- Home
- Entertainment
- TV Talk
- Sri Raghavendra Mahathme TV Serial: ವೈಭವದಿಂದ ನೆರವೇರಿದ ವೆಂಕಟನಾಥ, ಸರಸ್ವತಿಯ ವಿವಾಹ ಮಹೋತ್ಸವ!
Sri Raghavendra Mahathme TV Serial: ವೈಭವದಿಂದ ನೆರವೇರಿದ ವೆಂಕಟನಾಥ, ಸರಸ್ವತಿಯ ವಿವಾಹ ಮಹೋತ್ಸವ!
Sri Raghavendra Mahathme Kannada TV Serial: ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ವೆಂಕಟನಾಥ- ಸರಸ್ವತಿಯ ವಿವಾಹ ವೈಭವವು ಮಹಾಸಂಚಿಕೆಯ ರೂಪದಲ್ಲಿ ಪ್ರಸಾರಗೊಳ್ಳಲಿದೆ. ಹಾಗಾದರೆ ಯಾವಾಗ?

ಯಾವಾಗ ಪ್ರಸಾರ ಆಗಲಿದೆ?
ಶನಿವಾರ ಮತ್ತು ಭಾನುವಾರ (ಇಂದು ಮತ್ತು ನಾಳೆ) ಸಂಜೆ 5.30 ರಿಂದ 7 ಗಂಟೆಯವರೆಗೆ ರಾಯರ ಪೂರ್ವಾಶ್ರಮದ ಬದುಕಿನ ಸಂಭ್ರಮವನ್ನು ಕಣ್ತುಂಬಿಕೊಳ್ಳಬಹುದು.
ವೆಂಕಟನಾಥ ಸರಸ್ವತಿ ಮದುವೆ
ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ವೆಂಕಟನಾಥ ಎಂಬುದಾಗಿತ್ತು. ವಿಜಯೀಂದ್ರ ತೀರ್ಥರ ಅನುಗ್ರಹದಂತೆ ಅಧ್ಯಾಪನ ವೃತ್ತಿ ನಡೆಸುತ್ತಿದ್ದ ವೆಂಕಟನಾಥ ಸರಸ್ವತಿ ಎಂಬ ವಧುವನ್ನು ವಿವಾಹವಾದ.
ಧಾರಾವಾಹಿಯಲ್ಲಿ ಏನಾಗ್ತಿದೆ?
ರಾಯರ ಬದುಕಿನ ಪುಣ್ಯಕಥೆ ಶ್ರೀ ರಾಘವೇಂದ್ರ ಮಹಾತ್ಮೆಯು ಪ್ರಸ್ತುತ ವಿವಾಹದ ಘಟ್ಟದಲ್ಲಿದೆ. ವೆಂಕಟನಾಥ- ಸರಸ್ವತಿಯ ಮದುವೆಯನ್ನು ಮಾಧ್ವ ಸಂಪ್ರದಾಯದ ಅನುಸಾರ, ಹಳೆಯ ಕಾಲದ ರೀತಿ ರಿವಾಜುಗಳಂತೆ ಚಿತ್ರಿಸಲಾಗಿದೆ.
ಜನಮನ್ನಣೆ ಪಡೆದ ಸೀರಿಯಲ್
ನಾಂದಿ ಶಾಸ್ತ್ರ, ತುಳಸಿ ಪೂಜೆ, ಚಪ್ಪರ ಶಾಸ್ತ್ರ ಮತ್ತಿತರ ಶಾಸ್ತ್ರಗಳಿಂದ ವೆಂಕಟನಾಥನ ಮದುವೆಯು ಅದ್ಧೂರಿಯಾಗಿ ನಡೆಯಲಿದೆ. ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ, ರಾಯರ ಮೇಲಿನ ಭಕ್ತಿ, ಪ್ರೀತಿ ಇವುಗಳ ಕಾರಣದಿಂದ ಧಾರಾವಾಹಿಯು ಜನಮನ್ನಣೆ ಪಡೆದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

