- Home
- Entertainment
- TV Talk
- ಟ್ವಿಸ್ಟ್ ಅಂದ್ರೆ ಇದು ನೋಡಿ: ವೀರಭದ್ರನ ಕುತಂತ್ರದ ಕತ್ತಲಲ್ಲಿ ಮುಳುಗಿದ ಮಾರಿಗುಡಿಗೆ ಸಾಕ್ಷಾತ್ಕಾರ
ಟ್ವಿಸ್ಟ್ ಅಂದ್ರೆ ಇದು ನೋಡಿ: ವೀರಭದ್ರನ ಕುತಂತ್ರದ ಕತ್ತಲಲ್ಲಿ ಮುಳುಗಿದ ಮಾರಿಗುಡಿಗೆ ಸಾಕ್ಷಾತ್ಕಾರ
ಅಣ್ಣಯ್ಯ ಸೀರಿಯಲ್‌ನಲ್ಲಿ, ವೀರಭದ್ರನಿಂದ ಅಪಹರಣಕ್ಕೊಳಗಾದ ಶಾರದಮ್ಮಳನ್ನು ಪಾರ್ವತಿ ಮತ್ತು ಮಾದಪ್ಪನ ಸಹಾಯದಿಂದ ಶಿವು ರಕ್ಷಿಸಲು ಮುಂದಾಗಿದ್ದಾನೆ. ತಾನು ರಕ್ಷಿಸುತ್ತಿರುವುದು ತನ್ನ ತಾಯಿಯನ್ನೇ ಎಂಬ ಅರಿವಿಲ್ಲದ ಶಿವು, ರೌಡಿಗಳೊಂದಿಗೆ ಹೋರಾಡುತ್ತಾನೆ.

ಅಣ್ಣಯ್ಯ ಸೀರಿಯಲ್
ಅಣ್ಣಯ್ಯ ಸೀರಿಯಲ್‌ನಲ್ಲಿ ತಾಯಿ ಮತ್ತು ಮಗ ಒಂದಾಗುವ ಕಾಲ ಸನ್ನಿಹಿತವಾಗಿದೆ. ವೀರಭದ್ರನ ಮೋಸದಾಟದಲ್ಲಿ ಸಿಲುಕಿದ್ದ ಶಾರದಮ್ಮಳನ್ನು ಪಾರ್ವತಿ ಕಾಪಾಡಿದ್ದಾಳೆ. ಶಿವು ರೌದ್ರಾವತಾರಕ್ಕೆ ವೀರಭದ್ರ ಭಯದಿಂದ ನೀರು ಕುಡಿದಿದ್ದಾನೆ.
ತೋಟದ ಹಳೆ ಮನೆ
ಶಾರದಮ್ಮಳನ್ನು ವೀರಭದ್ರ ತೋಟದ ಹಳೆ ಮನೆಯೊಂದರಲ್ಲಿ ಬಂಧಿಸಿಟ್ಟಿರೋದು ತಿಳಿಯುತ್ತಿದ್ದಂತೆ ಮಾದಪ್ಪ ಮತ್ತು ಪಾರ್ವತಿ ತಡಮಾಡದೇ ಶಿವುಗೆ ವಿಷಯ ತಿಳಿಸಿದ್ದಾರೆ. ತಾನು ಕಾಪಾಡುತ್ತಿರೋದು ತನ್ನ ತಾಯಿ ಎಂಬ ವಿಷಯ ಶಿವುಗೆ ಗೊತ್ತಿಲ್ಲ. ಆದ್ರೆ ತೋಟದ ಮನೆಗೂ ಹೋಗುವ ಮೊದಲೇ ಮಾವನಿಗೆ ಎಲ್ಲಾ ವಿಷಯವನ್ನು ಶಿವು ತಿಳಿಸಿದ್ದನು.
