MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಗರ್ಭಿಣಿಯಾದ್ಮೇಲೆ ಪತಿಯ ಮೊದಲ ಮದುವೆ ವಿಷ್ಯ ಗೊತ್ತಾಯ್ತು: ರೌಡಿ ಗಂಡನನ್ನು ಬದಲಾಯಿಸಿರೋ ರೇಷ್ಮಾ ಆಂಟಿ ಕರಾಳ ಬದುಕು

ಗರ್ಭಿಣಿಯಾದ್ಮೇಲೆ ಪತಿಯ ಮೊದಲ ಮದುವೆ ವಿಷ್ಯ ಗೊತ್ತಾಯ್ತು: ರೌಡಿ ಗಂಡನನ್ನು ಬದಲಾಯಿಸಿರೋ ರೇಷ್ಮಾ ಆಂಟಿ ಕರಾಳ ಬದುಕು

Reels Reshma: ಒಂದಿನ ಗಂಡ ಹೊಡೆಯುತ್ತಾನೆ, ಬೈತಾನೆ, ಗಂಡ ಪ್ರೀತಿ ಮಾಡ್ತಾನೆ ಎಂದೆಲ್ಲ ಹೇಳಿಕೊಂಡು ವಿಡಿಯೋ ಮಾಡುತ್ತಿದ್ದ ರೇಷ್ಮಾ ಆಂಟಿ ಈಗಾಗಲೇ ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಭಾಗಿ ಆಗಿದ್ದರು. ಇವರನ್ನು ಬೈಯ್ಯುವವರೇ ಜಾಸ್ತಿ ಇದ್ದರೂ ಕೂಡ, ವೈಯಕ್ತಿಕ ಬದುಕಿನ ಕರಾಳ ವಿಷಯಗಳು ಅನೇಕರಿಗೆ ಗೊತ್ತಿಲ್ಲ. 

2 Min read
Author : Padmashree Bhat
Published : Mar 13 2026, 09:18 PM IST
Share this Photo Gallery
  • FB
  • TW
  • Linkdin
  • Whatsapp
16
ವಿಭಿನ್ನ ಕಾನ್ಸೆಪ್ಟ್‌ ವಿಡಿಯೋ ಮಾಡ್ತಾರೆ
Image Credit : Reshma Instagram

ವಿಭಿನ್ನ ಕಾನ್ಸೆಪ್ಟ್‌ ವಿಡಿಯೋ ಮಾಡ್ತಾರೆ

ಈಗ ನವೀನ್‌ ಕುಮಾರ್‌ ಎನ್ನುವವರ ಜೊತೆ ರೇಷ್ಮಾ ಆಂಟಿ ಅವರು ವಿಭಿನ್ನ ಕಾನ್ಸೆಪ್ಟ್‌ ಇಟ್ಟುಕೊಂಡು ವಿಡಿಯೋ ಮಾಡುತ್ತಿರುತ್ತಾರೆ. ಈ ವಿಡಿಯೋಗಳಿಗೆ ಪಾಸಿಟಿವ್‌ಗಿಂತ ನೆಗೆಟಿವ್‌ ಪ್ರತಿಕ್ರಿಯೆ ಜಾಸ್ತಿ ಬರುವುದು.

26
ತವರು ಮನೆಯವರು ಮಾತಾಡಲ್ಲ
Image Credit : our own

ತವರು ಮನೆಯವರು ಮಾತಾಡಲ್ಲ

ರೇಷ್ಮಾ ರೀಲ್ಸ್‌ ನೋಡಿ ಅವರ ಪತಿ ಬಾಯಿಗೆ ಬಂದ ಹಾಗೆ ಬೈದು, ಸಾ*ಯಿ ಎಂದು ಕೂಡ ಹೇಳಿದ್ದರಂತೆ. ಇದನ್ನು ಅವರು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದರು. ಇದು ಇನ್ನಷ್ಟು ವೈರಲ್‌ ಆಯ್ತು. ತಾಯಿ, ಪತಿ ವಿರೋಧದ ಮಧ್ಯೆ ಅವರು ರೀಲ್ಸ್‌ ಮಾಡೋದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ರೀಲ್ಸ್‌ ಮಾಡುತ್ತಾರೆ ಎಂದು ಇವರ ತವರು ಮನೆಯವರು ಫೋನ್‌ ರಿಸೀವ್‌ ಮಾಡಲ್ವಂತೆ, ಬ್ಲಾಕ್‌ ಕೂಡ ಮಾಡಿದ್ದಾರಂತೆ.

