- Home
- Entertainment
- TV Talk
- ಶ್ರೀ ರಾಘವೇಂದ್ರ ಮಹಾತ್ಮೆ: ರಾಯರ ಪೂರ್ವಾಶ್ರಮ ಪತ್ನಿ ಸರಸ್ವತಿ ಪ್ರೇತಾತ್ಮವಾಗಿದ್ದು ಯಾಕೆ?
ಶ್ರೀ ರಾಘವೇಂದ್ರ ಮಹಾತ್ಮೆ: ರಾಯರ ಪೂರ್ವಾಶ್ರಮ ಪತ್ನಿ ಸರಸ್ವತಿ ಪ್ರೇತಾತ್ಮವಾಗಿದ್ದು ಯಾಕೆ?
Sri Raghavendra Mahathme: ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ಪ್ರೇತಾತ್ಮವಾಗಿರುವ ಸರಸ್ವತಿ ಭಾಯ್ ಅವರಿಗೆ ರಾಘವೇಂದ್ರ ತೀರ್ಥರು ಮೋಕ್ಷ ನೀಡುತ್ತಿರುವ ಪ್ರೊಮೋ ನೀವು ನೋಡಿರಬಹುದು. ಆದರೆ ಸರಸ್ವತಿ ಭಾಯ್ ಸತ್ತ ಮೇಲೆ ಮೋಕ್ಷ ಸಿಗದೆ ಪಿಶಾಚಿಯಾಗಿದ್ದು ಯಾಕೆ ಗೊತ್ತಾ?

ಶ್ರೀ ರಾಘವೇಂದ್ರ ಮಹಾತ್ಮೆ
ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಶ್ರೀ ರಾಘವೇಂದ್ರ ಮಹಾತ್ಮೆ’. ಈ ಧಾರಾವಾಹಿಯಲ್ಲಿ ಸದ್ಯ ವೆಂಕಟನಾಥರು, ಶ್ರೀ ರಾಘವೇಂದ್ರ ಸ್ವಾಮಿಗಳಾಗಿ ದೀಕ್ಷೆ ಪಡೆದುಕೊಂಡಿರುವ ನಂತರದ ಕಥೆಗಳು ಪ್ರಸಾರವಾಗುತ್ತಿವೆ. ಇವತ್ತಿನ ಪ್ರೊಮೋದಲ್ಲಿ ಸರಸ್ವತಿ ಬಾಯಿ ಅವರು ಸದ್ಗತಿ ಪಡೆದಿರುವ ಕಥೆ ಪ್ರಸಾರವಾಗಿದೆ.
ಧೀಕ್ಷೆ ಪಡೆದ ವೆಂಕಟನಾಥರು, ದುಃಖದಲ್ಲಿ ಸರಸ್ವತಿ
ವೆಂಕಟನಾಥರಿಗೆ ತಮ್ಮ ನಿಜವಾದ ಹುಟ್ಟಿನ ಅರಿವಾಗಿ, ಆ ಬಳಿಕ ತಮ್ಮ ಗುರುಗಳಾದ ಶ್ರೀಸುಧೀಂದ್ರ ತೀರ್ಥರಿಂದ ರಾಘವೇಂದ್ರ ತೀರ್ಥರೆಂಬ ಹೆಸರಿನೊಂದಿಗೆ ಸಂನ್ಯಾಸ ದೀಕ್ಷೆಯನ್ನು ಸ್ವೀಕರಿಸಿದರು. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗಂಡ ಇದ್ದಕ್ಕಿದ್ದಂತೆ ಸಂನ್ಯಾಸ ಸ್ವೀಕರಿಸಿದುದು, ಸರಸ್ವತಿ ಬಾಯಿಗೆ ಒಪ್ಪಿಕೊಳ್ಳಲು ಸಾಧ್ಯವಾಗಲೇ ಇಲ್ಲ.