ಗಟಗಟ ಅಂತ ನೀರು ಕುಡಿದ ವೀರಭದ್ರ
ವಿಷಯ ತಿಳಿದ ವೀರಭದ್ರ ತನ್ನ ಪಟಾಲಂಗೆ ಶಾರದಮ್ಮಳನ್ನು ತೋಟದ ಮನೆಯಿಂದ ಶಿಫ್ಟ್ ಮಾಡಲು ಸೂಚಿಸಿದ್ದಾನೆ. ಈ ವೇಳೆ ರೌಡಿಗಳು ಮತ್ತು ಶಿವು ಮಧ್ಯೆ ಘನಘೋರ ಕಾಳಗವೇ ನಡೆದಿದೆ. ಶಿವು ಮತ್ತು ಪಾರ್ವತಿ ಹೋರಾಟ ಮಾಡುತ್ತಿರುವ ವಿಷಯ ಕೇಳಿ ವೀರಭದ್ರ ಗಟಗಟ ಅಂತ ನೀರು ಕುಡಿದಿದ್ದಾನೆ.
ಮಾದಪ್ಪನ ಸಾಥ್
ಶಿವು ಮತ್ತು ಪಾರ್ವತಿ ಹೋರಾಟಕ್ಕೆ ಮಾದಪ್ಪನ ಸಾಥ್ ನೀಡಿದ್ದಾನೆ. ಶಿವು ಮುಖಕ್ಕೆ ಬಟ್ಟೆ ಹಾಕಿ ಹೊಡೆಯಲು ಮುಂದಾದ ರೌಡಿ ಎದೆಗೆ ಮಾದಪ್ಪ ಗನ್ ಇರಿಸಿದ್ದಾನೆ. ಇದೀಗ ಶಿವು ಮತ್ತು ಶಾರದಮ್ಮ ಮುಖಾಮುಖಿ ಆಗಬೇಕಿದೆ. ತಾಯಿ ಮತ್ತು ಮಗನ ಮಿಲನವನ್ನು ನೋಡಲು ವೀಕ್ಷಕರು ಕಾಯುತ್ತಿದ್ದಾರೆ.
ಇದನ್ನೂ ಓದಿ: ಸೀನನಿಂದ ಪಿಂಕಿಯನ್ನು ದೂರ ಮಾಡೋದ್ದಕ್ಕೆ ಒಂದೇ ಉಪಾಯ; ಮಾದಪ್ಪ ತೆಗೆದುಕೊಳ್ಳಬೇಕಿದೆ ಗಟ್ಟಿ ನಿರ್ಧಾರ
ಸತ್ಯ ತಿಳಿಬೇಕಿದೆ
ಮತ್ತೊಂದೆಡೆ ಶಾರದಮ್ಮಾ ತನ್ನ ಅತ್ತೆ ಎಂಬ ಸತ್ಯವೂ ಪಾರುಗೆ ತಿಳಿಯಬೇಕಿದೆ. ಇಂದು ಬಿಡುಗಡೆಯಾಗಿರುವ ಪ್ರೋಮೋ ನೋಡಿ ವೀಕ್ಷಕರು ಟ್ವಿಸ್ಟ್ ಅಂದ್ರೆ ಇದು ನೋಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ತಾಯಿಯ ಮುಖ ನೋಡುವಷ್ಟರಲ್ಲಿ ಆ ವೀರಭದ್ರ ಕರೆಂಟ್ ತೆಗೆಸುತ್ತಾನೆ. ನಂತರ ಕತ್ತಲೆಯಲ್ಲಿ ಶಾರದಮ್ಮಳನ್ನು ಅಲ್ಲಿಂದ ಕರೆದುಕೊಂಡು ಹೋಗಲಾಗುತ್ತೆ ಎಂದು ವೀಕ್ಷಕರು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: 'ಯಾವ ಸಮಸ್ಯೆಯಿಂದ ದಪ್ಪಗಾದ್ರಿ' ಎಂಬ ಪ್ರಶ್ನೆಗೆ Annayya Serial ಗುಂಡಮ್ಮನ ಉತ್ತರ ಕೇಳಿ.…