MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಸರಿಗಮಪ ಖ್ಯಾತಿಯ ಸುಹಾನಾ ಪ್ರೀತಿಯ ಪೋಸ್ಟ್‌ಗೆ ನೆಟ್ಟಿಗರು ಮಾಡಿದ ಕಮೆಂಟ್ ಏನು?

ಸರಿಗಮಪ ಖ್ಯಾತಿಯ ಸುಹಾನಾ ಪ್ರೀತಿಯ ಪೋಸ್ಟ್‌ಗೆ ನೆಟ್ಟಿಗರು ಮಾಡಿದ ಕಮೆಂಟ್ ಏನು?

ಸುಹಾನಾ ಪ್ರೀತಿಯ ಪೋಸ್ಟ್‌: ಸರಿಗಮಪ ಸೀಸನ್ 13ರ ಖ್ಯಾತಿಯ ಗಾಯಕಿ ಸುಹಾನಾ ಸೈಯದ್, 'ಶ್ರೀಕಾರ' ಹಾಡಿನ ಮೂಲಕ ಚರ್ಚೆಗೆ ಗ್ರಾಸವಾಗಿದ್ದರು. ಇದೀಗ ತಮ್ಮ ಬದುಕಿನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದು, ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಜೊತೆಗಿನ ತಮ್ಮ ಪ್ರೇಮವನ್ನು ಜಗತ್ತಿಗೆ ಸಾರಿದ್ದಾರೆ.

3 Min read
Mahmad Rafik
Published : Sep 21 2025, 07:08 PM IST
Share this Photo Gallery
  • FB
  • TW
  • Linkdin
  • Whatsapp
112
ಸರಿಗಮಪ ರಿಯಾಲಿಟಿ ಶೋ ಸೀಸನ್ 13
Image Credit : Suhaana Syed FB

ಸರಿಗಮಪ ರಿಯಾಲಿಟಿ ಶೋ ಸೀಸನ್ 13

ಸರಿಗಮಪ ರಿಯಾಲಿಟಿ ಶೋ ಸೀಸನ್ 13ರ ಮೂಲಕ ಮುನ್ನಲೆಗೆ ಬಂದ ಗಾಯಕಿ ಶಿವಮೊಗ್ಗ ಮೂಲದ ಸುಹಾನಾ ಸೈಯದ್. ಸಿನಿಮಾಗಳಿಗೆ ಹಿನ್ನೆಲೆ ಗಾಯನದ ಜೊತೆ ರಾಜ್ಯದ ಮೂಲೆ ಮೂಲೆಯಲ್ಲಿಯೂ ಸುಹಾನಾ ಸೈಯದ್ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.

212
 "ಶ್ರೀಕಾರ" ಹಾಡು ಹೇಳಿದ್ರು ಸುಹಾನಾ
Image Credit : Suhaana Syed FB

"ಶ್ರೀಕಾರ" ಹಾಡು ಹೇಳಿದ್ರು ಸುಹಾನಾ

ಬಹುಮುಖ ಪ್ರತಿಭೆಯಾಗಿರುವ ಸುಹಾನಾ ಸೈಯದ್, ಸರಿಗಮಪ ಸೀಸನ್ 13ರ ಮೆಗಾ ಆಡಿಷನ್‌ನಲ್ಲಿ ಆಯ್ಕೆ ಮಾಡಿಕೊಂಡಿದ್ದ ಹಾಡು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಬುರ್ಕಾ ಧರಿಸಿದ ಮುಸ್ಲಿಂ ಯುವತಿಯೊಬ್ಬಳು "ಶ್ರೀಕಾರ" ಹಾಡು ಕೇಳಿ ತೀರ್ಪುಗಾರರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆ ಸಂಚಿಕೆಯಲ್ಲಿ ಸುಹಾನಾ ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದರು.

Related Articles

Related image1
ನಿತಿನ್ ಜೊತೆಗಿನ ಪ್ರೇಮ ಪಯಣದ ಗುಟ್ಟು ಹಂಚಿಕೊಂಡ ಸರಿಗಮಪ ಶೋ ಗಾಯಕಿ ಸುಹಾನಾ ಸೈಯದ್
Related image2
ಅಮಿತಾಬ್ ಮೊಮ್ಮಗ ಅಗಸ್ತ್ಯ ಜೊತೆ ಮುದ್ದಾದ ಫೋಟೋ ಹಂಚಿಕೊಂಡ ಸುಹಾನಾ, ಡೇಟಿಂಗ್‌ಗೆ ಮತ್ತಷ್ಟು ಪುಷ್ಟಿ!
312
ಮುಕುಂದ ಮುರಾರಿ ಹಾಡಿನ ಮೂಲಕ ಉತ್ತರ
Image Credit : Suhaana Syed FB

