- Home
- Entertainment
- TV Talk
- BBK 12: ಎಲ್ಲಾ ಬಿಟ್ಟು ಗಿಲ್ಲಿ ನಟನ ಕೂದಲಿನ ಬಗ್ಗೆ Kavya Shaiva-Rakshita ನಡುವೆ ಮಾತಿನ ಚಕಮಕಿ! ಆಗಿದ್ದೇನು?
BBK 12: ಎಲ್ಲಾ ಬಿಟ್ಟು ಗಿಲ್ಲಿ ನಟನ ಕೂದಲಿನ ಬಗ್ಗೆ Kavya Shaiva-Rakshita ನಡುವೆ ಮಾತಿನ ಚಕಮಕಿ! ಆಗಿದ್ದೇನು?
ಬಿಗ್ಬಾಸ್ 12ರ ಫಿನಾಲೆ ಹತ್ತಿರವಾಗುತ್ತಿದ್ದಂತೆ, ಗಿಲ್ಲಿ ನಟನ ಕೆದರಿದ ಕೂದಲಿನ ವಿಚಾರವಾಗಿ ಕಾವ್ಯಾ ಶೈವ ಮತ್ತು ರಕ್ಷಿತಾ ಶೆಟ್ಟಿ ನಡುವೆ ಮಾತಿನ ಚಕಮಕಿ ನಡೆದಿದೆ. ಒಬ್ಬರು ತಲೆ ಬಾಚಲು ಹೇಳಿದರೆ, ಮತ್ತೊಬ್ಬರು ಹಾಗೆಯೇ ಇರುವುದು ಚೆಂದ ಎಂದಿದ್ದು, ಇಬ್ಬರ ನಡುವಿನ ಪೈಪೋಟಿಯನ್ನು ಇದು ತೋರಿಸುತ್ತಿದೆ.

ಟಾಸ್ಕ್ ಭರಾಟೆ
ಬಿಗ್ಬಾಸ್ ಮುಗಿಯಲು ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಟಾಸ್ಕ್ ಭರಾಟೆಯೂ ಜೋರಾಗಿ ನಡೆಯುತ್ತಿದೆ. ಇದರ ನಡುವೆಯೇ ಗಿಲ್ಲಿ ನಟನೇ ಬಿಗ್ಬಾಸ್ 12 (Bigg Boss 12) ವಿನ್ ಆಗುವುದು ಎನ್ನುವ ಚರ್ಚೆಯೂ ಜೋರಾಗಿಯೇ ನಡೆಯುತ್ತಿದೆ.
ಕೂದಲ ಬಗ್ಗೆ ಚಕಮಕಿ
ಇದರ ನಡುವೆಯೇ ಇದೀಗ ಗಿಲ್ಲಿ ನಟನ ತಲೆಗೂದಲಿನ ಬಗ್ಗೆ ರಕ್ಷಿತಾ ಶೆಟ್ಟಿ ಮತ್ತು ಕಾವ್ಯಾ ಶೈವ (Bigg Boss Rakshita Shetty and Kavya Shaiva) ನಡುವೆ ಮಾತಿನ ಚಕಮಕಿ ನಡೆದಿದೆ.
ಕೆದರಿದ ಕೂದಲು
ಅಷ್ಟಕ್ಕೂ ಆಗಿದ್ದೇನೆಂದರೆ, ಬಿಗ್ಬಾಸ್ ವಿಕ್ಷಕರಿಗೆ ತಿಳಿದಿರುವಂತೆ ಗಿಲ್ಲಿನಟನ ಕೂದಲು ಯಾವಾಗಲೂ ಕೆದರಿದ ರೀತಿಯಲ್ಲಿಯೇ ಇರುತ್ತದೆ. ಈಚೆಗೆ ಟ್ಯಾಟೂ ಆರ್ಟಿಸ್ಟ್ ಒಬ್ಬರು, ತಮಗೆ ಗಿಲ್ಲಿ ನಟನ ಟ್ಯಾಟೂ ಮಾಡುವಾಗ ಕೆದರಿದ ಕೂದಲು ಮಾಡುವುದು ಕಷ್ಟವಾಗ್ತಿದೆ. ಅವರಿಗೆ ಯಾರಾದರೂ ಬಾಚಣಿಕೆ ಕೊಡಿ ಎಂದು ತಮಾಷೆ ಮಾಡಿದ್ದರು.
ಕಾವ್ಯಾ ಹೇಳಿದ್ದೇನು?
ಅದೇ ರೀತಿ ಇದೀಗ, ಗಿಲ್ಲಿ ನಟನ ಕೂದಲು ನೋಡಿದ ಕಾವ್ಯಾ ಶೈವ, ಹೋಗಿ ತಲೆ ಬಾಚಿಕೊಂಡು ಬಾ ಎಂದಿದ್ದಾರೆ. ಅದಕ್ಕೆ ಗಿಲ್ಲಿ ಇನ್ನೂ ಸ್ನಾನ ಆಗಿಲ್ಲ. ಸ್ನಾನ ಆದ್ಮೇಲೆ ಬಾಚುವೆ ಎಂದಿದ್ದಾರೆ.
ರಕ್ಷಿತಾ ಹೇಳಿದ್ದೇ ಬೇರೆ
ಅದಕ್ಕೆ ಮಧ್ಯೆ ಪ್ರವೇಶಿಸಿದ ರಕ್ಷಿತಾ ಶೆಟ್ಟಿ ನನಗೆ ಇವರ ಕೂದಲು ಹೀಗೆಯೇ ಇದ್ದರೇನೇ ಚೆಂದ. ನೀವು ಹೀಗೆಯೇ ಇರಿ, ಬಾಚುವುದು ಬೇಡ ಎಂದಿದ್ದಾರೆ.
ಕಾವ್ಯಾ-ರಕ್ಷಿತಾ ನಡುವೆ ಚಕಮಕಿ
ಆಗ ಕಾವ್ಯಾ, ಇಲ್ಲಿ ಅವರು ಬಾಚಬೇಕು, ಇದು ಚೆನ್ನಾಗಿರಲ್ಲ ಎಂದಿದ್ದರೆ, ರಕ್ಷಿತಾ ಬೇಡ ಅವರ ಕೂದಲು ಹೀಗೆಯೇ ಇರಲಿ ಎಂದಿದ್ದಾರೆ. ಒಟ್ಟಿನಲ್ಲಿ ಗಿಲ್ಲಿನಟನಿಗಾಗಿ ಕಾವ್ಯಾ ಮತ್ತು ರಕ್ಷಿತಾ ನಡುವೆ ಪೈಪೋಟಿ ನಡೆದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