ಆತ್ಮವಾಗಿ ರಾಘವೇಂದ್ರ ತೀರ್ಥರನ್ನು ನೋಡುವ ಹಂಬಲ
ಪತಿಯು ಸಂನ್ಯಾಸ ಸ್ವೀಕರಿಸಿದರು ಎಂಬ ವಿಷಯ ತಿಳಿದು ಮನನೊಂದ ಸರಸ್ವತಿಬಾಯಿ, ಆ ದುಃಖವನ್ನು ಭರಿಸಲಾಗದೆ, ತನ್ನ ಮಗುವನ್ನು ಸಹ ಬಿಟ್ಟು, ತಾನು ಸಾವನ್ನಪ್ಪಿದರೆ, ಆತ್ಮದ ಮೂಲಕವಾದರೂ ತನ್ನ ಪತಿಯನ್ನು ನೋಡಬಹುದು ಎನ್ನುವ ಭ್ರಮೆಗೆ ಬೀಳುತ್ತಾರೆ ಸರಸ್ವತಿ
ಆತ್ಮಹತ್ಯೆ ಮಾಡಿಕೊಂಡ ಸರಸ್ವತಿ
ಹಾಗಾಗಿ ಸರಸ್ವತಿ ಬಾವಿಗೆ ಹಾರಿ ಪ್ರಾಣ ಬಿಟ್ಟು, ನಂತರ ಪಿಶಾಚಿಯಾಗಿ, ಶ್ರೀ ರಾಘವೇಂದ್ರರ ಆಶ್ರಮಕ್ಕೆ ಬರುತ್ತಾರೆ. ಆದರೆ ಸನ್ಯಾಸ ಸ್ವೀಕರಿಸಿದ ಮೇಲೆ ಸಂಸಾರವನ್ನು ಸಂಪೂರ್ಣವಾಗಿ ತ್ಯಜಿಸಿರುವ ಕಾರಣ ಸರಸ್ವತಿಗೆ ರಾಘವೇಂದ್ರರ ದರ್ಶನ ಪಡೆಯೋದಕ್ಕೂ ಸಾಧ್ಯವಾಗೋದಿಲ್ಲ.
ಪಿಶಾಚಿ ರೂಪದ ಸರಸ್ವತಿಗೆ ಸದ್ಗತಿ ನೀಡಿದ ರಾಘವೇಂದ್ರರು
ಪಿಶಾಚಿ ರೂಪದಲ್ಲಿದ್ದರೂ ಪತಿಯ ದರ್ಶನ ಮಾಡಬೇಕೆಂಬ ಆಕೆಯ ಅಂತಿಮ ಆಸೆಯಂತೆ, ರಾಯರು ತಮ್ಮ ದಿವ್ಯ ದೃಷ್ಟಿಯಿಂದ ಆಕೆಯ ಉಪಸ್ಥಿತಿಯನ್ನು ಗ್ರಹಿಸಿ, ನಂತರ ತಮ್ಮ ಕಮಂಡಲದ ಪವಿತ್ರ ತೀರ್ಥವನ್ನು ಆಕೆಯ ಮೇಲೆ ಪ್ರೋಕ್ಷಿಸಿ, ಆಕೆಯ ಪಾಪಗಳನ್ನು ಕಳೆದು ಮುಕ್ತಿ ಪಡೆಯುವಂತೆ ಮಾಡಿದರು.
ಶ್ರೀರಾಘವೇಂದ್ರ ಮಹಾತ್ಮೆ ನೋಡಿ
ಶ್ರೀರಾಘವೇಂದ್ರ ಪೂರ್ವಾಶ್ರಮ ಪತ್ನಿಯಾದರೂ, ಪ್ರೀತಿ ಕಳೆದುಕೊಂಡು, ಸಾವನ್ನೆ ಅಪ್ಪಿಕೊಂಡು, ಕೊನೆಗೆ ರಾಘವೇಂದ್ರ ಸ್ವಾಮಿಗಳ ಆಶೀರ್ವಾದಿಂದಲೇ ಮುಕ್ತಿ ಪಡೆದ ಸರಸ್ವತಿಬಾಯಿಯವರ ಮನಮುಟ್ಟುವ ಕಥೆ ಇದೇ ಶನಿವಾರ ‘ಶ್ರೀರಾಘವೇಂದ್ರ ಮಹಾತ್ಮೆ’ಯಲ್ಲಿ ಪ್ರಸಾರವಾಗಲಿದೆ ಮಿಸ್ ಮಾಡದೇ ನೋಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