ಮುಕುಂದ ಮುರಾರಿ ಹಾಡಿನ ಮೂಲಕ ಉತ್ತರ

ಸಂಚಿಕೆ ಪ್ರಸಾರವಾಗುತ್ತಿದ್ದಂತೆ ಸುಹಾನಾ ಸೈಯದ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೆಗೆಟಿವ್ ಕಮೆಂಟ್‌ಗಳು ಬರಲಾರಂಭಿಸಿದವು. ಮಾಧ್ಯಮಗಳಲ್ಲಿಯೂ ಸುಹಾನಾ ಸೈಯದ್ ಹಾಡಿನ ಬಗ್ಗೆ ತೀವ್ರ ಚರ್ಚೆಗಳು ನಡೆದವು. ತಮ್ಮ ವಿರುದ್ಧ ಕೇಳಿಬಂದ ಎಲ್ಲಾ ನಕಾರಾತ್ಮಕ ಟೀಕೆಗಳಿಗೆ ಸುಹಾನಾ ಸೈಯದ್, ಮುಕುಂದ ಮುರಾರಿ ಹಾಡಿನ ಮೂಲಕ ಉತ್ತರ ನೀಡಿದ್ದರು.

412
ಸಂಗಾತಿಯ ಆಯ್ಕೆ
Image Credit : Suhaana Syed FB

ಸಂಗಾತಿಯ ಆಯ್ಕೆ

ಇದೀಗ ಸುಹಾನಾ ಸೈಯದ್ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಇಬ್ಬರು ಜೊತೆಯಾಗಿ ಜೀವನ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ. ನಿತಿನ್ ಶಿವಾಂಶ್ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡಿರುವ ಸುಹಾನಾ, ನಮ್ಮ ಪ್ರೀತಿಗೆ ಯಾವುದೇ ಮಿತಿ ಇಲ್ಲ ಎಂದು ಬರೆದುಕೊಂಡು ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.

512
ಜೋಡಿಗೆ ಶುಭಾಶಯ
Image Credit : Suhaana Syed FB

ಜೋಡಿಗೆ ಶುಭಾಶಯ

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸುಹಾನಾ ಸೈಯದ್ ಮತ್ತು ನಿತಿನ್ ಶಿವಾಂಶ್‌ ಜೋಡಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅಭಿಮಾನಿಗಳು ಸುಹಾನಾ ಹೃದಯ ಕದ್ದ ಚೆಲುವ ಯಾರು ಎಂದು ಗೂಗಲ್ ಸರ್ಚ್ ಮಾಡುತ್ತಿದ್ದಾರೆ. ನಿತಿನ್ ಜೊತೆಗಿನ ಸುಹಾನಾ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕ್ಯೂಟ್ ಜೋಡಿಗೆ ಮುದ್ದಾದ ಪ್ರೀತಿಗೆ ನೆಟ್ಟಿಗರು ಏನು ಹೇಳಿದರು ಎಂದು ನೋಡೋಣ ಬನ್ನಿ.

612
ಸುಹಾನಾ ಪೋಸ್ಟ್‌ಗೆ ಬಂದಿರುವ ಆಯ್ದ ಕೆಲವು ಕಮೆಂಟ್‌ಗಳು ಇಲ್ಲಿವೆ
Image Credit : Suhaana Syed FB

ಸುಹಾನಾ ಪೋಸ್ಟ್‌ಗೆ ಬಂದಿರುವ ಆಯ್ದ ಕೆಲವು ಕಮೆಂಟ್‌ಗಳು ಇಲ್ಲಿವೆ

  • ಇಬ್ಬರ ಹೊಸ ಜೀವನ ನಂದಗೋಕುಲದಂತಿರಲಿ.
  • ಹಾಡೋ ಹಕ್ಕಿಗೆ ಜೊತೆಯಾದ ಭಾವ ಲಹರಿ. ಅಭಿನಂದನೆಗಳು.
  • ಶುಭಕಾಮನೆಗಳು ನನ್ನ ನೆಚ್ಚಿನ ಗಾಯಕಿಗೆ
  • Congratulations sister.. ಆದರೆ ನಿಮ್ಮ ಮನವ ಕದ್ದ ಕಳ್ಳನ ಹೆಸರು ಪರಿಚಯ ಮಾಡಲ್ಲವೇನು?
  • ಬೇಗ ಹೆಸರು ಹೇಳಿಬಿಡಿ ಅದರ ಮೇಲೆ ಇದನ್ಯಾವ ಲೆಕ್ಕ ಹಿಡಿಸಬೇಕು ಅಂತ ಹಸ್ಕೊಂಡ ಬಾಳ ಜನಾ ಕುಂತಾರ
712
ಸುಹಾನಾ ಪೋಸ್ಟ್‌ಗೆ ಬಂದಿರುವ ಆಯ್ದ ಕೆಲವು ಕಮೆಂಟ್‌ಗಳು ಇಲ್ಲಿವೆ
Image Credit : Suhaana Syed FB