Related Articles

Related image1
ಆಸ್ಪತ್ರೆಗೆ ದಾಖಲಾದ ರೀಲ್ಸ್‌ ರೇಷ್ಮಾ; ಸಣ್ಣಗಾಗೋಕೆ ಅನ್ನ ಬಿಟ್ಟಿದ್ದೇ ಕಾರಣವಾಯ್ತಾ?
Related image2
ರೇಷ್ಮಾ ಆಂಟಿ ಸಂತೋಷದ ಕಣ್ಣೀರು: ವರ್ಷಗಳ ನಂತರ ಬಂದ ಕಾಲ್; ಹೊರಟೇ ಬಿಟ್ರು ಹಾಸನಕ್ಕೆ
36
ಲವ್‌ ಮ್ಯಾರೇಜ್‌ ಆಯ್ತು
Image Credit : Reshma Aunty

ಲವ್‌ ಮ್ಯಾರೇಜ್‌ ಆಯ್ತು

ಆಸ್ಪತ್ರೆಯೊಂದರಲ್ಲಿ ರೇಷ್ಮಾ ಕೆಲಸ ಮಾಡುತ್ತಿದ್ದರು, ಅಲ್ಲಿ ಅವರ ಪತಿ ಬಂದಿದ್ದರು. ಆ ಆಸ್ಪತ್ರೆ ಕಟ್ಟಡಕ್ಕೆ ಇವರ ಪತಿ ಮರಳು ಪೂರೈಕೆ ಮಾಡುತ್ತಿದ್ದರು. ಅಲ್ಲಿ ಇವರಿಬ್ಬರ ಮಧ್ಯೆ ಸ್ನೇಹ ಆಗಿ, ಪ್ರೀತಿ ಶುರುವಾಯ್ತು. ಮನೆಯವರ ವಿರೋಧದ ಮಧ್ಯೆ ಇವರು ಮದುವೆಯಾದರು.

46
ಗಂಡನಿಗೆ ಮೊದಲೇ ಮದುವೆ ಆಗಿದೆ ಅಂತ ಗೊತ್ತಾಯ್ತು
Image Credit : Instagram

ಗಂಡನಿಗೆ ಮೊದಲೇ ಮದುವೆ ಆಗಿದೆ ಅಂತ ಗೊತ್ತಾಯ್ತು

ಮದುವೆಯಾಗಿ ಪ್ರಗ್ನೆಂಟ್‌ ಆದಬಳಿಕ ಗಂಡನಿಗೆ ಮೊದಲೇ ಮದುವೆ ಆಗಿದೆ, ಮೊದಲ ಪತ್ನಿಗೆ ಮಕ್ಕಳಾಗಿಲ್ಲ ಎಂದು ಗೊತ್ತಾಗಿದೆ. ಮೊದಲ ಪತ್ನಿ ಜೀವನ ಹಾಳು ಮಾಡಿದರು ಎಂದು ರೇಷ್ಮಾಗೆ ಕೆಲವರು ಬೈದರಂತೆ. ಮೊದಲ ಪತ್ನಿಗೆ ಮಕ್ಕಳಾಗಿದ್ದರೆ ಬಹುಶಃ ನನ್ನನ್ನು ಅವರು ಮದುವೆ ಆಗುತ್ತಿರಲಿಲ್ಲ ಎಂದು ಕಾಣುತ್ತದೆ. ನನ್ನ ಗಂಡನ ಮೊದಲ ಪತ್ನಿಯನ್ನು ನಾನು ಇದುವರೆಗೂ ನೋಡಿಲ್ಲ. ಒಂದೇ ಏರಿಯಾದಲ್ಲಿ ನಾವು, ಅವರು ಇದ್ದೆವು, ಆದರೆ ನಾನು ಅವರನ್ನು ನೋಡಿಲ್ಲ.

56
ಮನೆಯಿಂದ ಹೊರಗಡೆ ಬರೋ ಯೋಚನೆ ಇತ್ತು
Image Credit : Instagram

ಮನೆಯಿಂದ ಹೊರಗಡೆ ಬರೋ ಯೋಚನೆ ಇತ್ತು

ಮಗು ಸಾಕ್ತೀನಿ ಎಂದು ನಾನು ಹೊರಗಡೆ ಬಂದಿದ್ದೆ. ಇದೆಲ್ಲ ಬೇಡ ಎಂದು ಅನಿಸಿತ್ತು. ಆಮೇಲೆ ನನ್ನ ಗಂಡ ಬಂದು, ಮಕ್ಕಳಾಗಿಲ್ಲ, ಅದಿಕ್ಕೆ ನಾನು ನಿನ್ನ ಮದುವೆ ಆದೆ ಎಂದು ಮನವೊಲಿಸಿದರು ಎಂದು ರೇಷ್ಮಾ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇವರು ಮದುವೆಯಾಗಿ 18 ವರ್ಷಗಳಾಗಿವೆ.

66
ರೌಡಿಯಾಗಿದ್ದ ಗಂಡ ಬದಲಾದ
Image Credit : Reshma Aunty-Naveen Kumar Instagram

ರೌಡಿಯಾಗಿದ್ದ ಗಂಡ ಬದಲಾದ

ಮೊದಲು ನನ್ನ ಗಂಡ ರೌಡಿ ಆಗಿದ್ದರು, ಯಾರದ್ದೋ ತಲೆ ಮೇಲೆ ಕಲ್ಲು ಹಾಕಿ ಎರಡು ವರ್ಷ ಜೈಲಿನಲ್ಲಿದ್ದರು, ನಾನು ಅವರನ್ನು ಬದಲಾಯಿಸಿದ್ದೇನೆ, ಮಕ್ಕಳಾದಮೇಲೆ ಅವರು ಬದಲಾದರು. ನಾನ ಅವರಿಗೆ ಆಟೋ ಓಡಿಸಿದೆ. ಬೇರೆಯವರ ಮನೆ ಕೆಲಸ ಮಾಡಿದೆ, ಬತ್ತಿ ಉಜ್ಜೋಕೆ ಹೋಗುತ್ತಿದ್ದೆ, ಗಾರ್ಮೆಂಟ್ಸ್‌ ಕೆಲಸ ಮಾಡುತ್ತಿದ್ದೆ ಎಂದು ರೇಷ್ಮಾ ಹೇಳುತ್ತಾರೆ. ಗರ್ಭಿಣಿಯಾದ್ಮೇಲೆ ಅವರಿಗೆ ಒಂದು ಹೊತ್ತು ಊಟಕ್ಕೂ ಪರದಾಡೋ ಸ್ಥಿತಿ ಇತ್ತಂತೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಟಿವಿ ಶೋ
ಸಾಮಾಜಿಕ ಮಾಧ್ಯಮ
ಸಾಮಾಜಿಕ ಜಾಲತಾಣ ಪ್ರಭಾವಿ
Latest Videos
Recommended Stories
Recommended image1
ನಾಯಿಗಳ ಹೆಸ್ರೇ ಗೊತ್ತಿಲ್ಲದ ’ಸಿ’ ಆತ: ಒದ್ದು ಓಡಿಸಿ ಟ್ರೀಟ್​ಮೆಂಟ್​ ಕೊಡ್ಬೇಕು: Bigg Boss ವಿನಯ್‌ ಗೌಡ ಕಿಡಿ
Recommended image2
Anchor Anushree: ಯಶ್ ಜೊತೆ ಅನುಶ್ರೀ ಇರ್ಬೇಕಿತ್ತು, ಆ ನಟಿ ಅಲ್ಲ; ಏಕೆ 'ಉಪ್ಪು ಹುಳಿ ಖಾರ' ಬೆಡಗಿಗೆ ಆ ಚಾನ್ಸ್‌ ಮಿಸ್ ಆಯ್ತು?
Recommended image3
ಸೆಲ್ಫ್‌ ಗಿಫ್ಟ್ ಪಡೆಯಲು ಹೋಗಿ ಬರಿಗೈಲಿ ವಾಪಸಾದ ಮೇಘನಾ ರಾಜ್‌, ಅಮ್ಮನ ಪ್ಲ್ಯಾನ್‌ ಫೇಲ್‌ ಆದ್ರೂ ಮಗ ರಾಯನ್‌ ಫುಲ್‌ ಖುಷ್!
Related Stories
Recommended image1
ಆಸ್ಪತ್ರೆಗೆ ದಾಖಲಾದ ರೀಲ್ಸ್‌ ರೇಷ್ಮಾ; ಸಣ್ಣಗಾಗೋಕೆ ಅನ್ನ ಬಿಟ್ಟಿದ್ದೇ ಕಾರಣವಾಯ್ತಾ?
Recommended image2
ರೇಷ್ಮಾ ಆಂಟಿ ಸಂತೋಷದ ಕಣ್ಣೀರು: ವರ್ಷಗಳ ನಂತರ ಬಂದ ಕಾಲ್; ಹೊರಟೇ ಬಿಟ್ರು ಹಾಸನಕ್ಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved