- Home
- Entertainment
- TV Talk
- Bigg Boss ಮನೆಯಲ್ಲಿ Triangle Love Story! ಯಾರಿಗೆ ಯಾರು ಸಿಕ್ತಾರೆ? ನಟ ಗೌರವ್ ಶೆಟ್ಟಿ ಕೊಟ್ರು ರಿಯಾಕ್ಷನ್!
Bigg Boss ಮನೆಯಲ್ಲಿ Triangle Love Story! ಯಾರಿಗೆ ಯಾರು ಸಿಕ್ತಾರೆ? ನಟ ಗೌರವ್ ಶೆಟ್ಟಿ ಕೊಟ್ರು ರಿಯಾಕ್ಷನ್!
ಬಿಗ್ಬಾಸ್ ಸೀಸನ್ 12 ರಲ್ಲಿ ಗಿಲ್ಲಿ ನಟ, ಕಾವ್ಯಾ ಶೈವ ಮತ್ತು ರಕ್ಷಿತಾ ಶೆಟ್ಟಿ ನಡುವೆ ತ್ರಿಕೋನ ಪ್ರೇಮಕಥೆ ಶುರುವಾಗಿದೆ ಎಂಬ ಚರ್ಚೆ ಜೋರಾಗಿದೆ. ಗಿಲ್ಲಿ ನಟನ ಹಾಸ್ಯ ಪ್ರವೃತ್ತಿಗೆ ರಕ್ಷಿತಾ ಮನಸೋತಿದ್ದು, ಇದರ ಬಗ್ಗೆ ನಟ ಗೌರವ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಎಲ್ಲವೂ ಮಾಮೂಲು
ಬಿಗ್ಬಾಸ್ (Bigg Boss) ಎಂದರೆ ಅಲ್ಲಿ ಸಾಮಾನ್ಯವಾಗಿ ಲವ್ಸ್ಟೋರಿ ಇದ್ದೇ ಇರುತ್ತದೆ. ಗಲಾಟೆ, ಕಿರುಚಾಟ, ಗದ್ದಲ, ಹಾರಾಟ, ಕೂಗಾಟ ಕೆಲವೊಮ್ಮೆ ಕೆಲವು ಭಾಷೆ ಬಿಗ್ಬಾಸ್ನಲ್ಲಿ ಕೈಕೈ ಮಿಲಾಯಿಸುವುದು, ಮಂಚದ ದೃಶ್ಯಗಳು ಎಲ್ಲವೂ ಮಾಮೂಲೇ. ಇಂಥ ದೃಶ್ಯಗಳು ಹೆಚ್ಚಿದಂತೆ ಟಿಆರ್ಪಿ ಕೂಡ ಹೆಚ್ಚಾಗುವ ಕಾರಣ, ಯಾವುದೇ ಮುಜುಗರ ಇಲ್ಲದೆ ಇಂಥ ದೃಶ್ಯಗಳನ್ನು ಪ್ರಸಾರ ಮಾಡುವುದೂ ಮಾಮೂಲೆ.
ಬಿಗ್ಬಾಸ್ ಜಾಣ್ಮೆ
ಬಿಗ್ಬಾಸ್ ಕನ್ನಡದ ಇತಿಹಾಸದ ಮಟ್ಟಿಗೆ ಹೇಳುವುದಾದರೆ, ಲವ್ ಸ್ಟೋರಿಗಳು ಸಾಮಾನ್ಯವಾಗಿ ಇದ್ದೇ ಇವೆ. ಆದರೆ ಎಲ್ಲಿಯೂ ಗಡಿಯನ್ನು ಮೀರಲಿಲ್ಲ ಎನ್ನುವ ಸಮಾಧಾನವಿದೆ. ಅಷ್ಟಕ್ಕೂ ಅಂಥವರನ್ನು ಹೆಕ್ಕಿ, ಬಿಗ್ಬಾಸ್ಗೆ ಕಳಿಸುವ ಚಾಕಚಕ್ಯತೆಯೂ ಇದಕ್ಕೆ ಒಂದು ಕಾರಣ. ಹಾಗೂ ಅಂಥ ವಾತಾವರಣಗಳನ್ನು ಅಲ್ಲಿ ಸೃಷ್ಟಿಸುವ ಮೂಲಕ ಅಲ್ಲಿಯೇ ಲವ್ ಮಾಡುವುದು, ಹೊರಗೆ ಬಂದ ಮೇಲೆ ಬೇರೆಯಾಗುವುದು... ಒಬ್ಬರನ್ನೊಬ್ಬರು ಬಿಟ್ಟೇ ಇರಲ್ಲ ಎನ್ನುವ ಹಾಗೆ ಒಳಗೆ ಪೋಸ್ ಕೊಡುವುದು, ಹೊರಗೆ ಬಂದ ಮೇಲೆ ನೀನ್ಯಾರೋ, ನಾನ್ಯಾರೋ ಎನ್ನುವುದು ಎಲ್ಲವನ್ನೂ ವೀಕ್ಷಕರು ನೋಡಿದ್ದಾರೆ.
ಬಿಗ್ಬಾಸ್ ಲವ್ಸ್ಟೋರಿ
ಈ ಬಾರಿಯ ಕನ್ನಡದ ಬಿಗ್ಬಾಸ್ನಲ್ಲಿ ಹೇಳುವುದಾದರೆ, ಗಿಲ್ಲಿ ನಟ ಮತ್ತು ಕಾವ್ಯಾ ಶೈವ ನಡುವೆ ತಮಾಷೆಯ ಲವ್ಸ್ಟೋರಿ ನಡೆಯುತ್ತಿದೆ. ಇದೇನೂ ಸೀರಿಯಲ್ ಅಲ್ಲ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಗಿಲ್ಲಿ ನಟ (Bigg Boss Gilli Nata) ಏನೇ ಇದ್ದರೂ ಅದನ್ನು ಹಾಸ್ಯದ ಮೂಲಕವೇ ತೋರಿಸುವವರು. ಅದೇ ರೀತಿ ಕಾವು ಕಾವು ಎಂದು ರೇಗಿಸುತ್ತಾ ಇರುವ ಕಾರಣದಿಂದ ಇವರಿಬ್ಬರ ನಡುವೆ ಪ್ರೀತಿ ಇದೆ ಎಂದುಕೊಂಡವರೇ ಹೆಚ್ಚು.
ಇಂಥ ಹುಡುಗ ಬೇಕು
ಅದೇ ಇನ್ನೊಂದೆಡೆ, ಈಚೆಗೆ ಮಂಗಳೂರು ಪುಟ್ಟಿ ರಕ್ಷಿತಾ ಶೆಟ್ಟಿ (Bigg Boss Rakhita Shetty) ನನಗೆ ಗಿಲ್ಲಿ ನಟನಂಥ ಹುಡುಗನೇ ಬೇಕು. ಇದೇ ರೀತಿ ಜೋಕ್ ಮಾಡುತ್ತಿರಬೇಕು ಎಂದಿದ್ದರು. ಅದೇ ಕಾರಣಕ್ಕೆ ಗಿಲ್ಲಿ ಮೇಲೆ ರಕ್ಷಿತಾಗೆ ಮನಸ್ಸು ಆಗಿದೆ ಎಂದೇ ಕಮೆಂಟಿಗರು ಹೇಳ್ತಿದ್ದಾರೆ.
Triangle Love Story
ಒಟ್ಟಿನಲ್ಲಿ, ಇದೀಗ ಬಿಗ್ಬಾಸ್ ಸೀಸನ್ 12 (BBK 12) ತ್ರಿಕೋನ ಲವ್ಸ್ಟೋರಿ (Triangle Love Story) ಶುರುವಾಗಿದೆ ಎಂದೇ ಹೇಳಲಾಗುತ್ತಿದೆ. ಇದೀಗ ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ನಟ ಗೌರವ್ ಶೆಟ್ಟಿ ಈ ಬಗ್ಗೆ ರಿಯಾಕ್ಷನ್ ಕೊಟ್ಟಿದ್ದಾರೆ.
ನಾವು ಯಾರನ್ನು ಪ್ರೀತಿಸುತ್ತೇವೆಯೋ
ನಾವು ಯಾರನ್ನು ಪ್ರೀತಿಸುತ್ತೇವೆಯೋ ಎನ್ನುವುದಕ್ಕಿಂತಲೂ, ನಮ್ಮನ್ನು ಯಾರು ಪ್ರೀತಿಸುತ್ತಾರೋ ಅವರ ಮೇಲೆ ಒಲವು ತೋರಬೇಕು ಎನ್ನುವ ಮಾತಿದೆ ಎನ್ನುತ್ತಲೇ, ರಕ್ಷಿತಾ ಶೆಟ್ಟಿ ಪರ ಇದ್ದಾರೆಯೇ ಎನ್ನುವ ಹಾಗೆ ಮಾತನಾಡಿದರು ನಟ. ಆದರೆ ಮುಂದುವರೆದ ಅವರು, ಇವರು ಮೂವರಲ್ಲಿ ಲವ್ ಇದೆ ಎಂದು ಹೇಳಲು ಆಗದು. ಬಿಗ್ಬಾಸ್ ಮನೆಯಲ್ಲಿ ಇರುವ ಅಷ್ಟೇ ಜನರೊಟ್ಟಿಗೆ ಹೀಗೆಲ್ಲಾ ಆಗುವುದು ಸಹಜ. ಅದನ್ನು ಪ್ರೀತಿ ಎಂದು ಹೇಳಲು ಆಗದು ಎಂದಿದ್ದಾರೆ.
ಲವ್ ಎನ್ನೋದು
ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬಂದ ಮೇಲೆ ಅವರ ಬಾಂಡಿಂಗ್ ಹೇಗೆ ಇರುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಯಾರು ಹತ್ತಿರ ಇರ್ತಾರೆ, ಯಾರು ದೂರವಾಗ್ತಾರೆ ಎನ್ನುವುದು ತಿಳಿಯುತ್ತದೆ. ಬಿಗ್ಬಾಸ್ ಮನೆಯಲ್ಲಿ ಹೀಗೆ ನಡೀತಾ ಇದೆ ಎನ್ನುವ ಮಾತ್ರಕ್ಕೆ ಅವರ ನಡುವೆ ಲವ್ ಇದೆ ಎಂದು ಅರ್ಥವಲ್ಲ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

