- Home
- Entertainment
- TV Talk
- ಗಿಲ್ಲಿ ನಟ Bigg Boss ಗೆಲ್ಲಲ್ಲ ಎಂದು ಹೇಳಿ ತನ್ನದೇ ತಿಥಿ ಮಾಡ್ಕೊಳ್ಳಲು ರೆಡಿಯಾದ ಕನ್ನಡ ನಟ!
ಗಿಲ್ಲಿ ನಟ Bigg Boss ಗೆಲ್ಲಲ್ಲ ಎಂದು ಹೇಳಿ ತನ್ನದೇ ತಿಥಿ ಮಾಡ್ಕೊಳ್ಳಲು ರೆಡಿಯಾದ ಕನ್ನಡ ನಟ!
ಸತೀಶ್ ಕ್ಯಾಡಬಮ್ಸ್‌ಗೆ ಗಿಲ್ಲಿ ನಟನನ್ನು ಕಂಡರೆ ಆಗೋದೇ ಇಲ್ಲ. ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಸಂದರ್ಶನದಲ್ಲಿ, ಪಾರ್ಟಿಗಳಲ್ಲಿ ಸೇರಿದಂತೆ ಎಲ್ಲ ಕಡೆ ಗಿಲ್ಲಿಯನ್ನು ಹೀಯಾಳಿಸುತ್ತಿದ್ದಾರೆ. ವೀಕ್ಷಕರ ಪ್ರಕಾರ ಕಟ್ಟುಕಥೆ ಹೇಳುವ ಸತೀಶ್ ಕ್ಯಾಡಬಮ್ಸ್ ಗಿಲ್ಲಿ ವಿರುದ್ಧ ಸವಾಲು ಹಾಕಿದ್ದಾರೆ.

ಡಿವೋರ್ಸ್ ಮಾಡಿಕೊಳ್ತೀನಿ
ನಾನು 80000 ರೂ ಶರ್ಟ್ ಹಾಕ್ತೀನಿ, ನನ್ನ ಬ್ಲೇಜರ್ ಎರಡೂವರೆ ಲಕ್ಷ ರೂಪಾಯಿಗೆ ಮೀರಿದ್ದು, ನನ್ನ ಸನ್ ಗ್ಲಾಸ್ ಎರಡು ಲಕ್ಷ ರೂಪಾಯಿ ಎಂದು ಹೇಳುವ ಸತೀಶ್ ಅವರು ರೋಚಕವಾಗಿ ತಮ್ಮ ಲವ್‌ಸ್ಟೋರಿ, ಡಿವೋರ್ಸ್ ಕಥೆಯನ್ನು ಹೇಳಿದ್ದರು. ಈಗ ಇನ್ನೊಂದು ಪಾರ್ಟಿಗೆ ರೆಡಿ ಆಗಿದ್ದಾರೆ.
ತಿಥಿಗೆ ಪಾರ್ಟಿ ಕೊಡ್ತಾರೆ
ಗಿಲ್ಲಿ ನಟನಿಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದು, ಗಿಲ್ಲಿ ನಟನ ಫ್ಯಾನ್ಸ್ ಸ್ಲಮ್ ಎಂದು ಕರೆದಿದ್ದು ಅನೇಕರಿಗೆ ಬೇಸರ ಆಗಿತ್ತು. ಹೀಗಾಗಿ ಸತೀಶ್ ಅವರ ಶ್ರದ್ಧಾಂಜಲಿ ಪೋಸ್ಟರ್ ರೆಡಿ ಮಾಡಿದ್ದರು. ಈ ಬಗ್ಗೆ ಸತೀಶ್ ಮಾತನಾಡಿ, “ನಾನು ನನ್ನ ತಿಥಿ 11ನೇ ದಿನಕ್ಕೆ ಪಾರ್ಟಿ ಕೊಡ್ತೀನಿ, ವಡೆ, ಪಾಯಸ ಇರಲ್ಲ. ಹೈ ಲೆವೆಲ್ ಎಣ್ಣೆ, ಮಟನ್ ಇರುತ್ತದೆ. ಸೋತವರಿಗೋಸ್ಕರ ಪಾರ್ಟಿ ಕೊಡ್ತೀನಿ” ಎಂದಿದ್ದಾರೆ.
ಒಂದೂವರೆ ಸಾವಿರ ಜನರಿಗೆ ಆಹ್ವಾನ
“ಆ ಪಾರ್ಟಿಗೆ ಸೀಸನ್ 1 ರಿಂದ ಇಲ್ಲಿಯವರೆಗೆ ಯಾರು ಯಾರು ಸೋತರೋ ಅವರಿಗೆ ಪಾರ್ಟಿ ಕೊಡ್ತೀನಿ, ಗೆದ್ದವರಿಗೆ ಅಲ್ಲಿ ಅವಕಾಶ ಇಲ್ಲ, ಗಿಲ್ಲಿಯನ್ನು ಒಳಗಡೆ ಬಿಟ್ಟುಕೊಡೋದಿಲ್ಲ. ಆ ಪಾರ್ಟಿಗೆ ಒಂದೂವರೆ ಸಾವಿರ ಜನರಿಗೆ ಆಹ್ವಾನ ಕೊಡ್ತಾರಂತೆ” ಎಂದು ಹೇಳಿದ್ದಾರೆ.
ಫಿನಾಲೆಗೆ ರೆಡಿ, ಗಿಲ್ಲಿ ಗೆಲ್ಲಲ್ಲ
ಗಿಲ್ಲಿ ನಟ ಏನಾದರೂ ಗೆದ್ದರೆ, ಅವನ ಕಾಲು ತೂರುವೆ ಎಂದು ಸತೀಶ್ ಕ್ಯಾಡಬಮ್ಸ್ ಸವಾಲ್ ಹಾಕಿದ್ದಾರೆ. ಫಿನಾಲೆಗೆ ಭರ್ಜರಿಯಾಗಿ ರೆಡಿ ಆಗಿರುವ ಸತೀಶ್ ಅವರು ಡ್ಯಾನ್ಸ್ ಕೂಡ ಮಾಡ್ತಾರಂತೆ. ಇದಕ್ಕಾಗಿ ಶರ್ಟ್, ಬ್ಲೇಜರ್ ಕೂಡ ರೆಡಿ ಮಾಡಿಟ್ಟುಕೊಂಡಿದ್ದಾರಂತೆ.
ಮಗ ಫೇಲ್ ಆಗಿದ್ದಕ್ಕೆ ಪಾರ್ಟಿ
ಪಿಯುಸಿಯಲ್ಲಿ ಮಗ ಫೇಲ್ ಆದ ಎಂದು ಸತೀಶ್ ಅವರು ಭರ್ಜರಿ ಎಣ್ಣೆ ಪಾರ್ಟಿ ಕೊಟ್ಟಿದ್ದರು. ಅದಕ್ಕಾಗಿ ಅವರು ಲಕ್ಷಗಟ್ಟಲೇ ಹಣವನ್ನು ಖರ್ಚು ಮಾಡಿದ್ದರಂತೆ. ಈಗ ಮತ್ತೊಂದು ಪಾರ್ಟಿ ಮಾಡಲು ಕೂಡ ರೆಡಿ ಆಗಿದ್ದಾರೆ. ಸತೀಶ್ ಪಾರ್ಟಿ ಹೇಗೆ ಇರಲಿದೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

