- Home
- Entertainment
- TV Talk
- BBK 12 Ticket to Finale Task: ಆಟದ ನೆಪದಲ್ಲಿ ಮನುಷ್ಯತ್ವ ಮರೆತರಾ ರಾಶಿಕಾ; ಪ್ಲಸ್ ಆಗಿದ್ದು ಯಾರಿಗೆ?
BBK 12 Ticket to Finale Task: ಆಟದ ನೆಪದಲ್ಲಿ ಮನುಷ್ಯತ್ವ ಮರೆತರಾ ರಾಶಿಕಾ; ಪ್ಲಸ್ ಆಗಿದ್ದು ಯಾರಿಗೆ?
ಬಿಗ್ ಬಾಸ್ ಕನ್ನಡ ಸೀಸನ್ 12ರ 'ಟಿಕೆಟ್ ಟು ಸಿಕ್ಸ್ ಫಿನಾಲೆ' ಟಾಸ್ಕ್‌ನಲ್ಲಿ ರಾಶಿಕಾ ಮತ್ತು ಅಶ್ವಿನಿ ಗೌಡ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಅಶ್ವಿನಿ ಅವರ 20 ವರ್ಷಗಳ ನಟನಾ ವೃತ್ತಿಯನ್ನು ನಾಟಕ ಎಂದು ರಾಶಿಕಾ ಜರೆದಿದ್ದು, ಇದಕ್ಕೆ ಅಶ್ವಿನಿ ಕೂಡ ಖಾರವಾಗಿಯೇ ತಿರುಗೇಟು ನೀಡಿದ್ದಾರೆ.

ಬಿಗ್ ಬಾಸ್ ಸೀಸನ್ 12ರಲ್ಲಿ ಈಗಾಗಲೇ 100 ದಿನಗಳನ್ನು ಪೂರೈಸಿ ಫಿನಾಲೆ ರೇಸ್‌ನಲ್ಲಿರುವ 8 ಸ್ಪರ್ಧಿಗಳ ಪೈಕಿ ಟಿಕೆಟ್ ಟು ಸಿಕ್ಸ್ ಫಿನಾಲೆ (Bigg Boss Kannada Ticket to 6 Finale) ಟಾಸ್ಕ್ ಈ ವಾರ ನಡೆಸಲಾಗುತ್ತಿದೆ. ಇದೀಗ ಟಿಕೆಟ್ ಟು ಫಿನಾಲೆ ಟಾಸ್ಕ್‌ನಲ್ಲಿ ರಾಶಿಕಾ ಅವರು ಮಾನವೀಯತೆ, ಹಿರಿಯರಿಗೆ ಕೊಡುವ ಗೌರವ ಹಾಗೂ ನಟನೆಗೆ ಗೌರವ ಕೊಡುವುದನ್ನೇ ಮರೆತು ಬಿಟ್ಟಿದ್ದಾರೆ ಎಂಬ ಲಕ್ಷಣಗಳು ಕಂಡುಬರುತ್ತಿವೆ.
ತಲಾ ಇಬ್ಬರು ಸ್ಪರ್ಧಿಗಳ ಗುಂಪಿಗೆ ನಡೆಸಲಾಗುತ್ತಿರುವ ಟಾಸ್ಕ್‌ನಲ್ಲಿ ಮ್ಯೂಟೆಂಟ್ ರಘು ಮತ್ತು ರಾಶಿಕಾ ಒಟ್ಟಾಗಿ ಆಟವಾಡಿದ್ದಾರೆ. ಇವರಿಗೆ ಪ್ರತಿಸ್ಪರ್ಧಿಯಾಗಿ ನಟಿ ಅಶ್ವಿನಿ ಮತ್ತು ಧ್ರುವಂತ್ ಆಟವಾಡುತ್ತಿದ್ದಾರೆ.
ಈ ಟಾಸ್ಕ್‌ನಲ್ಲಿ ಒಂದು ಕಂಬವನ್ನು ಕೊಟ್ಟು ಗಟ್ಟಿಯಾಗಿ ಹಿಡಿದುಕೊಂಡಿರುವ ಸ್ಪರ್ಧಿಗಳಿಗೆ ನೀರನ್ನು ಮುಖಕ್ಕೆ ಎರಚುತ್ತಾ ಹಾಗೂ ಅವರನ್ನು ಚುಚ್ಚು ಮಾತುಗಳಿಂದ ಪ್ರವೋಕ್ ಮಾಡುತ್ತಾ ಕೈಲಿ ಹಿಡಿದಿರುವ ಕಂಬವನ್ನು ಬಿಡುವಂತೆ ಮಾಡಬೇಕು.
ಇದೀಗ ಬಿಗ್ ಬಾಸ್ ನೀಡಿದ ಟಾಸ್ಕ್‌ನಲ್ಲಿ ಧ್ರುವಂತ್ ಮತ್ತು ಅಶ್ವಿನಿ ಗೌಡ ಅವರು ಕಂಬವನ್ನು ಹಿಡಿದುಕೊಂಡು ನಿಂತುಕೊಂಡಿದ್ದಾರೆ. ಇವರ ಮುಖಕ್ಕೆ ನೀರು ಹಾಕುತ್ತಾ ಮಾತಿನ ಮೂಲಕ ಪ್ರವೋಕ್ ಮಾಡುವ ಕೆಲಸವನ್ನು ರಾಶಿಕಾ ಮತ್ತು ರಘು ಅವರು ಮಾಡುತ್ತಿದ್ದಾರೆ.
ರಘು ಅವರು ಧ್ರುವಂತ್ ಮುಖಕ್ಕೆ ಶಕ್ತಿ ಮೀರಿ ಬಕೆಟ್‌ನಿಂದ ನೀರನ್ನು ಎರಚುತ್ತಾ ತಬ್ಬಿಬ್ಬು ಮಾಡುತ್ತಿದ್ದಾರೆ. ಇದನ್ನು ತಡೆದುಕೊಂಡು ಧ್ರುವಂತ್ ಆಟವಾಡುತ್ತಿದ್ದಾನೆ. ಆದರೆ, ಮತ್ತೊಂದೆಡೆ ರಾಶಿಕಾ ನೀರೆರಚುವ ಭರಾಟೆಗೆ ಅಶ್ವಿನಿ ಅವರು ಥರಗುಟ್ಟಿ ಹೋಗುತ್ತಿದ್ದಾರೆ. ಆದರೂ, ಜಗಜಟ್ಟಿಯಂತೆ ಕಂಬವನ್ನು ಕೈಬಿಡದೇ ಗಟ್ಟಿಯಾಗಿ ಹಿಡಿದುಕೊಂಡು ಟಾಸ್ಕ್ ಮುಂದುವರೆಸಿದ್ದಾರೆ. ಆಟದಲ್ಲಿ ಸುಲಭವಾಗಿ ಸೋಲೊಪ್ಪಿಕೊಳ್ಳದ ಅಶ್ವಿನಿ ಯಾವುದೇ ಮಾತಿನ ಬಾಣಗಳು ತನ್ನತ್ತ ಬಂದರೆ ಮಾತ್ರ ಸಹಿಸಿಕೊಳ್ಳುವುದಿಲ್ಲ.
ಟಾಸ್ಕ್‌ನ ಜೊತೆಗೆ ರಾಶಿಕಾ ಅವರು ಅಶ್ವಿನಿ ಗೌಡ ಅವರನ್ನು ಪ್ರವೋಕ್ ಮಾಡುವುದಕ್ಕೆ ಕೆಲವೊಂದು ಮಾತನ್ನು ಹೇಳುತ್ತಾರೆ. ನಾವು ಒಳ್ಳೆಯವರಂತೂ ಆಗೊಲ್ಲ, ಒಳ್ಳೆಯವರಾಗಿ ಪೋಸ್ ಕೊಡುವ ಇಂಟೆನ್‌ಷನ್ ಕೂಡ ನಮಗಿಲ್ಲ ಎನ್ನುತ್ತಾ ಜೋರಾಗಿ ನೀರೆರಚುತ್ತಾರೆ. ಇದಕ್ಕೆ ಕೋಪಗೊಂಡ ಅಶ್ವಿನಿ, ಬಂದು ತಲೆ ಮೇಲೆ ನೀರು ಹಾಕು. ನನ್ನ ಕಣ್ಣು ಉರಿಯುತ್ತಿದೆ ಎಂದು ಜೋರಾಗಿ ಕೂಗುತ್ತಾರೆ.
ಇದಕ್ಕೆ ಮತ್ತಷ್ಟು ತುಪ್ಪ ಸುರಿಯುವಂತೆ ಮಾತನಾಡಿದ ರಾಶಿಕಾ ಇವೆಲ್ಲಾ ನಾಟಕಕಗಳು, 20 ವರ್ಷ ಆಕ್ಟಿಂಗ್ ಫೀಲ್ಡು ಅಲ್ವಾ, ಅದಕ್ಕೆ ಇಲ್ಲೂ ಬಂದು ನಾಟಕ ಮಾಡ್ತಿದ್ದಾರೆ ಎಂದು ಹೇಳುತ್ತಾರೆ. ಇದಕ್ಕೆ ತಿರುಗೇಟು ಕೊಟ್ಟ ಅಶ್ವಿನಿ ಗೌಡ ಅವರು 100 ಸಿನಿಮಾ ನಿನ್ನತರಹ ಒಂದು ಸಿನಿಮಾ ಅಲ್ಲ ಎಂದು ಹೇಳುತ್ತಾರೆ.
ಮಾತು ಮುಂದುವರೆಸಿದ ರಾಶಿಕಾ ಅಯ್ಯೋ..! ಅದಕ್ಕೆ ನೀನು ಯಾರು ಅಂತಾ ಎಷ್ಟೋ ಜನಕ್ಕೆ ಗೊತ್ತಿಲ್ಲ. ಇದಕ್ಕೆ ನಿನ್ನ ತರಹ ಜನರಿಗೆ ಗೊತ್ತಾಗೋದು ಬೇಡ ನಾವು ಎಂದು ಅಶ್ವಿನಿ ತಿರುಗೇಟು ಕೊಡುತ್ತಾರೆ. ಇಷ್ಟಕ್ಕೆ ಸುಮ್ಮನಾಗದ ರಾಶಿಕಾ ನಿಮ್ಮ ತರಹನೂ ಜನರಿಗೆ ಗೊತ್ತಾಗೋದು ಬೇಡ. ಅಪಾರ್ಥ ಮಾಡಿಕೊಂಡು, ಜನರನ್ನ ಮ್ಯಾನುಪುಲೆಟ್ ಮಾಡಿಕೊಂಡು ನಿಮ್ಮಂತೆ ಮಾನ ಮರ್ಯಾದೆ ತೆಕ್ಕೊಂಡು ನಾನು ಹೋಗುತ್ತಿಲ್ಲ ಎಂದು ಹೇಳುತ್ತಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ನೂರು ದಿನಗಳನ್ನು ಪೂರೈಸಿ ಅಂತಿಮ ಘಟ್ಟ ತಲುಪಿದೆ. ಟಾಪ್ 8 ಸ್ಪರ್ಧಿಗಳ ನಡುವೆ 'ಟಿಕೆಟ್ ಟು ಫಿನಾಲೆ'ಗಾಗಿ ಬಿಗ್ ಫೈಟ್ ನಡೆಯುತ್ತಿದೆ. ಈಗಾಗಲೇ ಗಿಲ್ಲಿ ನಟ ಸೋತು ಹೊರಬಿದ್ದಿದ್ದರೆ, ಕಾವ್ಯಾ ಟಾಪ್ 6ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಮ್ಯೂಟೆಂಟ್ ರಘು-ರಾಶಿಕಾ ಜೋಡಿ ಹಾಗೂ ಧ್ರುವಂತ್-ಅಶ್ವಿನಿ ಗೌಡ ಜೋಡಿ ನಡುವೆ ನಡೆದ ಟಾಸ್ಕ್ ಮಾತ್ರ ದ್ವೇಷದ ಅಖಾಡವಾಗಿ ಮಾರ್ಪಟ್ಟಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