ಸುಹಾನಾ ಪೋಸ್ಟ್‌ಗೆ ಬಂದಿರುವ ಆಯ್ದ ಕೆಲವು ಕಮೆಂಟ್‌ಗಳು ಇಲ್ಲಿವೆ

  • ಒಳ್ಳೆಯದಾಗಲೀ.. ಪರಸ್ಪರರನ್ನು ಗೌರವಿಸಿ ಉತ್ತಮ ಜೀವನ ನಡೆಸಿ.
  • ಶಾದಿ ಮುಬಾರಕ್ ಹೋ ಸುಹಾನಾ.
  • ಆ ಹುಡುಗ ಹಿಂದೂನೊ ಮುಸ್ಲಿಂ ಗೊತ್ತಿಲ್ಲ ಮತ್ತು ಬೇಕಾಗಿಲ್ಲ ಇಬ್ರೂ ಹ್ಯಾಪಿ ಆಗಿರಿ,ಆದ್ರೆ ನೀವು ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ತೆಗೆದುಕೊಳ್ಳುವ ನಿಲುವಿನ ಬಗ್ಗೆ ತುಂಬಾ ಗೌರವವಿದೆ.
  • ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಿಮ್ಮ ಮೇಲಿರಲಿ.
812
ಸುಹಾನಾ ಪೋಸ್ಟ್‌ಗೆ ಬಂದಿರುವ ಆಯ್ದ ಕೆಲವು ಕಮೆಂಟ್‌ಗಳು ಇಲ್ಲಿವೆ
Image Credit : Suhaana Syed FB

ಸುಹಾನಾ ಪೋಸ್ಟ್‌ಗೆ ಬಂದಿರುವ ಆಯ್ದ ಕೆಲವು ಕಮೆಂಟ್‌ಗಳು ಇಲ್ಲಿವೆ

  • ಇರ್ವರಿಗೂ ಅಭಿನಂದನೆಗಳು ಶುಭಮಸ್ತು.
  • ನಿಮ್ಮಿಬ್ಬರ ಬಾಳ ಪ್ರಯಾಣ ಸುಖಕರವಾಗಲಿ
  • ಪ್ರಭು ಶ್ರೀರಾಮಚಂದ್ರನ ಆಶೀರ್ವಾದ ಸದಾ ನಿಮ್ಮಿಬ್ಬರಮೆಲಿರಲಿ
  • ಸಹೋದರಿ ನಿಮ್ಮ ಜೋಡಿ ಬಹಳ ಅದ್ಬುತವಾಗಿದೆ. ನಿಮ್ಮಿಬ್ಬರ ಭವಿಷ್ಯ ಸುಖ ಸಂತೋಷದಿಂದ ಕೂಡಿರಲಿ
  • ಪ್ರೀತಿಯೇ ಪರಮ ಶ್ರೇಷ್ಠ
912
ಸುಹಾನಾ ಸೈಯದ್ ಹುಡುಗ ಯಾರು?
Image Credit : Suhaana Syed FB

ಸುಹಾನಾ ಸೈಯದ್ ಹುಡುಗ ಯಾರು?

ಸುಹಾನಾ ಸೈಯದ್ ಸಂಗಾತಿಯ ಹೆಸರು ನಿತಿನ್ ಶಿವಾಂಶ್. ರಂಗಭೂಮಿ ಕಲಾವಿದರಾಗಿರುವ ನಿತಿನ್ ಶಿವಾಂಶ್, ನೀನಾಸಂನಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಸುಹಾನಾ ಸಹ ಗಾಯನದ ಜೊತೆ ಯಕ್ಷಗಾನ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ.

