿಗೆ ಕಣ್ಣೀರಿಟ್ಟ ಬಿಗ್ ಬಾಸ್ ಮಾಜಿ ಸ್ಪರ್ಧಿ, 13 ವರ್ಷದ ನೆನಪಿನೊಂದಿಗೆ ಭಾವುಕ ಪೋಸ್ಟ್
Recommended image2
ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಫುಲ್ ಟ್ಯಾಂಕ್ ಮಾಡಿಸಿ ಚೌಕಾಸಿ ಮಾಡಿದ ನಟಿ ವೈಷ್ಣವಿ ಗೌಡ! ₹5600 ಬಿಲ್‌ಗೆ ₹3000 ಕೊಡ್ತೀನಿ ಅನ್ನೋದಾ?
Recommended image3
ಕಾಫಿ, ಬೇಲ್​ಪುರಿ ಮಾರಿ ಹಣ ತಂದ: ಗೋಲ್ಡನ್​ ಸ್ಟಾರ್​ ಗಣೇಶ್​ 11 ವರ್ಷ ಪುತ್ರನ ರೋಚಕ ಸ್ಟೋರಿ ಹೇಳಿದ ಅಮ್ಮ
Related Stories
Recommended image1
ಕಾರ್ಗಿಲ್ ವೀರ, ‘ಲಯನ್‌ ಆಫ್‌ ಲಡಾಖ್ ’ ಕರ್ನಲ್ ಸೋನಮ್ ವಾಂಗ್ಚುಕ್ ನಿಧನ: ಭಾರತದ ಹೆಮ್ಮೆಯ ಪುತ್ರನಿಗೆ ಕಂಬನಿ
Recommended image2
ತಂದೆಯ ಕಾರ್ಗಿಲ್ ಯುದ್ಧ ಹೋರಾಟದ ಘಟನೆ ಬಿಚ್ಚಿಟ್ಟಿ ನಟಿ ರಾಗಿಣಿ ದ್ವಿವೇದಿ, ಅಂದು ಏನಾಗಿತ್ತು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved