ಹಳ್ಳಿಮನೆ ಯಜಮಾನ್ತಿ ಈಗ ಜೈಲು ಹಕ್ಕಿ; ಸಂಗೀತಾ ದ್ವೇಷಿಸುವ ವಿನಯ್ ರಿಯಾಕ್ಷನ್ ನೋಡಿ!
ಸ್ಪರ್ಧಿಗಳಾದ ರಕ್ಷಕ್, ತುಕಾಲಿ ಅವರು, ನಮ್ರತಾ, ಸ್ನೇಹಿತ್, ವಿನಯ್ ಎಲ್ಲರೂ ಸಂಗೀತಾ ಅವರ ಹೆಸರು ಹೇಳಿದ್ದಾರೆ. ಎಲ್ಲರ ಮಾತಿನಲ್ಲಿಯೂ ಸಂಗೀತಾ ವ್ಯಕ್ತಿತ್ವದ ಬಗ್ಗೆ, ಅವರು ಉಳಿದ ಸ್ಫರ್ಧಿಗಳಿಗೆ ಸರಿಯಾಗಿ ಗೌರವ ಕೊಡುವುದಿಲ್ಲ ಎನ್ನುವುದರ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.
ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋ ಶುರುವಾಗಿ ಆಗಲೇ ನಾಲ್ಕು ವಾರಗಳಾಗಿವೆ. ಶುರುವಿನಿಂದಲೂ ವಿನಯ್ ಗೌಡ ಹಾಗೂ ಸಂಗೀತಾ ಶೃಂಗೇರಿ ನಡುವೆ ಏನೋ ಸರಯಿಲ್ಲ ಎಂಬುದು ಟವಿ ವೀಕ್ಷಕರಿಗೆ ಅನುಭವಕ್ಕೆ ಬರುತ್ತಲೇ ಇತ್ತು.
ಇದೀಗ, ವಿನಯ್ ಗೌಡ ಮನೆಯ ಕ್ಯಾಪ್ಟನ್ ಆದ ತಕ್ಷಣ ಮನೆಯ ಸದಸ್ಯರ ಅಭಿಪ್ರಾಯ ಪಡೆದು ವಿನಯ್ ಸಂಗೀತಾರನ್ನು ಜೈಲಿಗೆ ತಳ್ಳಿದ್ದಾರೆ. ಸಂಗೀತಾ ಜೈಲಿನೊಳಕ್ಕೆ ಹೋಗುವುದನ್ನು ತುಂಬಾ ಎಮೋಶನಲ್ ಆಗಿ ಕಾರ್ತಿಕ್ ನೋಡಿದ್ದಾರೆ. ಸಂಗೀತಾ ಕೂಡ ಫೀಲ್ ಮಾಡಿಕೊಂಡಿದ್ದಾರೆ.
ಸಂಗೀತಾ ಶೃಂಗೇರಿ ಬಗ್ಗೆ ಮೊದಲಿನಿಂದಲೂ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಹೊಟ್ಟೆಕಿಚ್ಚು ಇತ್ತು. ಅದರಲ್ಲೂ ಕಾರ್ತಿಕ್ ಮತ್ತು ಸಂಗೀತಾ ಪ್ರೇಮಿಗಳಾದ ಬಳಿಕವಂತೂ ದೊಡ್ಮನೆಯಲ್ಲಿ ಅವರಿಬ್ಬರ ಬಗ್ಗೆ ಉರಿದುಕೊಳ್ಳುವುದು ದಿನನಿತ್ಯದ ಕೆಲಸವಾಗಿತ್ತು.
ಈ ಮೊದಲು ಹಳ್ಳಿಮನೆ ಯಜಮಾನ್ತಿಯಾಗಿದ್ದ ಸಂಗೀತಾ ಶೃಂಗೇರಿ ಈಗ ಜೈಲುಹಕ್ಕಿ ಆಗಿದ್ದಾರೆ. ಕಾರ್ತಿಕ್ ಮನೆಯಲ್ಲಿ ಒಬ್ಬಂಟಿ ಆಗಿದ್ದಾರೆ. ಜತೆಗೆ, ಸಂಗೀತಾ ಕೂಡ ಜೈಲಿನಲ್ಲಿ ಒಬ್ಬಂಟಿ ಆಗಿಬಿಟ್ಟಿದ್ದಾರೆ. ಮುಂದೆ ಸಂಗೀತಾಗೆ ಅದೇನೇನು ಕಾದಿದೆಯೋ ಏನೋ!
4 ನೇ ವಾರದಲ್ಲಿ ಬಿಗ್ ಬಾಸ್ ಮನೆಯಲ್ಲಿ ಹೊಸ ಹೊಸ ಅಧ್ಯಾಯವೊಂದು ತೆರೆದುಕೊಂಡಿವೆ. ವಿನಯ್ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾದ ಮರುಕ್ಷಣವೇ ಎದುರಾಳಿ ತಂಡದ ನಾಯಕಿ ಸಂಗೀತಾ ಶೃಂಗೇರಿ ಅವರಿಗೆ ಏನೋ ಕಾದಿದೆ ಎಂಬುದು ನಿಕ್ಕಿಯಾಗಿಹೋಗಿತ್ತು.
ಸಂಗೀತಾ ಶೃಂಗೇರಿಗೆ ಒದಗಿಬಂದಿರುವ ಗ್ರಹಚಾರ ಏನು ಎಂಬುದು ಈಗ ಬಿಡುಗಡೆ ಮಾಡಿರುವ ಪ್ರೋಮೊ ಮೂಲಕ ಜಗಜ್ಜಾಹೀರಾಗಿದೆ.
ಈ ವಾರ ಕಳಪೆ ಪ್ರದರ್ಶನ ನೀಡಿದವರು ಯಾರು ಎಂಬುದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ಈ ಸಮಯದಲ್ಲಿ ಸ್ಪರ್ಧಿಗಳಾದ ರಕ್ಷಕ್, ತುಕಾಲಿ ಅವರು, ನಮ್ರತಾ, ಸ್ನೇಹಿತ್, ವಿನಯ್ ಎಲ್ಲರೂ ಸಂಗೀತಾ ಅವರ ಹೆಸರು ಹೇಳಿದ್ದಾರೆ. ಎಲ್ಲರ ಮಾತಿನಲ್ಲಿಯೂ ಸಂಗೀತಾ ವ್ಯಕ್ತಿತ್ವದ ಬಗ್ಗೆ, ಅವರು ಉಳಿದ ಸ್ಫರ್ಧಿಗಳಿಗೆ ಸರಿಯಾಗಿ ಗೌರವ ಕೊಡುವುದಿಲ್ಲ ಎನ್ನುವುದರ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ.
ಸ್ನೇಹಿತ್ ಅವರಂತೂ, ಸಂಗೀತಾರಿಂದ ಇಡೀ ಮನೆಯ ವಾತಾವರಣವೇ ಹಾಳಾಗಿದೆ ಎಂದು ದೂರಿದ್ದಾರೆ. ಆದರೆ, ತಾವು ಜೈಲಿನೊಳಕ್ಕೆ ಹೋಗುವ ಮೊದಲು ಸಂಗೀತಾ ಮಾತ್ರ, ಮೊದಲು ತಪ್ಪಾಗಿದ್ದು ನನ್ನಿಂದಲ್ಲ , ಬೇರೆಯವರಿಂದ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
'ಇಡೀ ಮನೆ ನನ್ನ ಅಗೇನಸ್ಟ್ ಇರೋ ಹಾಗೇ ಅನಿಸ್ತಿದೆ'ಎ ಂದು ಹೇಳಿದ್ದಾರೆ ಸಂಗೀತಾ. ಅಭಿಪ್ರಾಯ ಸಂಗ್ರಹದ ಬಳಿಕ ಜೈಲಿನ ಉಡುಗೆ ತೊಟ್ಟುಕೊಂಡು ಸಂಗೀತಾ ಜೈಲಿನೊಳಗೆ ಇಳಿದಿದ್ದಾರೆ.
ವಿನಯ್ ಜೈಲಿನ ಬಾಗಿಲಿಗೆ ಬೀಗ ಹಾಕಿದ್ದಾರೆ. ಕಾರ್ತಿಕ್ ಮೌನವಾಗಿ ಇದನ್ನೆಲ್ಲ ನೋಡುತ್ತಿದ್ದಾರೆ. ಸಂಗೀತಾ ಕೂಡ ಕಾರ್ತಿಕ್ ನೋಡಿ ನಿಟ್ಟುಸಿರು ಬಿಟ್ಟಿದ್ದಾಳೆ. ಕಾರ್ತಿಕ್ ಮೌನದ ಹಿಂದಿರುವ ಕೋಪ, ಸಂಗೀತಾ ನೋವಿನ ಪರಿಣಾಮ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.