1012
ಪ್ರೀತಿ ಬಗ್ಗೆ ಸುಹಾನಾ ಮಾತು
Image Credit : Suhaana Syed FB

ಪ್ರೀತಿ ಬಗ್ಗೆ ಸುಹಾನಾ ಮಾತು

ಪ್ರತಿ ಜೀವಿಯ ನಿರೀಕ್ಷೆ ಪ್ರೇಮಕ್ಕಾಗಿಯೇ, ಪ್ರೇಮಕ್ಕೆ ಕಾರಣ ಇಲ್ಲ. ಈ ಪ್ರೇಮ ಅನಂತ ದೂರದ ಸುಧೀರ್ಘ ಪ್ರಯಾಣ. ಪ್ರೇಮಕ್ಕೆ ಯಾವ ಮಿತಿ ಇಲ್ಲ, ಎಂಬುದಕ್ಕೆ ನಾವೇ ಸಾಕ್ಷಿ. ಹೃದಯಗಳ ಭಾಷೆ ಎಲ್ಲವನ್ನೂ ಮೀರಿದ್ದು. ಪ್ರತಿ ಸವಾಲು, ಪ್ರತಿ ಸಂಶಯ ಮತ್ತು ಪ್ರತಿ ಭಯದ ಮೌನದಲ್ಲಿಯೂ ನಮ್ಮನ್ನು ಹಿಡಿದಿಟ್ಟಿದ್ದು ಪ್ರೀತಿ. ಇಂದು, ನಮ್ಮ ಗುಟ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಿಮ್ಮ ಆಶೀರ್ವಾದವಿರಲಿ ಎಂದು ಸುಹಾನಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಟ್ವಿಸ್ಟ್ ಅಂದ್ರೆ ಇದು ನೋಡಿ: ವೀರಭದ್ರನ ಕುತಂತ್ರದ ಕತ್ತಲಲ್ಲಿ ಮುಳುಗಿದ ಮಾರಿಗುಡಿಗೆ ಸಾಕ್ಷಾತ್ಕಾರ

1112
ನೀನೇ ರಾಮ, ಅಲ್ಲಾ, ಯೇಸು
Image Credit : Suhaana Syed FB

ನೀನೇ ರಾಮ, ಅಲ್ಲಾ, ಯೇಸು

ಸರಿಗಮಪ ಸೀಸನ್ 13ರ ಮೆಗಾ ಆಡಿಷನ್‌ನಲ್ಲಿ ಸುಹಾನಾ ಸೈಯ್ಯದ್ "ಶ್ರೀಕಾರನೇ" ಎಂಬ ಹಾಡು ಹೇಳಿದ್ದರು. ಬುರ್ಖಾ ಧರಿಸಿದ್ದ ಮುಸ್ಲಿಂ ಮಹಿಳೆ ಹಿಂದೂ ಅಥವಾ ಧಾರ್ಮಿಕ ಗೀತೆಗಳನ್ನು ಹಾಡಬಹುದಾದ ಎಂಬ ಚರ್ಚೆಗಳು ನಡೆದಿದ್ದವು. ನಂತರ "ನೀನೇ ರಾಮ, ಅಲ್ಲಾ, ಯೇಸು" ಎಂಬ ಹಾಡು ಹೇಳಿ ಸುಹಾನಾ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದರು.

ಇದನ್ನೂ ಓದಿ: ಇದಪ್ಪಾ ಸಾಧನೆ ಅಂದ್ರೆ.. ಹಿಂದಿ ಸೀರಿಯಲ್‌ ಹೀರೋಯಿನ್‌ ಆದ ಉಡುಪಿ ಮೂಲದ ನಟಿ! ಯಾರದು?

1212
ಶಿವಮೊಗ್ಗ ಜಿಲ್ಲೆಯವರು ಸುಹಾನಾ
Image Credit : Suhaana Syed FB

ಶಿವಮೊಗ್ಗ ಜಿಲ್ಲೆಯವರು ಸುಹಾನಾ

ತಮ್ಮ ಕುರಿತ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಸುಹಾನಾ, ನಾನು ಇಲ್ಲಿ ಹಾಡಲು ಬಂದಿದ್ದೇನೆ. ನನಗೆ ಪ್ರತಿಭೆ ಇರೋದರಿಂದ ನನ್ನನ್ನು ಆಯ್ಕೆ ಮಾಡಲಾಗಿದೆ. ಹಾಡು ಹಾಡುತ್ತಾ ಸಂಗೀತ ಕಲಿಯಲು ಈ ವೇದಿಕೆ ಬಂದಿದ್ದೇನೆ ಎಂದು ಹೇಳಿದ್ದರು. ಸುಹಾನಾ ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ. ಸುಹಾನಾ ಯಕ್ಷಗಾನ ಕಲಾವಿದೆಯೂ ಆಗಿದ್ದಾರೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಜೀ ಕನ್ನಡ
ರಿಯಾಲಿಟಿ ಶೋ
ಸ್ಯಾಂಡಲ್‌ವುಡ್
ಪ್ರೀತಿ
ಸಾಮಾಜಿಕ ಮಾಧ್ಯಮ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved