- Home
- Entertainment
- TV Talk
- Second Marriage: ತನ್ನದೇ ಹೆಂಡತಿಯ 2ನೇ ಮದುವೆಗೆ ಬಂದು ದಾಂಪತ್ಯಕ್ಕೆ ಶುಭ ಕೋರಿದ ಮಾಜಿ ಗಂಡ! ಫೋಟೋ ವೈರಲ್
Second Marriage: ತನ್ನದೇ ಹೆಂಡತಿಯ 2ನೇ ಮದುವೆಗೆ ಬಂದು ದಾಂಪತ್ಯಕ್ಕೆ ಶುಭ ಕೋರಿದ ಮಾಜಿ ಗಂಡ! ಫೋಟೋ ವೈರಲ್
ವೈವಾಹಿಕ ಜೀವನದಲ್ಲಿ ವಿಚ್ಛೇದನ ಎಂದರೆ ಸಾಮಾನ್ಯವಾಗಿ ಪರಸ್ಪರ ದೂರುಗಳು, ಕಹಿ ನೆನಪುಗಳು ಮತ್ತು ಶತ್ರುತ್ವವೇ ಹೆಚ್ಚಾಗಿರುತ್ತದೆ. ಆದರೆ ಮಲಯಾಳಂನ ಖ್ಯಾತ ಗಾಯಕಿ ಮತ್ತು ಸಂಗೀತ ನಿರ್ದೇಶಕಿ ಗೌರಿ ಲಕ್ಷ್ಮಿ ವಿವಾಹ ಅತ್ಯಂತ ಪ್ರಬುದ್ಧವಾದ ಸ್ನೇಹಕ್ಕೆ ಸಾಕ್ಷಿಯಾಗಿದೆ. ಫೋಟೋ ಭಾರೀ ವೈರಲ್ ಆಗಿದೆ.

ವೈವಾಹಿಕ ಜೀವನದಲ್ಲಿ ವಿಚ್ಛೇದನ ಎಂದರೆ ಸಾಮಾನ್ಯವಾಗಿ ಪರಸ್ಪರ ದೂರುಗಳು, ಕಹಿ ನೆನಪುಗಳು ಮತ್ತು ಶತ್ರುತ್ವವೇ ಹೆಚ್ಚಾಗಿರುತ್ತದೆ. ಆದರೆ ಮಲಯಾಳಂನ ಖ್ಯಾತ ಗಾಯಕಿ ಮತ್ತು ಸಂಗೀತ ನಿರ್ದೇಶಕಿ ಗೌರಿ ಲಕ್ಷ್ಮಿ ಅವರ ವಿವಾಹದ ವೇದಿಕೆ ಇಂದು ವಿಭಿನ್ನವಾದ ಮತ್ತು ಅತ್ಯಂತ ಪ್ರಬುದ್ಧವಾದ ಸ್ನೇಹಕ್ಕೆ ಸಾಕ್ಷಿಯಾಗಿದೆ. ಗೌರಿ ಲಕ್ಷ್ಮಿ ಅವರು ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಸಂಭ್ರಮದಲ್ಲಿ ಅವರ ಮಾಜಿ ಪತಿ ಗಣೇಶ್ ವೆಂಕಟರಮಣಿ ಅವರು ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಯಾರು ಈ ಗೌರಿ ಲಕ್ಷ್ಮಿ?
ಮಲಯಾಳಂ ಚಿತ್ರರಂಗದ ಪ್ರತಿಭಾನ್ವಿತ ಗಾಯಕಿ ಗೌರಿ ಲಕ್ಷ್ಮಿ ಕೇವಲ 13ನೇ ವಯಸ್ಸಿನಲ್ಲಿಯೇ ಮೋಹನ್ ಲಾಲ್ ನಟನೆಯ 'ಕಾಸನೋವಾ' ಚಿತ್ರದ 'ಸಖಿಯೇ...' ಹಾಡಿಗೆ ಸಂಗೀತ ಸಂಯೋಜಿಸುವ ಮೂಲಕ ಭಾರತದ ಅತ್ಯಂತ ಕಿರಿಯ ಮಹಿಳಾ ಸಂಗೀತ ನಿರ್ದೇಶಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆನಂತರ ಹಲವು ಹಿನ್ನೆಲೆ ಗೀತೆಗಳ ಮೂಲಕ ಅವರು ಮನೆಮಾತಾಗಿದ್ದಾರೆ.
ಮದುವೆ ಸಂಭ್ರಮ ಮತ್ತು ಮಾಜಿ ಪತಿಯ ಪೋಸ್ಟ್:
ಗೌರಿ ಲಕ್ಷ್ಮಿ ಅವರು ಖ್ಯಾತ ದೃಶ್ಯ ಕಲಾವಿದ ಕಲೇಶ್ ಗೋವಿಂದನ್ ಅವರನ್ನು ಕಳೆದ ಭಾನುವಾರ ಸರಳ ಸಮಾರಂಭದಲ್ಲಿ ವಿವಾಹವಾದರು. ಈ ಮದುವೆಯಲ್ಲಿ ಗೌರಿ ಅವರ ಮಾಜಿ ಪತಿ ಹಾಗೂ ಪ್ರಸಿದ್ಧ ಡ್ರಮ್ಮರ್ ಗಣೇಶ್ ವೆಂಕಟರಮಣಿ ಅವರು ಹಾಜರಿದ್ದು, ನವದಂಪತಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಫೋಟೋ ಹಂಚಿಕೊಂಡು, 'ಎಲ್ಲಾ ಕುಟುಂಬ ಸದಸ್ಯರೂ ಒಂದೇ ರಕ್ತಕ್ಕೆ ಸೇರಿದವರಾಗಿರಬೇಕು ಎಂದೇನಿಲ್ಲ' ಎಂಬ ಅರ್ಥಪೂರ್ಣ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಮುರಿಯದ ಸ್ನೇಹದ ಬಾಂಧವ್ಯ:
ಗೌರಿ ಮತ್ತು ಗಣೇಶ್ ದೀರ್ಘಕಾಲದ ಪ್ರೀತಿಯ ನಂತರ 2018ರಲ್ಲಿ ವಿವಾಹವಾಗಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿದ್ದರು. ವಿಚ್ಛೇದನ ಪಡೆದರೂ ಇವರಿಬ್ಬರ ನಡುವಿನ ಪರಸ್ಪರ ಗೌರವ ಮತ್ತು ಸ್ನೇಹ ಮಾಸಿಲ್ಲ. ಇಂದಿಗೂ ಗೌರಿ ಅವರ ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ವಿದೇಶಿ ಪ್ರವಾಸಗಳಲ್ಲಿ ಗಣೇಶ್ ಅವರೇ ಡ್ರಮ್ಮರ್ ಆಗಿ ಸಾಥ್ ನೀಡುತ್ತಾರೆ. ವೃತ್ತಿಪರ ಮತ್ತು ವೈಯಕ್ತಿಕ ಜೀವನವನ್ನು ಇಷ್ಟು ಪ್ರಬುದ್ಧವಾಗಿ ನಿಭಾಯಿಸುತ್ತಿರುವ ಈ ಜೋಡಿಯನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.
ವಿಚ್ಛೇದನದ ನಂತರ ಒಬ್ಬರನ್ನೊಬ್ಬರು ದೂಷಿಸುವ ಇಂದಿನ ಕಾಲಘಟ್ಟದಲ್ಲಿ, ಮಾಜಿ ಪತ್ನಿಯ ಹೊಸ ಜೀವನಕ್ಕೆ ಹಾರೈಸಲು ಬಂದ ಗಣೇಶ್ ಅವರ ನಡೆ ಮತ್ತು ಅದನ್ನು ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದ ಗೌರಿ-ಕಲೇಶ್ ದಂಪತಿಗಳ ಗುಣ ಅನೇಕರಿಗೆ ಮಾದರಿಯಾಗಿದೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

